Breaking News

ಬೆಂಗಳೂರು

ಸಿ. ಟಿ. ರವಿಯವರ ಹುಚ್ಚು ಅಂತಿಮ ಹಂತ ತಲುಪಿದೆ : ದಿನೇಶ್ ಗುಂಡೂರಾವ್

ಬೆಂಗಳೂರು : ಇಂದಿರಾ ಗಾಂಧಿಯವರ ಬಗ್ಗೆ ವಿವಾದತ್ಮಕ ಹೇಳಿಕೆ ಶಾಸಕ ಸಿ.ಟಿ ರವಿ ವಿರುದ್ಧ ಕಾಂಗ್ರೆಸ್‌ ನಾಯಕರು ಸಿಡಿದೆದ್ದಿದ್ದಾರೆ. ಇನ್ನು ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಸಿ.ಟಿ.ರವಿ ಒಣ ಪೌರುಷ ತೋರಿಸುತ್ತಿದ್ದಾರೆ. ಬಿಜೆಪಿಯವಗೆ ಜನರಿಗೆ ಅನುಕೂಲವಾಗುವ ಒಂದೇ ಒಂದು ಯೋಜನೆ ತರುವ ಯೋಗ್ಯತೆಯಿಲ್ಲ. ಸಿ.ಟಿ.ರವಿಯವರಿಗೆ ತಾಕತ್ತಿದ್ದರೆ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಇನ್ನೊಂದು ಯೋಜನೆ ಜಾರಿ ಮಾಡಿಸಲಿ. ಆ ಯೋಜನೆಗೆ ‘ಗೋಡ್ಸೆ’ ಹೆಸರನ್ನು ಬೇಕಾದರೂ ಇಟ್ಟುಕೊಳ್ಳಲಿ. ಬೇಡ ಎನ್ನುವವರು ಯಾರು.? ಎಂದು …

Read More »

ಸರಕಾರದ ವಿರುದ್ಧ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಧರಣಿ

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಬಿಜೆಪಿಯ ಮೂಡಿಗೆರೆಯ ಶಾಸಕ ಎಂ.ಪಿ. ಕುಮಾರಸ್ವಾಮಿ ವಿಧಾನಸೌಧ ಆವರಣದಲ್ಲಿ ಗುರುವಾರ ಧರಣಿ ನಡೆಸಿದರು. ಕುಮಾರಸ್ವಾಮಿ ಮಾತನಾಡಿ, ನಮ್ಮ ಧ್ವನಿಗೆ ನಮ್ಮದೇ ಸರಕಾರದಲ್ಲಿ ಯಾಕೋ ಬೆಲೆ ಸಿಗುತ್ತಿಲ್ಲ. ಮೀಸಲು ಕ್ಷೇತ್ರ ಅನ್ನೋ ಕಾರಣಕ್ಕೋ ಏನೋ ಕಡೆಗಣಿಸಲಾಗುತ್ತಿದೆ. ಉಸ್ತುವಾರಿ ಸಚಿವರು ಬರುತ್ತಾರೆ, ಆದರೆ ಏನೂ ಮಾಡುವುದಿಲ್ಲ. ಇವರಿಗೆ ಮಾತಲ್ಲಿ ಹೇಳಿದರೆ ಅರ್ಥವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಶೋಕ್‌ ಭರವಸೆ : ಸ್ಥಳಕ್ಕೆ ಆಗಮಿಸಿದ ಅಶೋಕ್‌ ಅವರು, ಅನುದಾನ …

Read More »

ರಾಜ್ಯದ ಆರು ಪೊಲೀಸರಿಗೆ ರಾಷ್ಟ್ರೀಯ ‘ಶ್ರೇಷ್ಠ ತನಿಖಾ ಪದಕ’

ಬೆಂಗಳೂರು : ರಾಷ್ಟ್ರದಲ್ಲಿ ಅಪರಾಧ ಪ್ರಕರಣಗಳ ತನಿಖೆ ವೇಳೆ ಉತ್ತಮ ಸೇವೆ ಸಲ್ಲಿಸುವ ತನಿಖಾಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ನೀಡುವ ಶ್ರೇಷ್ಠ ತನಿಖಾ ಪದಕಕ್ಕೆ ರಾಜ್ಯದ 6 ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ. ಸಿಸಿಬಿ ಎಸಿಪಿ ಎಚ್.ಎನ್.ಧರ್ಮೇಂದ್ರ, ಮಂಗಳೂರು ಉಪವಿಭಾಗದ ಡಿವೈಎಸ್ಪಿ ಪರಮೇಶ್ವರ ಹೆಗಡೆ, ಬಿಡಿಎ ಡಿವೈಎಸ್ಪಿ ಸಿ.ಬಾಲಕೃಷ್ಣ, ಕೆಐಎ ಎಸ್‌ಐಟಿ ಮನೋಜ್ ಎನ್.ಹೂವಳೆ, ದಾವಣಗೆರೆ ಜಿಲ್ಲೆ ಹೊನ್ನಾಳಿ ಇನ್‌ಸ್ಪೆಕ್ಟರ್ ಟಿ.ವಿ.ದೇವರಾಜ್ ಹಾಗೂ ಹಳೇ ಹುಬ್ಬಳ್ಳಿ ಠಾಣೆ ಇನ್‌ಸ್ಪೆಕ್ಟರ್ ಶಿವಪ್ಪ ಶೆಟ್ಟಿಪ್ಪ …

