ಬೆಂಗಳೂರು: ನನ್ನ ಅಣ್ಣನ ಆಶೀರ್ವಾದಿಂದ ನನಗೂ, ನನ್ನ ಪತ್ನಿಗೂ ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ನಟ ಧ್ರುವ ಸರ್ಜಾ ಅವರು ಟ್ವೀಟ್ ಮಾಡಿದ್ದಾರೆ. ಜುಲೈ 15ರಂದು ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾಗೆ ಕೊರೊನಾಗೆ ದೃಢವಾಗಿತ್ತು. ತಕ್ಷಣ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ತಮ್ಮ ಜೊತೆ ಸಂಪರ್ಕ ಹೊಂದಿದ್ದವರಿಗೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು. ಇಬ್ಬರಿಗೂ ಕೊರೊನಾ ಗುಣಲಕ್ಷಣ ಕಡಿಮೆ ಇದ್ದುದ್ದರಿಂದ ವೈದ್ಯರು ಮನೆಯಲ್ಲಿಯೇ ಕ್ವಾರಂಟೈನ್ …
Read More »4 ತಿಂಗಳ ನಂತರ ರಾಜ್ಯಪಾಲರನ್ನು ಭೇಟಿಮಾಡಿದ ಸಿಎಂ, ಮಹತ್ವದ ಮಾತುಕತೆ
ಬೆಂಗಳೂರು,ಜು.22- ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿ, ಸರ್ಕಾರ ತೆಗೆದುಕೊಂಡಿರುವ ಕ್ರಮಗಳು, ಭೂ ಸುಧಾರಣಾ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. ಮೇಲ್ನೋಟಕ್ಕೆ ಇದೊಂದು ಸೌಹಾರ್ದಯುತವಾದ ಭೇಟಿ ಎಂದು ಹೇಳಲಾಗಿದೆ. ಸುಮಾರು ನಾಲ್ಕು ತಿಂಗಳ ನಂತರ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿಯಾದ ಸಿಎಂ ಯಡಿಯೂರಪ್ಪನವರು, ರಾಜ್ಯದ ಸ್ಥಿತಿಗತಿ, ಕಾನೂನು ಸುವ್ಯವಸ್ಥೆ, ಆರ್ಥಿಕ ಪರಿಸ್ಥಿತಿ ಸೇರಿದಂತೆ ಹಲವು ಬೆಳವಣಿಗೆಗಳ …
Read More »“ಪ್ರಜಾಪ್ರಭುತ್ವ ದಲ್ಲಿ ಎಲ್ಲಾ ಲೆಕ್ಕವನ್ನು ಜನರಿಗೆ ನೀಡಬೇಕು. ಜನಪ್ರತಿನಿಧಿಗಳು ಜನರಿಗೆ ಉತ್ತರ ಕೊಡಲೇಬೇಕು.
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿದ್ದು ಇಂದಿಗೆ ಮುಗಿದು ಹೋದ ಕಥೆ. ಈ ಕುರಿತು ಮಾತನಾಡಿ ಏನೂ ಪ್ರಯೋಜನವಿಲ್ಲ. ಆದರೆ, ಹೆಚ್.ಡಿ. ಕುಮಾರಸ್ವಾಮಿ ಅವರು ಈ ವಿಚಾರವನ್ನು ಯಾಕೆ ರೀಕಾಲ್ ಮಾಡಿಕೊಳ್ಳುತ್ತಿದ್ದಾರೋ? ನನಗಂತೂ ಗೊತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ರಚಿಸಿದ್ದ ಮೈತ್ರಿ ಸರ್ಕಾರ ಪತನವಾಗಿ ನಾಳೆಗೆ ಒಂದು …
Read More »ಲಾಕ್‍ಡೌನ್ ಅಂತ್ಯ ಆದ ಮೇಲೆ ಬೆಂಗಳೂರಿನಲ್ಲಿ ವಾಹನಗಳ ಓಡಾಟ ಜೋರಾಗಿದ್ದು, ನಗರದ ಬಹುತೇಕ ಕಡೆ ಟ್ರಾಫಿಕ್ ಉಂಟಾಗಿದೆ.
