Breaking News

ರಾಜ್ಯ

ಹೈಕಮಾಂಡ್ ಮನವೊಲಿಕೆಗೆ ಒಪ್ಪದ ಡಿ.ಕೆ.ಶಿ ತಮಗೆ ಸಿಎಂ ಸ್ಥಾನ ಬೇಕು ಎಂದು ಹಠ

ನವದೆಹಲಿ; ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಆಯ್ಕೆ ಕಸರತ್ತು ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಇನ್ನೇನು ಸಿಎಂ ಆಯ್ಕೆ ಫೈನಲ್ ಎನ್ನುವಷ್ಟರಲ್ಲಿ ಕೊನೇ ಕ್ಷಣದಲ್ಲಿ ರಾಜಕೀಯ ಚಿತ್ರಣವೇ ಬದಲಾಗುತ್ತಿದೆ. ಒಂದೆಡೆ ಸಿಎಂ ಹುದ್ದೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ತಮಗೆ ಸಿಎಂ ಸ್ಥಾನ ಬೇಕು ಎಂದು ಹಠ ಸಾಧಿಸಿದ್ದಾರೆ. ಅಧಿಕಾರ ಹಂಚಿಕೆ ನಿಟ್ಟಿನಲ್ಲಿ ಹೈಮಾಂಡ್ ಹೆಣೆದ ಸೂತ್ರಕ್ಕೆ ಡಿ.ಕೆ.ಶಿವಕುಮಾರ್ ಒಪ್ಪಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, …

Read More »

ಮುಖ್ಯಮಂತ್ರಿ ಆಯ್ಕೆ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ:ಸುರ್ಜೇವಾಲ

ನವದೆಹಲಿ: ನೂತನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಈವರೆಗೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ, ಸುಳ್ಳು ಸಿದ್ದಿಗಳಿಗೆ ಕಿವಿಗೊಡಬೆಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ. ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ರಣದೀಪ್ ಸುರ್ಜೆವಾಲಾ, ಇಂದು ಸಂಜೆ ಅಥವಾ ನಾಳೆ ಸಿಎಂ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಘೋಷಣೆ ಮಾಡಲಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. …

Read More »

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ : ಹುಟ್ಟೂರಿನಲ್ಲಿ ಸಂಭ್ರಮ

ಮೈಸೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ವಿಚಾರ ಬಹುತೇಕ ಕೊನೆಗೊಂಡಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದು ಖಚಿತಗೊಳ್ಳುತ್ತಿದ್ದಂತೆ ಹುಟ್ಟೂರು ವರುಣ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಅಧಿಕೃತ ಘೋಷಣೆಗೂ ಮುನ್ನ ಸಿದ್ದರಾಮಯ್ಯನವರ ಫ್ಲೆಕ್ಸ್​ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಇತ್ತ ಮೈಸೂರಿನ ಟಿ ಕೆ.ಲೇಔಟ್​ನಲ್ಲಿರುವ ಸಿದ್ದರಾಮಯ್ಯನವರ ಮನೆಗೆ ಅಭಿಮಾನಿಗಳ ದಂಡೇ ಆಗಮಿಸಿದ್ದು, ಮನೆಯ ಸುತ್ತ ಫ್ಲೆಕ್ಸ್​ಗಳನ್ನು ಅಳವಡಿಸಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಜಾಥಾ ನಡೆಸಿ ಸಂಭ್ರಮಾಚರಣೆ ಮಾಡಿದರು. ಕಾಂಗ್ರೆಸ್​ …

Read More »

ನವಲಗುಂದ: ಗುಡಿಯೊಳಗಿನ ಕತ್ತಲ ಸಾಗರಕೆ ಬೇಕು ದೀವಿಗೆ

ನವಲಗುಂದ: ಕ್ಷೇತ್ರದಲ್ಲಿ ಚುನಾವಣೆ ಕಾವು ಮುಗಿದಿದ್ದು, ಹಸಿರಾಗುವ ಸಮಸ್ಯೆಗಳತ್ತ ಮುಖ ಮಾಡಬೇಕಿದೆ. ದಶಕಗಳಿಂದ ಜನರು ಅನುಭವಿಸುತ್ತಿರುವ ತೊಂದರೆಗಳಿಗೆ ಇತಿಶ್ರೀ ಹಾಡುವ ಜರೂರತ್ತು ಹೆಚ್ಚಿದೆ. ತಾಲೂಕಿನ ಗುಡಿಸಾಗರ ಗ್ರಾಮ ನೆರೆಹಾವಳಿಗೆ ಒಳಗಾಗಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಲ್ಲಿನವರನ್ನೆಲ್ಲ ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ಸ್ಥಳಾಂತರಗೊಂಡ ನಿರಾಶ್ರಿತರ ಮನೆಗಳಿಗೆ ವಿದ್ಯುತ್‌ ದೊರೆತರೂ, ಪಕ್ಕಕ್ಕೆ ಹೊಂದಿಕೊಂಡು ಮನೆ ನಿರ್ಮಿಸಿಕೊಂಡ 10-15 ರೈತರ ಕುಟುಂಬಗಳ ಮನೆಗಳಿಗೆ ವಿದ್ಯುತ್‌ ಸಂಪರ್ಕ ದೊರೆತಿಲ್ಲ. ಸರಕಾರದ ನಿಯಮಾವಳಿಗಳಂತೆ ಪರವಾನಗಿ ಪಡೆದು …

