ಬೆಂಗಳೂರು : ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರ್ ಬಿದರಿ ಇ ಮೇಲ್ ಐಡಿಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು, ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. ದುಷ್ಕರ್ಮಿಗಳು ಶಂಕರ್ ಬಿದರಿ ಅವರ ಇ ಮೇಲ್ ಐಡಿಯನ್ನು ಹ್ಯಾಕ್ ಮಾಡಿ ಬಿದರಿ ಸ್ನೇಹಿತರಿಗೆ ಮೆಸೇಜ್ ಮಾಡಿ ಹಣ ಕೇಳಿದ್ದಾರೆ. ಇದನ್ನು ನಂಬಿದ ಬಿದರಿ ಅವರ ಸ್ನೇಹಿತರೊಬ್ಬರು 25 ಸಾವಿರ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಹಣ ವರ್ಗಾವಣೆ ಮಾಡಿದ ಬಳಿಕ ಶಂಕರ್ …
Read More »ಸಿಹಿ ಕೊಟ್ಟು ಶುಭ ಕೋರಿದ ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು. ಕೆಎಂಎಫ್ ಅಧ್ಯಕ್ಷ ಹಾಗೂ ಗೋಕಾಕ ತಾಲುಕಿನ ಅರಭಾವಿ ವಿಧಾನಸಭಾ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟು ಹಬ್ಬದ ನಿಮಿತ್ತ ಶುಭ ಕೋರಿದರು. ಕೆಎಂಎಫ್ನ ಸಿಹಿ ಪದಾರ್ಥಗಳನ್ನು ತಿನ್ನಿಸುವ ಮೂಲಕ ಬಾಲಚಂದ್ರ ಜಾರಕಿಜೊಳಿ ಅವರು ಸಿಎಂ ಯಡಿಯೂರಪ್ಪ ಅವರಿಗೆ ಶತಾಯುಷಿ ಆಗಲೆಂದು ಹಾರೈಸಿದರು.
Read More »ವಿಧಾನಪರಿಷತ್ತಿನಲ್ಲಿ ಬಹುತೇಕ ಸಿಸಿಟಿವಿಗಳು ಕಾರ್ಯನಿರ್ವಹಿಸದಿರುವುದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ನೂತನ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಬಹುತೇಕ ಸಿಸಿಟಿವಿಗಳು ಕಾರ್ಯನಿರ್ವಹಿಸದಿರುವುದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ನೂತನ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು, ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆಂದು ತಿಳಿದುಬಂದಿದೆ. ವಿಧಾನಪರಿಷತ್ ಕಾರ್ಯದರ್ಶಿಗಳಿಗೆ ಈ ಕುರಿತು ಪತ್ರ ಬರೆದಿರುವ ಹೊರಟ್ಟಿಯವರು, ಸಚಿವಾಲಯದಲ್ಲಿ ಅಳವಡಿಸಲಾಗಿರುವ ಹಲವು ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವುಗಳನ್ನು ಉದ್ದೇಶಪೂರ್ವಕವಾಗಿ ಕೆಲವರು ಹಾಳು ಮಾಡುತ್ತಿರುವ ದೂರುಗಳು ಬರುತ್ತಿವೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆಂದು ತಿಳಿದುಬಂದಿದೆ. ವಿಧಾನಪರಿಷತ್ ಕಟ್ಟಡದಲ್ಲಿ ಒಟ್ಟಾರೆ 36 …
Read More »ಪಂಚ ರಾಜ್ಯ ಚುನಾವಣೆಗೆ ದಿನ ನಿಗದಿ: ಕರ್ನಾಟಕದ ಉಪಚುನಾವಣೆ ಯಾವಾಗ?
