ಮುಂಬಯಿ : ಮಹಿಳಾ ಕ್ಯಾಬಿನ್ ಸಿಬಂದಿಯ ಮೇಲೆ ಕೀಳುಮಟ್ಟದ ಕಾಮೆಂಟ್‌ಗಳನ್ನು ಮಾಡಿದ ಮತ್ತು ಸಹ ಪ್ರಯಾಣಿಕರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರು ವಿದೇಶಿ ಪ್ರಜೆಗಳನ್ನು ಗೋವಾದಿಂದ ಮುಂಬೈಗೆ ಹೋಗುವ ಗೋ ಫಸ್ಟ್ ಫ್ಲೈಟ್ ನಿಂದ ಡಿಬೋರ್ಡ್ ಮಾಡಲಾಗಿದೆ ಎಂದು ಏರ್‌ಲೈನ್‌ನ ವಕ್ತಾರರು ಶನಿವಾರ ತಿಳಿಸಿದ್ದಾರೆ. ಈ ವಿಷಯವನ್ನು ವಾಯುಯಾನ ಸುರಕ್ಷತಾ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಗೂ ವರದಿ ಮಾಡಲಾಗಿದೆ. ವಿದೇಶಿ ಪ್ರಜೆಗಳು ರಷ್ಯಾದಿಂದ ಬಂದವರು …
Read More »ಹಾವೇರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆರು ನಿರ್ಣಯ
ಹಾವೇರಿ: ಸಂಪ್ರದಾಯದಂತೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕೂಡ ಒಟ್ಟು ಆರು ನಿರ್ಣಯಗಳನ್ನು ತೆಗೆದುಕೊಂಡು ಇವುಗಳನ್ನು ಕೂಡಲೇ ಈಡೇರಿಸುವಂತೆ ಸಾಹಿತ್ಯ ಸಮ್ಮೇಳನದ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಅವರು ನಿರ್ಣಯ ಮಂಡಿಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರು ಅನುಮೋದಿಸಿದರು. ಮೊದಲನೇದಾಗಿ ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೆಯಕ ಕೂಡಲೇ ಸುಗ್ರೀವಾಜ್ಞೆ ಮೂಲಕ ಕಾನೂನಿನ ರೂಪ ಪಡೆದು ಶಿಕ್ಷಣ, ನ್ಯಾಯಾಂಗ, ಆಡಳಿತದಲ್ಲಿ …
Read More »ವಿವಿಧ ಮುಖಂಡರ ಮನೆಗಳಿಗೆ ಭೇಟಿ ಆರಂಭಿಸಿದ ಜನಾರ್ದನ ರೆಡ್ಡಿ
ಗಂಗಾವತಿ: ನೂತನ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸ್ಥಾಪಿಸಿ ಗಂಗಾವತಿ ಸೇರಿ ರಾಜ್ಯದ ವಿವಿಧೆಡೆ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಿದ್ದತೆಯಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ರವಿವಾರ ತಾಲೂಕಿನ ಹೇರೂರು ಗ್ರಾಮದಲ್ಲಿ ವಿವಿಧ ಜನಾಂಗ ಮತ್ತು ಪಕ್ಷಗಳ ಮುಖಂಡ ಮನೆಗಳಿಗೆ ಭೇಟಿ ನೀಡಿ ಬೆಂಬಲ ಕೋರಿದರು. ಜಿ.ಪಂ.ಮಾಜಿ ಉಪಾಧ್ಯಕ್ಷ ವಿರೂಪಾಕ್ಷಗೌಡ ಹೇರೂರು, ಮುಖಂಡರಾದ ಲಿಂಗನಗೌಡ, ವಿರೂಪಾಕ್ಷಗೌಡ ನಾಯಕ ಸೇರಿ ವಿವಿಧ ಮುಖಂಡರ ಮನೆಗಳಿಗೆ ತೆರಳಿ ಮಾತುಕತೆ ನಡೆಸಿ ಕಲ್ಯಾಣ …
Read More »ಮಂಗಳೂರು ಲೋಕಾಯುಕ್ತ ಎಸ್ ಪಿ ಲಕ್ಷ್ಮೀ ಗಣೇಶ್ ವರ್ಗಾವಣೆ
ಮಂಗಳೂರು: ಲೋಕಾಯುಕ್ತ ಎಸ್ ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮೀ ಗಣೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಸೈಮನ್ ಅವರನ್ನು ನೂತನ ಲೋಕಾಯುಕ್ತ ಎಸ್ ಪಿಯಾಗಿ ನೇಮಕ ಮಾಡಲಾಗಿದೆ. ಸೈಮನ್ ಹಿಂದೆ ದಕ್ಷಿಣ ಕನ್ನಡ ಎಸಿಬಿ ಎಸ್‌ಪಿ ಆಗಿದ್ದರು. ಮಂಗಳೂರು ಲೋಕಾಯುಕ್ತ ವಿಭಾಗವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿ ಹೊಂದಿದೆ.
