Breaking News

ಜಿಲ್ಲೆ

ಬಸ್ – ಕಾರು ಮುಖಾಮುಖಿ ಡಿಕ್ಕಿ : ಓರ್ವ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

ಖಾನಾಪುರ : ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಕಾರು, ಸಾರಿಗೆ ಸಂಸ್ಥೆ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, 10 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕಾರು ಚಾಲಕ ಮಹಾರಾಷ್ಟ್ರ ಮೂಲದ ಭಿಕಾಜಿ ಸಾವಂತ(46) ಮೃತರು. ತಾಲ್ಲೂಕಿನ ತೋರಾಳಿ ಗ್ರಾಮದ ನಿವಾಸಿ ಪ್ರಕಾಶ ಪಾಟೀಲ ಸೇರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹತ್ತಕ್ಕೂ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. …

Read More »

ಜೈಲಿನಲ್ಲಿ  ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು, ಪತ್ನಿ, ಪುತ್ರ, ಪುತ್ರಿಯರು ಭೇಟೆ

ಬೆಳಗಾವಿ : ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ  ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು, ಪತ್ನಿ, ಪುತ್ರ, ಪುತ್ರಿಯರು ಇಂದು ಭೇಟೆಯಾದರು. ಧಾರವಾಡ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿನಯ್ ಕುಲಕರ್ಣಿಯನ್ನು ಭೇಟಿ ಮಾಡಲು ಕುಟುಂಬಸ್ಥರಿಗೆ ಅವಕಾಶ ನೀಡುವಂತೆ ಮಧ್ಯಾಹ್ನ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿಗೆ ಆಗಮಿಸಿದ ಕುಟುಂಬಸ್ಥರಿಗೆ ಸಂಜೆ  4 ರಿಂದ …

Read More »

ಕುಮಾರಸ್ವಾಮಿ ಸರ್ಕಾರವನ್ನ ಸ್ಕೆಚ್ ಹಾಕಿ ತೆಗೆದಿದ್ದು ನಾನೇ. ನನ್ನನ್ನ ಡಿಕೆಶಿ-ಹೆಚ್‍ಡಿಕೆ ಸೇರಿ ಸೋಲಿಸಿದ್ದರು.

ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ಎಂಎಲ್‍ಸಿ ಸಿ ಪಿ ಯೋಗೇಶ್ವರ್ ಅವರು ಹೆಚ್‍ಡಿಕೆ ಹಾಗೂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗ್ರಾ.ಪಂ ಚುನಾವಣೆ ಹಿನ್ನೆಲೆ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ಅವರು, ಕುಮಾರಸ್ವಾಮಿ ಸರ್ಕಾರವನ್ನ ಸ್ಕೆಚ್ ಹಾಕಿ ತೆಗೆದಿದ್ದು ನಾನೇ. ನನ್ನನ್ನ ಡಿಕೆಶಿ-ಹೆಚ್‍ಡಿಕೆ ಸೇರಿ ಸೋಲಿಸಿದ್ದರು. ಅದಕ್ಕಾಗಿ ನಾನು ಬೆಂಗಳೂರಿನಲ್ಲಿ ಸ್ಕೆಚ್ ಹಾಕಿ ಸರ್ಕಾರ …

Read More »

ಸಾರಿಗೆ ನೌಕರರ ಸಂಪೂರ್ಣವಾಗಿ ಬಂದ್ ಗೆ ಕರೆ

ಬೆಂಗಳೂರು: ಇಂದು ರೋಡಿಗೆ ಇಳಿಯೋ ಮುನ್ನ ಎಚ್ಚರವಾಗಿರಿ. ಯಾಕಂದ್ರೆ ಇಂದು ಸಾರಿಗೆ ನೌಕರರು ಸಂಪೂರ್ಣವಾಗಿ ಬಂದ್ ಗೆ ಕರೆಕೊಟ್ಟಿದ್ದಾರೆ.ಹೌದು. ಬಂದ್ ಕರೆಕೊಟ್ಟ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರಲ್ಲಿ ಬಸ್ಸುಗಳ ಓಡಾಟ ಬಹುತೇಕ ಸ್ಥಗಿತಗೊಂಡಿದೆ. ಬಸ್ ಹೊರಡದೆ ಡಿಪೋದಲ್ಲಿಯೇ ಸ್ಥಗಿತಗೊಳಿಸಲಾಗಿದೆ. ವಿವಿಧ ಡಿಪೋಗಳಿಂದ ಸಿಬ್ಬಂದಿ ಒಂದೆಡೆ ಸೇರಿದ್ದು, ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಗಣಿಸುವವವರೆಗೆ ಹೋರಾಟ ಕೈ ಬಿಡಲ್ಲ ಎಂದು ಆಗ್ರಹಿಸುತ್ತಿದ್ದಾರೆ. ನಿನ್ನೆ ವಿಧಾನ ಸೌಧ ಮುತ್ತಿಗೆ ಹಾಕಿದರೂ ಸರ್ಕಾರ ಅಹವಾಲು ಆಲಿಸಲಿಲ್ಲ ಎಂದು …

