ಪಡಿತರ ಚೀಟಿ ಇದ್ದವರಿಗೆ ಸರ್ಕಾರದ ವಿಶೇಷ ಯೋಜನೆ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯಡಿ ಪಡಿತರ ಸಿಗಲಿದೆ. ಕೊರೊನಾ ಕಾರಣದಿಂದಾಗಿ ಬಡವರಿಗೆ ಉಚಿತ ಪಡಿತರ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಅನೇಕ ರಾಜ್ಯಗಳು ತಮ್ಮ ನಾಗರಿಕರಿಗೆ ಉಚಿತ ಪಡಿತರವನ್ನು ನೀಡುತ್ತಿವೆ. ಈಗ್ಲೂ ನಿಮ್ಮ ಬಳಿ ಪಡಿತರ ಚೀಟಿ ಇಲ್ಲವೆಂದ್ರೆ ಚಿಂತಿಸುವ ಅಗತ್ಯವಿಲ್ಲ. ಸ್ಮಾರ್ಟ್‌ಫೋನ್‌ನಿಂದ ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ನೀವು ಮೊದಲು ರಾಜ್ಯದ …
Read More »ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ ಹೂಡಿ ರೋಗಿಗಳಿಗೆ ಉತ್ತೇಜನ ನೀಡಲು ಮುಂದಾದ ಶಾಸಕ ರೇಣುಕಾಚಾರ್ಯ
ದಾವಣಗೆರೆ: ಕೊರೋನಾ ಸೋಂಕಿನ ವಿಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕೊರೋನಾ ಸೋಂಕಿತರು ಉಳಿದುಕೊಂಡಿರುವ ದಾವಣಗೆರೆಯ ಅರಬಗಟ್ಟೆ ಕೋವಿಡ್ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಶಾಸಕ ರೇಣುಕಾಚಾರ್ಯ ವಾಸ್ತವ್ಯ ಹೂಡಿದ್ದಾರೆ. ಸೋಂಕಿತರಲ್ಲಿ ಆತ್ಮವಿಶ್ವಾಸ ಮೂಡಲು, ಅವರಿಗೆ ಉತ್ತೇಜನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ ಮಾಡಿ ಸೋಂಕಿತರಿಗೆ …
Read More »ಉಡುಪಿ: ಧಾರಕಾರ ಮಳೆಗೆ ಮುಳುಗಿತು ಕಾರು- ಬೈಕ್ ಗಳು
ಉಡುಪಿ: ನಗರದಲ್ಲಿ ಗುರುವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಹಲವೆಡೆ ಅವಾಂತಗಳು ಸಂಭವಿಸಿದೆ, ನಗರದ ಬಿಗ್ ಬಜಾರ್ ಪಾರ್ಕಿಂಗ್ ಪ್ರದೇಶದಲ್ಲಿ ಮಳೆ ನೀರು ನುಗ್ಗಿ ಹತ್ತಾರು ಬೈಕ್ ಗಳು ಮತ್ತು ಕಾರುಗಳು ನೀರಿನಲ್ಲಿ ಮುಳುಗಿದೆ. ತಡ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಬಿಗ್ ಬಜಾರ್ ಕಟ್ಟಡದ ಪಾರ್ಕಿಂಗ್ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಕಟ್ಟಡದ ನೆಲ ಮಳಿಗೆಗೆ ಮಳೆ ನೀರು ತುಂಬಿಕೊಂಡು ಪರಿಣಾಮ ಪಾರ್ಕಿಂಗ್ ಮಾಡಲಾಗಿದ್ದ ಆರು ಕಾರುಗಳು ಹಾಗೂ ಹತ್ತಕ್ಕೂ …
Read More »ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮುಹೂರ್ತ ಫಿಕ್ಸ್: ಜುಲೈ 3ನೇ ವಾರ ಪರೀಕ್ಷೆ
