ಬೆಂಗಳೂರು: ನಾನು ಬೆಂಗಳೂರಲ್ಲಿಯೇ ಇದ್ದೀನಿ. ಆರಾಮಾಗಿದ್ದೀನಿ ಎಂದು ನಟಿ ಹರ್ಷಿಕಾ ಪೂಣಚ್ಚ ಸ್ಪಷ್ಟಪಡಿಸಿದ್ದಾರೆ. ವಿಡಿಯೋ ಮೂಲಕ ಲಂಡನ್ ಪ್ರವಾಸದ ಬಗ್ಗೆ ಮಾಹಿತಿ ನೀಡಿರುವ ನಟಿ, ಹೌದು ನಾನು ಲಂಡನ್ ಗೆ ಹೋಗಿದ್ದೆ. ಆದರೆ ಎರಡು ವಾರಗಳ ಹಿಂದೆನೆ ನಾನು ಅಲ್ಲಿಂದ ವಾಪಸ್ ಬಂದಿದ್ದೇನೆ. ಮತ್ತೆ ಅಲ್ಲಿಗೆ ಹೋಗಲಿಲ್ಲ. ಲಂಡನ್ ನನಗೆ ತುಂಬಾ ಇಷ್ಟವಾದ ಜಾಗವಾಗಿರುವುದರಿಂದ ಆಗಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುತ್ತೇನೆ. ಎಂದರು. ವಾರದ ಹಿಂದೆ ಅಲ್ಲಿ ನಾನು ಫೋಟೋಶೂಟ್ …
Read More »ಶಾಲೆಗಳು ಓಪನ್ ಆಗೋದು ಡೌಟ್..!ಡಾ.ಸುಧಾಕರ್
ಬೆಂಗಳೂರು, ಡಿ.22- ರಾಜ್ಯದಲ್ಲಿ ಜನವರಿ ಒಂದರಿಂದ ಶಾಲೆ ಪ್ರಾರಂಭಿಸಬೇಕೆ, ಬೇಡವೆ ಎಂಬ ವಿಚಾರ ಕುರಿತು ತಾಂತ್ರಿಕ ಸಲಹಾ ಸಮಿತಿ ವರದಿಯನ್ನು ಕೇಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಾಣು ಹೊಸ ರೂಪಾಂತರ ಪಡೆದಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ವರದಿ ಕೇಳಿದ್ದು, ವರದಿ ಬಂದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. …
Read More »ಭಾಗ್ಯ ಲಕ್ಷ್ಮಿ ಯೋಜನೆ ಕುರಿತು ಚರ್ಚಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗ್ಯ ಲಕ್ಷ್ಮಿ ಯೋಜನೆಯಡಿ ಎಲ್ ಐ ಸಿ ಯವರು ನೀಡಬಹುದಾದ ಅತ್ಯುತ್ತಮ ಕೊಡುಗೆಯ ಕುರಿತು ಪರಿಶೀಲಿಸಿ, ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ತಮ್ಮನ್ನು ಭೇಟಿಯಾದ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಎಲ್ ಐ ಸಿ ವಲಯ ವ್ಯವಸ್ಥಾಪಕಿ ಮಿನಿ ಇಪೆ ಅವರ ನೇತೃತ್ವದ ಎಲ್ ಐಸಿ ಅಧಿಕಾರಿಗಳ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಭಾಗ್ಯ ಲಕ್ಷ್ಮಿ ಯೋಜನೆಯನ್ನು ಎಲ್ ಐ ಸಿ ಮೂಲಕವೇ …
Read More »ಗ್ರಾಮ ಪಂಚಾಯಿತಿ ಚುನಾವಣೆ ಊರಿನತ್ತ ಹೊರಟ ಮತದಾರರು
ಬೆಂಗಳೂರು (ಡಿ. 22): ಕರ್ನಾಟಕದಲ್ಲಿ ಇಂದಿನಿಂದ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ರಾಜ್ಯದ 30 ಜಿಲ್ಲೆಗಳಲ್ಲಿಯೂ ಆಯ್ದ ತಾಲೂಕುಗಳಲ್ಲಿ ಇಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾನ ಮಾಡಲು ಬೆಂಗಳೂರಿನಲ್ಲಿ ನೆಲೆಸಿರುವ ಬಹುತೇಕ ಜನರು ತಮ್ಮ ಊರುಗಳತ್ತ ಹೊರಟಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಮೆಜೆಸ್ಟಿಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೆರೆದ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ಹೊರಡಲು ಬಸ್ಗಳಿಗೆ ಕಾಯುತ್ತಿದ್ದ ದೃಶ್ಯ ಕಂಡುಬಂದಿತು. ಮಧ್ಯಾಹ್ನದ ವೇಳೆಗೆ ಊರುಗಳಿಗೆ ತೆರಳಿ …
