ಬೆಂಗಳೂರು (ಜುಲೈ 22); ನಗರದಲ್ಲಿ ವೇಶ್ಯಾವಾಟಿಕೆ ನಡೆಸುವ ಸಲುವಾಗಿ ಯುವತಿಯರನ್ನು ಅಕ್ರಮವಾಗಿ ಕಳ್ಳ ಸಾಗಾಣೆ ನಡೆಸುತ್ತಿದ್ದ ಪಿಂಪ್ ಸ್ವಾತಿ ಎಂಬ ಮಹಿಳೆಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಮೊದಲ ಬಾರಿಗೆ KPIT (Karnataka prevention of illegal trafficking act) ಕಾಯ್ದೆಯ ಅಡಿ ಬಂಧಿಸಿದ್ದಾರೆ. ನಗರದಲ್ಲಿ ಸ್ವಾತಿ ಎಂಬ ಮಹಿಳೆ ವಿವಿಧೆಡೆ ಮಸಾಜ್ ಸ್ಪಾಗಳನ್ನು ತೆರೆದು ಈ ಸ್ಪಾಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಹಲವು ಬಾರಿ ಈಕೆಯನ್ನು ಬಂಧಿಸಲಾಗಿತ್ತು. ಆದರೆ, ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ …
Read More »ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬಿಎಂಟಿಸಿ ಬಸ್ ಸಂಚಾರ ಆರಂಭ
ಬೆಂಗಳೂರು: ಬುಧವಾರ ಬೆಳಗ್ಗೆಯಿಂದ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಲಿದ್ದು, 1500 ಬಸ್ಸುಗಳು ಸಂಚರಿಸಲಿವೆ. ಬಿಎಂಟಿಸಿ ಅಧಿಕೃತ ಆದೇಶ ಹೊರಡಿಸಿದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಲ್ಲ ಕಡೆ ಬಸ್‍ಗಳು ಓಡಾಡಲಿದ್ದು, ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಡ್ರೈವರ್ ಮತ್ತು ಕಂಡಕ್ಟರ್ ಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿದ್ದು, ಮಾಸ್ಕ್ ಧರಿಸಿ ಬರುವ ಪ್ರಯಾಣಿಕರರಿಗೆ ಮಾತ್ರ ಬಸ್ ನಲ್ಲಿ ಪ್ರಯಾಣಿಸಲು ತಿಳಿಸಲಾಗಿದೆ. ಜ್ವರ …
Read More »ಸೋಂಕಿತರಿಗೆ ನೆಗೆಟಿವ್, ಆರೋಗ್ಯವಂತರಿಗೆ ಪಾಸಿಟಿವ್/ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಫಲಿತಾಂಶದ ಬಗ್ಗೆ ಗೊಂದಲ
ಬೆಂಗಳೂರು: ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಫಲಿತಾಂಶದ ನಿಖರತೆ ಬಗ್ಗೆ ಹಲವು ಸಂದೇಹಗಳು ಎದ್ದಿವೆ. ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವಡೆ ಆಟಿಜೆನ್ ಟೆಸ್ಟ್‌ಗಳ ಅಸಲಿ ಬಂಡವಾಳ ಬಯಲಾಗ್ತಿದೆ. ಪರೀಕ್ಷೆಯ ವೇಳೆ ಸೋಂಕಿತರಿಗೆ ನೆಗೆಟಿವ್ ಎಂದು, ಆರೋಗ್ಯವಂತರಿಗೆ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಆಂಟಿಜೆನ್ ಟೆಸ್ಟ್‌ಗಳ ಖಚಿತತೆ ಬಗ್ಗೆ ವೈದ್ಯರೇ ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಆಂಟಿಜೆನ್ ಟೆಸ್ಟ್ ಮಾಡಿಸಿದ್ದರೂ ಆರ್‌ಟಿ – ಪಿಸಿಆರ್ ಟೆಸ್ಟ್ ಮಾಡಿಸಲು ಸೂಚಿಸುತ್ತಿದ್ದಾರೆ. ಹೊತ್ತಲ್ಲಿ ರಾಜ್ಯ ಸರ್ಕಾರ, ಇನ್ನೂ 5 …
Read More »ಇಷ್ಟು ದಿನ ಬೆಂಗಳೂರಷ್ಟೇ ಕೊರೋನಾ ಹಾಟ್ ಸ್ಪಾಟ್ ಆಗಿತ್ತು. ಆದರೆ ಈಗ ಜಿಲ್ಲೆಗಳು ಹಾಟ್‍ಸ್ಪಾಟ್ ಆಗಿ ಮಾರ್ಪಡುತ್ತಿವೆ.
