Breaking News

ಬೆಂಗಳೂರು

ಜನೆವರಿ 6ರಿಂದ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ

ಬೆಂಗಳೂರು – ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಶಾಲೆಗಳನ್ನು ಆರಂಭಿಸುವ ಕುರಿತಂತೆ ರಾಜ್ಯ ಸರಕಾರ ಇಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಜನೆವರಿ 6ರಿಂದ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಹಾಗೆಯೇ 6ರಿಂದ 9ನೇ ತರಗತಿಯವರೆಗೆ ವಿದ್ಯಾಗಮ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶ ಕುಮಾರ ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದರು. ತರಗತಿಗಳ ಅವಧಿ ಮತ್ತಿತರ ವಿಷಯಗಳ …

Read More »

ಟ್ವಿಟ್ಟರ್ ನಲ್ಲಿ ಸಿದ್ದು ವಿರುದ್ಧ ಕುಮ್ಮಿ ಕಿಡಿ….

ಬೆಂಗಳೂರು,ಡಿ.19- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಒಳ ಒಪ್ಪಂದಗಳ ಜನಕ ಎಂದು ಆರೋಪಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಪ್ರಾದೇಶಿಕ ಪಕ್ಷ ಕಟ್ಟಿ ನಿಮ್ಮ ಸಾಮಥ್ರ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿ ಎಂದು ಸವಾಲು ಹಾಕಿದ್ದಾರೆ.  ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ರಾಜಕೀಯ ಒಳ ಒಪ್ಪಂದದ ಬಗ್ಗೆ ಮಾತನಾಡಬೇಡಿ. ತಾವು ರಾಜಕೀಯ ಒಳ ಒಪ್ಪಂದಗಳ ಜನಕ ಎಂಬುದು ಯಾವಾಗಲೋ ಸಾಬೀತಾಗಿದೆ. ಇನ್ನೆಂದೂ …

Read More »

ರೈಲ್ವೆ ಪ್ಲಾಟ್‍ಫಾರಂ ಟಿಕೆಟ್ ದರ ಹೆಚ್ಚಳಕ್ಕೆ ವ್ಯಾಪಕ ಆಕ್ರೋಶ

ಬೆಂಗಳೂರು, ಡಿ.17- ರೈಲಿನಲ್ಲಿ ಹೋಗುವವರನ್ನು ಬೀಳ್ಕೊಡಲು ಅಪ್ಪಿತಪ್ಪಿಯೂ ರೈಲ್ವೆ ನಿಲ್ದಾಣಗಳತ್ತ ತಲೆ ಹಾಕಬೇಡಿ. ಏಕೆಂದರೆ, ಬೆಂಗಳೂರಿನ ಪ್ರಮುಖ ರೈಲ್ವೆ ಪ್ಲಾಟ್‍ಫಾರಂಗಳ ಟಿಕೆಟ್ ದರವನ್ನು ಐದು ಪಟ್ಟು ಹೆಚ್ಚಿಸಲಾಗಿದೆ.  ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಕಂಟೋನ್ಮೆಂಟ್, ಯಶವಂತಪುರ, ಕೆಂಗೇರಿ, ಕೆಆರ್ ಪುರಂ, ಬಾಣಸವಾಡಿ, ಯಲಹಂಕ, ವೈಟ್‍ಫೀಲ್ಡ್, ಬೆಂಗಳೂರು ಹೊರತುಪಡಿಸಿ ಬಂಗಾರಪೇಟೆ, ತುಮಕೂರು, ಹೊಸೂರು, ಮಂಡ್ಯ ರೈಲ್ವೆ ನಿಲ್ದಾಣಗಳ ಪ್ಲಾಟ್‍ಫಾರಂ ಟಿಕೆಟ್‍ಗಳನ್ನು 10ರೂ.ನಿಂದ 50ರೂ.ಗೆ ಹೆಚ್ಚಿಸಲಾಗಿದೆ. ಇದು ನವೆಂಬರ್ 30 …

Read More »

ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಗೆ ಮುಹೂರ್ತ ನಿಗದಿ

ಬೆಂಗಳೂರು,ಡಿ.17-ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಗೆ ಮುಹೂರ್ತ ನಿಗದಿಯಾಗಿದೆ. ರಾಜ್ಯಸಭಾ ಸದಸ್ಯರೂ ಆದ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅಧ್ಯಕ್ಷತೆಯಲ್ಲಿ ಇದೇ 19ರಂದು ಕೋರಮಂಗಲದ ಕಲಾದ್ವಾರಕಾ ಸಭಾಂಗಣದಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅಂದು ಬೆಳಿಗ್ಗೆ 10.30ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕಾರಿಣಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ತೀಚೆಗೆ ಜಾರಿಗೊಳಿಸಿದ ರೈತಪರ ಕೃಷಿ ಸುಧಾರಣಾ ಮಸೂದೆಗಳನ್ನು ಬೆಂಬಲಿಸಿ ಅಭಿನಂದಿಸುವ …

Read More »

ಗ್ರಾಮ ಪಂಚಾಯಿತಿ ಚುನಾವಣೆ ಗುಂಡು ಹಾಗೂ ತುಂಡುಗಳ ಪಾರ್ಟಿಗಳನ್ನು ಜೋರ: ಮದ್ಯ ಮಾರಾಟದಲ್ಲಿ ಶೇ.125ರಷ್ಟು ಏರಿಕೆ..!