Read More »

ಕಾಂಗ್ರೆಸ್ ಕಚೇರಿಗಳಲ್ಲಿ ಹುಕ್ಕಾ ಬಾರ್ ತೆರೆಯಲಿ ಎಂದ ಸಿ.ಟಿ ರವಿ

ಬೆಂಗಳೂರು: ‘1984ರಲ್ಲಿ ಇಂದಿರಾ ಗಾಂಧಿ ಹತ್ಯೆ ನಡೆದಿದೆ. 2017-18ರಲ್ಲಿ ಇಂದಿರಾ ಗಾಂಧಿ ಕ್ಯಾಂಟೀನ್ ಆರಂಭಿಸಲಾಯಿತು. ಕಾಂಗ್ರೆಸ್‌ನವರು ಇಂದಿರಾ ಗಾಂಧಿ ಅವರ ಮೇಲೆ ಪ್ರೇಮದಿಂದ ಈ ಕ್ಯಾಂಟೀನ್ ಆರಂಭಿಸಿಲ್ಲ. ಅದು ರಾಜಕಾರಣಕ್ಕಾಗಿ ಮತ್ತು ದುಡ್ಡು ಹೊಡೆಯಲು ಮಾಡಿದ ನಿರ್ಧಾರ. ಬದ್ಧತೆಗಾಗಿ ಅಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘1989- 94, 1999-2006, 2013ರಿಂದ 2017ರ ನಡುವೆ ಕಾಂಗ್ರೆಸ್ ಸರ್ಕಾರ ಇದ್ದರೂ ಯಾಕೆ …

Read More »

ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಛ ನಿಷೇಧಿಸಿ ಆದೇಶ: ಹೂವು ಬೆಳೆಗಾರರ ಪ್ರತಿಭಟನೆ

ಬೆಂಗಳೂರು: ‘ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಛ ಹಾಗೂ ಹೂವಿನ ಹಾರ ನಿಷೇಧಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿ ದಕ್ಷಿಣ ಭಾರತ ಪುಷ್ಪ ಬೆಳೆಗಾರರ ಸಂಘದ ನೇತೃತ್ವದಲ್ಲಿ ಹೂವಿನ ಬೆಳೆಗಾರರು ಮತ್ತು ಮಾರಾಟಗಾರರು ಹೆಬ್ಬಾಳದ ಬೆಂಗಳೂರು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದ (ಐಎಫ್‌ಎಬಿ) ಬಳಿ ಗುರುವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಪುಷ್ಪ ಬೆಳೆಗಾರರು ಹಾಗೂ ಮಾರಾಟಗಾರರ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಕೈಯಲ್ಲಿ ಹೂಗುಚ್ಚ, ಹಾರ, ಹಣ್ಣಿನ ಬುಟ್ಟಿಯನ್ನು …

Read More »

ಬ್ಲಾಕ್‍ಮೇಲ್‍ಗಳಿಗೆ ಜಗ್ಗಬೇಡಿ, ಸಿಎಂಗೆ ಹೈಕಮಾಂಡ್ ಅಭಯ

ಬೆಂಗಳೂರು,ಆ.12- ಸಚಿವರು ಮತ್ತು ಶಾಸಕರ ಬ್ಲಾಕ್‍ಮೇಲ್‍ಗಳಿಗೆ ಯಾವುದೇ ಕಾರಣಕ್ಕೂ ಜಗ್ಗಬಾರದು. ಎಂಥದೇ ಪರಿಸ್ಥಿತಿ ಎದುರಾದರೂ ನಾವು ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಯ ನೀಡಿದ್ದಾರೆ. ಉಳಿದಿರುವ ಅವಧಿಯಲ್ಲಿ ಆಡಳಿತದ ಕಡೆ ಹೆಚ್ಚು ಗಮನಹರಿಸಿ ಜನಪರವಾದ ಕಾರ್ಯಕ್ರಮಗಳನ್ನು ರೂಪಿಸಬೇಕು. 2023ರ ಚುನಾವಣೆಯಲ್ಲಿ ಪಕ್ಷವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಶ್ರಮಿಸಬೇಕೆಂದು ಸೂಚಿಸಿದ್ದಾರೆ. ನಿರೀಕ್ಷಿತ ಖಾತೆ ಸಿಗದೆ ಅಸಮಾಧಾನಗೊಂಡು ಕ್ಯಾತೆ ತೆಗೆದಿದ್ದ ಆನಂದ್ ಸಿಂಗ್ …

Read More »

