Breaking News

ಬೆಂಗಳೂರು

ಹಲ್ಲು ಮುರಿದು ಹಾವಿನಂತೆ ISD ಗೆ ಜೀವ ಬಂದಿದ್ದು ಹೇಗೆ

ಬೆಂಗಳೂರು : ಬೆಂಗಳೂರು ಕಮಿಷನರ್ ಆಗಿದ್ದ ಭಾಸ್ಕರ್ ರಾವ್ ಅವರೇ ಯಾವುದೇ ಪ್ರಕರಣ ದಾಖಲಾಗದೇ ಖಾಲಿಯಾಗಿ ಉಳಿದಿದ್ದ ಐಎಸ್‌ಡಿ(Internal security division) ಗೆ ಜೀವ ಕೊಟ್ಟರು. ರಾಜ್ಯ ಸರ್ಕಾರ 2008ರಲ್ಲಿ ಐಎಸ್‌ಡಿ ಸ್ಥಾಪಿಸಿದ್ದು, ಇದರಲ್ಲಿ 6 ವಿಂಗ್‌ಗಳಂತೆ ರಚನೆ ಮಾಡಲಾಗಿತ್ತು. ಆದರೆ ಇದರಲ್ಲಿ ಒಂದೇ ಒಂದು ದೂರು ಸಹ ದಾಖಲಾಗಿರಲಿಲ್ಲ. ಸಿಸಿಬಿ ನಗರಕ್ಕಷ್ಟೇ ಸೀಮಿತವಾಗಿತ್ತು.ಸಿಸಿಬಿಯ ನಾರ್ಕೋಟಿಕ್ ವಿಂಗ್ ನಗರಕ್ಕೆ ಸೀಮಿತವಾಗಿ ಕೆಲಸ ನಿರ್ವಹಿಸುತಿತ್ತು. ಆದರೆ ರಾಜ್ಯದಲ್ಲಿ ಡ್ರಗ್ ಪ್ರಕರಣಗಳ ಬಗ್ಗೆ ಎಲ್ಲಿ …

Read More »

ಸ್ಯಾಂಡಲ್‌ವುಡ್‌ Drugs ಜಾಲ: ನಟ ಯೋಗಿ​, ಕ್ರಿಕೆಟಿಗ NC ಅಯ್ಯಪ್ಪ ವಿಚಾರಣೆ

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್​ಗೆ ಸಂಬಂಧಿಸಿದಂತೆ ನಟ ಲೂಸ್​ ಮಾದ ಯೋಗೀಶ್​ ಹಾಗೂ ಮಾಜಿ ಕ್ರಿಕೆಟಿಗ NC ಅಯ್ಯಪ್ಪರ ವಿಚಾರಣೆ ಸಹ ನಡೆಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಆಂತರಿಕ ಭದ್ರತಾ ವಿಭಾಗದ ಪೊಲೀಸರಿಂದ ವಿಚಾರಣೆ ನಡೆದಿದ್ದು ಡ್ರಗ್ ಪೆಡ್ಲರ್ ಒಬ್ಬನ ಹೇಳಿಕೆ ಆಧಾರದ ಮೇಲೆ ವಿಚಾರಣೆ ನಡೆಸಲಾಯಿತು ಎಂದು ಹೇಳಲಾಗಿದೆ. ಇಬ್ಬರನ್ನು ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ವಿಚಾರಣೆ ಮಾಡಿದ್ದೇವೆ ಎಂದು ಆಂತರಿಕ ಭದ್ರತಾ ವಿಭಾಗದ ADGP ಭಾಸ್ಕರ್ …

Read More »

12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಣಿ ಬಾಂಬ್ ಸ್ಫೋಟ ಆರೋಪಿ CCB ಬಲೆಗೆ

ಬೆಂಗಳೂರು: ಕಳೆದ 12 ವರ್ಷಗಳ ಹಿಂದೆ ಮಡಿವಾಳ ಸೇರಿದಂತೆ 9 ಕಡೆಗಳಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆಯ ನೆರವಿನೊಂದಿಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶೊಯೇಬ್ ಬಂಧಿತ ಆರೋಪಿ. ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ‌ ಸಿಸಿಬಿ ಪೊಲೀಸರು ಕೇರಳಕ್ಕೆ ಕರೆ ತರುತ್ತಿದ್ದಾರೆ. ಮಡಿವಾಳ ಸೇರಿದಂತೆ‌ 9 ಕಡೆಗಳಲ್ಲಿ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿದ್ದ.‌ ಕೃತ್ಯದಲ್ಲಿ‌ ಓರ್ವ ಬಲಿಯಾದರೆ 20 ಮಂದಿ ಗಾಯಗೊಂಡಿದ್ದರು. ಬಳಿಕ‌ ಅದೇ …

Read More »

