Breaking News

ಬೆಂಗಳೂರು

ಯಾರಿಗೆ ಎಲ್ಲಿ ಅನುಕೂಲವಾಗುತ್ತೋ ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ: ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೊನಾ ಮೂರನೇ ಹಂತದ ಲಸಿಕೆ ನೀಡಿಕೆ ಆರಂಭವಾಗಿದೆ. ಎಲ್ಲರೂ ಲಸಿಕೆ ಪಡೆಯುವುದು ಮುಖ್ಯ. ಹೀಗಾಗಿ ಯಾರು ಯಾರು ಎಲ್ಲೆಲ್ಲಿ ಅನುಕೂಲ ಆಗುತ್ತೋ ಅಲ್ಲಿ ಲಸಿಕೆ ಪಡೆದುಕೊಳ್ಳಲಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಇನ್ನೆರಡು ದಿನಗಳಲ್ಲಿ ನಾನೂ ಕೂಡ ಲಸಿಕೆ ಹಾಕಿಸಿಕೊಳ್ಳಲಿದ್ದೇನೆ. ಮನೇಲಿ ಹಾಕಿಸಿಕೊಳ್ಳಬೇಕಾ ಅಥವಾ ಆಸ್ಪತ್ರೆಯಲ್ಲಿ ಹಾಕಿಸಿಕೊಳ್ಳಬೇಕಾ ಎಂದು ನೋಡುತ್ತೇನೆ ಎಂದರು. ಇದೇ ವೇಳೆ ನಾನು ರಾಘವೇಂದ್ರ ಸ್ವಾಮಿಗಳ ಭಕ್ತ. ಹಾಗಾಗಿಯೇ …

Read More »

ವಿದ್ಯಾರ್ಥಿನಿಯರ ಜೊತೆ ನೃತ್ಯ ಮಾಡಿದ ರಾಹುಲ್​ ಗಾಂಧಿ

ಕಾಂಗ್ರೆಸ್​ ನಾಯಕ ಹಾಗೂ ಸಂಸದ ರಾಹುಲ್​ ಗಾಂಧಿ ದಿನಕ್ಕೊಂದು ವಿಚಾರಕ್ಕಾಗಿ ಟ್ರೋಲ್​ ಆಗ್ತಾನೇ ಇರ್ತಾರೆ. 50 ವರ್ಷದ ರಾಹುಲ್​ ಗಾಂಧಿ ಮೀನುಗಾರರ ಜೊತೆ ಈಜಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿತ್ತು. ಇದಾದ ಬಳಿಕ ಅವರು ಟೀ ಶರ್ಟ್​ ಧರಿಸಿ ಸಮುದ್ರದಲ್ಲಿ ಈಜಾಡುತ್ತಿರುವ ಫೋಟೋ ಕೂಡ ಸುದ್ದಿ ಮಾಡಿತ್ತು. ಇದೀಗ ರಾಹುಲ್​ ಗಾಂಧಿಯ ಮತ್ತೊಂದು ವಿಡಿಯೋ ಸಾಕಷ್ಟು ಸುದ್ದಿಯಲ್ಲಿದೆ. ಇದರಲ್ಲಿ ತಮಿಳುನಾಡಿನ ಮುಲ್ಗಮುಡುಬನ್​​ನ ಸೇಂಟ್​ ಜೋಸೆಫ್​ ಮ್ಯಾಟ್ರಿಕ್​ ಶಾಲೆಯ …

Read More »

ಬೆಂಗಳೂರಲ್ಲಿಂದು ಅಂಗನವಾಡಿ, ಸಾರಿಗೆ ಹಾಗೂ ಕಾಂಗ್ರೆಸ್ ಪ್ರತಿಭಟನೆಗಳ ಅಬ್ಬರ

ಬೆಂಗಳೂರು,ಮಾ.2- ದಿನೇ ದಿನೇ ಹೆಚ್ಚಾಗುತ್ತಿರುವ ದಿನಸಿ ಪದಾರ್ಥಗಳ ದರ, ತೈಲ ಹಾಗೂ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ಘಟಕ ಪ್ರತಿಭಟನೆ ನಡೆಸಿದರೆ ಸಾರಿಗೆ ನೌಕರರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕದವರು ರ್ಯಾಲಿ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ತಮ್ಮ 9 ಬೇಡಿಕೆಗಳನ್ನು …

Read More »

