ಬಳ್ಳಾರಿ ; ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಕುಟುಂಬ ಸಮೇತರಾಗಿ ತುಂಗಭದ್ರಾ ಆಣೆಕಟ್ಟಿಗೆ ಭೇಟಿ ಕೊಟ್ಟು ವಿಹಂಗಮ ನೋಟವನ್ನು ಕಣ್ತುಂಬಿಸಿಕೊಂಡರು. ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಆಗಮನದಿಂದ ಸ್ಥಳಿಯರ ಮತ್ತು ತುಂಗಭದ್ರಾ ಜಲಾಶಯದ ಅಧಿಕಾರಿಗಳ ಮನಸ್ಸು ಸಂತಸಗೊಂಡಿತ್ತು. ಕಳೆದ ನಾಲ್ಕು ವರ್ಷಗಳಿಂದ ಜಲಾಶಯ ಭರ್ತಿಯಾಗಿದೆ. ತುಂಗಭದ್ರಾ ಜಲಾಶಯವು ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ರೈತರ ಜೀವನಾಡಿಯಾಗಿದೆ. ಈ ಭಾಗಗಳ ರೈತರು ಕೃಷಿಗೆ ಪೂರಕವಾಗಿದೆ ಎಂದು ಇದೇ ಸಂದರ್ಭದಲ್ಲಿ …
Read More »ನೀರಜ್ ಈಗ ನ್ಯಾಷನಲ್ ಕ್ರಶ್! ಚಿನ್ನದ ಹುಡುಗ ನೀರಜ್ ಚೋಪ್ರಾಗೆ ಮನಸೋತ ಕಿಯಾರಾ ಅಡ್ವಾಣಿ
ಭಾರತದ ಬಹುತೇಕ ಪ್ರತಿಯೊಬ್ಬ ಹುಡುಗಿರ ಕ್ರಶ್ ಆಗಿದ್ದಾರೆ ನೀರಜ್. ಅದೇ ಸಮಯದಲ್ಲಿ, ಈಗ ಕಿಯಾರಾ ಅಡ್ವಾಣಿ ಕೂಡ ತನ್ನ ಕ್ರಶ್ ಯಾರೆಂಬುದನ್ನು ಹೇಳಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತೀಯರ ಮನೆ ಮಾತಾಗಿರುವ ನೀರಜ್ ಚೋಪ್ರಾ ಅಭಿಮಾನಿಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಸೇರಿದ್ದಾರೆ. ಸೋಶಿಯಲ್ ಮೀಡಿಯಾದಿಂದ ಹಿಡಿದು ನೀರಜ್ ವರೆಗೂ ಅವರನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತಿದೆ. ಜಾವೆಲಿನ್ ಎಸೆತದಲ್ಲಿ ನೀರಜ್ ಚಿನ್ನದ ಪದಕ ಗೆದ್ದಾಗಿನಿಂದ, ಅವರ ಗೆಲುವಿನ ಬಗ್ಗೆ ಚರ್ಚೆಗಳು …
Read More »ಆತ್ಮಹತ್ಯೆಗೆ ಅವಕಾಶ ಕೊಡಿ ಎಂದ ಅನ್ವರ್ ಕಟುಂಬಸ್ಥರು; ಗೃಹ ಸಚಿವರಿಗೆ ಮನವಿ
ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷನ ಕೊಲೆ ರಾಜಾರೋಷವಾಗಿ ನಗರದ ಹೃದಯಭಾಗದಲ್ಲೂ ನಡೆದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಇಲ್ಲಿವರೆಗೂ ಯಶಸ್ಸು ಕಂಡಿಲ್ಲ. ಚಿಕ್ಕಮಗಳೂರು: ಕಾಫಿನಾಡನ್ನು ಬೆಚ್ಚಿಬೀಳಿಸಿದ ಬಿಜೆಪಿ ಮುಖಂಡ ಅನ್ವರ್ ಕೊಲೆಯಾಗಿ ಬರೋಬ್ಬರಿ 3 ವರ್ಷ 2 ತಿಂಗಳಾಯ್ತು. ಪ್ರಕರಣ ಭೇದಿಸುವ ಪೊಲೀಸರು ದಿನ-ವಾರ-ತಿಂಗಳು-ವರ್ಷ ಎಂದು ನೆಪ ಹೇಳುತ್ತಿದ್ದಾರೆ. ಇದರಿಂದ ಅನ್ವರ್ ಕುಟುಂಬಸ್ಥರು ಪೊಲೀಸ್ ಇಲಾಖೆ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಇದೇ ಆಗಸ್ಟ್ 15ರಂದು ಜಿಲ್ಲೆಗೆ ಬಂದಿದ್ದ ಗೃಹ …
Read More »ಮಧ್ಯ ರೈಲ್ವೇಯಿಂದ ಡಿಜಿ ಲಾಕರ್ ಸೌಲಭ್ಯ
ಮುಂಬಯಿ: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯ ರೈಲ್ವೇ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ) ನಿಲ್ದಾಣದಲ್ಲಿ “ಡಿಜಿ’ ಲಾಕರ್ ಸೌಲಭ್ಯವನ್ನು ಆರಂಭಿಸಿದೆ. ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಿದ ದೇಶದ ಮೊದಲ ಡಿಜಿ ಲಾಕರ್ ಸೌಲಭ್ಯ ಇದಾಗಿದ್ದು, ಈ ಸೌಲಭ್ಯವನ್ನು ದಾದರ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್‌ನಲ್ಲಿಯೂ ಶೀಘ್ರ ಆರಂಭಿಸಲಾಗುವುದು ಎಂದು ಮಧ್ಯ ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರ ಹೆಸರು, ಮೊಬೈಲ್ ಸಂಖ್ಯೆ, ಪಿಎನ್‌ಆರ್ ಸಂಖ್ಯೆ ಮತ್ತು ಇ-ಮೇಲ್ ಐಡಿ ತುಂಬಿದ …
