ತುಮಕೂರು: ವಿಧಾನಸಭಾ ಅಧಿವೇಶನದ ನಡುವೆಯೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಿಪಟೂರು ತಾಲೂಕಿನ ನೋಣವಿನಕೆರೆಯ ಕಾಡುಸಿದ್ದೇಶ್ವರ ಮಠದ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡರು. ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 9:30ಕ್ಕೆ ಮಠಕ್ಕೆ ಆಗಮಿಸಿದ ಸಿಎಂ, ಮೃತ್ಯುಂಜಯ ಹೋಮ, ರುದ್ರ ಹೋಮ, ಜಯಾದಿ ಹೋಮದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದರು. ಬಳಿಕ ಕಾಡುಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೇಶ್ವರ ಶ್ರೀಗಳ ಆಶೀರ್ವಾದ ಪಡೆದರು. ವೇದಿಕೆ ಕಾರ್ಯಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಕಾಡುಸಿದ್ದೇಶ್ವರ ಮಠದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ …
Read More »250 ಚಿತ್ರಗಳಲ್ಲಿ ನಟಿಸಿದ ಹಿರಿಯ ಕಲಾವಿದನಿಗೆ ಕಿಡ್ನಿ ವೈಫಲ್ಯ- ಉಳಿಸಿಕೊಳ್ಳಲು ಜಗ್ಗೇಶ್ ಪ್ರಯತ್ನ
ಬೆಂಗಳೂರು: ನವರಸನಾಯಕ ಜಗ್ಗೇಶ್ ಇತ್ತೀಚೆಗಷ್ಟೇ ಒಂದು ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಕಲಾವಿದನ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ಇದೀಗ ಆ ಕಲಾವಿದ ಯಾರು ಎಂಬುದನ್ನು ತಿಳಿಸಿದ್ದಾರೆ. ಜಗ್ಗೇಶ್ ಅಂದು ಕನ್ನಡ ಚಿತ್ರರಂಗದ ಪೋಷಕ ನಟ ಕಿಲ್ಲರ್ ವೆಂಕಟೇಶ್ ಬಗ್ಗೆ ಮಾತನಾಡಿದ್ದು. ಇವರು ಒಂದು ಕಾಲದಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದರು. ಆದರೆ ಇಂದು ವೆಂಕಟೇಶ್ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡುವ …
Read More »ಭೂಗತ ಪಾತಕಿ ಜೈರಾಜ್ ಪಾತ್ರದಲ್ಲಿ ಡಾಲಿ
ಬೆಂಗಳೂರು: ಡಾಲಿ ಖ್ಯಾತಿಯ ಧನಂಜಯ್ ಇತ್ತೀಚೆಗೆ ಸಿಕ್ಕಾಪಟ್ಟೆ ಬ್ಯುಸಿಯಾಗುತ್ತಿದ್ದು, ಒಂದರ ಮೇಲೊಂದು ಸಿನಿಮಾ ಆಫರ್‍ಗಳು ಅವರನ್ನು ಅರಸಿ ಬರುತ್ತಿವೆ. ಅಲ್ಲದೆ ಒಂದಕ್ಕಿಂತ ಮತ್ತೊಂದು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಧನಂಜಯ್ ತಯಾರಾಗಿದ್ದು, ಸಿಲಿಕಾನ್ ಸಿಟಿಯ ಭೂಗತ ಪಾತಕಿ ಜೈರಾಜ್ ಪಾತ್ರ ನಿರ್ವಹಿಸಲಿದ್ದಾರೆ. ಟಗರು’ ಸಿನಿಮಾ ತೆರೆಕಂಡ ನಂತರ ಡಾಲಿ ಧನಂಜಯ್ ನಸೀಬು ಫುಲ್ ಚೇಂಜ್ ಆಗಿದೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಅವರಿಗೆ ಆಫರ್‍ಗಳು ಹುಡುಕಿಕೊಂಡು …
Read More »ರಾಜ್ಯ ಬಿಜೆಪಿಯಲ್ಲಿ ಏನಾಗ್ತಿದೆ. ಲಿಂಗಾಯತ ಶಾಸಕರ ಸೀಕ್ರೆಟ್ ಮೀಟಿಂಗ್..
