Breaking News

ಹಾವೇರಿ

ಆ ಶಾಲಾ ಆವರಣಕ್ಕೆ ನಿತ್ಯ ಬಾಲಕರ ದಂಡು ಆಟ ಆಡೋಕೆ ಹೋಗ್ತಿತ್ತು. ಆದ್ರೆ ಅಲ್ಲಿ ಹೊಸದಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುಂಡಿಗಳನ್ನ ತೆಗೆಯಲಾಗಿತ್ತು.

ಹಾವೇರಿ: ಆ ಶಾಲಾ ಆವರಣಕ್ಕೆ ನಿತ್ಯ ಬಾಲಕರ ದಂಡು ಆಟ ಆಡೋಕೆ ಹೋಗ್ತಿತ್ತು. ಆದ್ರೆ ಅಲ್ಲಿ ಹೊಸದಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುಂಡಿಗಳನ್ನ ತೆಗೆಯಲಾಗಿತ್ತು. ಆ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಈಗ ಆ ಗುಂಡಿಗಳೇ ಆ ಬಾಲಕರ ಪಾಲಿಗೆ ಮೃತ್ಯುಕೂಪವಾಗಿದ್ದು, ಮೂರು ಜೀವವನ್ನ ಪಡೆದಿವೆ. ಶಾಲಾ ಆವರಣದಲ್ಲಿರುವ ಗುಂಡಿಗಳಲ್ಲಿ ತುಂಬಿರೋ ನೀರು. ನೀರಿನಿಂದ ಬಾಲಕರ‌ ಮೃತದೇಹ ಹೊರತೆಗಿತಿರೋ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು. ಗುಂಡಿಯಲ್ಲಿನ ನೀರು ಹೊರಹಾಕ್ತಿರೋ …

Read More »

ಹಾಡಹಗಲೇ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ

ಹಾವೇರಿ: ಹಾಡಹಗಲೇ ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಹಾವೇರಿ ನಗರಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಮಹಿಳೆಯನ್ನು ಮೂಲತಃ ಕಲಬುರಗಿ ಜಿಲ್ಲೆಯ ಬಾಪುನಗರದ ಜಯಶ್ರೀ ಕನ್ವರ್ ಉಪಾದ್ಯ (30) ಎಂದು ಗುರುತಿಸಲಾಗಿದೆ. ಹಾವೇರಿ ನಗರದ ಅಶ್ವಿನಿ ನಗರ, ಶಿವಾಜಿ ನಗರ ಸೇರಿದಂತೆ ನಗರದ ನಾಲ್ಕು ಮನೆಗಳನ್ನು ಈಕೆ ಕಳ್ಳತನ ಮಾಡಿದ್ದಾಳೆ. ಬಂಧಿತ ಆರೋಪಿಯಿಂದ 3,43,500 ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಹಾಗೂ …

Read More »

ಚಾಲಾಕಿ ಹೆಣ್ಣಿನ ಚಳಿ ಬಿಡಿಸಿದ ಹಾನಗಲ್ ಪೋಲಿಸರು..

ಹಾನಗಲ್ 13/10/2020 ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ATM ನಲ್ಲಿ ATM ಕಾರ್ಡುಗಳನ್ನು ಅದಲು ಬದಲು ಮಾಡಿ ಜನರಿಗೆ ವಂಚಿಸುವ ಬುರ್ಕಾದಾರಿ ಮಹಿಳೆ ಶಿರಾಳಕೊಪ್ಪದ ಕೆಸರಬಾನು, ಇಸ್ರಾಅಹಮದ್ ಇವರ ಹೆಂಡತಿಯಾದ ಕೆಸರಬಾನು ಬಂಕಾಪುರ, ಶಿರಾಳಕೊಪ್ಪದಲ್ಲಿ ಇಂತಹ ATM ನಲ್ಲಿ ಕಾರ್ಡುಗಳನ್ನು ಅದಲು ಬದಲು ಮಾಡಿ ಜನರಿಗೆ ವಂಚಿಸಿದ. ಈ ಕೆಸರಬಾನು ಸಾಮಾನ್ಯ ಮಹಿಳೆಯಲ್ಲ, ದಿನಾಂಕ 29/06/2020 ರಂದು ಈ ಆರೋಪಿಯ ಮೇಲೆ ಕಲಂ 420 IPCC ಕಾಯ್ದೆ ಪ್ರಕಾರ ಹಾವೇರಿ …

Read More »