Read More »

ನೂತನ ಶಾಸಕರೆದುರು ಸಾಲು ಸಾಲು ಸವಾಲು

ಅಳ್ನಾವರ: ತೀರಾ ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳನ್ನೊಳಗೊಂಡ ಮತಕ್ಷೇತ್ರದ ಸಾಲು ಸಾಲು ಸವಾಲುಗಳು ನೂತನ ಶಾಸಕ ಸಂತೋಷ್‌ ಲಾಡ್‌ ಎದುರಿದೆ. ಕೆಲಸ ಮಾಡುವ ಹುಮ್ಮಸ್ಸಿನಿಂದ ಭಾರೀ ಬಹುಮತದಿಂದ ಆರಿಸಿ ಬಂದ ಲಾಡ್‌ ಅವರ ಮೇಲೆ ಜನರು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಕಾಳಿ ನದಿ ನೀರು ತರುವ ಯೋಜನೆ ಸಾಕಾರಗೊಳಿಸಿದ ಲಾಡ್‌ ಅವರು ಈ ಭಾಗದ ಜನರ ಬದುಕು ಹಸನಗೊಳಿಸಲು ದಿಟ್ಟ ಹೆಜ್ಜೆ ಹಾಕಬೇಕಿದೆ. ಹೊಸ …

Read More »

3 ತಿಂಗಳೊಳಗೆ ಫಿಟ್‌ ಆಗಿ ಇಲ್ಲಾ ರಾಜೀನಾಮೆ ನೀಡಿ: ಪೊಲೀಸರಿಗೆ DG ಖಡಕ್‌ ವಾರ್ನಿಂಗ್‌

ಮೊದಲೆಲ್ಲಾ ಪೊಲೀಸರಿಗೂ ಡೊಳ್ಳು ಹೊಟ್ಟೆಗೂ ಅದೇನೋ ಸಂಬಂಧವಿದ್ದಂತಿತ್ತು. ಆದರೆ ಈಗ ಕಾಲ ಬದಲಾಗಿದೆ. ಈಗೀಗ ಪೊಲೀಸ್‌ ಅಧಿಕಾರಿಗಳೂ ಫಿಟ್‌ ಆಂಡ್‌ ಫೈನ್‌ ಆಗಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಸಹೋದ್ಯೋಗಿಗಳಿಗೂ ಅದೇ ರೀತಿ ಇರುವಂತೆ ಪ್ರೇರಣೆಯನ್ನೂ ಮಾಡುತ್ತಿದ್ದಾರೆ.   ಇದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಸ್ಸಾಂನ ಪೋಲಿಸ್‌ ಅಧಿಕಾರಿಯೊಬ್ಬರು ತಮ್ಮ ಸಹೋದ್ಯೋಗಿಗಳಿಗೆ ʻ3 ತಿಂಗಳೊಳಗೆ ಫಿಟ್‌ ಆಗಿ ಇಲ್ಲಾ ರಾಜೀನಾಮೆ ನೀಡಿʼ ಎಂದು ಖಡಕ್‌ ಸೂಚನೆ ನೀಡಿದ್ದಾರೆ. ʻನಾವು ಅಸ್ಸಾಂನ ಐಪಿಎಸ್‌ …

Read More »

ಪಾಕ್ ಪರ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್: ತಾಳಿಕೋಟೆ ಯುವಕನ ಬಂಧನ

ವಿಜಯಪುರ: ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲೀಮ್ ರಾಷ್ಟ್ರ ಎಂದು ಯುಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿ ಪೊಲೀಸ್ ಅತಿಥಿಯಾಗಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ. ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಿರೂರು ಗ್ರಾಮದ ಯುವಕ ಇಬ್ರಾಹಿಂ ಮುರ್ತುಜಸಾಬ ಮುಲ್ಲಾ ಎಂಬಾತ ಇನ್ಸ್ಟಾಗ್ರಾಂನಲ್ಲಿ ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲೀಮ್ ರಾಷ್ಟ್ರ ಎಂದು ಸ್ಟೋರಿ ಹಾಕಿದ್ದ.   ಇಬ್ರಾಹಿಂ ಮುಲ್ಲಾನ ಇನ್ಸ್ಟಾಗ್ರಾಂ ವೀಕ್ಷಿಸಿದ ಸ್ಥಳೀಯರು ತಾಳಿಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ತಾಳಿಕೋಟೆ ಪೊಲೀಸರು …

Read More »

