ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಮಾಯಕ ಘಟನೆ ನಡೆದಿದ್ದು, 10 ಶ್ವಾನಗಳಿಗೆ ವಿಷ ಕೊಟ್ಟು ಸಾಯಿಸಿದ ಘಟನೆ ಪರಪ್ಪನ ಅಗ್ರಹಾರ ಬಳಿಯ ರಾಯಸಂದ್ರದಲ್ಲಿ ನಡೆದಿದೆ. ರಾತ್ರಿ ವೇಳೆ ನಾಯಿಗಳು ಬೊಗಳುತ್ತಿವೆ ಎಂಬ ಕಾರಣಕ್ಕೆ ಅಪಾರ್ಟ್ ಮೆಂಟ್ ಬಳಿ ಬೀಡು ಬಿಟ್ಟಿದ್ದ 10 ಶ್ವಾನಗಳಿಗೆ ದುರುಳರು ವಿಷ ನೀಡಿ ಕೊಂದಿದ್ದಾರೆ. ಇನ್ನು ಕೆಲ ಶ್ವಾನಗಳು ಅಸ್ವಸ್ಥಗೊಂಡಿದ್ದು, ಶ್ವಾನಗಳನ್ನು ಅನಿಮಲ್ ಅಸೋಸಿಯೇಷನ್ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ವಾನಗಳನ್ನು ಕೊಂದ ಕಟುಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು …
Read More »ಎರಡು ಪಲ್ಸರ್ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ 3 ಮಂದಿ ಸಾವನ್ನಪ್ಪಿದರು.
ರಾಮನಗರ: ನಗರದ ಮಾಗಡಿ ರಸ್ತೆಯ ರಾಯರದೊಡ್ಡಿ ಬಳಿ ಶನಿವಾರ ರಾತ್ರಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಿಂದ ಸ್ಥಳದಲ್ಲೇ ಮೂವರು ಯುವಕರು ಸಾವನ್ನಪ್ಪಿದರು. ರಾಯರದೊಡ್ಡಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಬಳಿ ಅಪಘಾತ ನಡೆದಿದ್ದು, ರಾಮನಗರ ಬಾಲಗೇರಿಯ ಸಹೋದರರಾದ ಮೂರ್ತಿ (23), ವೆಂಕಟೇಶ್ (33) ಹಾಗೂ ಅಚ್ಚಲುದೊಡ್ಡಿ ನಿವಾಸಿ ರಘು (19) ಮೃತಪಟ್ಟವರು. ಎರಡು ಪಲ್ಸರ್ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ 3 …
Read More »ರಾಮನಗರ; ನೀರಿನ ಪೈಪ್‌ನಲ್ಲಿ ಸಿಲುಕಿದ್ದ ರೈತನ ರಕ್ಷಣೆ
ರಾಮನಗರ, ಜುಲೈ 04; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ್ದ ಪೈಪ್‌ಲೈನ್‌ನಲ್ಲಿ ಸಿಲುಕಿದ್ದ ರೈತನನ್ನು ಅಗ್ನಿಶಾಮಕದಳದ ಸಿಬ್ಭಂದಿ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಸುಮಾರು ಅರ್ಧಗಂಟೆಗಳ ಕಾಲ ರೈತ ಪೈಪ್‌ನಲ್ಲಿ ಸಿಲುಕಿದ್ದ. ರಾಮನಗರ ತಾಲ್ಲೂಕಿನ ಸಿಂಗ್ರಿಬೋವಿ ದೊಡ್ಡಿ ಗ್ರಾಮದ ಗೋವಿಂದರಾಜು (ರಾಜಣ್ಣ) ಪೈಪ್‌ಲೈನ್‌ನಲ್ಲಿ ಸಿಲುಕಿದ್ದ. ಕೊಂಕಾಣಿದೊಡ್ಡಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರು ದಶಪಥದ ರಾಷ್ಟ್ರೀಯ ಹೆದ್ದಾರಿಯ ಕೆಳಬಾಗದಲ್ಲಿ ಹಳ್ಳದ ನೀರು ಹರಿಯಲು ಹಾಕಿದ್ದ ಪೈಪ್‌ಲೈನ್‌ನಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ. ರಾಷ್ಟ್ರೀಯ ಹೆದ್ದಾರಿಯ …