ಬೆಂಗಳೂರು,ಡಿ.17- ಗ್ರಾಮ ಪಂಚಾಯಿತಿ ಚುನಾವಣೆ ದಿನಕಳೆದಂತೆ ರಂಗೇರುತ್ತಿದ್ದು, ಮತದಾರರ ಮನಗೆಲ್ಲಲು ಸಾಕಷ್ಟು ಕಣದಲ್ಲಿರುವ ಅಭ್ಯರ್ಥಿಗಳು ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಕಾರ್ಯಕರ್ತರು, ಬೆಂಬಲಿಗರಿಗಾಗಿ ಪ್ರತಿನಿತ್ಯ ಅಭ್ಯರ್ಥಿಗಳು ತಮ್ಮ ತಮ್ಮ ಫಾರ್ಮ್‍ಹೌಸ್‍ಗಳಲ್ಲಿ ಗುಂಡು ಹಾಗೂ ತುಂಡುಗಳ ಪಾರ್ಟಿಗಳನ್ನು ಜೋರಾಗಿ ನಡೆಸುತ್ತಿದ್ದಾರೆ. ಈ ನಡುವೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮದ್ಯದ ಅಭಾವ ಎದುರಾಗುವ ಸಾಧ್ಯತೆಗಳಿದ್ದು, ಹೀಗಾಗಿ ಜನರು ಮುಂಚಿತವಾಗಿಯೇ ಮದ್ಯ ಖರೀದಿ ಮಾಡಲು ಆರಂಭಿಸಿದ್ದು, ಕಳೆದ 15 ದಿನಗಳಿಂದ ಮದ್ಯ ಮಾರಾಟ ಶೇ.125ರಷ್ಟು …

Read More »

ಉಪಚುನಾವಣೆ ಗೆದ್ದು ಬೀಗುತ್ತಿರುವ ಬಿಜೆಪಿ ಚಿತ್ತ ಈಗ ಬೆಂಗಳೂರಿನತ್ತ

ಬೆಂಗಳೂರು,ಡಿ.-ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಯನ್ನು ಗೆದ್ದು ಬೀಗುತ್ತಿರುವ ಆಡಳಿತಾರೂಢ ಬಿಜೆಪಿ ಇದೀಗ ಬೆಂಗಳೂರಿನಲ್ಲಿ ವಿಜಯದ ಪತಾಕೆ ಹಾರಿಸಲು ಮುಂದಾಗಿದೆ.  ಇದಕ್ಕಾಗಿ ಬೆಂಗಳೂರಿನ ಜನತೆಗೆ ಭರಪೂರಾ ಕೊಡುಗೆಗಳನ್ನು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಐಟಿಸಿಟಿ, ಉದ್ಯಾನನಗರಿ ಬೆಂಗಳೂರಿಗೆ ಹಲವು ಭರವಸೆಗಳ ಮಹಾಪೂರವನ್ನೇ ಹರಿಸಿದ್ದು, ಬೆಂಗಳೂರು ವಿಷನ್ 2020ರಿಂದ ಪಾರ್ಕ್, ಫ್ಲೈ ಓವರ್ ವರೆಗೆ ಬೆಂಗಳೂರು ಬಗ್ಗೆ ಹಲವು ದೂರದೃಷ್ಟಿ ಹರಿಸಿದ್ದಾರೆ. ಈ ಮೂಲಕ ಬೆಂಗಳೂರು ನಗರಕ್ಕೆ ಹೊಸ ನೋಟ ನೀಡಲು …

Read More »

ಕಾಲೇಜ್​ ಆಡ್ಮಿಷನ್​ ನೆಪದಲ್ಲಿ ಸ್ನೇಹಿತೆಯ ಮೇಲೆ ಅತ್ಯಾಚಾರವೆಸಗಿ ಕೊಲೆ

ಬೆಂಗಳೂರು (ಡಿ. 16): ಕಾಲೇಜಿಗೆ ದಾಖಲಾತಿ ಮಾಡಿಸುತ್ತೇನೆಂದು ತನ್ನ ರೂಮ್​ಗೆ ಕರೆಸಿಕೊಂಡ ಸ್ನೇಹಿತನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಹೊರರಾಜ್ಯದಿಂದ ಇಲ್ಲಿಗೆ ಆಗಮಿಸಿದ್ದ ಯುವತಿಯನ್ನು ಆಕೆಯ ಸಹಪಾಠಿ ಯುವಕನೇ ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ. ಲಾಕ್​ಡೌನ್​ ಹಿನ್ನಲೆ ಒಂದು ಕಂತಿನ ಫೀಜ್​ ಅನ್ನುಬಾಕಿ ಉಳಿಸಿಕೊಂಡಿದ್ದು, ಅದನ್ನು  ಕಟ್ಟಲು ಆಕೆ ನಗರಕ್ಕೆ …

Read More »

ರಾಜ್ಯದ ಪ್ರಮುಖ ರಾಜಕಾರಣಿ BIGBOSS ದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ…………..?