ತಂದೆ ತಾಯಿ ಜೊತೆ ಜಗಳವಾಡ್ತಿದ್ದ ಅಣ್ಣ: ಬೇಸತ್ತು ಹತ್ಯೆ ಮಾಡಿದ ತಮ್ಮ

ಹಾವೇರಿ: ಜಿಲ್ಲೆ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ತಮ್ಮನೇ ಅಣ್ಣನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 22 ವರ್ಷ ನಾಗರಾಜ ಗೊರವರ ಹತ್ಯೆಯಾದ ಅಣ್ಣ. ದಿಳ್ಳೆಪ್ಪ ಗೊರವರ (20) ಹತ್ಯೆ ಮಾಡಿದ ಸೋದರ. ಕಾರಣ ಏನು?: ಅಣ್ಣ ನಾಗರಾಜ ನಿತ್ಯ ಕುಡಿದು ಬಂದು ತಂದೆ ತಾಯಿ ಜೊತೆ ಜಗಳವಾಡ್ತಿದ್ದ. ತಂದೆ ತಾಯಿಗೆ ಅಣ್ಣ ನೀಡ್ತಿದ್ದ ಕಿರಿಕಿರಿಯಿಂದ ಬೇಸತ್ತು ತಮ್ಮ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಅಣ್ಣನ ಹತ್ಯೆ ಮಾಡಿದ …

Read More »

75 ಸಾವಿರ ಲಂಚ ಕೇಳಿದ್ದಅಂಬೇಡ್ಕರ್ ಅಭಿವೃದ್ಧಿ ನಿಮಗದ ಸಿಬ್ಬಂದಿ ಅರೆಸ್ಟ್:

ಹಾವೇರಿ: ಜಿಲ್ಲಾಡಳಿತ ಭವನದಲ್ಲಿಯರುವ ಅಂಬೇಡ್ಕರ್ ಅಭಿವೃದ್ಧಿ ನಿಮಗದ ಕಚೇರಿ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿದ್ದು, ಓರ್ವರನ್ನು ಬಂಧಿಸಲಾಗಿದ್ದು,ಮೂವರಿಗೆ ಬಲೆ ಬಿಸಿದ್ದಾರೆ. ಸಹಾಯ ಧನದಲ್ಲಿ ಭೂ ಒಡೆತನ ಯೋಜನೆಯಲ್ಲಿ ಭೂಮಿ ಖರೀದಿಸುವ ಸಂಬ0ಧ ಅನುಮೋದನೆ ನೀಡಲು ೭೫ ಸಾವಿರ ಲಂಚ ಕೇಳಿದ್ದರು. ಇದರಿಂದ  ದೂರು ದಾಖಲಾಗಿರುವ ಹಿನ್ನೆಲೆ ೨೫ ಸಾವಿರ ಲಂಚ ಪಡೆಯುತ್ತಿದ್ದ ಪ್ರಥಮ ದರ್ಜೆಸಹಾಯಕ ತಿಪ್ಪೇಸ್ವಾಮಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ನಿಗಮದ ಜಿಲ್ಲಾ ವ್ಯವಸ್ಥಾಪಕ ವಸಂತಕುಮಾರ್, ಎಫ್ ಡಿಎ …

Read More »

ನಾಳೆ ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಶಾಸಕ ಸತೀಶ ಜಾರಕಿಹೊಳಿ

ಹಾವೇರಿ:  ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ  ಅವರು ನಾಳೆ ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.  ಹಾವೇರಿ ಜಿಲ್ಲೆಯ ಕಾಂಗ್ರೆಸ್  ಪಕ್ಷದ ಸಂಘಟನೆಯನ್ನು ಕುರಿತು ಪಾದಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಪಿ.ಬಿ. ರೋಡ್ ಕಾಂಗ್ರೆಸ್ ಕಚೇರಿ ಬಳಿ ಇರುವ ಸಜ್ಜನ ಫಂಕ್ಷನ್ ಹಾಲ್ ನಲ್ಲಿ  ಸಂಜೆ 4 ಗಂಟೆಗೆ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.  ಮಾಜಿ  ಸಚಿವರು, ಶಾಸಕರು ವಿಧಾನ ಪರಿಷತ್ ಸದಸ್ಯರು.ಜಿಲ್ಲೆಯ ಎಲ್ಲ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು,ಮಹಿಳಾ ಘಟಕದ ಅಧ್ಯಕ್ಷರು,ಯುವ ಕಾಂಗ್ರೇಸ್ …

Read More »

ಬಾರದ ಪೆನ್ ಶನ್ ನಿಂದಾಗಿ ವಾಯುವ್ಯ ಸಾರಿಗೆಯ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.2 ರಂದು ಬೆಳಕಿಗೆ ಬಂದಿದೆ.