ಒಕ್ಕಲಿಗರ ಮೀಸಲಾತಿಗಾಗಿ ಬೀದಿಗಿಳಿದು ಹೋರಾಡಲ್ಲ : ನಿರ್ಮಲಾನಂದನಾಥ ಶ್ರೀ

ಬೆಂಗಳೂರು,ಮಾ.2- ನಮ್ಮ ಸಮುದಾಯದ ಬಡವರ ಅಭಿವೃದ್ಧಿಗಾಗಿ ಮೀಸಲಾತಿ ಅಗತ್ಯವಿದೆ. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡುತ್ತೇವೆ ಹೊರತು ಬೀದಿಗಿಳಿದು ಹೋರಾಟ ಮಾಡುವ ಅಗತ್ಯ ಸದ್ಯಕ್ಕಿಲ್ಲ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಕುವೆಂಪು ಸಭಾಂಗಣದಲ್ಲಿ ಒಕ್ಕಲಿಗರ ಮೀಸಲಾತಿ-ಸಮುದಾಯದ ಜೀವಶಕ್ತಿ ಕುರಿತು ನಡೆದ ಬೃಹತ್ ಸಭೆಯಲ್ಲಿ ಶ್ರೀಗಳು ಮಾತನಾಡಿದರು. ನಮ್ಮದು ಸುಸಂಸ್ಕøತ ಮತ್ತು ನಾಗರಿಕ ಪ್ರಜ್ಞೆ ಇರುವ ಸಮುದಾಯ. ಬೀದಿಗಿಳಿದು …

Read More »

ಸಿಇಟಿಗೆ ಪಠ್ಯಕಡಿತ, ನೀಟ್‌ಗೇಕಿಲ್ಲ? ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಆತಂಕ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್‌, ಕೃಷಿ ವಿಜ್ಞಾನ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಶೇ.70ರಷ್ಟು ಪಠ್ಯಕ್ರಮದ ಆಧಾರದಲ್ಲೇ ನಡೆಯಲಿದೆ. ಆದರೆ ನೀಟ್‌ ಬರೆದು ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್‌ಗಳಿಗೆ ಸೇರಬೇಕೆಂದಿರುವ ವಿದ್ಯಾರ್ಥಿಗಳು ಶತ ಪ್ರತಿಶತ ಪಠ್ಯವನ್ನು ಅಧ್ಯಯನ ಮಾಡಬೇಕಾಗಿದೆ. ರಾಜ್ಯ ಸರಕಾರ ಪ್ರಸಕ್ತ ಸಾಲಿಗೆ ಅನ್ವಯವಾಗುವಂತೆ ಪಿಯುಸಿಗೆ ಶೇ. 30ರಷ್ಟು ಪಠ್ಯ ಕಡಿತ ಮಾಡಿದ್ದರೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತೆ …

Read More »

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2.74 ಕೋಟಿ ಮೌಲ್ಯದ 207 ಐಫೋನ್ ವಶ

ಬೆಂಗಳೂರು:ಯುಎಸ್ ದಂಪತಿಯಿಂದ ಅಪಾರ ಮೊತ್ತದ 207 ಐಫೋನ್ ಗಳನ್ನು ವಶಪಡಿಸಿಕೊಂಡಿರವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು. ಈವರೆಗೂ ವಶಪಡಿಸಿಕೊಂಡಿರುವ ಫೋನ್ ಸಂಬಂಧಿ ಪ್ರಕರಣಗಳಲ್ಲಿ ಇದು ಅತಿ ದೊಡ್ಡ ಪ್ರಕರಣ ಎಂದು ಪರಿಗಣಿಸಲಾಗಿದ್ದು, ಇದರಲ್ಲಿ ಫೋನ್ಗಳು ಐಫೋನ್ 12 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳಾಗಿದ್ದವು ಮತ್ತು ಅವುಗಳ ಒಟ್ಟು ಮೌಲ್ಯ 2, 74,19,400 ರೂ. ಎಂದು ಹೇಳಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ, ರಸ್ತೆ ಮೂಲಕ ಹೈದರಾಬಾದ್‌ಗೆ ಸಾಗಿಸಲು ವಿಮಾನ …

Read More »

ಇಂದು ಮತ್ತೆ ಅಡುಗೆ ಅನಿಲ ದರದಲ್ಲಿ 25 ರೂ. ಏರಿಕೆ..!

ಬೆಂಗಳೂರು,ಮಾ.1-ಕಳೆದ ಎರಡು ತಿಂಗಳಿನಿಂದ ಸತತವಾಗಿ ಆರು ಬಾರಿ ಅಡುಗೆ ಅನಿಲ ದರ ಏರಿಕೆಯಾಗಿದೆ. ಇಂದು ಮತ್ತೆ 25 ರೂ. ದರ ಹೆಚ್ಚಳವಾಗಿದ್ದು ಇದರಿಂದ ಜನಸಾಮಾನ್ಯರು ತತ್ತರಿಸುವಂತಾಗಿದೆ. ಇಂದು ಬೆಳಗ್ಗೆ ದರ ಏರಿಕೆ ಬಳಿಕ 14.2 ಕೆಜಿ ಸಿಲಿಂಡರ್‍ನ ದರ 822 ರೂ.ಆಗಿದೆ. ಎಲ್‍ಪಿಜಿ ದರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಪೆಟ್ರೋಲ್ ಡೀಸೆಲ್ ದರದ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಗ್ಯಾಸ್ ಸಿಲಿಂಡರ್‍ನ ಬೆಲೆ ಏರಿಕೆ ತೀವ್ರ ಆಘಾತ ಮೂಡಿಸಿದೆ. ಅಡುಗೆ …