ಬೆಂಗಳೂರು: ಇಷ್ಟು ದಿನ ಬೆಂಗಳೂರಷ್ಟೇ ಕೊರೋನಾ ಹಾಟ್ ಸ್ಪಾಟ್ ಆಗಿತ್ತು. ಆದರೆ ಈಗ ಜಿಲ್ಲೆಗಳು ಹಾಟ್‍ಸ್ಪಾಟ್ ಆಗಿ ಮಾರ್ಪಡುತ್ತಿವೆ. ಬೆಂಗಳೂರು ಹೊರತುಪಡಿಸಿ ರಾಜ್ಯದ 12 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ. ಇದರಲ್ಲಿ ಐದು ಜಿಲ್ಲೆಗಳು ಎರಡು ಸಾವಿರದ ಗಡಿ ದಾಟಿವೆ. ದಕ್ಷಿಣ ಕನ್ನಡ ಬೆಂಗಳೂರಿಗೆ ಸ್ಪರ್ಧೆ ನೀಡುವ ರೀತಿಯಲ್ಲಿ ಹವಣಿಸುತ್ತಿರುವಂತಿದ್ದು, ನಾಲ್ಕು ಸಾವಿರದ ಸನಿಹದಲ್ಲಿದೆ. ಜಿಲ್ಲೆಗಳಲ್ಲಿ ಯಾಕೆ ಸೋಂಕು ಹೆಚ್ಚಾಗುತ್ತಿದೆ ಎಂದು ಕೇಳಿದರೆ ಬೆಂಗಳೂರಿನತ್ತ ಸಚಿವ ಮಾಧುಸ್ವಾಮಿ …
Read More »ಲಾಕ್ ಡೌನ್ ವಿಸ್ತರಣೆ ಬಗ್ಗೆ ಮುಖ್ಯ ಮಂತ್ರಿಗಳ ಹೇಳಿಕೆ
ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ರಾಜ್ಯದ ಜನತೆಯನ್ನ ಉದ್ದೇಶಿಸಿ ಇಂದು (ಮಂಗಳವಾರ) ಸಂಜೆ ಭಾಷಣ ಮಾಡಿದರು. ಇದೇ ಮೊದಲ ಬಾರಿ ಸಮಾಜಿಕ ಜಾಲತಾಣಗಳ ಮೂಲಕ ಕರ್ನಾಟಕದ ಜನರನ್ನು ಉದ್ದೇಶಿಸಿ ಮಾತನಾಡಿದ್ದು, ನಿರೀಕ್ಷೆಯಂತೆ ಕೊರೋನಾ ವೈರಸ್ ಬಗ್ಗೆ ಮಾತನಾಡಿದರು. ಈ ವೇಳೆ ಕರ್ನಾಟಕ ಜನತೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ದೇಶದೆಲ್ಲೆಡೆ ಕೊರೋನಾ ವೈರಸ್ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಕೋವಿಡ್ ನಿಯಂತ್ರಣ ಮಾಡುವುದರಲ್ಲಿ ಪ್ರಾರಂಭದಲ್ಲಿ ನಾವು ಯಶಸ್ವಿಯಾಗಿದ್ದೆವು. ಆದ್ರೆ, ಇತ್ತೀಚಿನ ದಿನಗಳಲ್ಲಿ …
Read More », ಕೃಷ್ಣಾದಲ್ಲಿ ಧೂಳು ತಿನ್ನುತ್ತಿವೆ ಪ್ರಮುಖ ಕಡತಗಳು.. ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!
