Breaking News

ಜಿಲ್ಲೆ

ಲೋಕಸಭಾ ಉಪಚುನಾವಣೆಗೆ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಎಂಟ್ರಿ ಕೊಡ್ತಾರಾ!

ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯ ದಿನಾಂಕ ನಿಗದಿ ಆಗದಿದ್ದರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆಕಾಂಕ್ಷೆಗಳು ಹೆಚ್ಚಾಗುತ್ತಿದ್ದಾರೆ. ಬಿಜೆಪಿಯಲ್ಲಿ ಆಕಾಂಕ್ಷೆಗಳ ದಂಡೆ ಇದೆ. ವಿಶೇಷ ಏನೆಂದರೆ ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೇ ಆದಂತ ಪ್ರತಿಷ್ಠೆ ಹೊಂದಿರುವ ಕುಟುಂಬದವೆಂದರೆ ಅದು ಜಾರಕಿಹೊಳಿ ಕುಟುಂಬ.ಜಾರಕಿಹೊಳಿ ಕುಟುಂಬದವರ ತಾವು ಹಿಡಿದ ಹಠವನ್ನು ಸಾಧಿಸದೆ ಬಿಡದ ಕುಟುಂಬ ಎಂದು ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ರಾಜಕಾರಣದಲ್ಲಿ ಹಠವಾದಿ ಎಂದೇ ಖಾತ್ಯಿಯಾಗಿರುವ ಜಲಸಂಪನ್ಮೂಲ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ. …

Read More »

ಕೊಟ್ಟಿಗೆ ಹಾರದಲ್ಲಿ ಕಸ್ತೂರಿ ಮಹಲ್ ಸಿನಿ ಚಿತ್ತಾರ

ಕರುನಾಡ ಪ್ರಕೃತಿ ಸೌಂದರ್ಯ ಹೆಚ್ಚಿಸಿರುವಲ್ಲಿ ಕೊಟ್ಟಿಗೆ ಹಾರದ್ದು ಮಹತ್ವದ ಪಾತ್ರವಿದೆ. ಮಳೆಗಾಲದಲ್ಲಿ ಇದರ ವೈಭವ ಕೇಳುವುದೇ ಬೇಡ. ಇಂತಹ ಸುಂದರ ಪರಿಸರದಲ್ಲಿ ಕಸ್ತೂರಿ ಮಹಲ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅಕ್ಟೋಬರ್ 5ರಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಮಾತಿನ ಭಾಗದ ಚಿತ್ರೀಕರಣ ‌ಬಿರುಸಿನಿಂದ ಸಾಗಿದೆ.‌ ಶಾನ್ವಿ ಶ್ರೀವಾಸ್ತವ್, ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ನೀನಾಸಂ ಅಶ್ವಥ್ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಹಾರಾರ್ ಥ್ರಿಲ್ಲರ್ …

Read More »

ರಾಜ್ಯಾದ್ಯಂತ ಶಾಲೆಗಳಿಗೆ ಮೂರು ವಾರಗಳ ಕಾಲ ರಜೆ ಘೋಷಣೆ ಮಾಡಿದೆ.

ಬೆಂಗಳೂರು, – ವಿದ್ಯಾಗಮ ಯೋಜನೆಯಡಿ ಶಿಕ್ಷಕರಿಗೂ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ರಾಜ್ಯಾದ್ಯಂತ ಶಾಲೆಗಳಿಗೆ ಮೂರು ವಾರಗಳ ಕಾಲ ರಜೆ ಘೋಷಣೆ ಮಾಡಿದೆ. ವಿಶೇಷವೆಂದರೆ ನಿನ್ನೆಯಷ್ಟೆ ವಿದ್ಯಾಗಮ ಯೋಜನೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು. ಮಕ್ಕಳಿಗೂ ಸೋಂಕು ಹರಡಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಇದೀಗ ರಾಜ್ಯದ ಹಲವೆಡೆ ಶಿಕ್ಷಕರಿಗೂ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಇದೇ ತಿಂಗಳ 30ರ ವರೆಗೆ …

Read More »

ಆ ಜೋಡೆತ್ತುಗಳನ್ನು 8 ಲಕ್ಷಕ್ಕೆ ಮಾರಿದ್ದರು, ಮತ್ತೆ 17 ಲಕ್ಷ ಕೊಟ್ಟು ಖರೀದಿಸಿದರು! ಏನಿದರ ವಿಶೇಷ?