ಗುಡ್ ನ್ಯೂಸ್ : ರಾಜ್ಯದಲ್ಲಿ ಇಳಿಯುತ್ತಿದೆ ಕೊರೋನಾ

ಬೆಂಗಳೂರು  : ರಾಜ್ಯದಲ್ಲಿ ಸೋಮವಾರ 7,339 ಮಂದಿಗೆ ಸೋಂಕು ದೃಢಪಟ್ಟಿದ್ದು 122 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5.26 ಲಕ್ಷಕ್ಕೆ ಹಾಗೂ ಕೊರೋನಾ ಸಾವಿನ ಸಂಖ್ಯೆ 8,145ಕ್ಕೆ ಏರಿಕೆಯಾಗಿದೆ. ಆದರೆ ಸಕ್ರಿಯ ಸೋಂಕಿ​ತರ ಸಂಖ್ಯೆ 98 ಸಾವಿ​ರ​ದಿಂದ 95,335ಕ್ಕೆ ಇಳಿ​ದಿ​ದೆ. ಇದೇ ವೇಳೆ 9,925 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 4.23 ಲಕ್ಷಕ್ಕೆ ಏರಿಕೆಯಾಗಿದೆ. ಸೋಮವಾರ ಒಟ್ಟು 42,691 ಪರೀಕ್ಷೆ ನಡೆಸಿದ್ದು, …

Read More »

ರೈತ ವಿರೋಧಿ ಮಸೂದೆ ವಿರುದ್ಧ ಭುಗಿಲೆದ್ದ ಆಕ್ರೋಶ- ಶುಕ್ರವಾರ ಕರ್ನಾಟಕ ಬಂದ್ ಸಾಧ್ಯತೆ

ಬೆಂಗಳೂರು: ಸೆಪ್ಟೆಂಬರ್ 25ರಂದು ಕರ್ನಾಟಕವೇ ಬಂದ್ ಆಗುವ ಸಾಧ್ಯತೆ ಇದ್ದು, ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಶುಕ್ರವಾರ ರಾಜ್ಯಾದ್ಯಂತ ಬಂದ್ ಆಚರಿಸುವ ನಿರೀಕ್ಷೆ ಇದೆ.   ಈ ಸಂಬಂಧ ಇವತ್ತು ಬೆಳಗ್ಗೆ 11 ಗಂಟೆಗೆ ಅಧಿಕೃತ ಘೋಷಣೆ ಆಗಲಿದೆ. ಬಂದ್‍ಗೆ 32ಕ್ಕೂ ಹೆಚ್ಚು ಸಂಘಟನೆಗಳು ಕೈಜೋಡಿಸಲಿವೆ. ರೈತ ಸಂಘಟನೆಗಳು ಮಾತ್ರವಲ್ಲದೇ ನಾರಾಯಣಗೌಡ ನೇತೃತ್ವದ ಕರವೇ, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಓಲಾ-ಉಬರ್, ಆಟೋ, ಟ್ಯಾಕ್ಸಿ …

Read More »

ಲೂಸ್ ಮಾದ, ಕ್ರಿಕೆಟಿಗ ಅಯ್ಯಪ್ಪ, ಸೇರಿದಂತೆ ಕೆಲ ಗಣ್ಯರ ಮಕ್ಕಳಿಗೆ ಡ್ರಗ್ಸ್ ಸಪ್ಲೈ ಇಬ್ಬರಿಗೆ ನೋಟಿಸ್

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ಮಾತ್ರ ವಿಚಾರಣೆ ನಡೆಸಿದ್ದು, ನಟ ಲೂಸ್ ಮಾದ ಯೋಗಿ ಹಾಗೂ ಕ್ರಿಕೆಟಿಗ ಅಯ್ಯಪ್ಪನನ್ನು ವಿಚಾರಣೆ ನಡೆಸಿದ್ದೇವೆ ಎಂದು ಐಎಸ್‍ಡಿ (ಆಂತರಿಕ ಭದ್ರತಾ ಪಡೆ) ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ.   ಈ ಕುರಿತು ಮಾಹಿತಿ ನೀಡಿರುವ ಅವರು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಲೂಸ್ ಮಾದ ಖ್ಯಾತಿಯ ಯೋಗಿ ಹಾಗೂ ಕ್ರಿಕೆಟಿಗ ಅಯ್ಯಪ್ಪನನ್ನು ವಿಚಾರಣೆ ಮಾಡಿದ್ದೇವೆ. ಯೋಗಿ, ಅಯ್ಯಪ್ಪ ಅಲ್ಲದೇ ಸೀರಿಯಲ್‌ …

Read More »

ಹಲವು ಭಾಗಗಳಲ್ಲಿ ಮುಂದುವರಿಯಲಿದೆ ಮಳೆಯಬ್ಬರ,ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಬಹುತೇಕ ಬೆಳೆಗಳು ನಾಶ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಮಳೆ ಅಬ್ಬರ ಮುಂದುವರಿಯಲಿದೆ. ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ನಾಳೆ ಆರೆಂಜ್ ಮತ್ತು ನಾಡಿದ್ದು ಯೆಲ್ಲೋ ಅಲರ್ಟ್ ಘೋಷಣೆ ಆಗಿದೆ. ಮಲೆನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಆಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕಲಬುರಗಿಯ ಮಂದಿ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, …