ಬೆಂಗಳೂರು, ಜು.21- ಸಕಾಲಕ್ಕೆ ಸರಿಯಾಗಿ ಕಡತಗಳನ್ನು ವಿಲೇವಾರಿ ಮಾಡಲೇಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಕಾರಣ, ಮುಖ್ಯಮಂತ್ರಿಗಳ ಅಕೃತ ಕಚೇರಿ ಕೃಷ್ಣಾದಲ್ಲೇ ಪ್ರಮುಖ ಇಲಾಖೆಗಳ ಸಾವಿರಾರು ಕಡತಗಳು ಎರಡರಿಂದ ಮೂರು ತಿಂಗಳಾದರೂ ವಿಲೇವಾರಿಯಾಗದೆ ಬಾಕಿ ಉಳಿದಿವೆ. ಪ್ರಮುಖವಾಗಿ ಆರ್ಥಿಕ, ಕಂದಾಯ, ಲೋಕೋಪಯೋಗಿ, ನಗರಾಭಿವೃದ್ಧಿಘಿ, ಪೌರಾಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಜಲಸಂಪನ್ಮೂಲ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಉನ್ನತ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, …
Read More »ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುವುದು ಸತ್ಯಕ್ಕೆ ದೂರವಾದುದು: ಮುರುಗೇಶ್ ನಿರಾಣಿ
ಬೆಂಗಳೂರು, ಜು.21- ನಾನು ಎಂಥದ್ದೇ ಸಂಧರ್ಭದಲ್ಲೂ ಹಿಂದೂ ದೇವರಿಗೆ ಅವಮಾನ ಮಾಡುವಂತಹ ಕೆಟ್ಟ ಕೆಲಸವನ್ನು ಮಾಡುವುದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುವುದು ಸತ್ಯಕ್ಕೆ ದೂರವಾದುದು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ನಾನು ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಇದು ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ. ನನ್ನ ಶುಗರ್ಸ್ ಕಂಪೆನಿ …
Read More »ಸಿದ್ದರಾಮ್ಯ ಅವರು ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ
ಬೆಂಗಳೂರು: ಕೊರೊನಾ ಎಂಬ ಚೀನಿ ವೈರಸ್ ರಾಜ್ಯಕ್ಕೆ ಕಾಲಿಟ್ಟ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ವಿರೋಧ ಪಕ್ಷಗಳು ಸರ್ಕಾರದ ಕಾಲೆಳೆಯುತ್ತಲೇ ಇವೆ. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯ ಅವರು ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ, ರಾಜ್ಯ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ವಿರೋಧ ಪಕ್ಷದ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಸಿದ್ದು ಮಾಡಿದ ಸರಣಿ ಟ್ವೀಟ್: ಟ್ವೀಟ್ 1: ಅಂತಾರಾಷ್ಟ್ರೀಯ ಪ್ರದರ್ಶನ …
Read More »ಕೊವಿಡ್ ಅವ್ಯವಹಾರವನ್ನು ಗುರುವಾರ ದಾಖಲೆ ಸಮೇತ ಬಯಲು : ಸಿದ್ದರಾಮಯ್ಯ
ಬೆಂಗಳೂರು: ಸಿಎಂ ಯಡಿಯೂರಪ್ಪ ಹೇಳಿದ್ದರು, ಬಿಐಇಸಿ(ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ)ಯಲ್ಲಿ ದೊಡ್ಡ ಕೋವಿಡ್ ಸೆಂಟರ್ ಮಾಡಿದ್ದೇವೆ ಅಂತ, ಅದಕ್ಕೆ ಹೇಗಿದೆ ಅಂತ ನೋಡೋಕೆ ಬಂದಿದ್ದೆವು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಪ್ರಾರಂಭಿಸಿರುವ ಕೊವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಇನ್ನೂ ಸಂಪೂರ್ಣ ಕೆಲಸ ಆಗಿಲ್ಲ, ನಾವು ಮಾರ್ಚ್ನಲ್ಲೇ ಈ ಬಗ್ಗೆ ಸಲಹೆ ಕೊಟ್ಟಿದ್ದೆ. ಆದರೆ, …
Read More »ಕ ರೋನಾ ಇದೆ ಎಂದು ಹಂಗಿಸಿದಕ್ಕೆ ಆತ್ಮ ಹತ್ಯೆ ಮಾಡಿಕೊಂಡ ಸೋಂಕಿತ..
ಬೆಂಗಳೂರು: ಕೊರೊನಾ ಸೋಂಕಿತರನ್ನು ಜನರು ಅವಮಾನಿಸುತ್ತಿದ್ದು, ಇದರಿಂದ ನೊಂದ ಸೋಂಕಿತರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಸಮಾಜ ಎಷ್ಟೇ ಬದಲಾಗಿದ್ದರೂ ವಿದ್ಯಾವಂತರು ಹೆಚ್ಚಿದ್ದರೂ ಕೂಡ ಜನರ ಮನ:ಸ್ಥಿತಿ ಮಾತ್ರ ಇನ್ನೂ ಬದಲಾಗುತ್ತಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿ. ಪತ್ನಿ ಮತ್ತು ಮಗನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಕೀಲಾಗಿ ನೋಡುತ್ತಿದ್ದುದಕ್ಕೆ ಬೇಸರಗೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಸರುಘಟ್ಟದಲ್ಲಿ ನಡೆದಿದೆ. ದೊಡ್ಡಬಳ್ಳಾಪುರದ ನಿವಾಸಿ ನಾಗರಾಜು (56) ಮೃತ …
Read More »