ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಲಿಕವಾಡ ಗ್ರಾಮವು ‘ಸೈನಿಕ ಮಲಿಕವಾಡ’ ಎಂದೇ ಹೆಸರಾಗಿದೆ. ಈ ಊರಿನ ಪ್ರತಿಯೊಂದು ಕುಟುಂಬದಲ್ಲೂ ಕನಿಷ್ಠ ಒಬ್ಬರು ಭಾರತೀಯ ಸೇನೆಯಲ್ಲಿದ್ದಾರೆ. ಸಿಆರ್‌ಪಿಎಫ್, ಬಿಎಸ್‍ಎಫ್, ಸಿಐಎಸ್‍ಎಫ್, ಎಸ್‍ಎಸ್‍ಬಿ ಸೇರಿ ವಾಯುಪಡೆ, ಭೂಸೇನೆ, ನೌಕಾಪಡೆಯಲ್ಲಿ ಇದ್ದಾರೆ. ಏಳು ದಶಕಗಳಿಂದ ಹೀಗೆ ಸೇನೆ ಸೇರಿದವರ ಸಂಖ್ಯೆ ಬಹಳ ದೊಡ್ಡದು. ಈಗಲೂ 150ಕ್ಕೂ ಹೆಚ್ಚು ಯುವಕರು ಸೇನೆಯಲ್ಲಿದ್ದಾರೆ. 1965ರಲ್ಲಿ ಭಾರತ-ಚೀನಾ ಯುದ್ಧ, 1971ರಲ್ಲಿ ಭಾರತ- ಬಾಂಗ್ಲಾದೇಶ ಯುದ್ಧ ಮತ್ತು 1999ರಲ್ಲಿ ಕಾರ್ಗಿಲ್ …
Read More »ವಿದ್ಯಾರ್ಥಿಗಳ ಬದುಕಿಗೆ ‘ನಿರ್ಮಾಣ’ ಆಸರೆ
ಚಿಕ್ಕೋಡಿ: ತಾಲ್ಲೂಕಿನ ಕೇರೂರು ಗ್ರಾಮದಲ್ಲಿ 15-20 ಜನ ಯುವಕ-ಯುವತಿಯರ ಗುಂಪು ಸೇರಿ ಸ್ಥಾಪಿಸಿದ ಉಚಿತ ಗ್ರಂಥಾಲಯ ಹಲವು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಗೊಳ್ಳಲು ಸಹಕಾರಿಯಾಗಿದೆ. ಕಳೆದ 6 ವರ್ಷಗಳ ಹಿಂದೆ ಸ್ಥಾಪಿಸಿದ ಉಚಿತ ಗ್ರಂಥಾಲಯ ಸೇವೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅನುಕೂಲವಾಗುತ್ತಿದೆ. ಪ್ರತಿ ದಿನವೂ ಗ್ರಂಥಾಲಯದಲ್ಲಿ ಓದಬಹುದು. ಮನೆಗೆ ಪುಸ್ತಕಗಳನ್ನು ಎರವಲು ಪಡೆದು ಓದಬಹುದಾಗಿದೆ. ಆದರೆ ಎಲ್ಲವೂ ಇಲ್ಲಿ ಉಚಿತ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಬೇಕೆಂಬ ಕಾರಣದಿಂದ ಸ್ಪರ್ಧಾತ್ಮಕ …
Read More »ಬಾಲಕಿಯರ ಮೆಟ್ರಿಕ್ ನಂತರದ ಹಾಸ್ಟೆಲ್ ಕಟ್ಟಡದ ಉದ್ಘಾಟನೆ ಯಾವಾಗ?
