Breaking News

ರಾಜ್ಯ

ಗೋಕಾಕ್ ತಾಲೂಕು ಆಸ್ಪತ್ರೆಯಲ್ಲಿ 500 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ವಿದ್ಯಾರ್ಥಿಗಳಿಗೆ ಟ್ಯಾ‌ಬ್‌ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

ಗೋಕಾಕ: ಗೋಕಾಕ ನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಹಾಜರಾಗಿದ್ದಾರೆ ಎಂದು ಗೋಕಾಕ ತಾಲೂಕಾ ಆಸ್ಪತ್ರೆಯಲ್ಲಿ 500ಲೀಟರ್ ಸಾಮರ್ಥ್ಯದ ಆಕ್ಸಿಂಜನ ಪ್ಲಾಂಟ್ ಲೋಕಾರ್ಪಣೆ ಮಾಡಿದ್ದಾರೆ. ಜನರ ಹಿತಾಸಕ್ತಿಯನ್ನು ಬಯಸುವ ಸಾಹುಕಾರರು ತನ್ನ ಕ್ಷೇತ್ರದ ಬಗ್ಗೆ ಈ ಒಂದು ಮಹಾಮಾರಿ ಸಮಯದಲ್ಲಿ ಮಾಡುತ್ತಿದ್ದಾರೆ. ಸಾಮನ್ಯ ರೋಗಿಗಳಿಗೆ ಹಾಗೂ ಕ ರೊ ನಾ ಪೀಡಿತ ರೋಗಿಗಳಿಗೆ ಆಕ್ಸಿಜನ್ ತೊಂದರೆ ಆಗಬಾರದು ಎಂಬ ಉದ್ದೇಶಕಕಾಗಿಯೇ ರಮೇಶ್ ಜಾರಕಿಹೊಳಿ ಈ ಒಂದು ಕಾರ್ಯಕ್ಕೆ ಇಂದು ಚಾಲನೆ ನೀಡಿದರು. …

Read More »

ಪಾನಮತ್ತ ವ್ಯಕ್ತಿಯೊಬ್ಬ ಕಿತಾಪತಿ , ಮಹಿಳೆಯರ ಮುಂದೆ ಬೆತ್ತಲೆ ಪ್ರದರ್ಶನ

ಚಾಮರಾಜನಗರ: ನರೇಗಾ ಕಾಮಗಾರಿಯಲ್ಲಿ ನಿರತರಾಗಿದ್ದ ಮಹಿಳೆಯರ ಮುಂದೆ ಅಶ್ಲೀಲ ವರ್ತನೆ ಮಾಡಿ, ಬೆತ್ತಲೆಯಾಗಿ ಪಾನಮತ್ತ ವ್ಯಕ್ತಿಯೊಬ್ಬ ಕಿತಾಪತಿ ಮಾಡಿದ ಘಟನೆ ಚಾಮರಾಜನಗರ ತಾಲೂಕು ಪುಣಜನೂರು ಗ್ರಾಮದಲ್ಲಿ ವರದಿಯಾಗಿದೆ. ಅಶ್ಲೀಲವಾಗಿ ವರ್ತನೆ ಮಾಡಿದ ವ್ಯಕ್ತಿಯನ್ನು ಚಾಮರಾಜನಗರ ತಾಲೂಕು ಪುಣಜನೂರು ಗ್ರಾಮದ ತಾಂಡವಮೂರ್ತಿ ಎಂದು ಗುರುತಿಸಲಾಗಿದೆ. ತಾಂಡವಮೂರ್ತಿ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ಜಗಳವಾಡಿದ್ದಾನೆ. ಕುಡಿದ ಮತ್ತಿನಲ್ಲಿದ್ದ ತಾಂಡವಮೂರ್ತಿ ಜಗಳವಾಡಿ ಬಳಿಕ ಬೆತ್ತಲೆಯಾಗಿ …

Read More »

ಕಾಂಗ್ರೆಸ್‍ನಲ್ಲಿ ಹೆಚ್ಚಾದ ‘ಸಿಎಂ’ ಸೀಟ್ ಫೈಟ್-

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಸ್ಫೋಟಕ ಬೆಳವಣಿಗೆಗಳು ನಡೆಯುತ್ತಿದೆ. ಎಲೆಕ್ಷನ್ ಗೆಲ್ಲುವ ಮೊದಲೇ ಕೈ ಪಾಳಯದಲ್ಲಿ ಮುಂದಿನ ಸಿಎಂ ಯಾರು ಎಂಬ ಫೈಟ್ ಶುರುವಾಗಿದೆ. ಹೌದು. ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಲೇ ಇದೆ. ಕಮಲ ಪಾಳಯಲ್ಲಿ ನಾಯಕತ್ವ ಫೈಟ್ ಮಧ್ಯೆಯೇ ಇದೀಗ ಕಾಂಗ್ರೆsಸ್ಸಿನಲ್ಲಿ ಎಲೆಕ್ಷನ್ ಗೆಲ್ಲುವ ಮೊದಲೇ ಮುಂದಿನ ಸಿಎಂ ಯಾರು ಎಂಬ ಫೈಟ್ ಜೋರಾಗಿದೆ. ಹೈಕಮಾಂಡ್ ಎಂಟ್ರಿ ಬಳಿಕವೂ ತಣ್ಣಗಾಗಬೇಕಿದ್ದ ಬಣ ಬಡಿದಾಟ ಮತ್ತಷ್ಟು ಜೋರಾಗಿದೆ. ಸಿದ್ದರಾಮಯ್ಯ …

