Breaking News

ಅಥಣಿ

ಕಬ್ಬಿಗೆ ಯೋಗ್ಯ ದರ ನೀಡುತ್ತಿಲ್ಲ ಎಂದು ರೈತರ ಆಕ್ರೋಶ

ಅಥಣಿ: ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸಿದ ಕಬ್ಬಿಗೆ 14 ದಿನದಲ್ಲಿ ರೈತನಿಗೆ ಬಿಲ್ ಬಿಡುಗಡೆ ಮಾಡಬೇಕೆಂದು ಕಾನೂನು ಇದ್ದರೂ ಸಕ್ಕರೆ ಕಾರ್ಖಾನೆ ಮಾಲೀಕರು ಯಾರು ಇದನ್ನು ಪಾಲಿಸುತ್ತಿಲ್ಲ, ಯಾವ ಸಕ್ಕರೆ ಕಾರ್ಖಾನೆ ಪಾಲಿಸಿಕೊಂಡು ಬಂದಿದೆ ಎಂದು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಥಣಿ ತಾಲೂಕು ಘಟಕದ ಅಧ್ಯಕ್ಷ ಮಾಹದೇವ ಮಡಿವಾಳ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಕಬ್ಬಿಗೆ ಯೋಗ್ಯ ದರ ನೀಡುತ್ತಿಲ್ಲ …

Read More »

ಅಥಣಿ ತಾಲ್ಲೂಕಿನ ಸತ್ತಿ ಹೊರವಲಯದಲ್ಲಿ ಅಬಕಾರಿ ದಾಳಿ 1.31 ಕೆ ಜಿ ಗಾಂಜಾ ವಶ ಒಬ್ಬನ ಬಂಧನ

    ಅಥಣಿ ತಾಲೂಕಿನ ಸತ್ತಿ ಗ್ರಾಮದ ದೇವಪ್ಪ ಈರಪ್ಪ ರುದ್ರಗೌಡರ ಇವರ ಸ್ವಂತ   ಜಮೀನಿನಲ್ಲಿ ದಿನಾಂಕ : 17-10-2020 ರಂದು ಸ್ವಂತ ಲಾಭಕ್ಕಾಗಿ ಮಾರಾಟದ ಉದ್ದೇಶದಿಂದ ಅಕ್ರಮವಾಗಿ ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದ ಬಗ್ಗೆ ಬಂದ ಖಚಿತ ಮಾಹಿತಿ  ಮೇರೆಗೆ ಡಾ : ವೈ ಮಂಜುನಾಥ ಅಬಕಾರಿ ಜಂಟಿ ಆಯುಕ್ತರು , ಬೆಳಗಾವಿ ವಿಭಾಗ ರವರ ಮಾರ್ಗದರ್ಶನದಲ್ಲಿ ಕೆ ಅರುಣಕುಮಾರ ಅಬಕಾರಿ ಉಪ ಆಯುಕ್ತರು ಬೆಳಗಾವಿ ಉತ್ತರ ಜಿಲ್ಲೆ …

Read More »

ಸತತವಾಗಿ ಸುರಿದ ಮಳೆಯಿಂದ ತಾಲ್ಲೂಕಿನ ರೈತರ ಬೆಳೆದ ಬೆಳೆ ಸಂಪೂರ್ಣ ನೀರುಪಾಲು

ಅಥಣಿ  ತಾಲ್ಲೂಕಿನಾದ್ಯಂತ ಸತತವಾಗಿ ಮೂರು ದಿನದಿಂದ ಸುರಿದ ಮಳೆಯಿಂದ ಹಲವು ಕಡೆ ರೈತರು ಬೆಳೆದ ಕಬ್ಬು ,ಮೆಕ್ಕೆಜೋಳ, ಈರುಳ್ಳಿ ನೀರಿನಲ್ಲಿ ನಿಂತು ರೈತರಿಗೆ ತುಂಬಾ ನಷ್ಟವಾಗಿದೆ , ತಾಲ್ಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಹನುಮಂತ ಚಿತ್ರಟಿ ಇವರು ತಮ್ಮ ಜಮೀನಿನಲ್ಲಿ ಬೆಳೆದಂಥ ಈರುಳ್ಳಿ ಬೆಳೆದು ನೀರು ಪಾಲಾಗಿ ತುಂಬಾ ನಷ್ಟ ಅನುಭವಿಸಿದ್ದಾರೆ ಇದೇ ಸಂದರ್ಭದಲ್ಲಿ ಅವರು ಮಾತನಾಡಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆಗೆ ಒಳ್ಳೆಯ ಬೆಲೆ ಇದೆ ಅಂತ ತಾವು ತಮ್ಮ ಎರಡು …

Read More »

ನದಿ ತೀರದಲ್ಲಿ ಸಿಕ್ಕಿದ್ದ 28 -30 ವರ್ಷದ ಯುವಕನ ಶವ ದೊಡ್ಡ ಕಥೆಯೊಂದನ್ನು ಬಿಚ್ಚಿಟ್ಟಿದೆ.