Read More »

ಖಾಸಗಿ ಆಸ್ಪತ್ರೆಗಳು ಮುಷ್ಕರ ಆಸ್ಪತ್ರೆಯ ಓಪಿಡಿಗಳು ಬಂದ್

ಬೆಂಗಳೂರು : ಆಯುರ್ವೇದ ವೈದ್ಯರಿಗೆ ಸರ್ಜರಿ ಮಾಡಲು ಅವಕಾಶ  ನೀಡಿರುವುದನ್ನು ವಿರೋಧಿಸಿ  ಖಾಸಗಿ ಆಸ್ಪತ್ರೆಗಳು ಮುಷ್ಕರಕ್ಕೆ ಕರೆ ಕೊಟ್ಟಿವೆ. ಹೀಗಾಗಿ ಖಾಸಗಿ ಆಸ್ಪತ್ರೆಯ ಓಪಿಡಿಗಳು ಬಂದ್ ಇರಲಿವೆ. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಓಪಿಡಿ ಸೇವೆ ಸ್ಥಗಿತಗೊಳ್ಳಲಿವೆ. ಆದರೆ ಎಮರ್ಜನ್ಸಿ ಸೇವೆ ಎಂದಿನಂತೆ ಇರಲಿದೆ. ಐಎಂಎ ನೀಡಿರುವ ಬಂದ್ ಕರೆಗೆ PHANA ಸೇರಿ ಹಲವು ಸಂಘಟನೆಗಳು ಸಾಥ್ ನೀಡಿವೆ. ಕೇಂದ್ರ ಸರ್ಕಾರ ಆಯುರ್ವೇದ ಶಿಕ್ಷಣ ತಿದ್ದುಪಡಿ …

Read More »

“ಬಿಜೆಪಿಯವರಿಗೆ ಸರ್ಕಾರ ಮಾಡುವ ಉಸಾಬರಿ ಏಕೆ ಬೇಕಿತ್ತು:ಬಸವರಾಜ ಹೊರಟ್ಟಿ

ಬೆಂಗಳೂರು,ಡಿ.10- ರಾಜ್ಯದಲ್ಲಿ ಬೀದಿ ದೀಪಗಳು ಹಗಲಿನ ವೇಳೆಯೂ ಉರಿಯುತ್ತಿರುತ್ತವೆ. ವಿಧಾನಸೌಧ, ವಿಕಾಸಸೌಧದ ಕಚೇರಿಗಳಲ್ಲಿ ವಿದ್ಯುತ್ ಉರಿಯುತ್ತಲೇ ಇರುತ್ತದೆ. ಇಂತಹ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು ಎಂದು ಜೆಡಿಎಸ್‍ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮನವಿ ಮಾಡಿದರು. ವಿಧಾನ ಪರಿಷತ್‍ನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನಿಮ್ಮ ಪಾಡಿಗೆ ನೀವು 105 ಮಂದಿ ಇಟ್ಟುಕೊಂಡು ಪ್ರತಿಪಕ್ಷದಲ್ಲಿ ಕುಳಿತಿದ್ದರೆ ಸಾಕಿತ್ತು. ಸರ್ಕಾರ ಮಾಡುವ ಉಸಾಬರಿ ಯಾಕೆ ಬೇಕಿತ್ತು. ಸರ್ಕಾರ …

Read More »

ಕೋವಿಡ್ ತಡೆ ಜಾಗೃತಿ ಅಭಿಯಾನ ರ‍್ಯಾಲಿಗೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಚಾಲನೆ

ಬೆಳಗಾವಿಯಲ್ಲಿ ಕೋವಿಡ್ ತಡೆ ಜಾಗೃತಿ ಅಭಿಯಾನ ರ‍್ಯಾಲಿಗೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಚಾಲನೆ ಕೋವಿಡ್ 19 ಸಾಂಕ್ರಾಮಿಕ ರೋಗ ಪ್ರಸಾರ ತಡೆಗೆ ಜಾಗೃತಿ ಅಭಿಯಾನದ ಅಂಗವಾಗಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಿಂದ ಆಯೋಜಿಸಿದ್ದ ರ್ಯಾಲಿಗೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ರೆಡ್ ಕ್ರಾಸ್ ಸೊಸೈಟಿ, ಹೋಂ ಗಾಡ್ರ್ಸ್, ಆರೋಗ್ಯ ಇಲಾಖೆ ಸಹಯೋಗದಲ್ಲಿ ರ್ಯಾಲಿ ಆಯೋಜಿಸಲಾಗಿತ್ತು. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಕೋವಿಡ್ 19 ಸಾಂಕ್ರಾಮಿಕ ರೋಗ …

Read More »

ನಮ್ಮ ಸಾಹುಕಾರ್ ಪಡೆಯ 2021 ಹೊಸ ವರ್ಷದ ಕ್ಯಾಲೆಂಡರ್.