ಪ್ರಯಾಣಿಸುತ್ತಿದ್ದಾಕೆಗೆ ಬಸ್​ನಲ್ಲೇ ಹೆರಿಗೆ ಮಾಡಿಸಿದ ಮಹಿಳಾ ಕಂಡಕ್ಟರ್​

ಪ್ರಯಾಣಿಸುತ್ತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಗೆ ಮಹಿಳಾ ಕಂಡಕ್ಟರ್​ ಬಸ್​ನಲ್ಲೇ ಹೆರಿಗೆ ಮಾಡಿಸಿದ ಅಪರೂಪದ ಪ್ರಸಂಗವೊಂದು ನಡೆದಿದೆ. ಚಿಕ್ಕಮಗಳೂರು ಘಟಕದ ಕೆಎಸ್​ಆರ್​​ಟಿಸಿ ಬಸ್​ನಲ್ಲಿ ಈ ಪ್ರಕರಣ ನಡೆದಿದೆ.ಚಿಕ್ಕಮಗಳೂರು ವಿಭಾಗದ ಚಿಕ್ಕಮಗಳೂರು ಘಟಕದ ವಾಹನ ಸಂಖ್ಯೆ ಕೆಎ-13 ಎಫ್-0855ರಲ್ಲಿ ಬೆಂಗಳೂರು-ಚಿಕ್ಕಮಗಳೂರು ಮಾರ್ಗವಾಗಿ ನಿನ್ನೆ ತೆರಳುತ್ತಿದ್ದಾಗ ಉದಯಪುರ ಸಮೀಪದ ಕೃಷಿ ಕಾಲೇಜು ಹತ್ತಿರ ಮಧ್ಯಾಹ್ನ 1.25ರ ಸುಮಾರಿಗೆ ಈ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಬಸ್​ನಲ್ಲಿ 15 ಪ್ರಯಾಣಿಕರಿದ್ದರು. ಈ ಬಸ್​ನಲ್ಲಿ …

Read More »

ಪಂಚಮಸಾಲಿ ಸಮಾಜಕ್ಕೆ ಡಿಸಿಎಂ ಸ್ಥಾನ ನೀಡಿ : ಮಾಜಿ ಸಚಿವ ಶಶಿಕಾಂತ ನಾಯಿಕ ಆಗ್ರಹ

ಬೆಳಗಾವಿ : ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ಪಂಚಮಸಾಲಿ ಸಮಾಜ ಸಂಪೂರ್ಣ ಬೆಂಬಲ ನೀಡಿದ್ದು. ನಮ್ಮ ಸಮಾಜಕ್ಕೆ ಒಂದು ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಮಾಜಿ ಸಚಿವ ಶಶಿಕಾಂತ ನಾಯಿಕ ಕಾಂಗ್ರೆಸ್ ನಾಯಕರಿಗೆ ಒತ್ತಾಯಿಸಿದರು. ಇಂದು ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು. 2023ರ ಚುನಾವಣೆಯಲ್ಲಿ ಕರ್ನಾಟಕ ಜನ ಬದಲಾವಣೆ ಬಯಸಿದ ಹಿನ್ನೆಲೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಸರ್ಕಾರ ರಚಿಸುತ್ತಿದೆ. ಇದರಿಂದ ನಮಗೂ ಬಹಳಷ್ಟು ಖುಷಿಯಾಗಿದೆ. ಬಿಜೆಪಿಯಲ್ಲಿ ಬಹಳ …

Read More »

ನೂತನ ಶಾಸಕರಾಗಿರುವ ಆಸೀಫ್​ (ರಾಜು) ಸೇಠ್ ಹಾಗೂ ಮಾಜಿ ಶಾಸಕ ಫೀರೋಜ್​​ ಸೇಠ್​ ಅವರು ಸ್ಥಗಿತಗೊಂಡಿದ್ದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಚಾಲನೆ ನೀಡಿದರು.

  ಬೆಳಗಾವಿ‌ಯಲ್ಲಿ ಸ್ಥಗಿತಗೊಂಡಿದ್ದ ಅತೀ ಉದ್ದದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಆಸೀಫ್ ಸೇಠ್​​​ ಚಾಲನೆಬೆಳಗಾವಿ: ಇಲ್ಲಿನ ಕೋಟೆ ಆವರಣದಲ್ಲಿ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ದೇಶದ ಅತೀ ಉದ್ದದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ನೂತನ ಶಾಸಕ ಆಸೀಫ್ (ರಾಜು) ಸೇಠ್ ಇಂದು ಚಾಲನೆ ನೀಡಿದರು.   ಫಿರೋಜ್ ಸೇಠ್ ಶಾಸಕರಾಗಿದ್ದ ವೇಳೆ ಕಿಲ್ಲಾ ಕೆರೆ ಆವರಣದಲ್ಲಿ ಅತೀ ಎತ್ತರದ 110 ಮೀಟರ್ ಧ್ವಜಸ್ತಂಭ ನಿರ್ಮಿಸಿ ರಾಷ್ಟ್ರಧ್ವಜ ಹಾರಾಟಕ್ಕೆ ಚಾಲನೆ …

Read More »