ಬೆಂಗಳೂರು: ರಾಜ್ಯದ ಪ್ರಮುಖ ರಾಜಕಾರಣಿಗಳ ಪೈಕಿ ಒಬ್ಬರಾದ, ಕಾಲಕ್ಕೆ ತಕ್ಕಂತೆ, ಅಗತ್ಯಕ್ಕೆ ಅನುಗುಣವಾಗಿ, ಕ್ಷಣಾರ್ಧದಲ್ಲಿ ಗುಣಕಾರ ಭಾಗಕಾರ ಹಾಕಿ ಮಾತನಾಡುವ, ಮಾತಿನ ಮಧ್ಯೆ ಹಾಸ್ಯವನ್ನು ಹರಿಬಿಡುವ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಈಗ ರಾಜ್ಯದ ಜನತೆ ಮುಂದೆ ಇನ್ನೊಂದು ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ‘ಕಲರ್ಸ್ ಕನ್ನಡ’ ವಾಹಿನಿಯ ಜನಪ್ರಿಯ ಕಾರ್ಯಕ್ರಮ ‘ಬಿಗ್ ಬಾಸ್’ನಲ್ಲಿ ಭಾಗವಹಿಸುವಂತೆ ‘ಮಾತಿನ ಮಲ್ಲ’ ಹೆಚ್. ವಿಶ್ವನಾಥ್ ಅವರನ್ನು …

Read More »

ಹೊಸ ವರ್ಷಕ್ಕೆ ಕಿಕ್ಕೇರಿಸಲು ರೆಡಿಯಾಗಿದ್ದ ಡ್ರಗ್ಸ್ ಪೆಡ್ಲರ್‌ಗಳ ಬಂಧನ..!

ಬೆಂಗಳೂರು, ಡಿ.16- ಮಾದಕ ವಸ್ತುಗಳನ್ನು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಅಂತಾರಾಜ್ಯ ನಾಲ್ವರು ಡ್ರಗ್ ಪೆಡ್ಲರ್‍ಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 1 ಕೋಟಿ 15 ಲಕ್ಷ ಬೆಲೆಯ ಹ್ಯಾಶಿಶ್ ಆಯಿಲ್, ಗಾಂಜಾ ವಶಪಡಿಸಿಕೊಂಡಿದ್ದಾರೆ. ತಮಿಳುನಾಡು ಕೃಷ್ಣಗಿರಿಯ ಕಮಲೇಶನ್ (31), ಸತೀಶ್‍ಕುಮಾರ್ (27), ಹೆಬ್ಬಾಳದ ಕೆಂಪಾಪುರದ ತಿರುಪಾಲ್ ರೆಡ್ಡಿ (32) ಮತ್ತು ಆರ್‍ಟಿ ನಗರದ ಏಜಾಜ್ ಪಾಷ (45) ಬಂಧಿತ ಡ್ರಗ್ ಪೆಡ್ಲರ್‍ಗಳು. ಅಮೃತಹಳ್ಳಿ …

Read More »

ರಾಜೀನಾಮೆ ನೀಡಲು ಮುಂದಾಗಿದ್ದಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿಕಾಂಗ್ರೆಸ್ ಅವರನ್ನು ತಡೆದಿದೆ.

ಬೆಂಗಳೂರು,ಡಿ.16- ವಿಧಾನಪರಿಷತ್‍ನಲ್ಲಿ ನಿನ್ನೆ ನಡೆದ ಕೋಲಾಹಲದ ಹಿನ್ನೆಲೆಯಲ್ಲಿ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ರಾಜೀನಾಮೆ ನೀಡಲು ಮುಂದಾಗಿದ್ದರಾದರೂ ಕಾಂಗ್ರೆಸ್ ಅವರನ್ನು ತಡೆದಿದೆ. ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಅವರು ಇಷ್ಟೆಲ್ಲಾ ರಂಪಾಟವಾದ ಮೇಲೂ ಹುದ್ದೆಯಲ್ಲಿ ಮುಂದುವರೆದರೆ ತಾವು ಅಧಿಕಾರಕ್ಕೆ ಅಂಟಿಕೊಂಡವರು ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ. ಸಭಾಪತಿ ಹುದ್ದೆಗೆ ಅದು ಘನತೆ ತರುವುದಿಲ್ಲ. ಹಾಗಾಗಿ ನಾನು ರಾಜೀನಾಮೆ ನೀಡುತ್ತೇನೆ ಎಂದು ಅವಿಶ್ವಾಸ ಮಂಡನೆಯಾದ ದಿನದಿಂದಲೂ ಆಂತರಿಕವಾಗಿ ಹೇಳುತ್ತಲೇ ಬಂದಿದ್ದಾರೆ. ಆದರೆ ಅದಕ್ಕೆ ಪ್ರತಿಪಕ್ಷದ …

Read More »