ಅಥಣಿ – ಅಕ್ಟೋಬರ್ 5ರಂದು ಅಥಣಿ ತಾಲೂಕಿನ ಕೃಷ್ಣಾ ನದಿ ತೀರದಲ್ಲಿ ಸಿಕ್ಕಿದ್ದ 28 -30 ವರ್ಷದ ಯುವಕನ ಶವ ದೊಡ್ಡ ಕಥೆಯೊಂದನ್ನು ಬಿಚ್ಚಿಟ್ಟಿದೆ. ಶವವೊಂದೇ ಸಿಕ್ಕಿದ್ದರೆ ಅಷ್ಟೊಂದು ಕುತೂಹಲ ಹುಟ್ಟಿಸುತ್ತಿರಲಿಲ್ಲವೇನೋ… ಶವದ ಪ್ಯಾಂಟ್ ಕಿಸೆಯಲ್ಲಿ ಇತ್ತು 77 ಲಕ್ಷ ರೂ. ಮೌಲ್ಯದ ಬಂಗಾರದ ಗಟ್ಟಿಗಳು. ಶವ ಪತ್ತೆಯಾದ ತಕ್ಷಣ ಅದರ ಜೊತೆಯಲ್ಲಿದ್ದ ಬ್ಯಾಂಕ್ ಅಕೌಂಟ್ ಮಾಹಿತಿ ಅಧರಿಸಿ, ಆದಾರ ಕಾರ್ಡ್ ಪತ್ತೆ ಮಾಡಿದ ಅಥಣಿ ಪೊಲೀಸರು ನೇರವಾಗಿ ಮಹಾರಾಷ್ಟ್ರದ …

Read More »

ಅಂತಾರಾಷ್ಟ್ರೀಯ ವಿಪತ್ತು ತಡೆ ದಿನಾಚರಣೆಯ ಪ್ರಯುಕ್ತ ಶಂಕರಟ್ಟಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ

  ಅಥಣಿ :ಅಂತಾರಾಷ್ಟ್ರೀಯ ವಿಪತ್ತು ತಡೆ ದಿನಾಚರಣೆಯ ಪ್ರಯುಕ್ತ  ಶಂಕರಟ್ಟಿ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು. ಈ ವೇಳೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಶುವೈದ್ಯ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು   ಈ  ಸಂದರ್ಭದಲ್ಲಿ ಬಸವರಾಜ ಖೇಮಲಾಪುರ ವಿಪತ್ತು ನಿರ್ವಾಹಕ ಘಟಕದ ಸಂಯೋಜಕರು ದರೂರ ಹಾಗೂ  ವಲಯ ಮೇಲ್ವಿಚಾರಕರು , ಸೇವಾಪ್ರತಿನಿಧಿಗಳು ಮತ್ತು ವೈದ್ದ್ಯಾದಿಕಾರಿಗಳು ಮತ್ತು ನರ್ಸ್ ಸ್ವಯಂ ಸೇವಕರು ಜಕ್ಕಪ್ಪ ತೀರ್ಥ, ವಿಠ್ಠಲ್ ಕುಂಬಾರ್, …

Read More »

ವಿವಿಧ ಸಮುದಾಯದ ಜನರು ಸ ಹೃದಯ ಸಹಬಾಳ್ವೆಯಿಂದ ಬಾಳಬೇಕು

  ಅಥಣಿ  : ದೇಶದಲ್ಲಿ ಬದುಕುತ್ತಿರುವ ವಿವಿಧ ಸಮುದಾಯದ ಜನರು ಸ ಹೃದಯ ಸಹಬಾಳ್ವೆಯಿಂದ ಬಾಳಬೇಕು . ಸಮಾಜದಲ್ಲಿ ಸಮಾನತೆ  ಸಮಾಜ ನಿರ್ಮಿಸಲು ಪ್ರತಿಯೊಬ್ಬರು ಕೈಜೊಡಿಸಬೇಕೆಂದು ಅಥಣಿ  ಸಮಾಜ ಕಲ್ಯಾಣ ಇಲಾಖೆ ಅಧೀಕ್ಷಕರಾದ ಜ್ಯೋತಿ ನರೋಟಿ  ಹೇಳಿದರು . ಜಿಲ್ಲಾ ಪಂಚಾಯತ ಬೆಳಗಾವಿ ತಾಲೂಕಾ ಆಡಳಿತ ಸಮಾಜ ಕಲ್ಯಾಣ ಇಲಾಖೆ ಅಥಣಿ  ಹಾಗೂ ಗ್ರಾಮ ಪಂಚಾಯತ ನದಿ ಇಂಗಳಗಾಂವ  ಇವರ ಸಹಯೋಗದಲ್ಲಿ ಅಸ್ಪೃಶ್ಯತಾ ನಿರ್ಮೂಲನೆ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳ ಜಾಗೃತಿ …

Read More »

ಸರಕಾರವು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘ:ಶಾಸಕ ಮಹೇಶ್ ಕುಮಟಳ್ಳಿ ಮನವಿ