ನಮ್ಮ ಸಾಹುಕಾರ್ ಪಡೆಯ 2021 ಹೊಸ ವರ್ಷದ ಕ್ಯಾಲೆಂಡರ್ ಹಾಗೂ ಸಾಹುಕಾರ್ ಪಡೆ ಕರ್ನಾಟಕ ಜಾಲತಣವನ್ನು ಉದ್ಘಾಟನೆ ಮಾಡಿದ ನಮ್ಮ ರಮೇಶ್ ಅಣ್ಣ ಜಾರಕಿಹೊಳಿ ಸಾಹುಕಾರ್ ಹಾಗು ಅಮರನಾಥ್ ಜಾರಕಿಹೊಳಿ ಸಾಹುಕಾರ್ ರವರು ಉದ್ಘಾಟನೆ ಈ ಸಂದರ್ಭದಲ್ಲಿ       ಸಾಹುಕಾರ ಪಡೆ ಕರ್ನಾಟಕ ಗೌರವ ಅಧ್ಯಕ್ಷರು ದೋಡ್ಡಯ್ಯ ಎಮ್. ಎಚ್. ಹಾಗೂ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರು ಶೇಖರ.ಎಸ್ ರಾಜ್ಯ ಕಾರ್ಯದರ್ಶಿಗಳು ದೀಪು.ಎಮ್. ಮತ್ತು ಚೇತನ ಹಾಗೂ ಸಾಗರ್ …

Read More »

ರೈತ ಸಂಘಟನೆಗಳ ಹಿಂದೆ ಕಾಂಗ್ರೆಸ್ ತರೆಮರೆಯ ರಾಜಕಾರಣ ಮಾಡುತ್ತಿದೆ:H.D.K.

ಬೆಂಗಳೂರು:  ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದು,  ಭೂ ಸುಧಾರಣೆ ಕಾಯ್ದೆ ವಿಚಾರವಾಗಿ  ಅನಗತ್ಯ ಹೋರಾಟ ಮಾಡುತ್ತಿರುವ ಕೆಲ ರೈತ ಸಂಘಟನೆಗಳ ಹಿಂದೆ ಕಾಂಗ್ರೆಸ್ ತರೆಮರೆಯ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.  ಕಾಂಗ್ರೆಸ್‌ಗೆ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಜೆಡಿಎಸ್‌ ವಿರುದ್ಧ ತನ್ನ ಹೋರಾಟಗಳನ್ನು ರೂಪಿಸುತ್ತಿದೆ. ರೈತ ನಾಯಕರು ಎನಿಸಿಕೊಂಡ ಕೆಲವರ ಹಿಂದೆ ಕಾಂಗ್ರೆಸ್‌ ಈಗ ಅಡಗಿ ಕುಳಿತಿದೆ. ಅವರ ಮೂಲಕ ರಾಜಕೀಯದ ಹೇಳಿಕೆಗಳನ್ನು ಕೊಡಿಸುತ್ತಿದೆ. ಈ …

Read More »

ಜನರೇ ಕಾಂಗ್ರೆಸ್‍ನವರನ್ನು ಬಹಿಷ್ಕಾರ ಮಾಡಿದ ಮೇಲೆ ಇವರೇನು ಕಲಾಪ ಬಹಿಷ್ಕಾರ ಮಾಡೋದು”

ಬೆಂಗಳೂರು,ಡಿ.10- ರಾಜ್ಯದ ಜನರೇ ಕಾಂಗ್ರೆಸ್‍ನವರನ್ನು ಬಹಿಷ್ಕಾರ ಮಾಡಿದ ಮೇಲೆ ಇವರೇನು ಕಲಾಪ ಬಹಿಷ್ಕಾರ ಮಾಡುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು. ಕಲಾಪ ಬಹಿಷ್ಕಾರ ಮಾಡಿದರೆ ಇವರೇ ಇವರ ಮುಖದ ಮೇಲೆ ಉಗುಳಿಕೊಂಡಂತೆ ಎಂದು ಟೀಕೆ ಮಾಡಿರುವ ಅವರು, ಕಾಂಗ್ರೆಸ್ ನವರು ಬೆದರಿಕೆ ಹಾಕ್ತಾರೇನು? ಒಂದು ಸಲ ಪಶ್ಚಾತ್ತಾಪದ ಧ್ವನಿಯಲ್ಲಿ ಮಾತಾನಾಡುತ್ತಾರೆ. ಮತ್ತೊಂದು ಸಲ ಗೋ ಹತ್ಯೆ ನಿಷೇಧ ಕಾಯ್ದೆ ವಿರೋಧಿಸುತ್ತಾರೆ. ಕಾಂಗ್ರೆಸ್‍ನವರಿಗೆ ಒಂದು ನಿರ್ದಿಷ್ಟ …

Read More »