Read More »

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಬೆಂಗಳೂರು,ಮಾ.1- ವೇತನ ಹೆಚ್ಚಳ ಮಾಡುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳದ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು. ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಸ್ಥಿತಿ ತೀವ್ರ ಸಂಕಷ್ಟದಲ್ಲಿದೆ. ಇವರಿಗೆ ಪಿಂಚಣಿ ಮತ್ತು ವೈದ್ಯಕೀಯ ಸವಲತ್ತನ್ನು ಕೂಡಲೇ ಜಾರಿಗೆ ತರಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿ.ಆರ್.ಶಿವಶಂಕರ್, ಬಿ.ನಾಗರತ್ನ ಒತ್ತಾಯಿಸಿದರು. ನಿವೃತ್ತ ಕಾರ್ಯಕರ್ತೆಯರಿಗೆ ಹಿಂದೆ ನೀಡುತ್ತಿದ್ದ ಇಡಿಗಂಟನ್ನು ನಿಲ್ಲಿಸಲಾಗಿದೆ. ಅವರಿಗೆ ನಿವೃತ್ತ ವೇತನವನ್ನೂ ನೀಡುತ್ತಿಲ್ಲ. ಈ ಕೂಡಲೇ ಕನಿಷ್ಠ ವೇತನ ನೀಡಬೇಕೆಂದು ಆಗ್ರಹಿಸಿದರು. …

Read More »

ದಕ್ಷಿಣದ ಎರಡು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ: ಕರ್ನಾಟಕದ ಬಿಜೆಪಿ ನಾಯಕರು ಪ್ರಚಾರ, ಕಾರ್ಯತಂತ್ರದಲ್ಲಿ ಬ್ಯುಸಿ

ಬೆಂಗಳೂರು: ಕರ್ನಾಟಕದ ಬಿಜೆಪಿ ನಾಯಕರು ಈಗ ವಿಧಾನಸಭೆ ಚುನಾವಣೆ ಏರ್ಪಡುವ ದಕ್ಷಿಣದ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚುನಾವಣಾ ರ್ಯಾಲಿಗಳಿಗೆ ಕಾರ್ಯತಂತ್ರ ರೂಪಿಸುವುದರಿಂದ ಹಿಡಿದು ಸೀಟು ಹಂಚಿಕೆ, ರ್ಯಾಲಿಗಳನ್ನು ಆಯೋಜಿಸುವ ಬಗ್ಗೆ ಮತ್ತು ಸಾರ್ವಜನಿಕ ಸಮಾವೇಶಗಳನ್ನು ನಿಗದಿಪಡಿಸುವ ಕುರಿತು ಪಕ್ಷದಲ್ಲಿ ಕಾರ್ಯನಿರತರಾಗಿದ್ದಾರೆ. ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಸರ್ಕಾರದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹರಿಹಾಯುತ್ತಿದ್ದರೆ, ತಮಿಳು ನಾಡಿನ ವಿಧಾನ ಸಭೆ ಚುನಾವಣೆಯ ಪ್ರಚಾರದ ಉಸ್ತುವಾರಿಯನ್ನು …

Read More »

ಬಸ್ ಸಂಚಾರ ಸ್ತಬ್ಧವಾದ ಸಾಧ್ಯತೆ ಇದೆ…?

ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಬಸ್ ಸಂಚಾರ ಸ್ತಬ್ಧವಾದ ಸಾಧ್ಯತೆ ಇದೆ. ಸಾರಿಗೆ ನೌಕರರ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮತ್ತೆ ಬೀದಿಗೆ ಇಳಿಯಲು ನೌಕರರು ನಿರ್ಧರಿಸಿದ್ದಾರೆ. ಅದೇ ರೀತಿ ರಾಜ್ಯದ ವಿವಿಧ ಕಡೆಗಳಲ್ಲಿ ಬಸ್ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸರ್ಕಾರಕ್ಕೆ ನೀಡಿದ್ದ ಡೆಡ್ಲೈನ್ ಮುಗಿಯುತ್ತಿದ್ದಂತೆ ನೌಕರರು ಮತ್ತೆ ಮುಷ್ಕರ ನಡೆಸಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಗರಂ ಆಗಿದ್ದು ಮುಷ್ಕರಕ್ಕೆ ಮುಂದಾಗಿದ್ದಾರೆ. ಸಾರಿಗೆ …

Read More »