ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಜ್ ಕುಮಾರ್ ಖಟ್ರಿ ಅವರನ್ನು ಸೇರಿದಂತೆ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ ಕುಮಾರ್ ಖಟ್ರಿ ಕೃಷಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೃಷಿ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ತೋಟಗಾರಿಕಾ ಮತ್ತು ರೇಷ್ಮೆ ಇಲಾಖೆಗೆ ವರ್ಗಾಯಿಸಲಾಗಿದೆ. ಗಂಗಾ ರಾಮ್ ಬದರಿಯಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ …
Read More »ಫಾರ್ಮ್ ಹೌಸ್‍ನಲ್ಲಿ ಕುದುರೆಗಳಿಗೆ ದಚ್ಚು ಮಾಲಿಶ್…………….
ಬೆಂಗಳೂರು: ಸ್ಯಾಂಡಲ್‍ವುಡ್‍ನ ಜಾಲೆಂಜಿಂಗ್ ಸ್ಟಾರ್ ದರ್ಶನ್ ಇಂಡಸ್ಟ್ರಿಯಲ್ಲಿ ಓಡುವ ಕುದುರೆ ಅಂತಾನೇ ಕರೆಸಿಕೊಳ್ಳುವ ನಟ. ಸದ್ಯ ದರ್ಶನ್ ಸಿನಿಮಾ ಕೆಲಸಗಳಿಲ್ಲದೆ ಏನ್ ಮಾಡುತ್ತಿದ್ದಾರೆ ಎನ್ನುವ ಲಕ್ಷಾಂತ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ ತಮ್ಮ ತೂಗುದೀಪ ಫಾರ್ಮ್ ಹೌಸ್‍ನಲ್ಲಿ ಕುದುರೆ, ಗೋವು ಸೇರಿದಂತೆ ಪ್ರಾಣಿ, ಪಕ್ಷಿಗಳನ್ನು ಸಾಕಿದ್ದಾರೆ. ದಚ್ಚು ಆಗಾಗ ಫಾರ್ಮ್‍ಗೆ ಹೋಗಿ ಅವುಗಳೊಂದಿಗೆ ಕಾಲ ಕಳೆಯುತ್ತಾರೆ. …
Read More »ನನ್ನನ್ನು ಮನೆಗೆ ಕಳಿಸಿ, ಭಯ ಆಗುತ್ತೆ’- ರೈಲ್ವೆ ನಿಲ್ದಾಣದಲ್ಲಿ ವೃದ್ಧ ಹಠ
ಬೆಂಗಳೂರು: ರಾಜ್ಯದಲ್ಲಿ ಕ್ವಾರಂಟೈನ್ ರಾದ್ದಾಂತಗಳು ಮುಂದುವರಿದಿವೆ. ಮುಂಬೈ ರೈಲಿನಲ್ಲಿ ಬಂದಿದ್ದ ವೃದ್ಧ ತಮ್ಮನ್ನು ಮನೆಗೆ ಕಳಿಸಿ ಭಯ ಆಗುತ್ತೆ ಎಂದು ಹಠ ಹಿಡಿದು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಕುಳಿತಿದ್ದ ಘಟನೆ ನಡೆದಿದೆ. ಮೊದಲು ಹೋಂ ಕ್ವಾರಂಟೈನ್‍ಗೆ ಹೋದರೆ ಮಕ್ಕಳಿಗೆ ತೊಂದರೆ ಆಗುತ್ತೆ ಅಂತ ಸ್ವಯಂಪ್ರೇರಿತವಾಗಿ ಹೋಟೆಲ್ ಕ್ವಾರಂಟೈನ್‍ಗೆ ವೃದ್ಧ ಮುಂದಾಗಿದ್ರು. ಆದರೆ ಬಸ್ಸಿನಲ್ಲಿ ಕುಳಿತವರನ್ನು ನೋಡಿ ಮನಸ್ಸು ಬದಲಿಸಿ, ನಾನು ಇವರೊಂದಿಗೆ ಹೋಗಲ್ಲ. ನಾನು ಹೋಂ ಕ್ವಾರಂಟೈನ್‍ಗೆ ಹೋಗ್ತೀನಿ …
Read More »ರಾಜ್ಯದಲ್ಲಿ ಇಂದು ಮತ್ತೆ 378 ಮಂದಿಗೆ ಕೊರೊನಾ,-ಬೆಳಗಾವಿ-5……
ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 378 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಆ ಮೂಲಕ ಸೋಂಕಿತರ ಸಂಖ್ಯೆ 5213 ಕ್ಕೆ ಏರಿಕೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ವೇಳೆಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬೀದರ್ ಮತ್ತು ವಿಜಯಪುರದಲ್ಲಿ ಇಬ್ಬರು ಮಹಿಳೆಯರು ಸೋಂಕಿಗೆ ಬಲಿಯಾಗಿದ್ದಾರೆ. ಬೀದರ್ 55 ವರ್ಷ ಮಹಿಳೆ ಮತ್ತು ವಿಜಯಪುರ 82 ವರ್ಷ ಮಹಿಳೆಯರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕಿಗೆ …
Read More »ಕರ್ತವ್ಯದ ವೇಳೆ ಮೊಬೈಲ್ ಇಟ್ಟುಕೊಳ್ಳಲು ಸಿಬ್ಬಂದಿಗೆ ಬಿಎಂಟಿಸಿ ಪರ್ಮಿಷನ್
ಬೆಂಗಳೂರು: ಕರ್ತವ್ಯದ ವೇಳೆ ಮೊಬೈಲ್ ಇಟ್ಟುಕೊಳ್ಳಲು ಸಿಬ್ಬಂದಿಗೆ ಬಿಎಂಟಿಸಿ ಪರ್ಮಿಷನ್ ನೀಡಿದೆ. ಈ ಹಿಂದೆ ಡ್ರೈವಿಂಗ್ ವೇಳೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿತ್ತು. ಮಾರ್ಗ ಮಧ್ಯೆ ಸಂಭವಿಸಿದ ಅಪಘಾತ, ಅವಘಡ, ಘಟನೆ, ಗಲಭೆ ಹಾಗೂ ಇತರೆ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಮತ್ತು ಪ್ರಸ್ತುತ ಸಂಸ್ಥೆಯಲ್ಲಿ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಟಿಕೆಟಿಂಗ್ ಅಳವಡಿಸಲಾದ ಹಿನ್ನೆಲೆಯಲ್ಲಿ ಮೊಬೈಲ್ ಅವಶ್ಯಕತೆ ಇದೆ. ಇದರಿಂದಾಗಿ ಬಿಎಂಟಿಸಿ ನಿರ್ದೇಶನಗಳನ್ನು ಸೂಚಿಸಿ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗಿದೆ. ನಿರ್ದೇಶನಗಳು: …
Read More »ರಾಜ್ಯ ಸರ್ಕಾರದ ಬೊಕ್ಕಸದ ಲೆಕ್ಕ ಬಿಚ್ಚಿಟ್ಟ ಡಿಸಿಎಂ ಕಾರಜೋಳ…………
ಮಧುಗಿರಿ ,ಜೂ.6- ಲಾಕ್‍ಡೌನ್ ಹಿನ್ನಲೆಯಲ್ಲಿ ಸರಕಾರದ ಆದಾಯ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ಉಪಮುಖ್ಯಮಂತ್ರಿ ಎಂ. ಗೋವಿಂದ ಕಾರಜೋಳ ತಿಳಿಸಿದರು. ಪಟ್ಟಣದ ನಿರೀಕ್ಷಣ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಿಜೆಪಿ ಸರಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಪ್ರವಾಹದಿಂದ 35 ಸಾವಿರ ಕೋಟಿಗಳಷ್ಟು ನಷ್ಟವಾಗಿದ್ದು, ಇದೀಗ ಕೊರೊನಾ ಸಾಂಕ್ರಮಿಕ ರೋಗ ಹರಡದಂತೆ ಲಾಕ್ ಡೌನ್ ಮಾಡಿದ ಹಿನ್ನಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಿದೆ ಎಂದರು. ರಸ್ತೆ, ಸೇತುವೆಗಳ ತುರ್ತು …
Read More »ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳನ್ನು ತೆರೆಯಲು ಅನುಮತಿ
ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳನ್ನು ತೆರೆಯಲು ಅನುಮತಿ ನೀಡಾಗುತ್ತಿದೆ, ಸರ್ಕಾರ ನಿಗದಿ ಪಡಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು. ಮುಖ್ಯಮಂತ್ರಿಗಳು ಇಂದು ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಾಗೂ ಕೆಲವು ತೊಡಕುಗಳ ನಿವಾರಣೆ ಕುರಿತು ಪ್ರವಾಸೋದ್ಯಮ ಹಾಗೂ ಸಾರಿಗೆ ಇಲಾಖೆ ಮತ್ತು ವಿವಿಧ ಭಾಗೀದಾರರ ಜೊತೆಗೆ ಚರ್ಚೆ ನಡೆಸಿದರು. ಸರ್ಕಾರದ …