Read More »ಕನ್ನಡ ಸಾಹಿತ್ಯ ಸಮ್ಮೇಳನ | ಮಾತೃಭಾಷೆ ಶಿಕ್ಷಣಕ್ಕೆ ಬೇಕಿದೆ ಸಾಂವಿಧಾನಿಕ ರಕ್ಷಣೆ: ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಸೆ
ಹಾವೇರಿ: ಗಡಿನಾಡು ಕನ್ನಡಿಗರ ಬವಣೆಗಳನ್ನು ನೀಗುವ ಸಲುವಾಗಿ ಈಗಾಗಲೆ ನೀಡಿರುವ ₹25 ಕೋಟಿ ರೂ. ಜತೆಗೆ ಮತ್ತೆ ₹25 ಕೋಟಿ ರೂ. ನೀಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಇದೇ ವೇಳೆ, ಪ್ರಾಥಮಿಕ ಹಂತದಿಂದಲೇ ಮಾತೃಭಾಷೆಯನ್ನು ಕಡ್ಡಾಯ ಮಾಡುವ ಕುರಿತು ಸಂವಿಧಾನ ತಿದ್ದುಪಡಿಯ ಅಗತ್ಯವಿರುವ ಕುರಿತು ಒತ್ತಾಸೆ ವ್ಯಕ್ತಪಡಿಸಿದ್ದಾರೆ. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮೂರು ದಿನದ ಕನ್ನಡದ ಹಬ್ಬ …
Read More »ಮೇದಾರ ಅಭಿವೃದ್ದಿ ನಿಗಮ ಸ್ಥಾಪನೆಗೆ ಕ್ರಮ:C.M.
ಚಿತ್ರದುರ್ಗ, ಜನವರಿ 07 : ಮೇದಾರ ಸಮುದಾಯದ ಗುರುಗಳ ಹೆಸರಿನಲ್ಲಿ ಅಭಿವೃದ್ದಿ ನಿಗಮ ಸ್ಥಾಪಿಸಿ, ಬಿದಿರು ವೃತ್ತಿಗೆ ಬೆಂಬಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ಅಖಿಲ ಭಾರತ, ಅಖಿಲ ಕರ್ನಾಟಕ ಮೇದಾರ ಬುಡಕಟ್ಟು ಜನಾಂಗದ ಬೃಹತ್ ಸಮಾವೇಶವನ್ನು ಉದ್ಘಾಟಿಸಿದರು. ನಿಗಮದಲ್ಲಿ ಹೊಸ ತಂತ್ರಜ್ಞಾನಗಳನ್ನು ತಂದು, ತರಬೇತಿ ನೀಡಬೇಕು. ಪ್ರತಿ ಜಿಲ್ಲೆಯಲ್ಲಿ ಬಿದಿರಿನ ಹೊಸ ಉತ್ಪನ್ನಗಳನ್ನು ತಯಾರಿಸುವ ಕೇಂದ್ರಗಳನ್ನು ಸ್ಥಾಪಿಸಿ, ಆ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು …
Read More »ಶ್ರೀ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಬೃಹತ್ ಕೃಷಿ ಮೇಳ ಕಾರ್ಯಕ್ರಮಕೆ
ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದ ಶ್ರೀ ಕೆರಿ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ರವಿವಾರ ದಿ 15 ರಿಂದ 19 ರವರೆಗೆ ಬೃಹತ್ ಕೃಷಿ ಮೇಳ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕೃಷಿ ಮಳಿಗೆ ನಿರ್ಮಿಸಲು ಅಡಿಗಲ್ ಪೂಜೆ ಸಿದ್ದೇಶ್ವರ ದೇವರ ಜಾತ್ರಾ ಕಮಿಟಿ ಉಪಾಧ್ಯಕ್ಷ ರಾಜುಗೌಡ ಪಾಟೀಲ್ ಇವರು ನೆರವೇರಿಸಿ ಚಾಲನೆ ನೀಡಿದರು. ಬುದುವಾರ ರಂದು ಐನಾಪುರದಲ್ಲಿ ಕೃಷಿ ಮೇಳದ 150 ಮಳಿಗೆಳು ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಕರ್ನಾಟಕ ಹಾಗೂ …
Read More »ಹುಡ್ಗೀರ್ನ ಕಳಿಸೋಕೆ ಕಾರಿನ ಕೋಡ್ ಬಳಸ್ತಿದ್ದ ರವಿ..