ರಾಜ್ಯ ಬಿಜೆಪಿಯಲ್ಲಿ ಏನಾಗ್ತಿದೆ..? ತಡರಾತ್ರಿ ಪಂಚಮಸಾಲಿ ಲಿಂಗಾಯತ ಶಾಸಕರ ಸೀಕ್ರೆಟ್ ಮೀಟಿಂಗ್.. ಬೆಂಗಳೂರು, ಫೆ.19-ಪಂಚಮಸಾಲಿ ಲಿಂಗಾಯತ ಸಮುದಾಯದ ಬಿಜೆಪಿ ಶಾಸಕರಿಂದ ನಿನ್ನೆ ತಡರಾತ್ರಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದೆ.ಪಂಚಮಸಾಲಿ ಲಿಂಗಾಯತ ಸಮುದಾಯದ ಬಿಜೆಪಿ ಶಾಸಕರಿಂದ ನಿನ್ನೆ ತಡರಾತ್ರಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಕರಡಿ ಸಂಗಣ್ಣ, ನಿಂಬಣ್ಣವರ್, ಮಹೇಶ್ ಕುಮಟಳ್ಳಿ, ಮೋಹನ್ ಲಿಂಬಿಕಾಯಿ ಹಾಗೂ ಮುರುಗೇಶ್ ನಿರಾಣಿ ಭಾಗವಹಿಸಿದ್ದರು. ನಿನ್ನೆ ರಾತ್ರಿ ಅವರ ನೇತೃತ್ವದಲ್ಲಿ …
Read More »ಕನ್ನಡ ಸಿನಿಮಾವಾಗಲಿದೆ ಕಂಬಳ ವೀರ ಶ್ರೀನಿವಾಸ್ ಜೀವನ ಚರಿತ್ರೆ
ಕಂಬಳ ಹೆಸರಿನಲ್ಲಿ ಟೈಟಲ್ ರಿಜಿಸ್ಟರ್ ಮಂಗಳೂರು: ಕಂಬಳ ವೀರ ಶ್ರೀನಿವಾಸ್ ಗೌಡ ಅವರು ವಿಶ್ವದಾದ್ಯಂತ ಭಾರೀ ಸುದ್ದಿಯಾಗುತ್ತಿದ್ದಂತೆ ಸಿನಿಮಾ ಕ್ಷೇತ್ರ ಕೂಡ ಕಂಬಳ ಕ್ಷೇತ್ರದ ದಾಖಲೆಯನ್ನು ಮೂಲ ವಿಷಯವನ್ನಾಗಿ ಇಟ್ಟುಕೊಂಡು ಕನ್ನಡ ಸಿನಿಮಾ ತಯಾರಿಸಲ ನಿರ್ಮಾಪಕರೊಬ್ಬರು ಮುಂದಾಗಿದೆ. ಮಂಗಳೂರು ಸಮೀಪ ಐಕಳದಲ್ಲಿ ಫೆಬ್ರವರಿ 2ರಂದು ನಡೆದ ಕಂಬಳದಲ್ಲಿ ಮೂಡಬಿದ್ರೆ ಮಿಜಾರು ಅಶ್ವತ್ಥಪುರದ ಶ್ರೀನಿವಾಸ್ ಗೌಡ ಅವರು ದಾಖಲೆ ಬರೆದು ವಿಶ್ವದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಾಗಿಸಿ ಕಥೆ ತಯಾರಾಗಲಿದೆ. ಕರಾವಳಿ …
Read More »ನಾನು ರಾಜ್ಯದ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗಲೇ ಹೇಳಿದಂತೆ ಜನತೆ ಹರಿಸುವುದು ಮತ್ತು ರಾಜ್ಯ ರೈತರ ಕಣ್ಣೀರು ಒರೆಸುವುದೇ ನನ್ನ ಆದ್ಯತೆಯಾಗಿದೆ
ಜಂಟಿ ಅಧಿವೇಶದಲ್ಲಿ ರಾಜ್ಯಪಾಲರ ಭಾಷಣ ಬಳಿಕ ನೀರಾವರಿ ಇಲಾಖೆ ಬಗ್ಗೆ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ಬೆಂಗಳೂರು: ರಾಜ್ಯದ ಮಧ್ಯಮ ಮತ್ತು ಬೃಹತ್ ನೀರಾವರಿ ಯೋಜನೆಗಳಿಗಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟು 4050 ಕೋಟಿ ರೂ.ಗಳ ಮೀಸಲಿಡಲಾಗುತ್ತಿದೆ. ಈ ವಿಷಯವಾಗಿ ನಾನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದಿಸುತ್ತೇನೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ಜಂಟಿ ಸದನ ಉದ್ದೇಶಿಸಿ ರಾಜ್ಯಾಪಾಲರು ಭಾಷಣ ಮಾಡಿದ ಬಳಿಕ ಜಲಸಂಪನ್ಮೂಲ ಇಲಾಖೆ …
Read More »ರಾಜ್ಯಪಾಲರ ಭಾಷಣದ ಹೈಲೈಟ್ಸ್ ಇಲ್ಲಿದೆ
ಬೆಂಗಳೂರು, ಫೆ.17-ದೇಶದಲ್ಲೇ ಆರ್ಥಿಕ ಸಂಪನ್ಮೂಲಗಳ ವೃದ್ಧಿಗಾಗಿ ಆರ್ಥಿಕ ಕ್ರೋಢೀಕರಣದ ಮಾರ್ಗನಕ್ಷೆಯನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ನಿಗದಿಪಡಿಸಲಾದ ಆರ್ಥಿಕ ಮತ್ತು ಸಾಲ ಕ್ರೋಢೀಕರಣದ ಗುರಿಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಸಾಧಿಸಿದೆ ಎಂದು ರಾಜ್ಯಪಾಲ ವಿ.ಆರ್.ವಾಲಾ ಅವರು ರಾಜ್ಯಸರ್ಕಾರಕ್ಕೆ ಬಹುಪರಾಕ್ ಹೇಳಿದ್ದಾರೆ. ತಮ್ಮ 20 ಪುಟಗಳ ಭಾಷಣದಲ್ಲಿ ರಾಜ್ಯಪಾಲರು ಹಿಂದಿನ ಮೈತ್ರಿ ಸರ್ಕಾರ ಕೈಗೊಂಡಿದ್ದ ಕಾರ್ಯಕ್ರಮಗಳು ಹಾಗೂ ಈಗಿನ ಬಿಜೆಪಿ ಸರ್ಕಾರದ ಹೊಸ ಯೋಜನೆಗಳು ಸೇರಿದಂತೆ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯುವ ಬಗ್ಗೆ …