Read More »ಗಣಿಗಾರಿಕೆಯನ್ನು ಮುಂದಿನ ಮೂರು ತಿಂಗಳಲ್ಲಿ ಆರಂಭ : ಪ್ರಮೋದ್ ಸಾವಂತ್
ಪಣಜಿ : ರಾಜ್ಯದಲ್ಲಿ ಗಣಿಗಾರಿಕೆಯನ್ನು ಮುಂದಿನ ಮೂರು ತಿಂಗಳಲ್ಲಿ ಗೋವಾ ಸರ್ಕಾರಿ ಖನಿಜ ಅಭಿವೃದ್ಧಿ ನಿಗಮದ ಅಡಿಯಲ್ಲಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ನೀಡಿದ್ದಾರೆ. ಇಂದು(ಶುಕ್ರವಾರ, ಆಗಸ್ಟ್ 20) ದಕ್ಷಿಣ ಗೋವಾದ ಧಾರಬಾಂದೋರಾದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಸಾವಂತ್, ಹೊಸದಾಗಿ ರಚನೆಯಾದ ಗೋವಾ ಖನಿಜ ಅಭಿವೃದ್ಧಿ ನಿಗಮದ ಅಡಿಯಲ್ಲಿ ಮುಂದಿನ ಮೂರು ತಿಂಗಳಲ್ಲಿ ಈಗಾಗಲೇ ಹರಾಜು ಮಾಡಿದ ಕಬ್ಬಿಣದ ಅದಿರು ಸಾಗಾಟದಂತಹ ಚಟುವಟಿಕೆಯನ್ನು ಆರಂಭಿಸಲಾಗುವುದು ಎಂದು ಮಾಹಿತಿ …
Read More »ಗೋವಾ : ಶೇ. 70 ರಷ್ಟು ಮೀನುಗಾರಿಕಾ ಬೋಟ್ ಗಳು ದಡದಲ್ಲಿಯೇ ಸ್ತಬ್ಧ.!
ಪಣಜಿ : ಗೋವಾದಲ್ಲಿ ಮೀನುಗಾರಿಕೆ ಪುನರಾರಂಭಗೊಂಡು 20 ದಿನಗಳು ಕಳೆದರೂ ಕೂಡ ಕಾರ್ಮಿಕರ ಕೊರತೆಯಿಂದಾಗಿ ಮತ್ತು ಹವಾಮಾನ ವೈಪರಿತ್ಯದಿಂದಾಗಿ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದೆಯೇ ಶೇ 70 ರಷ್ಟು ಮೀನುಗಾರಿಕಾ ಬೋಟ್‍ಗಳು ದಡದಲ್ಲಿಯೇ ನಿಂತಿರುವಂತಾಗಿದೆ. ರಾಜ್ಯದ ವಿವಿಧ ಜೆಟಿಗಳಲ್ಲಿ ಶೇ 70 ಕ್ಕೂ ಹೆಚ್ಚು ಮೀನುಗಾರಿಕಾ ಬೋಟ್‍ಗಳು ನಿಂತಿರುವ ದೃಶ್ಯ ಕಂಡುಬರುತ್ತಿದೆ. ಮಳೆಗಾಲದಲ್ಲಿ 61 ದಿನಗಳ ಮೀನುಗಾರಿಕಾ ನಿರ್ಬಂಧದ ನಂತರ ಅಗಷ್ಟ 1 ರಿಂದ ಮೀನುಗಾರಿಕೆ ಪುನರಾರಂಭಗೊಂಡಿದೆಯಾದರೂ ಹವಾಮಾನ ವೈಪರಿತ್ಯದಿಂದ …
Read More »ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶ, ಇಬ್ಬರ ಸಾವು
ವಿದ್ಯುತ್ ಸ್ಪರ್ಶದಿಂದ ನೆಲಕ್ಕೆ ಬಿದ್ದವರನ್ನ ಲಿಂಗಸಗೂರು ತಾಲುಕು ಅಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆ. ಸ್ಥಳಕ್ಕೆ ಮಸ್ಕಿ ಠಾಣೆಯ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ರಾಯಚೂರು: ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಸ್ಪರ್ಶವಾಗಿ ಇಬ್ಬರು ಮೃತಪಟ್ಟಿದ್ದಾರೆ. ಮೊಹರಂ ದೇವರನ್ನ ಹೊತ್ತಿದ್ದ ಛತ್ರಿಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ದೇವರನ್ನು ಹೊತ್ತಿದ್ದ ಹುಸೇನ್ ಸಾಬ್ (50) ಮತ್ತು ಒಬ್ಬ ಮಹಿಳೆ ಅಸುನೀಗಿದ್ದಾರೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸಂತೆ ಕೆಲ್ಲೂರು …
Read More »4 ವರ್ಷಗಳ ಬಳಿಕ ಮಾಜಿ ರೌಡಿ ಶೀಟರ್ಸ್ ಅಗ್ನಿ ಶ್ರೀಧರ್, ಬಚ್ಚನ್ಗೆ ವಾರ್ನಿಂಗ್ ಕೊಟ್ಟ ಪೊಲೀಸರು?