ಬೆಂಗಳೂರು: ಸೆಕ್ಸ್ ದಂಧೆ ವಿಚಾರದಲ್ಲಿ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಮಾಹಿತಿ ಲಭ್ಯವಾಗುತ್ತಿವೆ. ಸ್ಯಾಂಟ್ರೋ ರವಿ ಹಾಟ್ ಹುಡ್ಗೀರ ಡೀಲ್ ಹೇಗೆ ಮಾಡ್ತಿದ್ದ ಗೊತ್ತಾ. ಹಾಟ್ ಹಾಟ್ ಹುಡ್ಗೀರ್ನ ಕಳಿಸಿ ಟ್ರಾನ್ಸ್ಫರ್ ಡೀಲ್ ಮಾಡುತ್ತಿದ್ದ ರವಿ, ಹುಡ್ಗೀರ್ನ ಕಳಿಸೋಕೆ ಕಾರಿನ ಕೋಡ್ ಬಳಸ್ತಿದ್ದ. ಒಂದೊಂದು ಹುಡುಗಿಗೆ ಒಂದೊಂದು ಕಾರಿನ ಹೆಸರು ಕೊಡುತ್ತಿದ್ದ. ಆತ ಸಖತ್ ಸುಂದರವಾಗಿರೋ ಹುಡುಗಿಗೆ ಹೈಟೆಕ್ ಕಾರಿನ ಹೆಸರು ಕೊಟ್ಟು, ಸಾರ್, ಬರೀ ಇನ್ನೋವಾ ಬೇಡ, ಜಾಗ್ವಾರ್ …
Read More »ಡಿಬಾಸ್ ʼಕ್ರಾಂತಿʼ ಅಬ್ಬರಕ್ಕೆ ಯೂಟ್ಯೂಬ್ ಧೂಳಿಪಟ…!
ಇಷ್ಟು ದಿನ ಹಬ್ಬ ಮಾಡಲು ಕಾಯುತ್ತಿದ್ದ ಡಿಬಾಸ್ ಅಭಿಮಾನಿಗಳಿಗೆ ಇಂದು ನಿಜವಾಗಿಯೂ ಸ್ಪೆಷಲ್ ದಿನವಾಗಿದೆ. ಸಾಕಷ್ಟು ವಾದ ವಿವಾದಗಳು, ಅವಮಾನಗಳ ಅನುಭವದ ನಡುವೆ ಬಿಡುಗಡೆಯಾದ ದಚ್ಚು ಕ್ರಾಂತಿ ಟ್ರೇಲರ್ ಯೂಟ್ಯೂಬ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಲ್ಲದೆ, ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಯೂಟ್ಯೂಬ್‌ನಲ್ಲಿ ಬರ್ಜರಿ ವೀಕ್ಷಣೆ ಪಡೆಯುತ್ತಿದೆ. ಬಿಡುಗಡೆಯಾದ ಒಂದು ಗಂಟೆಯಲ್ಲಿ 7 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ನೋಡುತ್ತಿದ್ದಾರೆ. ಹೌದು.. ಕ್ರಾಂತಿ ಹಬ್ಬ ಶುರುವಾಗಿದೆ. ದಾಸನ ಅಭಿಮಾನಿಗಳ ಸಂತೋಷಕ್ಕೆ …
Read More »ಒಂದಲ್ಲ ಎರಡಲ್ಲ 4 ಮದ್ವೆಯಾಗಿರುವ ಸ್ಯಾಂಟ್ರೋ ರವಿ! ಈತನ ಹಿಂದೆ ಹೋದ ಮಂಡ್ಯ ಯುವತಿ ಇಂದಿಗೂ ನಿಗೂಢ
ಮಂಡ್ಯ: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಬಗೆದಷ್ಟು ಮಾಹಿತಿಗಳು ಬೆಳಕಿಗೆ ಬರುತ್ತಲೇ ಇದೆ. ಕಳ್ಳತನ, ವರ್ಗಾವಣೆ ದಂಧೆ ಹಾಗೂ ವೇಶ್ಯಾವಾಟಿಕೆ ದಂಧೆ ಹೊರತು ಪಡಿಸಿ ಇದೀಗ ಸ್ಯಾಂಟ್ರೋ ರವಿಯ ವೈಯಕ್ತಿಕ ಮಾಹಿತಿಗೆ ಬಯಲಿಗೆ ಬಂದಿದೆ. ಸ್ಯಾಂಟ್ರೋ ರವಿಗೆ ಎರಡಲ್ಲ ನಾಲ್ಕು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. 2000ನೇ ಇಸವಿಯಲ್ಲಿ ಮಂಡ್ಯದ ರೂಪ ಎನ್ನುವ ಯುವತಿಯನ್ನು ರವಿ ಪ್ರೀತಿಸಿದ್ದ. ರೂಪ ಪಿಯುಸಿ ಓದುತ್ತಿದ್ದಳು. ಬಡವರ ಮನೆಯ …
Read More »
Laxmi News 24×7