: 2022-23 ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಹಸು/ಎಮ್ಮೆ ಘಟಕ ಅನುಷ್ಠಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 16 ಅರ್ಜಿ ಸಲ್ಲಿಸಲು ಕೊನೆಯ ದಿನ. ಸಾಮಾನ್ಯ, ಪ.ಜಾ/ಪ.ಪಂ, ಮತ್ತು ಅಲ್ಪಸಂಖ್ಯಾತ, ಕೂಲಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರನ್ನು ಆಯ್ಕೆ ಮಾಡಲಾಗುವುದು. ಪಶುಸಂಗೋಪನಾ ಇಲಾಖೆಯಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜ.16 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶು ವೈದ್ಯಕೀಯ ಸಂಸ್ಥೆಯ ವೈದ್ಯಾಧಿಕಾರಿಗಳನ್ನು …
Read More »ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆ :ಬೊಮ್ಮಾಯಿ
ಚಿತ್ರದುರ್ಗ: ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಚಿತ್ರದುರ್ಗದಲ್ಲಿ ಎಸ್.ಜೆ.ಎಂ ಆಂಗ್ಲ ಮಾಧ್ಯಮ ಶಾಲೆ ಹೆಲಿಪ್ಯಾಡ್ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ವರಿಷ್ಠರೊಂದಿಗೆ ವಿಸ್ತೃತ ಚರ್ಚೆ ಆಗಿದೆ ಎಂದರು. ನನಗೆ ಬಂದಿರುವ ಮಾಹಿತಿ ಪ್ರಕಾರ ಆದಷ್ಟೂ ಬೇಗ ಒಂದು ಸಭೆ ನಡೆಸಿ ಈ ಬಗ್ಗೆ ತೀರ್ಮಾನವಾಗಲಿದೆ. ಶೀಘ್ರದಲ್ಲಿ ಆಗುವ ನಿರೀಕ್ಷೆ ಇದೆ. ಸಚಿವ ಸಂಪುಟಕ್ಕೆ …
Read More »ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರವಿಲ್ಲ:ಸಿದ್ದರಾಮಯ್ಯ ಕಿಡಿ
ಬೆಂಗಳೂರು : ಈ ವರ್ಷ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರವಿಲ್ಲ ಎಂಬುದು ದುರದೃಷ್ಟಕರ.ಕರ್ನಾಟಕದ ಟ್ಯಾಬ್ಲೋವನ್ನು ತಿರಸ್ಕರಿಸುವುದು ಎಷ್ಟು ಗಂಭೀರವಾಗಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.ಬಿಜೆಪಿ ಕರ್ನಾಟಕ ನಮ್ಮ ರಾಜ್ಯದ ಹೆಮ್ಮೆಯನ್ನು ಎತ್ತಿ ಹಿಡಿಯುವುದಾಗಿದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಅಸಮರ್ಥ ಮತ್ತು ದುರ್ಬಲ ಬಸವರಾಜ್ ಬೊಮ್ಮಾಯಿ ಮತ್ತು ಅವರ ಕ್ಯಾಬಿನೆಟ್ ಮಂತ್ರಿಗಳು 40% ಕಮಿಷನ್ ಮೂಲಕ ಸರ್ಕಾರಿ ಸಂಪನ್ಮೂಲಗಳನ್ನು ಲೂಟಿ ಮಾಡುವ ಬಗ್ಗೆ ಚಿಂತಿಸುತ್ತಿದ್ದಾರೆ. ಅವರು ಥೀಮ್ ವಿನ್ಯಾಸದಲ್ಲಿ …
Read More »A.I.C.C. ವತಿಯಿಂದ ಲೋಕಸಭೆ ಕ್ಷೇತ್ರವಾರು ವೀಕ್ಷಕರ ನೇಮಕ