ಕೊರೊನಾ ಎರಡನೇ ಅಲೆಯ ಅಬ್ಬರದ ನಡುವೆಯೂ ರಾಜ್ಯ ಸರಕಾರ ಎಸ್ ಎಸ್ ಎಲ್ ಸಿ ಪರೀಕ್ಷೆ ಯನ್ನು ಜುಲೈ 3 ನೇ ವಾರದಲ್ಲಿ ನಡೆಸಲು ತೀರ್ಮಾನಿಸಿದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗೆ 3 ವಿಷಯದಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳು ಸೇರಿ ಒಂದೇ ಪರೀಕ್ಷೆ ನಡೆಯಲು ನಿರ್ಧರಿಸಲಾಗಿದ್ದು, 120 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಪ್ರಶ್ನೆ ಪತ್ರಿಕೆ ಇರುತ್ತದೆ. ಪ್ರತಿ ವಿಷಯಕ್ಕೆ 40 …
Read More »5.7 ಲಕ್ಷದ ನಶೆ ಮಾತ್ರೆ, ಇಬ್ಬರು ವಶಕ್ಕೆ
ಹೊಸಪೇಟೆ (ವಿಜಯನಗರ): ಅಕ್ರಮವಾಗಿ ಸಾಗಿಸುತ್ತಿದ್ದ ₹5.7 ಲಕ್ಷ ಮೌಲ್ಯದ ಎಲ್.ಎಸ್.ಡಿ. ನಶೆ ಮಾತ್ರೆ ಹಾಗೂ ಇಬ್ಬರನ್ನು ಇಲ್ಲಿನ ಚಿತ್ತವಾಡ್ಗಿ ಪೊಲೀಸರು ಗುರುವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ರಘುನಾಥ ಕುಮಾರ್, ಹಿರಿಯೂರಿನ ಸೊಲಮನ್ ಹಾಗೂ ಅವರಿಂದ ಹುಂಡೈ ಕಾರು, ಎರಡು ಮೊಬೈಲ್, ₹35 ಸಾವಿರ ನಗದು ಸಹ ವಶಪಡಿಸಿಕೊಂಡಿದ್ದಾರೆ. ಎಲ್ಲದರ ಒಟ್ಟು ಮೊತ್ತ ₹16.2 ಲಕ್ಷವಾಗಲಿದೆ. ‘ನಗರದ ಕಾಲೇಜು ರಸ್ತೆಯ ಚೆಕ್‌ಪೋಸ್ಟ್‌ನಲ್ಲಿ ಕಾರು ತಡೆದು ಪರಿಶೀಲನೆ ನಡೆಸಿದಾಗ ನಶೆ ಮಾತ್ರೆ ಇರುವುದು …
Read More »ಯುವಕನನ್ನು ಕಾಲಿನಿಂದ ಒದ್ದು, ಅವಾಚ್ಯ ಪದಗಳಿಂದ ನಿಂದಿಸಿದ ಎಎಸ್‍ಐ ಸಸ್ಪೆಂಡ್
ಚಾಮರಾಜನಗರ: ಲಾಕ್‍ಡೌನ್ ವೇಳೆ ಮಾತ್ರೆ ಖರೀದಿಸಲು ಬಂದಿದ್ದ ಯುವಕನಿಗೆ ದರ್ಪ ತೋರಿ ಕಾಲಿನಿಂದ ಒದ್ದು ನಿಂದಿಸಿದ್ದ ಎಎಸ್‍ಐ ಅವರನ್ನು ಎಸ್ಪಿ ಅಮಾನತು ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಮೇ 23 ರಂದು ಯುವಕನೋರ್ವ ಮಾತ್ರೆ ಖರೀದಿಸಲು ಬೈಕ್‍ನಲ್ಲಿ ನಗರಕ್ಕೆ ಬಂದಿದ್ದ. ಈ ವೇಳೆ ಕೊಳ್ಳೇಗಾಲ ಪಟ್ಟಣ ಠಾಣೆಯ ಎಎಸ್‍ಐ ರಾಮಸ್ವಾಮಿ, ಯುವಕನಿಗೆ ದರ್ಪ ತೋರಿ ಕಾಲಿಂದ ಒದ್ದು ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದರು. ಯುವಕನಿಗೆ ನಿಂದಿಸಿ, ಒದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ …
Read More »ಕೆಎಸ್ಆರ್ಟಿಸಿಗೆ ಬಾಬಾ ಸಾಹೇಬ್ ಸಾರಿಗೆ ಸಂಸ್ಥೆ ಹೆಸರಿಡಲು ಸಂಸದೆ ಸುಮಲತಾ ಅಂಬರೀಷ್ ಸಲಹೆ
ಮಂಡ್ಯ: ಲೊಗೋ ಮತ್ತು ಟ್ರೇಡ್ಮಾರ್ಕ್ ಕೇರಳ ರಾಜ್ಯದ ಪಾಲಾದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಸಂಸ್ಥೆಗೆ ಬಾಬಾ ಸಾಹೇಬ್ ಸಾರಿಗೆ ಸಂಸ್ಥೆ ಎಂದು ಹೆಸರಿಡುವಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ಮನವಿ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿರುವ ಅವರು, ಕನ್ನಡಿಗರ ಹೆಮ್ಮೆಯ ಸಾರಿಗೆ ಸಂಸ್ಥೆಗೆ ಹೊಸ ಹೆಸರು ಸೂಚಿಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) …