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಶುಕ್ರವಾರ (ಫೆ.26) ದಂದು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳಿಗೆ ಚುನಾವಣೆ ದಿನಾಂಕ ಪ್ರಕಟವಾಗಿದೆ. ಮಾರ್ಚ್ 27ರಿಂದ ಏ.29ರವರೆಗೆ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಆದರೆ ಬಹು ನಿರೀಕ್ಷಿತ ರಾಜ್ಯದ ಉಪಚುನಾವಣೆಯ ದಿನಾಂಕ ಮಾತ್ರ ನಿಗದಿಯಾಗಿಲ್ಲ. ವಿಜಯಪುರ ಜಿಲ್ಲೆಯ ಸಿಂದಗಿ, ಬೀದರ್ ಜಿಲ್ಲೆಯ ಬಸವ ಕಲ್ಯಾಣ, ರಾಯಚೂರು ಜಿಲ್ಲೆಯ ಮಸ್ಕಿ ವಿಧಾನ …
Read More »ವಿಧಾನಪರಿಷತ್ ಸಚಿವಾಲಯದ ನೌಕರರಿಗೆ ಡ್ರೆಸ್ ಕೋಡ್ ಜಾರಿ
ಬೆಂಗಳೂರು,ಫೆ.27- ವಿಧಾನಪರಿಷತ್ ಸಚಿವಾಲಯದ ನೌಕರರಿಗೆ ಡ್ರೆಸ್ ಕೋಡ್ ಜಾರಿಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ. ಡಿ-ದರ್ಜೆ ನೌಕರರಿಗೆ ಡ್ರೆಸ್ ಕೋಡ್ ಜಾರಿಗೊಳಿಸಲಾಗಿದೆ. ಡಿ-ದರ್ಜೆಯ ಪುರುಷ ನೌಕರರಿಗೆ ಬಿಳಿ ಬಣ್ಣದ ಡ್ರೆಸ್‍ಡಿ-ದರ್ಜೆಯ ಮಹಿಳಾ ನೌಕರರಿಗೆ ಮೆರೂನ್ ಡ್ರೆಸ್‍ಧರಿಸುವಂತೆ ಸೂಚನೆ ನೀಡಲಾಗಿದೆ. ಡಿ ದರ್ಜೆಯ ನೌಕರರು ಸೂಚಿಸಿದ ಸಮವಸ್ತ್ರಗಳನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದ್ದು, ಚಾಲಕರೂ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಈ ಸಂಬಂಧ ಪರಿಷತ್ ಅೀನ ಕಾರ್ಯದರ್ಶಿ ಎಸ್.ಜಯಂತಿ ಡ್ರೆಸ್ ಕೋಡ್ …
Read More »ಹುಟ್ಟುಬ್ಬದ ಸಂಭ್ರಮದಲ್ಲಿರುವ ‘ರಾಜಾಹುಲಿ’ಯನ್ನು ಕೊಂಡಾಡಿದ ಮೋದಿ, ಷಾ
ಬೆಂಗಳೂರು, ಫೆ.27 (ಪಿಟಿಐ)- ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖ ನಾಯಕರು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 78ನೇ ವರ್ಷಕ್ಕೆ ಕಾಲಿಡುತ್ತಿರುವುದನ್ನು ಸ್ವಾಗತಿಸಿ, ಜನ್ಮದಿನದ ಶುಭಾಶಯವನ್ನು ಕೋರಿದರು. ಶನಿವಾರ ಟ್ವೀಟರ್‍ನಲ್ಲಿ ಪ್ರಧಾನಿ ಅವರು, ಕರ್ನಾಟಕ ಸಿಎಂ-ಬಿಎಸ್‍ವೈಬಿಜೆಪಿ ಜೀ ಅವರ ಜನ್ಮದಿನದಂದು ಶುಭಾಶಯ. ಯಡಿಯೂರಪ್ಪ ಅವರು ನಮ್ಮ ಒಬ್ಬ ಅನುಭವಿ ನಾಯಕರಲ್ಲೊಬ್ಬರು, ಬಡವರ ಏಳಿಗೆ ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು. …
Read More »ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್
ಬೆಂಗಳೂರು: ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ಮತ್ತೆ ಒಂದು ತಿಂಗಳವರೆಗೆ ವಿಸ್ತರಿಸಲಾಗಿದೆ. ಕೆಎಸ್‌ಆರ್ಟಿಸಿ ಬಸ್ ಗಳಲ್ಲಿ ವಿದ್ಯಾರ್ಥಿಗಳು 2019 – 20 ನೇ ಸಾಲಿನ ಬಸ್ ಪಾಸ್ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಫೆಬ್ರವರಿ 28 ರ ವರೆಗೆ ಕಳೆದ ಶೈಕ್ಷಣಿಕ ಸಾಲಿನ ಬಸ್ ಪಾಸ್ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಇದನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಳೆದ ವರ್ಷದ ಪಾಸ್ ಹಾಗೂ …
Read More »ಯುಪಿಎಸ್‌ಸಿ ಮಾದರಿಯಲ್ಲಿಯೇ ಕೆಪಿಎಸ್‌ಸಿ ಪರೀಕ್ಷೆ!
ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆಯಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆಗಳ ಮಾದರಿಯ ಭದ್ರತಾ ವ್ಯವಸ್ಥೆ ಮಾಡಿಕೊಂಡಿದೆ! ಜ. 24ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣಕ್ಕೆ ಮುಂದೂಡಲಾಗಿದ್ದು, ಭಾನುವಾರ (ಫೆ. 28) ನಡೆಯಲಿದೆ. 1,253 ಎಫ್‌ಡಿಎ ಹುದ್ದೆಗಳಿಗೆ 3.74 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ರಾಜ್ಯದಾದ್ಯಂತ 1,057 ಕೇಂದ್ರಗಳಲ್ಲಿ ಪರೀಕ್ಷೆ …
Read More »ಜಲ ವಿವಾದ ಇತ್ಯರ್ಥ. 26 ರಂದು ಉನ್ನತ ಮಟ್ಟದ ಸಭೆ
ಬೆಂಗಳೂರು. ಕರ್ನಾಟಕ ರಾಜ್ಯದ ನೀರಾವರಿ ಯೋಜನೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ, ಅಂತರ ರಾಜ್ಯ ಜಲವಿವಾದಗಳು, ಸರ್ವೋಚ್ಚ ನ್ಯಾಯಾಲಯದಲ್ಲಿರುವ ದಾವೆಗಳ ಕುರಿತಂತೆ ಉನ್ನತ ಮಟ್ಟದ ಸಭೆ ನಾಳೆ (ಫೆ.26) ಬೆಳಿಗ್ಗೆ ೧೧ ಕ್ಕೆ ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ನಡೆಯಲಿದೆ. ಈ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಹಿಸವರು. ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ …
Read More »ಸೈಬರ್ ಲೋಕದಲ್ಲಿ ‘ಬೆತ್ತಲೆ’ ಬ್ಲ್ಯಾಕ್‌ಮೇಲ್
ಬೆಂಗಳೂರು: ಅವರೊಬ್ಬ ಗ್ರಾನೈಟ್ ಉದ್ಯಮಿ. ಯುವತಿ ಹೆಸರಿನಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ, ಆಕೆಯ ಗುಂಗಿನಲ್ಲೇ ದಿನ ಕಳೆಯಲಾರಂಭಿಸಿದ್ದವರು. ಅಂದು ರಾತ್ರಿ ಏಕಾಏಕಿ ವಿಡಿಯೊ ಕರೆ ಮಾಡಿ ಸಲುಗೆಯಿಂದ ಮಾತನಾಡಿದ್ದ ಯುವತಿ, ‘ನಿಮ್ಮ ದೇಹ ನೋಡಬೇಕು’ ಎಂದು ಹೇಳಿ ಉದ್ಯಮಿ ಬಟ್ಟೆ ಬಿಚ್ಚಿಸಿ ಬೆತ್ತಲಾಗಿಸಿದ್ದಳು. ಬೆತ್ತಲೆ ದೃಶ್ಯವನ್ನು ಸದ್ದಿಲ್ಲದೇ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ಮರುದಿನದಿಂದಲೇ ಉದ್ಯಮಿಯನ್ನು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದಳು. ಇದು ಗ್ರಾನೈಟ್ ಉದ್ಯಮಿಯೊಬ್ಬರ ಕಥೆಯಲ್ಲ. ಕೆಲ ಗಣ್ಯರು, ಕೆಲ ಉದ್ಯಮಿಗಳು, ಕೆಲ …
Read More »