ಚಿಕ್ಕೋಡಿ: ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯದ ಕಟ್ಟಡ ಕಾಮಗಾರಿ ಮುಗಿದು ಒಂದು ವರ್ಷ ಕಳೆದಿದೆ. ಆದರೆ, ಅದಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. 1997ರಲ್ಲಿ ಚಿಕ್ಕೋಡಿಗೆ ಈ ವಸತಿ ನಿಲಯ ಮಂಜೂರಾಯಿತು. ಅಂದಿನಿಂದಲೂ ಪಟ್ಟಣದಲ್ಲಿ ಬೇರೆ ಬೇರೆ ಬಾಡಿಗೆ ಕಟ್ಟಡಗಳಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಅಲ್ಲಿ ದಾಖಲಾಗುವ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. ಹಾಸ್ಟೆಲ್‌ನಿಂದ ಕಾಲೇಜಿಗೆ ತೆರಳಲು ಸರಿಯಾಗಿ ಬಸ್ …
Read More »ಕೋಥಳಿ-ಕುಪ್ಪಾಣವಾಡಿ ಆಶ್ರಮದ ಸಾಕಾನೆ ‘ಉಷಾರಾಣಿ’ ಸಾವು
ಚಿಕ್ಕೋಡಿ: ತಾಲ್ಲೂಕಿನ ಕೋಥಳಿ-ಕುಪ್ಪಾನವಾಡಿಯ ಆಚಾರ್ಯ ದೇಶಭೂಷಣ ಜೈನ ಆಶ್ರಮದ ಸಾಕು ಆನೆ ಉಷಾರಾಣಿ (50) ಅನಾರೋಗ್ಯದಿಂದ ಶನಿವಾರ ಸಾವನ್ನಪ್ಪಿದ್ದು, ಆಚಾರ್ಯ ದೇಶ ಭೂಷಣ ಆಶ್ರಮ ಟ್ರಸ್ಟ್ ಹಾಗೂ ಶಾಂತಿಗಿರಿ ಟ್ರಸ್ಟ್ ವತಿಯಿಂದ ಅಂತಿಮ ನಮನಗಳನ್ನು ಸಲ್ಲಿಸಲಾಯಿತು. ಆಶ್ರಮದ ಆವರಣದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಜೈನ ಮುನಿಗಳು ಹಾಗೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ತಿಳಿಸಲಾಗಿದೆ. 1977ರಲ್ಲಿ 3 ವರ್ಷದ ಮರಿ ಇದ್ದಾಗ ಶಿವಮೊಗ್ಗದ ಅರಣ್ಯ ಪ್ರದೇಶದಿಂದ ತರಲಾಗಿದ್ದ …
Read More »ಸ್ವಾತಂತ್ರ್ಯ ದಿನ: ಪ್ರಧಾನಿಯೊಂದಿಗೆ ಭಾಗವಹಿಸಲು ವಿದ್ಯಾರ್ಥಿ ಸಾಗರ ಆಯ್ಕೆ
ಚಿಕ್ಕೋಡಿ: ತಾಲ್ಲೂಕಿನ ಕೇರೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಸಾಗರ ಮಲ್ಲಪ್ಪ ಬೆಕ್ಕೇರಿ 77ನೇ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅತಿಥಿಯಾಗಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಇಡೀ ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾದ 6 ಜನ ವಿದ್ಯಾರ್ಥಿಗಳ ಪೈಕಿ ಸಾಗರ ಬೆಕ್ಕೇರಿ ಅವರು ಒಬ್ಬರಾಗಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವ …
Read More »1500 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ
ಚಿಕ್ಕೋಡಿ: ‘ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ ಕ್ಷೇತ್ರದಲ್ಲಿ ಸದಾ ಕಾಲವೂ ಜನರ ಸಮಸ್ಯೆಗೆ ಸ್ಪಂದಿಸುತ್ತ ಜನರ ಹೃದಯದಲ್ಲಿ ನೆಲೆ ನಿಂತಿದ್ದಾರೆ. ಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿ, ಆರೋಗ್ಯ, ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದು ಕ್ಷೇತ್ರದ ಜನರ ಹೆಮ್ಮೆಯಾಗಿದೆ’ ಎಂದು ಕಾಂಗ್ರೆಸ್ ಮುಖಂಡ ರಾಮಾ ಮಾನೆ ಹೇಳಿದರು. ಪಟ್ಟಣದ ಪರಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ಬುಧವಾರ ದು ಶಾಸಕ ಗಣೇಶ ಹುಕ್ಕೇರಿ ಅವರ 46ನೇ …
Read More »ಅಪಾಯ ಮಟ್ಟ ಮೀರಿದ ಕೃಷ್ಣೆ-ಉಪನದಿಗಳು