ಬಾಗಲಕೋಟೆ: ಒಂದಲ್ಲ ಎರಡಲ್ಲ ಬರೊಬ್ಬರಿ 17 ಲಕ್ಷಕ್ಕೆ ಜೋಡೆತ್ತುಗಳು ಮಾರಾಟವಾಗಿರುವ ಘಟನೆ ನಡೆದಿದೆ. ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ‍ ಇಂತಹ ದಾಖಲೆಯ ಅಪರೂಪದ ವ್ಯಾಪಾರ ನಡೆದಿದೆ. ಗ್ರಾಮದ ಸಂಗಪ್ಪ ಮುಗಳಖೋಡ ಎಂಬುವವರ ಜೋಡೆತ್ತುಗಳು 17 ಲಕ್ಷಕ್ಕೆ ಮಾರಾಟವಾಗಿವೆ. ಮಲ್ಲಪ್ಪ ಬೋರಡ್ಡಿ ಈ ಎತ್ತುಗಳನ್ನು ಖರೀದಿಸಿದ್ದಾರೆ. ಈ ಹಿಂದೆ ಇದೇ ಮಲ್ಲಪ್ಪ ಬೋರಡ್ಡಿಯವರಿಂದ ಇದೇ ಎತ್ತುಗಳನ್ನು ಸಂಗಪ್ಪ ಎಂಟು ಲಕ್ಷಕ್ಕೆ ಖರೀದಿ ಮಾಡಿದ್ದರು.‌ ಈ ಜೋಡೆತ್ತುಗಳು ವಿವಿಧ ಕಡೆ ತೆರೆಬಂಡಿ ಸ್ಪರ್ಧೆಯಲ್ಲಿ …

Read More »

ನಾನಿನ್ನೂ ರಾಜಕೀಯದಿಂದ ನಿವೃತ್ತಿಯಾಗಿಲ್ಲ’ ಎಂದರು : ಪ್ರಭಾಕರ ಕೋರೆ

ಬೆಳಗಾವಿ: ‘ಬೆಳಗಾವಿಯಲ್ಲಿ ಏನೇ ವಿಚಾರ ಬಂದರೂ ನನ್ನ ಹೆಸರು ಕೇಳಿಬರುತ್ತದೆ’. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೀರಾ ಎಂಬ ಪ್ರಶ್ನೆಗೆ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಉತ್ತರಿಸಿದ್ದು ಹೀಗೆ. ಶನಿವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಅವರನ್ನು ಭೇಟಿಯಾಗಲು ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ‘ಈ ಬಾರಿ ಯುವಕರಿಗೆ ಕೊಟ್ಟರೂ ಸಂತೋಷ. ಯಾರಿಗೆ ಕೊಟ್ಟರೂ ಸಂತೋಷ. ನಾನಿನ್ನೂ ರಾಜಕೀಯದಿಂದ ನಿವೃತ್ತಿಯಾಗಿಲ್ಲ’ ಎಂದರು. ‘ಪಕ್ಷ …

Read More »

ನಾಪತ್ತೆಯಾಗಿದ್ದ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ.