Read More »ಮೈಸೂರಿನಲ್ಲಿ ತಾರಕಕ್ಕೇರಿದ IAS ವಾರ್: ಶಿಲ್ಪನಾಗ್ಗೆ DC ನೋಟಿಸ್
ಮೈಸೂರು: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಿಂತ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಹಾಗೂ ಜಿಲ್ಲಾಧಿಕಾರಿ ನಡುವಿನ ಜಟಾಪಟಿಯೇ ಹೆಚ್ಚಾಗಿದ್ದು, ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಯಾವ ಜಿಲ್ಲೆಗೂ ಇಂತಹ ಜಿಲ್ಲಾಧಿಕಾರಿ ಸಿಗಬಾರದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ರಾಜಿನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶಿಲ್ಪಾನಾಗ್‌ಗೆ ಸುಧೀರ್ಘ ಪತ್ರ ಬರೆದಿದ್ದು, ಕೋವಿಡ್ ನಿರ್ವಹಣೆ ಬಗ್ಗೆ ಹಾಗೂ ಇರುವ ಸಾಮಗ್ರಿ ಬಗ್ಗೆ ಮಾಹಿತಿ ಕೇಳಿದ್ದಾರೆ. ಪಾಲಿಕೆಗೆ ಜಿಲ್ಲಾಡಳಿತದಿಂದ ಎಲ್ಲಾ …
Read More »ಇಂದು ಸಹ ಏರಿಕೆ ಕಂಡು ಗರಿಷ್ಠ ಮಟ್ಟದಲ್ಲಿರುವ ಪೆಟ್ರೋಲ್, ಡೀಸೆಲ್ ದರ! ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು?
ದೆಹಲಿ: ಇಂದೂ ಸಹ (ಜೂನ್ 4) ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಜೂನ್ ತಿಂಗಳ ಪ್ರಾರಂಭದಿಂದ ಇಲ್ಲಿಯವರೆಗೆ 2ನೇ ಬಾರಿ ತೈಲ ದರ ಹೆಚ್ಚಳವಾಗಿದ್ದು, ಇಂದು ಲೀಟರ್ ಪೆಟ್ರೋಲ್ ದರದಲ್ಲಿ 27 ಪೈಸೆ ಹಾಗೂ ಲೀಟರ್ ಡೀಸೆಲ್ ದರದಲ್ಲಿ 28 ಪೈಸೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 94.49 ರೂಪಾಯಿಂದ 94.76 ರೂಪಾಯಿಗೆ ಏರಿಕೆ ಆಗಿದೆ. ಹಾಗೆಯೇ ಒಂದು …
Read More »ಬಿಜೆಪಿ ಸರ್ಕಾರ, ಪಕ್ಷದಲ್ಲಿ ಭಾರೀ ಬದಲಾವಣೆ.? ಕುತೂಹಲ ಮೂಡಿಸಿದ ವಿಜಯೇಂದ್ರ ವರಿಷ್ಠರ ಭೇಟಿ
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಂತರ ಅನೇಕ ಬೆಳವಣಿಗೆ ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮಾಲೋಚನೆ ನಡೆಸಿದ್ದಾರೆ. ಇವರ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಜೆ.ಪಿ. ನಡ್ಡಾ ಅವರೊಂದಿಗೆ ಸುಮಾರು 20 ನಿಮಿಷ ಕಾಲ ವಿಜಯೇಂದ್ರ ಮಾತುಕತೆ ನಡೆಸಿದ್ದು, ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತಂತೆ ಚರ್ಚೆ …
Read More »
Laxmi News 24×7