Read More »

ಡ್ರಗ್ಸ್‌ ಕೇಸ್‌- ಐಎಸ್‌ಡಿಯಿಂದ ಲೂಸ್‌ ಮಾದ ಯೋಗಿ, ಅಯ್ಯಪ್ಪ ವಿಚಾರಣೆ

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ) ಖ್ಯಾತ ನಟ ಲೂಸ್‌ ಮಾದ ಯೋಗಿ ಮತ್ತು ಕ್ರಿಕೆಟರ್‌ ಅಯ್ಯಪ್ಪ ಅವರನ್ನು ವಿಚಾರಣೆಗ ಒಳಪಡಿಸಿದೆ. ಎರಡು ದಿನಗಳ ಹಿಂದೆ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ಕಚೇರಿಯಲ್ಲಿ ಐಎಸ್‌ಡಿ ಎಡಿಜಿಪಿ ಭಾಸ್ಕರ್‌ ರಾವ್‌ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರಾಗಿಣಿ ಮತ್ತು ಲೂಸ್‌ …

Read More »

ಸೋದರಿಯ ಶವಸಂಸ್ಕಾರಕ್ಕೆ ಬಂದು ಬಾವನನ್ನು ಹತೈಗೈದ ಅಣ್ಣ

ಬೆಂಗಳೂರು: ಭಾನುವಾರ ಕಾಡುಗೋಡಿಯಲ್ಲಿ ನಡೆದ ಹೆಚ್.ಎ.ಎಲ್ ಉದ್ಯೋಗಿ ರಾಜೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ಕೊಲೆ ನಡೆದ ಆರು ಗಂಟೆಗಳಲ್ಲಿ ಬಂಧಿಸುವಲ್ಲಿ ಕಾಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಜಾನ್‍ಪಾಲ್ ಹಾಗೂ ದಿನೇಶ್ ಎಂದು ಗುರುತಿಸಲಾಗಿದೆ. ಆರೋಪಿ ಜಾನ್‍ಪಾಲ್ ತಂಗಿ ಜಾಸ್ಮಿನ್‍ಗೆ ಏಳು ವರ್ಷಗಳ ಹಿಂದೆ ರಾಜೇಶ್ ಜೊತೆ ವಿವಾಹ ಮಾಡಲಾಗಿತ್ತು. ಇವರಿಗೆ ಐದು ವರ್ಷದ ಗಂಡು ಹಾಗೂ ಮೂರು ತಿಂಗಳ ಹೆಣ್ಣು ಮಗು ಇದ್ದು, ಕಾಡುಗೋಡಿಯ ವೀರಸ್ವಾಮಿರೆಡ್ಡಿ ಬಡಾವಣೆಯಲ್ಲಿ ವಾಸವಾಗಿದ್ದರು. …

Read More »

ಅಧಿವೇಶನಕ್ಕೆ ಮೊದಲ ದಿನವೇ ಬೆರಳೆಣಿಕೆಯಷ್ಟು ಜನಪ್ರತಿನಿಧಿಗಳು ಭಾಗವಹಿಸಿದ್ದು, ಕಲಾಪ ಕಾಟಾಚಾರಕ್ಕೆ ಸೀಮಿತವಾಗಿತ್ತು.

ಬೆಂಗಳೂರು, ಸೆ.21- ಕೋವಿಡ್ -19 ಆತಂಕದ ನಡುವೆಯೇ ಇಂದಿನಿಂದ ಆರಂಭವಾದ ಮಳೆಗಾಲದ ಅಧಿವೇಶನಕ್ಕೆ ಮೊದಲ ದಿನವೇ ಬೆರಳೆಣಿಕೆಯಷ್ಟು ಜನಪ್ರತಿನಿಧಿಗಳು ಭಾಗವಹಿಸಿದ್ದು, ಕಲಾಪ ಕಾಟಾಚಾರಕ್ಕೆ ಸೀಮಿತವಾಗಿತ್ತು. ಭಾರೀ ನಿರೀಕ್ಷೆ ಹಾಗೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಕೊರೊನಾ ಮಹಾಮಾರಿಯ ಆತಂಕ ಎಲ್ಲರಲ್ಲೂ ಮನೆ ಮಾಡಿತ್ತು. ಹೀಗಾಗಿ ವಿಧಾನಸಭೆ ಹಾಗೂ ವಿಧಾನಪರಿಷತ್‍ನಲ್ಲಿ ಕೇವಲ ಕೆಲವೇ ಕೆಲವು ಮಂದಿ ಸಚಿವರು ಹಾಗೂ ಶಾಸಕರು ಮಾತ್ರ ಭಾಗವಹಿಸಿದ್ದರು. 225 ಸದಸ್ಯ ಬಲದ ವಿಧಾನಸಭೆಯಲ್ಲಿ ಪ್ರಮುಖ ಮೂರು …

Read More »