ಬೆಂಗಳೂರು: ವಿಧಾನಸಭೆ ಚುನಾವಣೆಗೆ ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ಎಐಸಿಸಿ ವತಿಯಿಂದ ವೀಕ್ಷಕರನ್ನು ನೇಮಿಸಿದೆ. ಬಾಗಲಕೋಟೆ-ಕ್ರಿಸ್ಟೋಫರ್ ತಿಲಕ್, ಬೆಂಗಳೂರು ಕೇಂದ್ರ-ಟಿ.ರಾಧಾಕೃಷ್ಣನ್, ಬೆಂಗಳೂರು ಉತ್ತರ- ವೈದ್ಯಲಿಂಗಂ. ಬೆಂಗಳೂರು ಗ್ರಾಮಾಂತರ-ಹಿಬಿ ಈಡನ್, ಬೆಂಗಳೂರು ದಕ್ಷಿಣ- ಅಡೂರ್ ಪ್ರಕಾಶ್, ಬೆಳಗಾವಿ-ಡಾ.ಮೊಹಮ್ಮದ್ ಜಲವೈದ್, ಬಳ್ಳಾರಿ-ವಸಂತ್ ಪುರ್ಕೆ, ಬೀದರ್-ಸಿರಿವೆಲ್ಲ ಪ್ರಸಾದ್, ವಿಜಯಪುರ- ನಿತಿನ್ ರಾವುತ್, ಚಾಮರಾಜನಗರ- ಎ.ಪಿ.ಅನಿಲ್‌ಕುಮಾರ್, ಚಿಕ್ಕೋಡಿ- ಮೋಹನ್ ಜೋಶಿ, ಚಿತ್ರದುರ್ಗ- ಸಂಜಯ್ ದತ್, ದಕ್ಷಿಣ ಕನ್ನಡ- ಸುನಿಲ್ ಕೇದಾರ್, ದಾವಣಗೆರೆ-ಪ್ರಣಿತಿ ಶಿಂಧೆ, ಧಾರವಾಡ-ಕುಲದೀಪ್ ರೈ ಶರರ್ಮಾ, …
Read More »ಸಿಡಿ ಬಿಡುಗಡೆ ಮಾಡಲಿ,ಪ್ರದರ್ಶನ ಮಾಡಿಸುತ್ತೇನೆ: ಮುನಿರತ್ನ
ಬೆಂಗಳೂರು: ಸಿಡಿ ಇದ್ದರೆ ಬಿಡುಗಡೆ ಮಾಡಲಿ. ನಾನೇ 70 ಎಂಎಂ ಸ್ಕ್ರೀನ್ ಹಾಕಿ ವ್ಯವಸ್ಥೆ ಮಾಡಿಸುತ್ತೇನೆಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು 12 ಜನ ಜತೆಯಲ್ಲೇ ಇದ್ದೆವು. ಕುಮಾರಸ್ವಾಮಿ ನಿರ್ಮಾಪಕರು, ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಕುಮಾರಸ್ವಾಮಿ ಖಾಲಿ ಬುಟ್ಟಿ ಇಟ್ಟುಕೊಂಡು ಇರುತ್ತಾರೆ. ಹಾವಿದೆ, ಹಾವಿದೆ ಎನ್ನುತ್ತಾರೆ. ಅದರಲ್ಲಿ ಹಾವಲ್ಲ, ಹಾವು ರಾಣಿ ಕೂಡ ಇಲ್ಲ. ಆ ಬುಟ್ಟಿ ತೆಗೆದು ಬಿಡಿ, …
Read More »ಸ್ತಬ್ಧಚಿತ್ರ ಸಮರ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯಕ್ಕಿಲ್ಲ ಸ್ಥಾನ
ಬೆಂಗಳೂರು: ಹದಿಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ರಾಜ್ಯ ಸರಕಾರದ ಸ್ತಬ್ಧಚಿತ್ರವನ್ನು ಕೇಂದ್ರ ತಿರಸ್ಕರಿಸಿದ್ದು, ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ, ತುಳಸಿಗೌಡ ಹಾಲಕ್ಕಿ ಅವರ ಸಾಧನೆಯನ್ನು ಬಿಂಬಿಸುವ ಸ್ತಬ್ಧಚಿತ್ರಕ್ಕೆ ಆಯ್ಕೆ ಸಮಿತಿ ಸಮ್ಮತಿ ಸೂಚಿಸಿತ್ತಾದರೂ ಕೊನೆಯ ಸುತ್ತಿನ ಸಭೆಯಲ್ಲಿ ತಿರಸ್ಕೃತಗೊಂಡಿತು ಎಂದು ಮೂಲಗಳು ತಿಳಿಸಿವೆ. ಕೇಂದ್ರ – ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿದ್ದರೂ ಅವಕಾಶ ಕೈತಪ್ಪಿದ್ದು …
Read More »ಶ್ರೀರಾಮಸೇನೆ ಜಿಲ್ಲಾಧ್ಯಕ್ಷರ ಮೇಲೆ ದಾಳಿ ಪ್ರಕರಣ: ರಾಜ್ಯಾದ್ಯಂತ ಸಂಘಟನೆಯಿಂದ ಪ್ರತಿಭಟನೆ; ಮುತಾಲಿಕ್
ಬೆಳಗಾವಿ: ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ ಮೇಲೆ ಹಿಂಡಲಗಾದಲ್ಲಿ ಶನಿವಾರ ನಡೆದ ಗುಂಡಿನ ದಾಳಿ ಖಂಡಿಸಿ ರಾಜ್ಯಾದ್ಯಂತ ಜ. 8ರಂದು ಶ್ರೀರಾಮಸೇನಾ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು. ಫೈರಿಂಗ್ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಆಗ್ರಹಿಸಿದರು. ಈ ಬಗ್ಗೆ ವಿಡಿಯೋ ಬಿಡುಗಡೆಗೊಳಿಸಿರುವ ಮುತಾಲಿಕ್, ಹಿಂದೂತ್ವ ಸಂಘಟನೆಯಾದ ಶ್ರೀರಾಮಸೇನೆ ದುಷ್ಕರ್ಮಿಗಳ ಗುಂಡು, ಕತ್ತಿಗೆ, ಬಾಂಬ್, ತಲವಾರ್ ಗೆ ಹೆದರುವುದಿಲ್ಲ. ಇಂಥ ದಾಳಿಗೆ ನಾವು ಹೆದರುವವರಲ್ಲ. ಹಿಂದೂಗಳು ಗಟ್ಟಿಯಾಗಿದ್ದಾರೆ, …