Read More »

ಮುಂಬೈನಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಮುಂದಿನ ನಡೆಯತ್ತ ಎಲ್ಲರ ಚಿತ್ತ

ಬೆಳಗಾವಿ: ರಾಜ್ಯದಲ್ಲಿ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಜತೆಗೆ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಪಕ್ಷಕ್ಕೆ ಮತ್ತೊಂದು ತಲೆನೋವು ತಂದಿತ್ತು. ಆದರೆ, ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಟ್ಟು ಸ್ವಲ್ಪ ಮಟ್ಟಿಗೆ ಸದ್ಯ ಕಡಿಮೆಯಾಗಿದೆ. ಸಚಿವ ಸ್ಥಾನ ಪಡೆಯಲು ಬಿಜೆಪಿ ಮೇಲೆ ಒತ್ತಡ ತರಲು ಮುಂದಾಗಿದ್ದರು. ಕೆಲ ದಿನಗಳ ಹಿಂದೆ ಮುಂಬೈಗೆ ಹೋಗಿ ಅಲ್ಲಿನ ನಾಯಕರ ಮೂಲಕ ಸಿಎಂ ಮೇಲೆ ಒತ್ತಡ ತರಲು ಮುಂದಾಗಿದ್ದರು. ಆದರೇ ಇದು ಅಷ್ಟಾಗಿ …

Read More »

ಕತ್ತಿಯಿಂದ ಕಡಿದು ಮಗನ ಕೊಲೆ, ತಾನು ಸಹ ನೇಣು ಬಿಗಿದುಕೊಂಡು ಮನೆಯೊಳಗೆ ಆತ್ಮಹತ್ಯೆ

ಬಂಟ್ವಾಳ: ತಂದೆಯೇ ಸ್ವಂತ ಮಗನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ‌, ತಾನು ಸಹ ನೇಣು ಬಿಗಿದುಕೊಂಡು ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಪುಂಜಾಲಕಟ್ಟೆ ಸರ್ಕಾರಿ ಆಸ್ಪತ್ರೆಯ ಸಮೀಪ ಭಜನಾ ಮಂದಿರದ ಬಳಿ ನಿವಾಸಿ ಬಾಬು ನಾಯ್ಕ ( 58) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆರೋಪಿ ತಂದೆ. ಸಾತ್ವಿಕ್ ( 15) ಕೊಲೆಯಾದ ಬಾಲಕ.ಕುಡಿತದ ಚಟ ಹೊಂದಿದ್ದ ಬಾಬು ನಾಯ್ಕ್ ಅವರು ಕೆಲ ದಿನಗಳಿಂದ ಮನೆಯಲ್ಲಿ ಮಗನೊಂದಿಗೆ …

Read More »

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ಗಾಯಗೊಂಡ ಮಹಿಳಾ ಕಾನ್​ಸ್ಟೇಬಲ್​ಗೆ ತುರ್ತು ಸೇವೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಅಪಘಾತವೊಂದರಲ್ಲಿ ಗಾಯಗೊಂಡ ಮಹಿಳಾ ಪೊಲೀಸ್ ಕಾನ್​ಸ್ಟೇಬಲ್​ಗೆ ತುರ್ತು ಸೇವೆ ಒದಗಿಸಿದ್ದಾರೆ. ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ‌. ಇಂದು ಮಧ್ಯಾಹ್ನ 12.20ರ ಸುಮಾರಿಗೆ ಮುಲ್ಕಿ‌ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ರೇಣುಕಾ ಅವರು ಪೊಲೀಸ್ ಠಾಣೆಯಿಂದ ತಮ್ಮ ದ್ವಿಚಕ್ರ ವಾಹನದಲ್ಲಿ ಊಟಕ್ಕೆ ಮನೆಗೆ ತೆರಳಿದ್ದರು. ಮುಲ್ಕಿಯ ವಿಜಯ್​ ಸನ್ನಿಧಿ ಜಂಕ್ಷನ್ ಬಳಿ ಸ್ಕೂಟರ್ ನಿಯಂತ್ರಣಕ್ಕೆ …

Read More »