ಬೆಂಗಳೂರು: ಲಾಕ್‍ಡೌನ್ ಅಂತ್ಯ ಆದ ಮೇಲೆ ಬೆಂಗಳೂರಿನಲ್ಲಿ ವಾಹನಗಳ ಓಡಾಟ ಜೋರಾಗಿದ್ದು, ನಗರದ ಬಹುತೇಕ ಕಡೆ ಟ್ರಾಫಿಕ್ ಉಂಟಾಗಿದೆ. ಮೈಸೂರು ರಸ್ತೆ, ಮೆಜೆಸ್ಟಿಕ್, ತುಮಕೂರು ರಸ್ತೆ, ಟೌನ್ ಹಾಲ್, ನವಯುಗ ಟ್ರೋಲ್ ಸೇರಿದಂತೆ ಅನೇಕ ಕಡೆ ವಾಹನಗಳು ಸಾಲಾಗಿ ನಿಂತಿದೆ. ಇದರಿಂದ ಅಧಿಕ ವಾಹನಗಳ ಓಡಾಟದಿಂದ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಟೌನ್ ಹಾಲ್ ಮುಂಭಾಗ ಫುಲ್ ಟ್ರಾಫಿಕ್ ಆಗಿದ್ದು, ವಾಹನಗಳು ನಿಧಾನ ಗತಿಯಲ್ಲಿ ಸಾಗುತ್ತಾ ಇದ್ದಾವೆ. ಕೆಲಸ, ಕಾರ್ಯ ಹೋಗುವವರು, ಸರ್ಕಾರಿ …
Read More »ಮಾಜಿ ಸಚಿವ ಹೆಚ್.ಎಂ ರೇವಣ್ಣ ಪತ್ನಿಯ ಸಹೋದರಿ ಕೊರೊನಾಗೆ ಬಲಿ..
ಬೆಂಗಳೂರು: ಕೋವಿಡ್ 19 ಎಂಬ ಚೀನಿ ವೈರಸ್ ಘಟಾನುಘಟಿ ನಾಯಕರಿಂದ ಹಿಡಿದು ಸಾಮಾನ್ಯ ಜನರನ್ನೂ ಬಿಡದೆ ಕಾಡುತ್ತಿದೆ. ಸದಾ ಜನರೊಂದಿಗಿರುವ ಜನಪ್ರತಿನಿಧಿಗಳಿಗೂ ಕೋವಿಡ್ 19 ಬಿಸಿ ತಟ್ಟಿದೆ. ಅಂತೆಯೇ ಇದೀಗ ಮಾಜಿ ಸಚಿವ ಹೆಚ್.ಎಂ ರೇವಣ್ಣ ಅವರಿಗೂ ಮಹಾಮಾರಿಯ ಆತಂಕ ಶುರುವಾಗಿದೆ. ಹೆಚ್.ಎಂ ರೇವಣ್ಣ ಅವರ ಪತ್ನಿ ಸಹೋದರಿ ಎಂ.ಎಸ್ ರೋಹಿಣಿ ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 61 ವರ್ಷ ವಯಸ್ಸಾಗಿರುವ ರೋಹಿಣಿ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. …
Read More »ಲಾಕ್‍ಡೌನ್ ತೆರವು; ರಾಜಧಾನಿಯತ್ತ ಜನರು ವಾಪಸ್
ಬೆಂಗಳೂರು: ಇಂದಿನಿಂದ ಲಾಕ್‍ಡೌನ್ ತೆರವಾಗಿರೋ ಹಿನ್ನೆಲೆಯಲ್ಲಿ ಬೆಂಗಳೂರು ಸಹಜ ಸ್ಥಿತಿಯತ್ತ ಮರಳುತ್ತಿದೆ. ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಲಾಕ್‍ಡೌನ್ ಇದ್ದ ಕಾರಣ ಹೋಟೆಲ್ಗಳಲ್ಲಿ ಕೇವಲ ಪಾರ್ಸಲ್ಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಇಂದಿನಿಂದ ಗ್ರಾಹಕರಿಗೆ ಟೇಬಲ್ ಸರ್ವೀಸ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಸಾರ್ವಜಕರಿಗೆ ಸೇವೆ ಒದಗಿಸಲು ಹೋಟೆಲ್ಗಳು ಸಿದ್ಧವಾಗಿವೆ. ಹೋಟೇಲ್ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗಿದ್ದು, ಕೈಗಳನ್ನು ಸ್ಯಾನಿಟೈಸ್ …
Read More »ಲಾಕ್‍ಡೌನ್ ಅಂತ್ಯ ,ಸಹಜ ಸ್ಥಿತಿಗೆ ಬಂದಿದೆ ಬೆಂಗಳೂರು
ಬೆಂಗಳೂರು: ಒಂದು ವಾರಗಳ ಕಾಲದ ಲಾಕ್‍ಡೌನ್ ಅಂತ್ಯವಾಗಿದ್ದು, ಬೆಂಗಳೂರು ಸಹಜ ಸ್ಥಿತಿಗೆ ಬಂದಿದೆ. ಅಲ್ಲದೇ ಬೆಂಗಳೂರು ಅನ್‍ಲಾಕ್ ಆಗಿದ್ದೆ ತಡ ವಾಹನಗಳ ಅಬ್ಬರವು ಶುರುವಾಗಿದೆ. ಒಂದು ವಾರಗಳ ಕಾಲ ಘೋಷಣೆ ಮಾಡಿದ್ದ ಲಾಕ್‍ಡೌನ್ ಇಂದು ಬೆಳಗ್ಗೆ 5 ಗಂಟೆಗೆ ಅಂತ್ಯವಾಗಿದೆ. ಹೀಗಾಗಿ ಬೆಂಗಳೂರಿಗರು ಸಹಜ ಜೀವನ ಶೈಲಿಯತ್ತ ಮರಳುತ್ತಿದ್ದಾರೆ. ಅನ್‍ಲಾಕ್ ನಂತರ ವಾಹನ ಏರ್ ಪೋರ್ಟ್ ರಸ್ತೆ, ಬಳ್ಳಾರಿ ರಸ್ತೆಯಲ್ಲಿ ವಾಹನಗಳ ಸಂಚಾರ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಎಂದಿನಂತೆ ಕಾರ್, …
