Breaking News

ಬೆಂಗಳೂರು

ಬಿಡುಗಡೆ ಆಗಲು ತಯಾರಿವೆಯಂತೆ 23 ಸಿ.ಡಿಗಳು: ಬಸನಗೌಡ ಪಾಟೀಲ್

ಬೆಂಗಳೂರು: ಬಿಡುಗಡೆ ಆಗಲು 23 ಸಿ.ಡಿಗಳು ತಯಾರಿದ್ದು, ಇವುಗಳಲ್ಲಿ ಅಪ್ಪ-ಮಕ್ಕಳ ಸಿಡಿ ಕೂಡ ಇದೇ ಅಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ. ಅವರು ಇದೇ ವೇಳೆ ನೋಡ್ತಾ ಇರೀ ಒಂದರ ಹಿಂದೆ ಒಂದು ಸಿಡಿ ಗಳು ಬರ್ತಾವೆ ಅಂಥ ಹೇಳಿರುವ ಅವರು ಸಿ.ಡಿ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮಾಡುವ ಎರಡು ಪಕ್ಷಗಳಿದ್ದಾವೆ, ಇದಲ್ಲದೇ ನನ್ನ ಬಳಿ ಯಾವುದೇ ಸಿಡಿಗಳು ಇಲ್ಲ, ಆದರೆ ಸತ್ಯ ಯಾವತ್ತು …

Read More »

ಮುಂಬೈಗೆ ಕರೆದೊಯ್ದವರೇ ಸಿ.ಡಿ ಮಾಡಿದ್ರಾ: ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು: ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಮುಂಬೈಗೆ ಕರೆದುಕೊಂಡು ಹೋದವರೇ ಇದನ್ನೆಲ್ಲಾ ಮಾಡಿದರೋ ಎಂದು ಪ್ರಶ್ನಿಸಿದ್ದಾರೆ. ‘ಮುಂಬೈಗೆ ಹೋದ 12 ಮಂದಿಯದ್ದೂ ಸಿ.ಡಿಗಳಿವೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಮುಂಬೈಗೆ ಕರೆದುಕೊಂಡು ಹೋದವರೇ ಇದನ್ನೆಲ್ಲಾ ಮಾಡಿದರೋ? ಸಿನಿಮಾ ರಂಗದ ಪರಿಣಿತರೂ ಜತೆಯಲ್ಲೇ ಇದ್ದರು. ಅವರೇನಾದರೂ ಮಾಡಿರಬಹುದಾ’ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, …

Read More »

ಎಸಿಬಿ ಅಧಿಕಾರಿಗಳಿಂದ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸೈಮನ್ ಬಂಧನ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ದಾಳಿಗೊಳಗಾಗಿದ್ದ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ಟರ್ ಸೈಮನ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಮಂಗಳವಾರ ವಿಕ್ಟರ್ ಸೈಮನ್ ಅವರ ಮನೆ ಮತ್ತು ಇತರ ಕೆಲವು ಸ್ಥಳಗಳ ಮೇಲೆ ಎಸಿಬಿ ದಾಳಿ ನಡೆದಿತ್ತು. ಮನೆಯಲ್ಲಿ ₹1 ಕೋಟಿ ಮೌಲ್ಯದ ಬಾಂಡ್ ಪೇಪರ್ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿತ್ತು. ‘ಇನ್ನೂ ಕೆಲವು …

Read More »

ಸದನದಲ್ಲಿ ಆಡಳಿತ ಪಕ್ಷದ ಶಾಸಕರಿಂದಲೇ ಮೀಸಲಾತಿ ಕದನ

ಬೆಂಗಳೂರು, ಮಾ.10- ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವ ಕುರಿತಾಗಿ ಆಡಳಿತ ಪಕ್ಷದ ಸದಸ್ಯರ ನಡುವೆಯೇ ವಾಗ್ವಾದ ನಡೆಯಿತು. ಶಾಸಕ ಬಸವನಗೌಡ ಪಾಟೀಲ್ ವಿಷಯ ಪ್ರಸ್ತಾಪಿಸಿ ನಾವು ಅನೇಕ ದಿನಗಳಿಂದ ಮೀಸಲಾತಿ ಗಾಗಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರದಿಂದ ನಮಗೆ ಯಾವುದೇ ರೀತಿಯ ಸ್ಪಷ್ಟ ಭರವಸೆ ಸಿಗುತ್ತಿಲ್ಲ. ಮೀಸಲಾತಿ ಕೊಡುತ್ತೀರೋ, ಇಲ್ಲವೋ ಎಂಬುದನ್ನು ಸದನದಲ್ಲೇ ಸ್ಪಷ್ಟವಾಗಿ ತಿಳಿಸಿ ಎಂದು ಒತ್ತಾಯಿಸಿದರು. ಸದನದಲ್ಲಿ ಇಂದು ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದಿದ್ದೀರಿ. ಮುಖ್ಯಮಂತ್ರಿಗಳು …