ಚಿಕ್ಕೋಡಿ: ಕೃಷ್ಣಾ ನದಿ ಉಗಮಸ್ಥಾನ ಮಹಾಬಳೇಶ್ವರ, ಕೊಯ್ನಾ, ನವಜಾ ಮತ್ತು ಕಾಳಮ್ಮವಾಡಿ ಜಲಾನಯನ ಪ್ರದೇಶದಲ್ಲಿ ಹಾಗೂ ರಾಜ್ಯದ ಗಡಿ ಭಾಗದ ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ ಮತ್ತು ಹುಕ್ಕೇರಿ ಭಾಗದಲ್ಲಿಯೂ ನಿರಂತರವಾಗಿ ಮಳೆ ಆಗುತ್ತಿದೆ. ಹೀಗಾಗಿ ಕೃಷ್ಣಾ ಮತ್ತು ಉಪನದಿಗಳಿಗೆ 1.05 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇದಗಂಗಾ ನದಿಗಳು ಒಡಲು ದಾಟಿ ಹರಿದು ಪಕ್ಕದ ಬೆಳೆಗಳಿಗೆ ನುಗ್ಗಿವೆ. ಮಹಾರಾಷ್ಟ್ರದ ಕೊಂಕಣ ಭಾಗದ ಮಹಾಬಳೇಶ್ವರ, ಕೊಯ್ನಾ, ನವಜಾ ಹಾಗೂ …
Read More »ಚಿಕ್ಕೋಡಿ ಜಿಲ್ಲೆ ರಚನೆ: ಎಲ್ಲರೂ ಪರ, ಸರ್ಕಾರ ನಿರ್ಧಾರ ತಗೊಳ್ಳಲಿದೆ: ಸಚಿವ ಸತೀಶ್ ಜಾರಕಿಹೊಳಿ
ಚಿಕ್ಕೋಡಿ ಜಿಲ್ಲೆ ರಚನೆ: ಎಲ್ಲರೂ ಪರ, ಸರ್ಕಾರ ನಿರ್ಧಾರ ತಗೊಳ್ಳಲಿದೆ: ಸಚಿವ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಬಸ್ ನಿಲ್ದಾಣದ ಬಳಿ ಸರ್ಕಾರಿ ನೌಕರರ ಭವನ ಶಂಕುಸ್ಥಾಪನೆ ನೆರವೇರಿಸಿದರು. *ಚಿಕ್ಕೋಡಿ ಜಿಲ್ಲೆ ರಚನೆ:* “ಎಲ್ಲರೂ ಚಿಕ್ಕೋಡಿ ಜಿಲ್ಲೆಯ ರಚನೆಯ ಪರವಾಗಿದ್ದೇವೆ. ಯಾರೂ ಸಹ ವಿರೋಧಿಸುತ್ತಿಲ್ಲ. ಸರ್ಕಾರ ನಿರ್ಧಾರ ತಗೊಳ್ಳಲಿದೆ,” ಎಂದು ಮಾಧ್ಯಮಗಳಿಗೆ ಹೇಳಿದರು. *ಮಾಜಿ ಸಚಿವ ನಾಗೇಂದ್ರರ ಬಂಧನ:* “ಮುಂದಿನ ಕಾನೂನು ಪ್ರಕ್ರಿಯೆ …
Read More »ಕೊಯ್ನಾ ಜಲಾಶಯಕ್ಕೆ ಹರಿದು ಬಂದ 2 ಟಿಎಂಸಿ ಅಡಿ ನೀರು
ಚಿಕ್ಕೋಡಿ: ನೆರೆಯ ಮಹಾರಾಷ್ಟ್ರ ರಾಜ್ಯದ ಕೃಷ್ಣಾ ಹಾಗೂ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಬೀಳುತ್ತಿದ್ದರಿಂದ ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯ ಕೊಯ್ನಾ ಡ್ಯಾಂ ಗೆ 24 ಗಂಟೆಗಳ ಅವಧಿಯಲ್ಲಿ 2 ಟಿಎಂಸಿ ಅಡಿಗಳಷ್ಟು ನೀರು ಹರಿದು ಬಂದಿದ್ದು, 105 ಟಿಎಂಸಿ ಅಡಿ ಸಾಮರ್ಥ್ಯದ ಈ ಡ್ಯಾಂನಲ್ಲಿ ಬುಧವಾರ 23 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ 24 ಗಂಟೆಗಳಲ್ಲಿ ಕೊಯ್ನಾ ಆಣೆಕಟ್ಟು ಪ್ರದೇಶದಲ್ಲಿ 13.3 ಸೆ.ಮೀ, ಕೃಷ್ಣಾ ನದಿ ಉಗಮ …
Read More »ಚಿಕ್ಕೋಡಿ | ನೀರಿಲ್ಲದೇ ಸಸ್ಯೋತ್ಪಾದನೆ ಕುಸಿತ; ಅರಣ್ಯೀಕರಣಕ್ಕೆ ಅಡೆತಡೆ
ಚಿಕ್ಕೋಡಿ: ತಾಲ್ಲೂಕಿನ ಜೈನಾಪುರ ಹಾಗೂ ಚಿಂಚಣಿ ಗ್ರಾಮಗಳಲ್ಲಿ ಅರಣ್ಯ ಇಲಾಖೆಯು ನರ್ಸರಿಗಳ ಮೂಲಕ ಪ್ರತಿ ವರ್ಷ ಸಾವಿರಾರು ಸಸಿಗಳ ಉತ್ಪಾದನೆ ಮಾಡುತ್ತಲಿದೆ. 2023-24ರ ಸಾಲಿನಲ್ಲಿ ಸರ್ಮಪಕವಾಗಿ ಮಳೆ ಇಲ್ಲದೇ ಬೇಡಿಕೆಗೆ ತಕ್ಕಷ್ಟು ಸಸಿಗಳ ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ. ಇದೀಗ ಸಮರ್ಪಕವಾಗಿ ಮಳೆಯಾಗಿದ್ದರೂ ಬೇಡಿಕೆಗೆ ತಕ್ಕಷ್ಟು ಸಸಿಗಳ ಲಭ್ಯತೆ ಇಲ್ಲದೇ ಅರಣ್ಯೀಕರಣ ಮಾಡಲು ಹಿನ್ನೆಡೆಯಾಗಿದೆ. 3 ಎಕರೆ ಪ್ರದೇಶ ವ್ಯಾಪ್ತಿಯಲ್ಲಿಯ ಜೈನಾಪುರ ನರ್ಸರಿಯಲ್ಲಿ 2023ರಲ್ಲಿ 45 ಸಾವಿರ ಸಸಿಗಳ ಉತ್ಪಾದನೆ ಮಾಡಲಾಗಿತ್ತು, ಆದರೆ …
Read More »