Read More »ದೇಶದಲ್ಲಿ ಸಂವಿಧಾನ ತಿದ್ದುಪಡಿ ಹುನ್ನಾರ; ಡಾ| ರಾಜರತ್ನ ಅಂಬೇಡ್ಕರ್
ಸಂಕೇಶ್ವರ: ಸದ್ಯ ದೇಶದಲ್ಲಿ ಸಂವಿಧಾನ ತಿದ್ದುಪಡಿ, ಮೀಸಲಾತಿ ಕಿತ್ತುಕೋಳ್ಳುವ ಹುನ್ನಾರ ಮನುವಾದಿಗಳು ಮಾಡುತಿದ್ದು, ಇದರ ಬಗ್ಗೆ ದಲಿತರು ಎಚ್ಚರದ ಹೆಜ್ಜೆ ಇಡುವ ಮೂಲಕ ಜಾಗೃತಿ ವಹಿಸಬೇಕಾಗಿದೆ ಎಂದು ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ, ಡಾ| ಬಿ.ಆರ್.ಅಂಬೇಡ್ಕರ್ ಮರಿಮೊಮ್ಮಗ ಡಾ| ರಾಜರತ್ನ ಅಂಬೇಡ್ಕರ್ ಹೇಳಿದರು. ಸಂಕೇಶ್ವರದಲ್ಲಿ ಭೀಮಾ-ಕೊರೆಗಾಂವ ವಿಜಯೋತ್ಸವದ 205ನೇ ವರ್ಷಾಚರಣೆ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿ ನಿಮಿತ್ತ ಡಾ| ಬಿ.ಆರ್.ಅಂಬೇಡ್ಕರ್ ಜನಜಾಗ್ರತಿ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, …
Read More »1.50 ಕೋಟಿ ರೂಗಳ ಸ್ವಂತ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಯುಗಾದಿಗೆ ಲೋಕಾರ್ಪಣೆ-ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ.
ಮೂಡಲಗಿ: ಅರಭಾವಿ ದುರದುಂಡೀಶ್ವರ ಮಠದ ಸಿದ್ದಲಿಂಗ ಮಹಾಸ್ವಾಮಿಗಳ ಸಂಕಲ್ಪದಂತೆ ಅರಭಾವಿ ಮಠದ ಆವರಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ 1.50 ಕೋಟಿ ರೂಗಳ ಸ್ವಂತ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಿಸಲಾಗುತ್ತಿದ್ದು, ಬರುವ ಯುಗಾದಿ ಹಬ್ಬದಂದು ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶುಕ್ರವಾರ ಅರಭಾವಿಮಠದ ದುರದುಂಡೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಅವರು, ಅರಭಾವಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳಿಗೆ ಅನುಕೂಲವಾಗಬೇಕೆಂಬ ಸದುದ್ದೇಶದಿಂದ ಮಠದ …
Read More »ಉಗ್ರನಿಂದ ಬಾಂಬ್ ಸ್ಫೋಟದ ಬೆದರಿಕೆ ಬಂದಿದೆ ಎಂದವನ ವಿರುದ್ಧ ಎಫ್‌ಐಆರ್
ಬೆಂಗಳೂರು: ಬಸವೇಶ್ವರ ನಗರದ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದ ಬೆನ್ನಲ್ಲೇ ಪಾಕಿಸ್ತಾನದ ಉಗ್ರನೊಬ್ಬ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ (Bomb Threat) ಮಾಡುವುದಾಗಿ ಬೆದರಿಸಿದ್ದಾನೆ ಎಂದು ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. 8137885416 ನಂಬರ್‌ನಿಂದ ಸುನೀಲ್ ಕುಮಾರ್ ಎಂಬಾತ ಪೊಲೀಸ್ ಕಂಟ್ರೋಲ್ ರೂಮ್‌ಗೆ (ಪೊಲೀಸ್ ಸಹಾಯವಾಣಿ-೧೧೨) ಫೋನ್ ಮಾಡಿದ್ದ. ನಂತರ ಆತನನ್ನು ಸಂಪರ್ಕಿಸಲು ಪೊಲೀಸರು ಯತ್ನಿಸಿದಾಗ ಆತ ಮೊಬೈಲ್ ಸ್ವಿಚ್ ಆಫ್ …
Read More »
Laxmi News 24×7