Read More »ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಗಡಿಪಾರಿಗೆ ಆಗ್ರಹ
ರಾಮನಗರ : ಹಿರಿಯ ಸಾಹಿತಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಖಂಡಿಸಿ ಪ್ರಗತಿಪರ ಹಾಗೂ ದಲಿತ ಸಮಾನ ಮನಸ್ಕರ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಿದರು. ವಕೀಲೆ ಮೀರಾ ರಾಘವೇಂದ್ರ ಅವರ ಗಡಿಪಾರಿಗೆ ಆಗ್ರಹಿಸಿದರು. ಇಲ್ಲಿನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಪ್ರಾರಂಭಿಸಿದರು.ಪ್ರೊ. ಕೆ. ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ವೀರಾ ರಾಘುವೇಂದ್ರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ದೇಶದ ಸಂವಿಧಾನದ …
Read More »ಜೆಡಿಎಸ್ – ಬಿಜೆಪಿ ಹೊಂದಾಣಿಕೆ ವಿಚಾರ ಅದು ಅವರವರ ಪಕ್ಷಗಳಿಗೆ ಬಿಟ್ಟ ವಿಚಾರ, ಯಾರು ಯಾರ ಜೊತೆಯಾದರೂ ಹೋಗಬಹುದು:ಡಿಕೆಶಿ
ರಾಮನಗರ(ಡಿಸೆಂಬರ್. 22): ಜೆಡಿಎಸ್ – ಬಿಜೆಪಿ ಹೊಂದಾಣಿಕೆ ವಿಚಾರ ಅದು ಅವರವರ ಪಕ್ಷಗಳಿಗೆ ಬಿಟ್ಟ ವಿಚಾರ, ಯಾರು ಯಾರ ಜೊತೆಯಾದರೂ ಹೋಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಹೆಂಡತಿ ಉಷಾ ಜೊತೆಗೆ ಗ್ರಾ.ಪಂ ಚುನಾವಣೆ ಹಿನ್ನೆಲೆ ಮತದಾನ ಮಾಡಲು ಕನಕಪುರದ ಹುಟ್ಟೂರು ದೊಡ್ಡಾಲಹಳ್ಳಿಗೆ ಆಗಮಿಸಿದ್ದ ಡಿಕೆಶಿ ಮತಗಟ್ಟೆ ಸಂಖ್ಯೆ 3 ರಲ್ಲಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜಕೀಯ ಅಂದ್ರೆ ಸಾಧ್ಯತೆಗಳ ಕಲೆ, …
Read More »ಮಾಂಸದೂಟ ಸೇವಿಸಿ ಅಸ್ವಸ್ಥವಾಗಿದ್ದ 6ವರ್ಷದ ಮಗು ಸಾವು
ರಾಮನಗರ: ಬುಧವಾರದಂದು ಚನ್ನಪಟ್ಟಣ ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದಲ್ಲಿ ಬೀಗರ ಔತಣ ಕೂಟದಲ್ಲಿ ಮಾಂಸದೂಟ ಸೇವಿಸಿ ಜನರು ಅಸ್ವಸ್ಥತಗೊಂಡ ಘಟನೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಅಸ್ಪತ್ರೆಯಲ್ಲಿ 6 ವರ್ಷದ ಹೆಣ್ಣುಮಗು ಮೃತಪಟ್ಟಿದೆ. ಬೀಗರ ಔತಣದಲ್ಲಿ ಊಟ ಮಾಡಿದ್ದ 6 ವರ್ಷದ ಹೆಣ್ಣು ಮಗು ಚೈತನ್ಯ ಚಿಕಿತ್ಸೆ ಫಲಿಸದೇ ಗುರುವಾರ ಮೃತಪಟ್ಟಿದ್ದು, ಗ್ರಾಮದ ವೆಂಕಟಭೈರ-ಸೌಮ್ಯ ದಂಪತಿಯ ಮಗು ಚೈತನ್ಯ ಬೀಗರೂಟದಲ್ಲಿ ಫುಡ್ ಪಾಯ್ಸನ್ ನಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ …
Read More »ಕುಮಾರಸ್ವಾಮಿ ಸರ್ಕಾರವನ್ನ ಸ್ಕೆಚ್ ಹಾಕಿ ತೆಗೆದಿದ್ದು ನಾನೇ. ನನ್ನನ್ನ ಡಿಕೆಶಿ-ಹೆಚ್‍ಡಿಕೆ ಸೇರಿ ಸೋಲಿಸಿದ್ದರು.
ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ಎಂಎಲ್‍ಸಿ ಸಿ ಪಿ ಯೋಗೇಶ್ವರ್ ಅವರು ಹೆಚ್‍ಡಿಕೆ ಹಾಗೂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗ್ರಾ.ಪಂ ಚುನಾವಣೆ ಹಿನ್ನೆಲೆ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದ ಅವರು, ಕುಮಾರಸ್ವಾಮಿ ಸರ್ಕಾರವನ್ನ ಸ್ಕೆಚ್ ಹಾಕಿ ತೆಗೆದಿದ್ದು ನಾನೇ. ನನ್ನನ್ನ ಡಿಕೆಶಿ-ಹೆಚ್‍ಡಿಕೆ ಸೇರಿ ಸೋಲಿಸಿದ್ದರು. ಅದಕ್ಕಾಗಿ ನಾನು ಬೆಂಗಳೂರಿನಲ್ಲಿ ಸ್ಕೆಚ್ ಹಾಕಿ ಸರ್ಕಾರ …
Read More »ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಬಿಜೆಪಿ ಇನ್ನಿಲ್ಲದ ಕಸರತ್ತು
ರಾಮನಗರ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಅಕ್ರಮ ಸಂಪತ್ತು ಗಳಿಕೆ ಪ್ರಕರಣದ ವಿಚಾರವಾಗಿ ಹಿಂದಿನ ವರ್ಷ ಇಡಿ ಅಧಿಕಾರಿಗಳು ಡಿಕೆಶಿ ಅವರನ್ನು ಬಂಧಿಸಿದ್ದ ಸಂದರ್ಭದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. ಆ ಸಂದರ್ಭದಲ್ಲಿ ಸಾರ್ವಜನಿಕರ ಆಸ್ತಿ – ಪಾಸ್ತಿಗೆ ನಷ್ಟ ಉಂಟಾಗಿತ್ತು. ಸದ್ಯ ನಷ್ಟದ ವಿಚಾರಣೆಗೆ ಸರ್ಕಾರ, ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಡೆಸಿದ …
Read More »ಕೋವಿಡ್ 19 ಸೋಂಕಿಗೆ ಮೂವರು ಕೋವಿಡ್ ವಾರಿಯರ್ ಮೃತ
ರಾಮನಗರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ಮೂವರು ಕೋವಿಡ್ ವಾರಿಯರ್ ಮೃತಪಟ್ಟಿದ್ದು, ವಾರಿಯರ್ಸ್ ಗೆ ಸರ್ಕಾರ ಘೋಷಿಸಿರುವ ಪರಿಹಾರದ ಮೊತ್ತ ಮೃತರ ಕುಟುಂಬವನ್ನು ಇನ್ನಷ್ಟೇ ತಲುಪಬೇಕಾಗಿದೆ. ವಾರಿಯರ್ಸ್ ಗೆ 50 ಲಕ್ಷ ರೂ. ವರೆಗೆ ಪರಿಹಾರ: ಇಬ್ಬರು ಸರ್ಕಾರಿ ವೈದ್ಯರು, ಒಬ್ಬ ಪೊಲೀಸ್ ಪೇದೆ ಸೇರಿ ಜಿಲ್ಲೆಯಲ್ಲಿ ಮೂವರು ಕೋವಿಡ್ ವಾರಿಯರ್ಸ್ ಮೃತ ಪಟ್ಟಿದ್ದಾರೆ. ಕೋವಿಡ್ ವಾರಿಯರ್ಸ್ ಗೆ ಸಿಗಬೇಕಾದ ಪರಿಹಾರದ ಮೊತ್ತಕ್ಕೆ ಸಂಬಂಧಿಸಿದ ಇಲಾಖೆಗಳು ಅರ್ಜಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಇನ್ನಷ್ಟೇ ಈ …
Read More »ನಾಪತ್ತೆಯಾಗಿದ್ದ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ.
ರಾಮನಗರ : ಜಿಲ್ಲೆಯ ಮಾಗಡಿ ತಾಲೂಕಿನ ಬೆಟ್ಟಹಳ್ಳಿಯಿಂದ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ. ಅಕ್ಟೋಬರ್ 8 ರಂದು ಮನೆಯಿಂದ ಕಾಣೆಯಾಗಿದ್ದ 19 ವರ್ಷದ ಯುವತಿ ಹೇಮಲತಾಳ ಮೃತದೇಹ ಇಂದು ಪತ್ತೆಯಾಗಿದೆ. ಯುವತಿ ಕಾಣೆಯಾದ ಬೆನ್ನಲ್ಲೇ ಅಕ್ಟೋಬರ್ 9 ರಂದು ಕುದೂರು ಠಾಣೆಯಲ್ಲಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲಾಗಿತ್ತು. ಇದೀಗ ಹೇಮಲತಾಳ ಮೃತದೇಹ ಆಕೆಯ ಮನೆಯ ಸಮೀಪವೇ ಇದ್ದ ಜಮೀನಿನಲ್ಲಿ ಪತ್ತೆಯಾಗಿದೆ. ಯುವತಿಯ ದೊಡ್ಡಪ್ಪ ರವೀಂದ್ರಕುಮಾರ್ ಜಮೀನಿನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. …
Read More »