ಅಥಣಿ : ಭೂಸುಧಾರಣೆ ಕಾಯಿದೆ 79 ಎ ಬಿ ಸಿ ಮತ್ತು 80 ನೇ ಕಾಲಂಗಳನ್ನು ರದ್ದುಗೊಳಿಸಿ ಸರಕಾರವು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘವು ಸನ್ಮಾನ್ಯ ಶ್ರೀ ಮಹೇಶ್ ಕುಮಟಳ್ಳಿ ಶಾಸಕರ ಅಥಣಿ ಅವರಿಗೆ ಮನವಿ ಸಲ್ಲಿಸಿದರು ಈ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಿ ಬಂಡವಾಳ ಕಾಯ್ದೆ ಮತ್ತು ನಮ್ಮ ದೇಶದ ಬೃಹತ್ ಕಾರ್ಪೊರೇಟರ್ ಗಳ ಹಿತಾಸಕ್ತಿಗಳಿಗೆ ಮಣಿದು ರೈತರ ಜಮೀನನ್ನು ಕಬಳಿಸಲು ರತ್ನ …

Read More »

ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ತಳವಾರ ಸಮಾಜದವರು ಪ್ರತಿಭಟನೆ

ಅಥಣಿ: ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ‘ತಳವಾರ ಸಮಾಜ ಎಸ್‌ಟಿ ಹೋರಾಟ ಸಮಿತಿ’ಯವರು ಇಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್‌ ಕಚೇರಿಗೆ ಮನವಿ ಸಲ್ಲಿಸಿದರು. ತಲೆಗೆ ಕಪ್ಪುಪಟ್ಟಿ ಕಟ್ಟಿಕೊಂಡು, ಕಪ್ಪು ಬಾವುಟಗಳನ್ನು ಹಿಡಿದು ಪಾಲ್ಗೊಂಡಿದ್ದ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡ ವಿವಿಧ ಗ್ರಾಮಗಳ ನೂರಾರು ಜನರು ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದರು. ತಹಶೀಲ್ದಾರ್‌, ಶಾಸಕರು, ಉಪ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರು, …

Read More »

ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣ ಸಿಬಿಐ ವಹಿಸಿ: ಅಥಣಿ ವಾಲ್ಮೀಕಿ ಸಮುದಾಯ ಮನವಿ.

  ಅಥಣಿ: ಉತ್ತರ ಪ್ರದೇಶ ರಾಜ್ಯದಲ್ಲಿ ಕುಮಾರಿ ಮನೀಷಾ ವಾಲ್ಮೀಕಿ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ರಾಷ್ಟ್ರಪತಿ ಅವರಿಗೇ ಅಥಣಿ ವಾಲ್ಮೀಕಿ ಸಮುದಾಯದಿಂದ ಮನವಿ ಪತ್ರ ಸಲ್ಲಿಸಿದರು. ಇದೆ ಸಂದರ್ಭದಲ್ಲಿ ಭೀಮಗೌಡ ಪರಮಗೌಡರ್ ಮಾತನಾಡಿ, ಮನೀಷಾ ಹಿಂದುಳಿದ ವರ್ಗಗಳ ಸಮುದಾಯದಿಂದ ಬಂದಿದ್ದರಿಂದ ತನಿಖೆ ಇದುವರೆವಿಗೂ ವೇಗ ಪಡಿಕೊಂಡಿಲ್ಲ, ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ದೇಶದ ತುಂಬೆಲ್ಲ ವಾಲ್ಮೀಕಿ …

Read More »

ಅಥಣಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಬಸ್ ನಿಲ್ದಾಣದ ಪರಸ್ಥಿತಿ

  ಅಥಣಿ : ಪಟ್ಟಣದಲ್ಲಿ ಇತ್ತಿಚೆಗೆ ಕಟ್ಟಿದ ಬಸ ನಿಲ್ದಾಣದ ಕಾಮಗಾರಿಯು‌ ಅವೈಜ್ಞಾನಿಕವಾಗಿದೆ . ಏಕೆಂದರೆ ಸತತ ಮೂರು ದಿನದಿಂದ ಪ್ರತಿನಿತ್ಯ ಸುರಿಯುತ್ತಿರುವ ಮಳೆಗೆ ಶೌಚಾಲಯದಲ್ಲಿ ಮೋಳಕಾಲಿನ ವರೆಗೂ ನೀರು ನಿಂತು ಯಾರು ಹೋಗದಂತಾಗಿದೆ . ಅದಕ್ಕೆ ನೀರು ಹೋರ ಹೋಗಲು ಯಾವುದೆ ದಾರಿ ಇಲ್ಲದೆ ಬಂದ ನೀರೆಲ್ಲಾ ಶೌಚಾಲದಯ ಮೂಲಕವೆ ಹೋಗಬೇಕಾ ಅನಿವಾರ್ಯತೆ ಎದುರಾಗಿದೆ . ಇದರಿಂದಾಗಿ ಹಲವಾರು ಗಂಟೆಗಳವರೆಗೂ ಯಾರು ಶೌಚಾಲದ ಒಳಗೆ ಹೋಗದಂತಾಗಿತ್ತು ಮತ್ತು ಹೋಗಬೇಕಾದರು …

Read More »