Read More »ಮಾನವೀಯತೆ ಮರೆತ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ
ಬೆಂಗಳೂರು: ಹೊಟ್ಟೆನೋವು ಅಂತ ಆಸ್ಪತ್ರೆಗೆ ಬಂದ ರೋಗಿಗೆ ಚಿಕಿತ್ಸೆ ನೀಡದೇ ಆಸ್ಪತ್ರೆ ಸಿಬ್ಬಂದಿ ಕರ್ತವ್ಯದ ಜೊತೆ ಮಾನವೀಯತೆಯನ್ನು ಮರೆತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಕಳೆದ ರಾತ್ರಿ ಹೊಟ್ಟೆನೋವು ಅಂತ ಓರ್ವ ದೊಡ್ಡಬಳ್ಳಾಪುರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ ವೈದ್ಯರಿಲ್ಲ ಅಂತ ಹೇಳಿ ಸಿಬ್ಬಂದಿ ರೋಗಿಯನ್ನು ಆಸ್ಪತ್ರೆಯೊಳಗೆ ಸಹ ಕರೆದುಕೊಂಡಿಲ್ಲ. ಹೊರಗೆ ನಿಲ್ಲಿಸಿ ಖಾಸಗಿ ಆಸ್ವತ್ರೆಗೆ ಹೋಗಿ …
Read More »ಕೊರೊನಾ ಮಾಹಾಮಾರಿ ಈದೀಗ ವಾರಿಯರ್ ಗಳನ್ನು ಕಾಡುತ್ತಿದ್ದು, ಬೆಂಗಳೂರು ಪೊಲೀಸರು ಆತಂಕಕ್ಕೀಡಾಗಿದ್ದಾರೆ.
ಬೆಂಗಳೂರು: ಕೊರೊನಾ ಮಾಹಾಮಾರಿ ಈದೀಗ ವಾರಿಯರ್ ಗಳನ್ನು ಕಾಡುತ್ತಿದ್ದು, ಬೆಂಗಳೂರು ಪೊಲೀಸರು ಆತಂಕಕ್ಕೀಡಾಗಿದ್ದಾರೆ. ನಗರದಲ್ಲಿ ಕಳೆದ ಒಂದು ವಾರದಿಂದ ಐವರು ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಇದರ ಬೆನ್ನಲ್ಲೆ ಶುಕ್ರವಾರ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿನ ಅರೋಪಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿಂದೆ ಕೂಡ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬರಿಗೆ ಪಾಸಿಟಿವ್ ಬಂದಿತ್ತು. ಇದೀಗ ಮತ್ತೊಬ್ಬ ಆರೋಪಿಗೆ ಸೋಂಕು ತಗುಲಿದೆ. ಒಂದು ಕಡೆ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಕೆಲಸ …
Read More »ಲಾರಿಯಿಂದ ಬಂತಾ ಕೊರೊನಾ? ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಮೂವರಿಗೆ ಕೊರೊನಾ ಶಂಕೆ
ಬೆಂಗಳೂರು: ಟ್ರಾವೆಲ್ ಹಿಸ್ಟರಿ ಇಲ್ಲದ ಮೂವರು ಯುವಕರಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆ ಜನ ಆತಂಕಗೊಂಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ಸಿದ್ದನಹೊಸಹಳ್ಳಿಯ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ 26, 28, 29 ವರ್ಷದ ಮೂವರು ಯುವಕರಿಗೆ ಕೊರೊನಾ ಸೋಂಕು ತಗುಲಿರುವ ಕುರಿತು ಖಾಸಗಿ ಆಸ್ಪತ್ರೆಯಲ್ಲಿ ಶಂಕೆ ವ್ಯಕ್ತವಾಗಿದೆ. ಮೂವರು ಯುವಕರನ್ನು ಹೆಚ್ಚಿನ ಪರೀಕ್ಷೆಗಾಗಿ ನಗರದ ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಬ್ಬರು ಯುವಕರನ್ನು ಕ್ವಾರಂಟೈನ್ …
Read More »