ಬೆಂಗಳೂರು: ನಾಲ್ಕು ವರ್ಷಗಳ ಬಳಿಕ ಪತ್ರಕರ್ತ ಮತ್ತು ಮಾಜಿ ರೌಡಿ ಶೀಟರ್ ಅಗ್ನಿ ಶ್ರೀಧರ್ ಅವರಿಗೆ ಬೆಂಗಳೂರು ಪೊಲೀಸರು ವಾರ್ನಿಂಗ್ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಯಾವ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಡಿಸಿಪಿ ಹರೀಶ್ ಪಾಂಡೆ ಕುಮಾರಸ್ವಾಮಿ ಲೇಔಟ್ ಠಾಣೆಗೆ ಕರೆಸಿ ವಾರ್ನ್ ಮಾಡಿದ್ದಾರೆ. ಅಲ್ಲದೇ CRPC 110 ಅಡಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ. ಅಗ್ನಿ ಶ್ರೀಧರ್, ಬಚ್ಚನ್ ಸೇರಿದಂತೆ 100ಕ್ಕೂ ಹೆಚ್ಚು ರೌಡಿ ಶೀಟರ್ಗಳಿಗೆ ವಾರ್ನಿಂಗ್ ಕೊಟ್ಟು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. …
Read More »ವರಮಹಾಲಕ್ಷ್ಮೀ ಹಬ್ಬಕ್ಕಿಲ್ಲ ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನ
ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ವರಮಹಾಲಕ್ಷ್ಮಿ ದರ್ಶನ ಪಡೆಯಬೇಕು ಎಂದುಕೊಂಡಿದ್ದ ಭಕ್ತರಿಗೆ ಜಿಲ್ಲಾಡಳಿತ ನಿರಾಸೆ ಮೂಡಿಸಿದ್ದು, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರಿಗೆ ಅವಕಾಶ ನೀಡದೆ ದೇವಾಲಯ ಬಂದ್ ಮಾಡಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದ್ದು, ಜಿಲ್ಲಾಡಳಿತ ಸೂಚನೆ ಹಿನ್ನೆಲೆಯಲ್ಲಿ ದೇವಾಲಯ ಬಂದ್ ಮಾಡಿ ಆಡಳಿತ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವಾಲಯದ ಅರ್ಚಕರಿಂದ …
Read More »NASA ಪ್ರಶಸ್ತಿಗೆ ಭಾಜನರಾದ ಕನ್ನಡಿಗ -ಬರೋಬ್ಬರಿ ₹1.41 ಕೋಟಿ ವಿದ್ಯಾರ್ಥಿ ವೇತನ
ಶಿರಸಿ: ಹಂಟ್ಸ್ವಿಲ್ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದ (UAH) ಇಬ್ಬರು ಡಾಕ್ಟರೇಟ್ ವಿದ್ಯಾರ್ಥಿಗಳು ಸಲ್ಲಿಸಿರುವ ಸಂಶೋಧನಾ ಪ್ರಸ್ತಾವನೆಯನ್ನು ಬಾಹ್ಯಾಕಾಶ ವಿಜ್ಞಾನ ವಿಭಾಗವು ನಾಸಾ ಅರ್ಥ್ ಮತ್ತು ಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿ (FINESST) ಅನುದಾನದಲ್ಲಿ NASA ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಭಾಜನವಾಗಿದೆ. ಕ್ಯಾಥರೀನ್ ಡೇವಿಡ್ಸನ್ ಮತ್ತು ದಿನೇಶ (ದಿನೇಶ್) ವಸಂತ ಹೆಗಡೆ ತಲಾ 1,35,000 ಅಮೆರಿಕನ್ ಡಾಲರ್ ಅನ್ನು ಸ್ಟೈಫಂಡ್, ಟ್ಯೂಷನ್, ಸಂಶೋಧನಾ ಚಟುವಟಿಕೆಗಳು ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲು, ಕಾರ್ಯಾಗಾರಗಳು ಮತ್ತು …
Read More »
Laxmi News 24×7