Read More »

ರಮೇಶ್ ಜಾರಕಿಹೊಳಿ ಸಿಡಿ ಬಗ್ಗೆ ಹೊಸ ಬಾಂಬ್ ಸಿಡಿಸಿದ ಸಚಿವ ಸೋಮಶೇಖರ್

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ನೇರವಾಗಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಟಿ.ಸೋಮಶೇಖರ್, ರಮೇಶ್ ಜಾರಕಿಹೊಳಿ ಸಿಡಿ ಮಾಡಿದ್ದು ಕಾಂಗ್ರೆಸ್ ನವರೇ. ನಾನೂ ಕೂಡ ಕಾಂಗ್ರೆಸ್ ನಲ್ಲಿ 20 ವರ್ಷಗಳ ಕಾಲ ಇದ್ದೆ. ಹಾಗಾಗಿ ಕಾಂಗ್ರೆಸ್ ನವರು ಏನೆಲ್ಲಾ ಮಾಡುತ್ತಾರೆ ಎಂಬುದು ನನಗೂ ಗೊತ್ತು. ಇಂಥ ಮನೆ ಹಾಳ ಕೆಲಸ ಮಾಡುವುದು ಅವರೇ ಎಂದು ಹೇಳಿದ್ದಾರೆ. ಸಿಡಿ ಕೇಸ್ ನ್ನು …

Read More »

ರಮೇಶ್ ಜಾರಕಿಹೊಳಿ ಖಾತೆಯ ಮೇಲೆ ಎಲ್ಲರ ಕಣ್ಣು..

ರಮೇಶ ಜಾರಕಿಹೊಳಿಯಿಂದ ತೆರವಾದ ಜಲಸಂಪನ್ಮೂಲ ಖಾತೆ ಮೇಲೆ ಹಲವು ಸಚಿವರ ಕಣ್ ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ರಾಜೀನಾಮೆಯಿಂದ ತೆರವಾಗಿರುವ ಜಲಸಂಪನ್ಮೂಲ ಖಾತೆ ಮೇಲೆ ಹಲವು ಸಚಿವರು ಕಣ್ಣಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಂತೆ ಬೃಹತ್ ನೀರಾವರಿ ಖಾತೆ ಮೇಲೆ ಮೊದಲಿನಿಂದಲೂ ಕಣ್ಣಿಟ್ಟಿದ್ದ ಆಕಾಂಕ್ಷಿಗಳು ಸಿಎಂ ಬಳಿ ತಮಗೇ ಖಾತೆ ನೀಡುವಂತೆ ಲಾಬಿ ನಡೆಸಿದ್ದಾರೆ. ಪ್ರಬಲ ಆಕಾಂಕ್ಷಿಗಳು: ಮೊದಲಿನಿಂದಲೂ ನೀರಾವರಿ ಖಾತೆ ಮೇಲೆ ಕಣ್ಣಿಟ್ಟಿದ್ದ …

Read More »

ಬೆಳಗಾವಿ ಗಡಿಯಲ್ಲಿ ಜಾರಿಯಾಗದ ಕಟ್ಟುನಿಟ್ಟಿನ ಕ್ರಮ; ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಕೊರೋನಾತಂಕ

ಬೆಳಗಾವಿ: ಸರ್ಕಾರ ಕೋವಿಡ್ ಎರಡನೇ ಅಲೆಯಿಂದ ಜನರನ್ನ ರಕ್ಷಣೆ ಮಾಡಬೇಕು ಅಂತ ಟಫ್ ರೂಲ್ಸ್ ಜಾರಿಗೆ ತಂದಿದೆ.‌ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಎಂಟ್ರಿಯಾಗ ಬೇಕಾದರೆ ಖಾಸಗಿ ಸರ್ಕಾರಿ ವಾಹನಗಳ ಮೂಲಕ ಬರುವವರು ಕೈಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ಹಿಡಿದೇ ಬರಬೇಕು ಅಂತಿದೆ ಆದರೆ ಕರ್ನಾಟಕದ ಗಡಿಯಲ್ಲಿ ಕಟ್ಟುನಿಟ್ಟಾದ ಕ್ರಮ ಜಾರಿಗೆ ಬರ್ತಿಲ್ಲಾ. ಬಾರ್ಡರ್ ನಲ್ಲಿ ಚೆಕ್ ಪೊಸ್ಟ್ ನಿರ್ಮಾಣ ಆಗಿದೆ ಖಾಸಗಿ ಕಾರಿನಲ್ಲಿ ಬರೋರನ್ನ ಮಾತ್ರ ತಪಾಸಣೆ ಮಾಡುತ್ತಿರುವ ಪೊಲೀಸರು ಬೈಕ್ …