Read More »ಕಾನೂನು ಸುವ್ಯವಸ್ಥೆ ಪಾಲನೆ ಮಾಡಬೇಕಾದ ರಾಜ್ಯಸರ್ಕಾರವೇ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು, ಫೆ.17- ಕಾನೂನು ಸುವ್ಯವಸ್ಥೆ ಪಾಲನೆ ಮಾಡಬೇಕಾದ ರಾಜ್ಯಸರ್ಕಾರವೇ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಶಾಸಕಾಂಗ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಹೀನ್ ಶಾಲೆ ವಿಷಯದಲ್ಲಿ ರಾಜ್ಯ ಸರ್ಕಾರ ಕಾನೂನನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ. ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಪೊಲೀಸರ ಮೂಲಕ ಬೆದರಿಸಲಾಗುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಇರಬೇಕು. ಬಿಜೆಪಿ ತನ್ನ …
Read More »ರಾಜ್ಯದ 100 ಬರಪೀಡಿತ ತಾಲೂಕುಗಳಲ್ಲಿ ಬರ ನಿಯಂತ್ರಣ ಜಲಾನಯನ ಅಭಿವೃದ್ಧಿ ಹೊಸ ಯೋಜನೆ
ಬೆಂಗಳೂರು, ಫೆ.17-ರಾಜ್ಯದಲ್ಲಿ ಹೆಚ್ಚುತ್ತಿರುವ ಬರಗಾಲವನ್ನು ತಗ್ಗಿಸಿ ಅಂತರ್ಜಲವನ್ನು ವೃದ್ಧಿಸುವ ನಿಟ್ಟಿನಲ್ಲಿ ರಾಜ್ಯದ 100 ಬರಪೀಡಿತ ತಾಲೂಕುಗಳಲ್ಲಿ ಬರ ನಿಯಂತ್ರಣ ಜಲಾನಯನ ಅಭಿವೃದ್ಧಿ ಹೊಸ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ರಾಜ್ಯಪಾಲ ವಿ.ಆರ್.ವಾಲಾ ಘೋಷಿಸಿದರು. ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು,ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಸಂಯೋಜನೆಗೊಳಿಸಿ 100 ಬರಪೀಡಿತ ತಾಲೂಕುಗಳಲ್ಲಿ ಬರ ನಿಯಂತ್ರಣ ಜಲಾನಯನ ಅಭಿವೃದ್ಧಿ ಯೋಜನೆಯನ್ನು …
Read More »ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಇಂದುನಡೆದ ಒಂದು ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ
ಬೆಂಗಳೂರು, ಫೆ.17- ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಇಂದುನಡೆದ ಒಂದು ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿಲ್‍ಕುಮಾರ್ ಈಗಾಗಲೇ ಸ್ಪರ್ಧೆಯಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದರು. ಹೀಗಾಗಿ ಇಂದು ಕೇವಲ ನಾಮಕಾವಸ್ಥೆಗೆ ಚುನಾವಣೆ ನಡೆದಿದ್ದು, ಲಕ್ಷ್ಮಣ್ ಸವದಿ ಬಹುತೇಕ ಆಯ್ಕೆಯಾಗುವುದು ನೂರಕ್ಕೆ ನೂರರಷ್ಟು ಖಚಿತವಾಗಿದೆ. ಬೆಳಗ್ಗೆ 8.30ಕ್ಕೆ ವಿಧಾನಸೌಧದ ಮೊದಲ ಮಹಡಿಯ ಕೊಠಡಿ 106 ರಲ್ಲಿ ನಡೆದ ಮತದಾನದಲ್ಲಿಬಿಜೆಪಿಯ ಎಲ್ಲಾ ಸಚಿವರು, …
Read More »