‘ಇಂಡಿಯಾ’ಹೆಸರು ಬದಲಿಸಲು ನಟಿ ಕಂಗನಾ ಒತ್ತಾಯ

ಬಾಲಿವುಡ್ ನಟಿ ಕಂಗನಾ ರನೌತ್‌, ಸಿನಿಮಾಗಳಿಗಿಂತ ಸದಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ ಇಂಡಿಯಾ ಹೆಸರನ್ನು ಬದಲಿಸಿ ಎಂದು ಒತ್ತಾಯಿಸುವ ಮೂಲಕ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ಗುಲಾಮರು ಇಟ್ಟಿರುವ ಇಂಡಿಯಾ ಹೆಸರನ್ನು ಬದಲಾವಣೆ ಮಾಡಿ, ಭಾರತ್‌ ಎಂದು ಮರುನಾಮಕರಣ ಮಾಡಬೇಕು ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂಡಿಯಾ ಎಂಬುದು ಬ್ರಿಟಿಷರ ನೀಡಿದ ಹೆಸರು ಇದನ್ನು ಬದಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ‘ಭಾರತ್‌’ ಅರ್ಥದ ಬಗ್ಗೆ …

Read More »

ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಸಂಬಂದ ಟಿಕ್‌ ಟಾಕ್‌ ನಲ್ಲಿ ಬಹಿರಂಗ

ಬೆಂಗಳೂರು: ಯಾವುದೋ ವಯಸ್ಸಿನವರ ಜತೆ ಇನ್ನಾವುದೋ ವಯಸ್ಸಿನವರು ಅಕ್ರಮ ಸಂಬಂಧ ಇಟ್ಟುಕೊಳ್ಳುವುದನ್ನು ನೋಡಿರುತ್ತೀರಿ. ಆದರೆ ಈ ಕಥೆ ಕೇಳಿದರೆ ಒಬ್ಬ ವ್ಯಕ್ತಿಯ ಬಗ್ಗೆ ಪಾಪ ಎನಿಸುತ್ತದೆ. ಪ್ರೀತಿಯಿಂದ ಸಾಕಿದ್ದ ಮಗ ಸಂಬಂಧದಲ್ಲಿ ತನಗೆ ಚಿಕ್ಕಪ್ಪ ಆಗಬೇಕು ಎನ್ನುವ ವಿಚಾರ ತಿಳಿದು ನೋವುಂಡಿರುವ ವ್ಯಕ್ತಿಯಯೊಬ್ಬನ ಕಥೆಯಿದು. ವ್ಯಕ್ತಿಯೊಬ್ಬ ಟಿಕ್​ಟಾಕ್​ನಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಾನೆ. ಹಲವಾರು ವರ್ಷಗಳಿಂದ ತಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇಬ್ಬರೂ ಜತೆಯಲ್ಲೇ ಬದುಕುತ್ತಿದ್ದೇವೆ. ನಮಗೆ ಮುದ್ದಾಗ ಮಗನೂ ಇದ್ದಾನೆ. ಸಾಕಷ್ಟು …

Read More »

ಮೈಸೂರಲ್ಲೂ ಪತ್ತೆಯಾದ ಡೆಲ್ಟ ವೈರಸ್‌ ಪ್ರಕರಣ

ಮೈಸೂರು: ಕೊರೊನಾ ಎರಡನೇ ಅಲೆಯ ಸುಳಿಯಿಂದ ಹೊರಬರಲಾಗದ ಕಂಗೆಟ್ಟಿರುವ ಮೈಸೂರಿನ ಜನತೆ ಇದೀಗ ಮತ್ತೊಂದು ಮಾರಣಾಂತಿಕ ವೈರಾಣುವಿನ ಸುಳಿಗೆ ಸಿಲುಕಿದ್ದಾರೆ. ಕರೋನಾದ ರೂಪಾಂತರ ಡೆಲ್ಟಾ ಪ್ಲಸ್ ನ ಒಂದು ಪ್ರಕರಣ ಮೈಸೂರಿನಲ್ಲಿ ಇರುವುದು ಖಾತ್ರಿಯಾಗಿದೆ.‌ ಈ ಕುರಿತು ಖಾತ್ರಿಪಡಿಸಿರುವ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು, ಮೈಸೂರು ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಸದ್ಯ ಅವರು ಗುಣಮುಖರಾಗಿದ್ದಾರೆ. ಸೋಂಕಿತರ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿ‌ ನೀಡಲು ಸಾಧ್ಯವಿಲ್ಲ …

Read More »

ಮೋಟಾರು ವಾಹನಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿ! : ಲಕ್ಷ್ಮಣ ಸವದಿ

ಬೆಂಗಳೂರು: ಕೊರೊನಾ 2ನೇ ಅಲೆಯ ಹಿನ್ನೆಲೆಯಲ್ಲಿ ಮೋಟಾರು ವಾಹನಗಳಿಗೆ ಶೇ.50ರಷ್ಟು ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣಿಕ ವಾಹನ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸಿ ಆದೇಶಿಸಿರುವುದರಿಂದ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957 ರ ಕಲಂ 16(1) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯದಲ್ಲಿ ನೊಂದಾಯಿಸಿರುವ (ಹೊಸ ವಾಹನಗಳ …

Read More »