Read More »ಕೊರೊನಾ ಹೊಸ ರೂಪಾಂತರ ವೈರಸ್ ಹರಡುತ್ತಿದೆ. ರಾಜ್ಯದ ಜನತೆ ಕಡ್ಡಾಯವಾಗಿ ಮಾಸ್ಕ್ ಧರಿಸಿ,
ಬೆಂಗಳೂರು: ರಾಜ್ಯದಲ್ಲೂ ಕೊರೊನಾ ಹೊಸ ಪ್ರಭೇದ ಬಗ್ಗೆ ಆತಂಕ ಮೂಡುತ್ತಿದ್ದು, ಈಗಾಗಲೇ ಇಂಗ್ಲೆಂಡ್ ನಲ್ಲಿ ಕೊರೊನಾ ಹೊಸ ರೂಪಾಂತರ ವೈರಸ್ ಹರಡುತ್ತಿದೆ. ಈ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಲುವ ಅಗತ್ಯವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ದಾ.ಸುಧಾಕರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುಧಾಕರ್, ಹೊಸ ರೂಪಾಂತರ ವೈರಸ್ ಕೊರೊನಾ ವೈರಸ್ ಗಿಂತಲೂ ಹೆಚ್ಚು ವೇಗವಾಗಿ ಹರಡುತ್ತದೆ. ಹೀಗಾಗಿ ಈ ಬಗ್ಗೆ ಇರ್ಲಕ್ಷ್ಯ ಬೆಡ. ರಾಜ್ಯದ ಜನತೆ ಕಡ್ಡಾಯವಾಗಿ …
Read More »ಕೊರೊನಾ ಇಲ್ಲದ ತಾಲೂಕುಗಳಲ್ಲಿ ಶಾಲೆ ಆರಂಭಿಸಬಹುದು: ಹೈಕೋರ್ಟ್ ಅಭಿಪ್ರಾಯ
ಬೆಂಗಳೂರು: ಶಾಲೆ ಸ್ಥಗಿತಕ್ಕಿಂತ ಪರಿಸ್ಥಿತಿ ಆಧರಿಸಿ ಕೊರೊನಾ ಇಲ್ಲದ ತಾಲೂಕುಗಳಲ್ಲಿ ಶಾಲೆ ಆರಂಭಿಸಬಹುದು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಇಂದು ನಡೆದ ವಿಚಾರಣೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಜನವರಿ 1ರಿಂದ ವಿದ್ಯಾಗಮ ಮರು ಆರಂಭವಾಗಲಿದೆ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲೂ 6 ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ಜಾರಿ ಮಾಡಲಾಗುತ್ತೆ ಎಂದು ಸರ್ಕಾರ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದ್ದಾರೆ. ಇಂದು ನಡೆದ ವಿಚಾರಣೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಜನವರಿ 1ರಿಂದ …
Read More »ತಮ್ಮ ವಿರುದ್ಧದ ಪ್ರಕರಣ ಕೈ ಬಿಟ್ಟ ಖುಷಿಯಲ್ಲಿದ್ದ ರಾಜಕಾರಣಿಗಳಿಗೆ ಹೈಕೋರ್ಟ್ ಶಾಕ್
ಬೆಂಗಳೂರು: ತಮ್ಮ ವಿರುದ್ಧದ ಪ್ರಕರಣ ಕೈ ಬಿಟ್ಟ ಖುಷಿಯಲ್ಲಿದ್ದ ರಾಜಕಾರಣಿಗಳಿಗೆ ಶಾಕ್ ಹೈಕೋರ್ಟ್ ಶಾಕ್ ನೀಡಿದ್ದು, ಸರ್ಕಾರದ ಆದೇಶ ಅನುಷ್ಟಾನಗೊಳಿಸದಂತೆ ಹೈಕೋರ್ಟ್ ನಿರ್ಬಂಧ ಹೇರಿದೆ. ಆಗಸ್ಟ್ 31 ರಂದು ಶಾಸಕರು, ಸಂಸದರ ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧದ 62 ಪ್ರಕರಣಗಳನ್ನು ಕೈಬಿಟ್ಟ ಹಿನ್ನೆಲೆಯಲ್ಲಿ ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಸ್ಥೆಯೂ ಹೈಕೋರ್ಟ್ನಲ್ಲಿ ಸಾರ್ವಜನಿಕರ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆ ಮಾಡಿತ್ತು. ಅರ್ಜಿಯಲ್ಲಿ ಸರ್ಕಾರ ನಿಯಮಬಾಹಿರವಾಗಿ, ಅಭಿಯೋಜಕರ ಅಭಿಪ್ರಾಯವಿಲ್ಲದೇ ನಿರ್ಧಾರ ಕೈಗೊಂಡಿದೆ …