Read More »

ಉಚಿತ ಪಡಿತರ ಕುರಿತು ಸಚಿವ ಉಮೇಶ್ ಕತ್ತಿ ಮಹತ್ವದ ಹೇಳಿಕೆ

ಬೆಂಗಳೂರು,ಮಾ.9- ಪಡಿತರ ಅಂಗಡಿಗಳ ಮೂಲಕ ಆದ್ಯತಾ ಪಡಿತರಚೀಟಿಗಳಿಗೆ ಸದ್ಯಕ್ಕೆ ಉಚಿತವಾಗಿ ಅಕ್ಕಿ, ಗೋಧಿ ಹಾಗೂ ಆಹಾರ ಧಾನ್ಯವನ್ನು ನೀಡಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಇದಕ್ಕೆ ಹಣ ಪಡೆದು ಗುಣಮಟ್ಟದ ಆಹಾರ ಒದಗಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.ವಿಧಾನಪರಿಷತ್‍ನ ಪ್ರಶ್ನೋತ್ತರ ಅವಯಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 10,90,951 ಅಂತ್ಯೋದಯ ಅನ್ನ ಪಡಿತರ ಚೀಟಿಗಳು, 1,16,83,545 ಆದ್ಯತಾ ಪಡಿತಚೀಟಿಗಳು ಸೇರಿ …

Read More »

: ಕಂದನ ಉಳಿಸು ಕರ್ನಾಟಕ ಅಭಿಯಾನಕ್ಕೆ ಸ್ಪಂದನೆ; ಬಜೆಟ್‌ನಲ್ಲಿ 10ಕೋಟಿ ರೂಪಾಯಿ ಮೀಸಲು

ಬೆಂಗಳೂರು: 11 ತಿಂಗಳ ಕಂದಮ್ಮನಿಗೆ ಆಪತ್ತು ಎದುರಾಗಿದೆ. ಹೆತ್ತವರಿಗೆ ಖುಷಿಯೇ ಇಲ್ಲದಂತಾಗಿದೆ. ಮಗುವಿನ ಮುಖ ನೋಡಿ ನಿತ್ಯ ಕಣ್ಣೀರಿಡುವಂತಾಗಿದೆ. ಯಾಕಂದ್ರೆ ಇಡೀ ವೈದ್ಯಲೋಕ.. ಇಡೀ ಜಗತ್ತೇ ದಂಗಾಗುವಂಥಾ ಸಮಸ್ಯೆಗೆ ತುತ್ತಾಗಿದೆ. 11 ತಿಂಗಳ ಕಂದ ಜನೀಶ್. ಸಂಜೀವಿನಿ ನಗರದ ನಿವಾಸಿಗಳಾಗಿರುವ ನವೀನ್​ಕುಮಾರ್-ಜ್ಯೋತಿ ದಂಪತಿ ಪುತ್ರ. ಕುಟುಂಬದ ಪರಿಸ್ಥಿತಿಯೂ ಅಷ್ಟೇನು ಚೆನ್ನಾಗಿಲ್ಲ. ಇಂಥಾದ್ರ ಮಧ್ಯೆ ಮಗುವಿಗೆ ಜೀನ್ ಸಮಸ್ಯೆ ಕಾಣಿಸಿಕೊಂಡಿದೆ. ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ (Spinal Muscular Atrophy) ಅಂದ್ರೆ, ಬೆನ್ನು …

Read More »

ಬಜೆಟ್​ನಲ್ಲಿ ಸಾರಿಗೆ ನೌಕರರ ಬೇಡಿಕೆಗಳಿಗೆ ಎಳ್ಳು ನೀರು ..?

ಬೆಂಗಳೂರು: ಮಾರ್ಚ್​ 8ರಂದು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಮಂಡಿಸಿದ ಬಜೆಟ್​ನಲ್ಲಿ ಪ್ರಸ್ತಾಪವೇ ಆಗದ 6 ನೇ ವೇತನ ಆಯೋಗ ವಿಚಾರಕ್ಕೆ ಸಂಬಂಧಿಸಿದಂತೆ. ಇದೇ ತಿಂಗಳ 16ನೇ ತಾರೀಕಿನಂದು ಮತ್ತೆ ಮುಷ್ಕರ ಕೈಗೊಳ್ಳುವಂತೆ ಸಾರಿಗೆ ನೌಕಕರು ಮುಂದಾಗಿದ್ದಾರೆ. ಈ ಕುರಿತಂತೆ ಇಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ಡಿಸೆಂಬರ್​ ತಿಂಗಳಿನಲ್ಲಿ ನಾಲ್ಕು ದಿನಗಳ ಕಾಲ ಸಾರಿಗೆ ನೌಕರರ ಮುಷ್ಕರ ನಡೆಸಲಾಗಿತ್ತು. …

Read More »