ಹಾವೇರಿ: ನಿವೃತ್ತಿಯಾಗಿ ವರ್ಷ ಕಳೆದರು ಬಾರದ ಪೆನ್ ಶನ್ ನಿಂದಾಗಿ ವಾಯುವ್ಯ ಸಾರಿಗೆಯ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.2 ರಂದು ಬೆಳಕಿಗೆ ಬಂದಿದೆ. ಶಿವಪ್ರಕಾಶ ಹೂಗಾರ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತ ನಗರದ ವಾಯುವ್ಯ ಸಾರಿಗೆ ಇಲಾಖೆಯ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಕಚೇರಿ ಮುಂಭಾಗದ ಹೊಟೇಲ್ ನಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದು ಬಂದಿದೆ.  ಶಿವಪ್ರಕಾಶ ಹೂಗಾರ 1 ವರ್ಷ 8 ತಿಂಗಳ ಹಿಂದೆ ಚಾಲಕ ಹುದ್ದೆಯಿಂದ …

Read More »

ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡ ಬಿಜೆಪಿ ಶಾಸಕ

ಹಾವೇರಿ: ರಾಜ್ಯದಲ್ಲಿ ಮಹಾಮಾರಿ ಕೊರೊನಾದ ರೌದ್ರನರ್ತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ನಿಯಮಗಳನ್ನು ಪಾಲಿಸಿ ಎಂದು ಹೇಳಬೇಕಾಗಿದ್ದ ಬಿಜೆಪಿ ಶಾಸಕ ಅರುಣ್ ಕುಮಾರ್ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.   ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರುಣ್ ಕುಮಾರ್ ಅಪಾರ ಬೆಂಬಲಿಗರ ನಡುವೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ ರಾಣೆಬೆನ್ನೂರು ನಗರದಲ್ಲಿರುವ ಶಾಸಕರ ನಿವಾಸದ ಬಳಿ ಸೇರಿದ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಎಲ್‍ಇಡಿ ಟಿವಿ, ಸೌಂಡ್ …

Read More »

ಸುತ್ತ ಹಸಿರ ರಾಶಿ, ಗುಡ್ಡ ಬೆಟ್ಟಗಳ ಸಾಲು, ಹಸಿರು ಬೆಟ್ಟದ ನಡುವೆ ಧುಮ್ಮಿಕ್ಕಿ ಹರಿಯೋ ಜಲಧಾರೆ

ಹಾವೇರಿ: ಸುತ್ತ ಹಸಿರ ರಾಶಿ, ಗುಡ್ಡ ಬೆಟ್ಟಗಳ ಸಾಲು, ಹಸಿರು ಬೆಟ್ಟದ ನಡುವೆ ಧುಮ್ಮಿಕ್ಕಿ ಹರಿಯೋ ಜಲಧಾರೆ. ಆ ಸೌಂದರ್ಯವನ್ನ ಕಣ್ತುಂಬಿಕೊಳ್ಳೋದೆ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದ. ಇಲ್ಲಿನ ಸೌಂದರ್ಯಕ್ಕೆ ಮನಸೋತ ಜನ, ಧುಮ್ಮಿಕ್ಕುವ ಜಲಪಾತ ನೋಡಲು ಸಾಲುಗಟ್ಟಿ ಆಗಮಿಸುತ್ತಿದ್ದಾರೆ. ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಕೆರೆಯ ಬಳಿ ಜಲಪಾತ ಉಂಟಾಗಿದ್ದು, ಕಣ್ತುಂಬಿಕೊಳ್ಳಲು ಸಚಿವರು ಸೇರಿದಂತೆ ಜನರು ಮುಗಿಬೀಳುತ್ತಿದ್ದಾರೆ. ಮದಗಮಾಸೂರು ಕೆರೆ ಐತಿಹಾಸಿಕವಾಗಿ ಸಾಕಷ್ಟು ಮಹತ್ವ ಪಡೆದಿದೆ. ಕೆರೆಯ ಕುರಿತು …

Read More »

ನಂಜನಗೂಡಿನ ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಸಾವಿನ ಸುದ್ದಿ ಮಾಸುವ ಮುನ್ನವೇ, ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ

ಹಾವೇರಿ: ಮೈಸೂರು ಜಿಲ್ಲೆಯ ನಂಜನಗೂಡಿನ ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಸಾವಿನ ಸುದ್ದಿ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಅಂತಹ ಘಟನೆ ನಡೆದಿದೆ. ಹೌದು, ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಬಸವೇಶ್ವರ ನಗರದಲ್ಲಿ ಇಂದು ನಡೆದಿದೆ. ಡಾ. ಜಗದೀಶ್ ಗೊಡ್ಡೆಮ್ಮಿ (47) ಎಂಬುವರೇ ಆತ್ಮಹತ್ಯೆಗೆ ಶರಣಾದ ವೈದ್ಯರಾಗಿದ್ದಾರೆ. ಮೃತ ಜಗದೀಶ್ ನಗರದ ಗೌರಮ್ಮ ಸ್ಮಾರಕ ಮೊಮೊರಿಯಲ್ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ತಜ್ಞ ವೈದ್ಯರಾಗಿ …

Read More »