ಬೆಂಗಳೂರಿನಲ್ಲಿ ಬಿಎಸ್ ಯಡಿಯೂರಪ್ಪರನ್ನು ಭೇಟಿಯಾದ ಆನಂದ್ ಸಿಂಗ್ ಹಾಗೂ ಶಾಸಕ ರಾಜೂಗೌಡ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಹಂಚಿಕೆ ಮಾಡಿರುವ ಖಾತೆಯ ಬದಲಾವಣೆಗೆ ಪಟ್ಟು ಹಿಡಿದಿರುವ ಸಚಿವ ಆನಂದ್ ಸಿಂಗ್ ಇದೀಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ, ಬಿಎಸ್ವೈ ಭೇಟಿ ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ಆನಂದ್ ಸಿಂಗ್ ತೆರಳಿದ್ದಾರೆ. ಈ ಮಧ್ಯೆ ಯಡಿಯೂರಪ್ಪ ಆಪ್ತ ರಾಜೂಗೌಡ ಅವರು ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ಅವರನ್ನು ಬೆಂಗಳೂರಿಗೆ ಕರೆತರಲು ಯಶಸ್ವಿ ಆಗಿದ್ದಾರೆ. …

Read More »

ವಾಹನ ಸವಾರರೇ ಎಚ್ಚರ! ಇನ್ಮುಂದೆ ಹೈವೇನಲ್ಲಿ ಸ್ಪೀಡ್​​ ಆಗಿ ಓಡಿಸಿದ್ರೆ ಬೀಳುತ್ತೇ ಭಾರೀ ದಂಡ

ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೂಕ್ತ ಕ್ಯಾಮರಾಗಳ ಅಳವಡಿಕೆಗೆ ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ. ಹೀಗಾಗಿ ಕರ್ನಾಟಕದ ಎಲ್ಲಾ ಹೆದ್ದಾರಿಗಳಲ್ಲೂ ಸಾರಿಗೆ ಇಲಾಖೆ ಕ್ಯಾಮರಾ ಅಳವಡಿಕೆ ಅಗತ್ಯ ತಯಾರಿ ನಡೆಸಿಕೊಂಡಿದೆ. ಇನ್ಮುಂದೆ ಒಂದು ವೇಳೆ ಸವಾರರು ಅಗತ್ಯಕ್ಕಿಂತ ವೇಗವಾಗಿ ವಾಹನ ಚಲಾಯಿಸಿದರೆ ದಂಡ ತೆರಲೇಬೇಕಾಗುತ್ತದೆ. ಹೌದು, ವಾಹನ ಸವಾರರು ಇನ್ಮುಂದೆ ಎಚ್ಚರಿಕೆಯಿಂದ ಇರಲೇಬೇಕು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಪೀಡ್​​ ಆಗಿ ವಾಹನ ಓಡಿಸುವ ಮುನ್ನ ಎರಡು ಬಾರಿ …

Read More »

ಶಾಸಕ ಸತೀಶ್ ರೆಡ್ಡಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳು, ಸುಟ್ಟು ಹಾಕಿದ ಘಟನೆ ಬುಧವರಾ ತಡರಾತ್ರಿ ನಡೆದಿದೆ. ತಡರಾತ್ರಿ ಒಂದೂವರೆ ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸತೀಶ್ ರೆಡ್ಡಿ ಅವರ ಫಾರ್ಚೂನರ್ ಕಾರು ಹಾಗೂ ಮಹೀಂದ್ರ ಥಾರ್ ಜೀಪ್ ಸುಟ್ಟು ಹೋಗಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದ್ದು, ನಾಲ್ಕು ಮಂದಿ ದುಷ್ಕರ್ಮಿಗಳು ಪೆಟ್ರೋಲ್ ಕ್ಯಾನ್ ​ಗಳನ್ನ ತಂದು ಬೆಂಕಿ …

Read More »

2 ನಾಡ ಪಿಸ್ತೂಲು, 5 ಜೀವಂತ ಗುಂಡು ವಶ : ನಾಲ್ವರ ಬಂಧನ

ಬೆಂಗಳೂರು,ಆ.11-ಬಿಹಾರ ರಾಜ್ಯದಿಂದ ಅಕ್ರಮವಾಗಿ ನಾಡಪಿಸ್ತೂಲುಗಳನ್ನು ಖರೀದಿ ಮಾಡಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಅಶೋಕನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ ಎರಡು ನಾಡಪಿಸ್ತೂಲು, 5 ಜೀವಂತ ಗುಂಡುಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಸೋನುಕುಮಾರ್(32), ಸುನೀಲ್‍ಕುಮಾರ್(32), ಇರ್ಫಾನ್(26) ಮತ್ತು ಆಂಧ್ರ ಪ್ರದೇಶದ ಮುರುಳಿ ವಿನೋದ್(47) ಬಂಧಿತ ಆರೋಪಿಗಳು. ಆಗಸ್ಟ್ 7ರಂದು ಹೊಸೂರು ರಸ್ತೆಯ ಸಿಮೆಂಟ್ರಿ ರಸ್ತೆಯಲ್ಲಿರುವ ಹಿಂದೂ ಸಿಮೆಂಟ್ರಿ ಬಳಿ ಮೂವರು ಯಾವುದೇ ಪರವಾನಗಿ ಇಲ್ಲದೆ ನಾಡಪಿಸ್ತೂಲಗಳನ್ನಿಟ್ಟುಕೊಂಡು …

Read More »