ರಾಮನಗರ : ಜಿಲ್ಲೆಯ ಮಾಗಡಿ ತಾಲೂಕಿನ ಬೆಟ್ಟಹಳ್ಳಿಯಿಂದ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ. ಅಕ್ಟೋಬರ್​ 8 ರಂದು ಮನೆಯಿಂದ ಕಾಣೆಯಾಗಿದ್ದ 19 ವರ್ಷದ ಯುವತಿ ಹೇಮಲತಾಳ ಮೃತದೇಹ ಇಂದು  ಪತ್ತೆಯಾಗಿದೆ. ಯುವತಿ ಕಾಣೆಯಾದ ಬೆನ್ನಲ್ಲೇ ಅಕ್ಟೋಬರ್ 9 ರಂದು ಕುದೂರು ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲಾಗಿತ್ತು. ಇದೀಗ ಹೇಮಲತಾಳ ಮೃತದೇಹ ಆಕೆಯ ಮನೆಯ ಸಮೀಪವೇ ಇದ್ದ ಜಮೀನಿನಲ್ಲಿ ಪತ್ತೆಯಾಗಿದೆ. ಯುವತಿಯ ದೊಡ್ಡಪ್ಪ ರವೀಂದ್ರಕುಮಾರ್ ಜಮೀನಿನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. …

Read More »

ಅಂತ್ಯಕ್ರಿಯೆ ಹೆಣಗಾಟ: ನೀರಿನ ಮಧ್ಯೆಯೇ ಹೆಣ ಸಾಗಿಸಲು ಕುಟುಂಬಸ್ಥರ ಪರದಾಟ

ಕೊಪ್ಪಳ: ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಮಳೆಯಿಂದಾಗಿ ಜನ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದ ಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಹಳ್ಳದಲ್ಲೇ ನಡೆದುಹೋಗಿ ಗ್ರಾಮಸ್ಥರು ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿರುವ ಘಟನೆ ನಡೆದಿದೆ. ಅಳವಂಡಿ ಗ್ರಾಮದಲ್ಲಿ ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದ ರಮೇಶ್ ಎಂಬುವವರ ಅಂತ್ಯಕ್ರಿಯೆ ಮಾಡಲು ಗ್ರಾಮಸ್ಥರು ಹರಿಯೋ ನೀರಿನಲ್ಲಿ ನಡೆದುಕೊಂಡು ಹೋಗಿ ಶವ ಸಂಸ್ಕಾರ ಮಾಡಿದ್ದಾರೆ. ಅಳವಂಡಿ-ಕಂಪ್ಲಿಗೆ ಸಂಪರ್ಕ ಕಲ್ಪಿಸೋ ಹಳ್ಳದ ಕಡೆ ಸ್ಮಶಾನ ಇರೋ ಹಿನ್ನೆಲೆಯಲ್ಲಿ ಮಳೆಯಲ್ಲೇ …

Read More »