Read More »ಗ್ರಾಮ ಪಂಚಾಯ್ತಿ ಚುನಾವಣೆಗೆ ಕೆಎಸ್‌ಆರ್‌ಟಿಸಿಗೆ 1853 ಬಸ್‍ಗಳನ್ನು ಒಪ್ಪಂದದ ಮೇಲೆ ನೀಡಲಾಗಿದೆ
ಬೆಂಗಳೂರು,ಡಿ.21- ಗ್ರಾಮ ಪಂಚಾಯ್ತಿ ಚುನಾವಣೆಗೆ ಕೆಎಸ್‌ಆರ್‌ಟಿಸಿಗೆ 1853 ಬಸ್‍ಗಳನ್ನು ಒಪ್ಪಂದದ ಮೇಲೆ ನೀಡಲಾಗಿದೆ. ಮೊದಲ ಹಂತದ ಗ್ರಾಮಪಂಚಾಯ್ತಿ ಚುನಾವಣೆಗೆ ನಾಳೆ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‍ಗಳನ್ನು ಬಳಸಿಕೊಳ್ಳಲಾಗಿದೆ. ಮತಗಟ್ಟೆಗಳಿಗೆ ಸಿಬ್ಬಂದಿ, ಮತಪೆಟ್ಟಿಗೆ ಮತ್ತಿತರ ಸಾಮಾಗ್ರಿಗಳನ್ನು ಕೊಂಡೊಯ್ಯಲು ಮತ್ತು ಮರಳಿ ಕರೆತರಲು ಬಸ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ. ದೈನಂದಿನ ಮಾರ್ಗಗಳಲ್ಲಿ ಸಂಚರಿಸುವ ಬಸ್‍ಗಳನ್ನು ಹೊರತುಪಡಿಸಿ ಹೆಚ್ಚುವರಿ ಬಸ್‍ಗಳನ್ನು ಒಪ್ಪಂದದ ಮೇರೆಗೆ ಗ್ರಾಪಂ ಚುನಾವಣಾ ಕಾರ್ಯಕ್ಕೆ ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ. ನಿತ್ಯ …
Read More »ಕೊರೊನಾದಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟಿಗ ವಿಜಯ್ ಶಿರ್ಕೆ ಅವರ ನಿಧನ
ಮುಂಬೈ, ಡಿ.21- ಕೊರೊನಾದಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟಿಗ ವಿಜಯ್ ಶಿರ್ಕೆ ಅವರು ಚಿಕಿತ್ಸೆ ಫಲಿಸದೆ ಥಾಣೆ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಶಾಲಾ ಜೀವನದಲ್ಲೇ ಕ್ರಿಕೆಟ್‍ನತ್ತ ಒಲವು ತೋರಿದ್ದ ವಿಜಯ್ ಶಿರ್ಕೆ ಅವರು ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್‍ಗೆ ಆಪ್ತ ಗೆಳೆಯರಾಗಿದ್ದರಲ್ಲದೆ ಸಚಿನ್ ಹಾಗೂ ವಿನೋದ್ ಕಾಂಬ್ಳೆ ಅವರೊಂದಿಗೆ ಹಲವು ಪಂದ್ಯಗಳಲ್ಲಿ ಇನ್ನಿಂಗ್ಸ್ ಕಟ್ಟಿದ್ದರು. ಮುಂಬೈನ ಕಲ್ಯಾಣ್ ಪ್ರಾಂತ್ಯದಲ್ಲಿ ಜನಿಸಿದ ವಿಜಯ್ ಶಿರ್ಕೆ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್‍ನ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುವ ಮೂಲಕ …
Read More »ಚುನಾವಣೆ ಯಾವುದೇ ಇರಲಿ, ಬೆರಳಿಗೆ ಇಂಕ್ ಹಚ್ಚುವುದು ಕಡ್ಡಾಯ. ಒಮ್ಮೆ ಹಚ್ಚಿದ ಇಂಕ್ ಎಷ್ಟೇ ಉಜ್ಜಿ, ತೀಡಿದರೂ ಅದು ಹೋಗಲ್ಲ.
(ಡಿಸೆಂಬರ್.21): ಚುನಾವಣೆ ಯಾವುದೇ ಇರಲಿ, ಬೆರಳಿಗೆ ಇಂಕ್ ಹಚ್ಚುವುದು ಕಡ್ಡಾಯ. ಒಮ್ಮೆ ಹಚ್ಚಿದ ಇಂಕ್ ಎಷ್ಟೇ ಉಜ್ಜಿ, ತೀಡಿದರೂ ಅದು ಹೋಗಲ್ಲ. ಅಂತಹ ಅಳಿಸಲಾಗದ ಶಾಯಿಯನ್ನು ಜಗತ್ತಿನ ಹಲವು ರಾಷ್ಟ್ರಗಳಿಗೆ ಸರಬರಾಜು ಮಾಡುವುದು ನಮ್ಮ ಮೈಸೂರಿನ ಹೆಚ್ಚುಗಾರಿಕೆ. ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಇದೀಗ ಗ್ರಾಮ ಪಂಚಾಯಿತಿ ಚುನಾವಣೆಗೂ ಇಂಕ್ ಸರಬರಾಜು ಮಾಡಿದ್ದು, 1ನೇ ಹಂತದ ಚುನಾವಣೆಗೆ ಇಂಕ್ ತಲುಪಿಸಿದ್ರೆ, 2ನೇ ಹಂತದ ಚುನಾವಣೆಗೆ ಪ್ಯಾಕಿಂಗ್ ಕಾರ್ಯವು ಮುಗಿದಿದೆ. …
Read More »