Read More »ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ; ಯುವತಿಯರನ್ನು ಅಕ್ರಮ ಕಳ್ಳ ಸಾಗಾಟ ಮಾಡಿದ ಪಿಂಪ್ ಬಂಧನ
ಬೆಂಗಳೂರು (ಜುಲೈ 22); ನಗರದಲ್ಲಿ ವೇಶ್ಯಾವಾಟಿಕೆ ನಡೆಸುವ ಸಲುವಾಗಿ ಯುವತಿಯರನ್ನು ಅಕ್ರಮವಾಗಿ ಕಳ್ಳ ಸಾಗಾಣೆ ನಡೆಸುತ್ತಿದ್ದ ಪಿಂಪ್ ಸ್ವಾತಿ ಎಂಬ ಮಹಿಳೆಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಮೊದಲ ಬಾರಿಗೆ KPIT (Karnataka prevention of illegal trafficking act) ಕಾಯ್ದೆಯ ಅಡಿ ಬಂಧಿಸಿದ್ದಾರೆ. ನಗರದಲ್ಲಿ ಸ್ವಾತಿ ಎಂಬ ಮಹಿಳೆ ವಿವಿಧೆಡೆ ಮಸಾಜ್ ಸ್ಪಾಗಳನ್ನು ತೆರೆದು ಈ ಸ್ಪಾಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಹಲವು ಬಾರಿ ಈಕೆಯನ್ನು ಬಂಧಿಸಲಾಗಿತ್ತು. ಆದರೆ, ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ …
Read More »ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬಿಎಂಟಿಸಿ ಬಸ್ ಸಂಚಾರ ಆರಂಭ
ಬೆಂಗಳೂರು: ಬುಧವಾರ ಬೆಳಗ್ಗೆಯಿಂದ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಲಿದ್ದು, 1500 ಬಸ್ಸುಗಳು ಸಂಚರಿಸಲಿವೆ. ಬಿಎಂಟಿಸಿ ಅಧಿಕೃತ ಆದೇಶ ಹೊರಡಿಸಿದೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಲ್ಲ ಕಡೆ ಬಸ್‍ಗಳು ಓಡಾಡಲಿದ್ದು, ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಡ್ರೈವರ್ ಮತ್ತು ಕಂಡಕ್ಟರ್ ಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿದ್ದು, ಮಾಸ್ಕ್ ಧರಿಸಿ ಬರುವ ಪ್ರಯಾಣಿಕರರಿಗೆ ಮಾತ್ರ ಬಸ್ ನಲ್ಲಿ ಪ್ರಯಾಣಿಸಲು ತಿಳಿಸಲಾಗಿದೆ. ಜ್ವರ …
Read More »ಸೋಂಕಿತರಿಗೆ ನೆಗೆಟಿವ್, ಆರೋಗ್ಯವಂತರಿಗೆ ಪಾಸಿಟಿವ್/ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಫಲಿತಾಂಶದ ಬಗ್ಗೆ ಗೊಂದಲ
ಬೆಂಗಳೂರು: ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಫಲಿತಾಂಶದ ನಿಖರತೆ ಬಗ್ಗೆ ಹಲವು ಸಂದೇಹಗಳು ಎದ್ದಿವೆ. ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವಡೆ ಆಟಿಜೆನ್ ಟೆಸ್ಟ್‌ಗಳ ಅಸಲಿ ಬಂಡವಾಳ ಬಯಲಾಗ್ತಿದೆ. ಪರೀಕ್ಷೆಯ ವೇಳೆ ಸೋಂಕಿತರಿಗೆ ನೆಗೆಟಿವ್ ಎಂದು, ಆರೋಗ್ಯವಂತರಿಗೆ ಪಾಸಿಟಿವ್ ವರದಿ ಬಂದಿದೆ. ಹೀಗಾಗಿ ಆಂಟಿಜೆನ್ ಟೆಸ್ಟ್‌ಗಳ ಖಚಿತತೆ ಬಗ್ಗೆ ವೈದ್ಯರೇ ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಆಂಟಿಜೆನ್ ಟೆಸ್ಟ್ ಮಾಡಿಸಿದ್ದರೂ ಆರ್‌ಟಿ – ಪಿಸಿಆರ್ ಟೆಸ್ಟ್ ಮಾಡಿಸಲು ಸೂಚಿಸುತ್ತಿದ್ದಾರೆ. ಹೊತ್ತಲ್ಲಿ ರಾಜ್ಯ ಸರ್ಕಾರ, ಇನ್ನೂ 5 …
Read More »