ಪೊಲೀಸ್​ ಠಾಣೆ ಅಭಿವೃದ್ಧಿಗಾಗಿ ಎಂದು ಸಾಹೇಬರ ಹೆಸರು ಬಳಸಿ, ಮುಖ್ಯಪೇದೆ ಹಣ ವಸೂಲಿ

ವಿಜಯಪುರ: ಬೈಕ್ ಸವಾರರಿಗೆ ದಂಡ ಹಾಕುವ ನೆಪದಲ್ಲಿ ಪೊಲೀಸಪ್ಪ ಹಣ ವಸೂಲಿ ಮಾಡತ್ತಿರುವ ಘಟನೆ ಜಿಲ್ಲೆಯ ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಬಸವನಬಾಗೇವಾಡಿ ಠಾಣೆ ಹೆಡ್‌ ಕಾನ್ಸ್‌ಟೇಬಲ್ H.S.ಹೊಸಮನಿ ವಿರುದ್ಧ ಇಂತಹದೊಂದು ಆರೋಪ ಕೇಳಿಬಂದಿದೆ. ಬೈಕ್​ಗಳಿಗೆ ದಂಡ ಹಾಕುವ ನೆಪದಲ್ಲಿ ಪೊಲೀಸಪ್ಪ ಹಣ ಪೀಕುತ್ತಿದ್ದಾರಂತೆ. ಈ ಬಗ್ಗೆ ಪ್ರಶ್ನಿಸಿದ್ರೆ ಪೊಲೀಸ್ ಠಾಣೆಗೆ ಉಪಕರಣ ಖರೀದಿ ಮಾಡಲು ಮತ್ತು ಸಿಸಿಕ್ಯಾಮರಾಗಾಗಿ PSI ಸೂಚನೆ ಮೇರೆಗೆ ಹಣ ಸಂಗ್ರಹಿಸುತ್ತಿರುವುದಾಗಿ ಗ್ರಾಮಸ್ಥರಿಗೆ ಹೇಳುತ್ತಿದ್ದಾರಂತೆ. ಪ್ರತಿ ಬೈಕ್ …

Read More »

ಸಿಡಿಲು ಬಡಿದು ಜಮೀನಿನಲ್ಲಿ ಕಟ್ಟಿಹಾಕಿದ್ದ 20ಕ್ಕೂ ಹೆಚ್ಚು ಕುರಿಗಳು ಸಾವು

ಯಾದಗಿರಿ: ಸಿಡಿಲು ಬಡಿದು 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟ ಗ್ರಾಮದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಗ್ರಾಮದ ನಿವಾಸಿ ನರಸಪ್ಪಗೆ ಸೇರಿದ ಕುರಿಗಳು ಸಾವನ್ನಪ್ಪಿದೆ. ಕುರಿಗಳನ್ನು ರಾತ್ರಿ ಜಮೀನಿನಲ್ಲಿ ಕಟ್ಟಿಹಾಕಿದ್ದ ವೇಳೆ ಘಟನೆ ಸಂಭವಿಸಿದೆ. ಘಟನೆ ವೇಳೆ ನರಸಪ್ಪ ಕುರಿಗಳ ಜೊತೆಗಿದ್ದ. ಆದರೆ, ಅದೃಷ್ಟವಶಾತ್ ನರಸಪ್ಪ ಪ್ರಾಣಾಪಯದಿಂದ ಪಾರಾಗಿದ್ದಾನೆ.

Read More »

ಮಳೆ ಆರ್ಭಟಕ್ಕೆ ಕೊಚ್ಚಿ ಹೋಯ್ತು ಕೋಳೂರು ಬ್ರಿಡ್ಜ್ ಕಂ ಬ್ಯಾರೇಜ್ ತಡೆಗೋಡೆ

ಕೊಪ್ಪಳ: ನಿನ್ನೆ ಸುರಿದ ಭಾರಿ ಮಳೆಗೆ ಬ್ರಿಡ್ಜ್ ಕಂ ಬ್ಯಾರೇಜ್ ತಡೆಗೋಡೆ ನೀರುಪಾಲಾಗಿರುವ ಘಟನೆ ಕೊಪ್ಪಳ ತಾಲೂಕಿನ ಕೋಳೂರು ಬಳಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆಯೇ ಬ್ರಿಡ್ಜ್ ಕಂ ಬ್ಯಾರೇಜ್ ತಡೆಗೋಡೆ ಕುಸಿದಿತ್ತು. ಮತ್ತೇ ಈಗ ನಿನ್ನೆ ಸುರಿದ ಮಳೆಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಈ ಪರಿಣಾಮ ಕೋಳು ಸುತ್ತ ಮುತ್ತ ಇರೋ‌ ಜಮೀನಿಗೆ ‌ಅಪಾರ ಪ್ರಮಾಣದ ನೀರು ನುಗ್ಗಿ ಬೆಳೆಗಳು ನಾಶವಾಗಿವೆ. ಹಲವು ಬಾರಿ ತಡೆಗೋಡೆ ದುರಸ್ಥಿ …

Read More »