Breaking News

ಬೆಂಗಳೂರು

ಚಾಕುವಿನಿಂದ ಇರಿದು ಕಟ್ಟಡ ಕಾರ್ಮಿಕನ ಕೊಲೆ

ಬೆಂಗಳೂರು, ಏ.21- ನಿರ್ಮಾಣ ಹಂತದ ಕಟ್ಟಡ ಕಾರ್ಮಿಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಹುಬ್ಬಳ್ಳಿ ನಿವಾಸಿ ಪ್ರಕಾಶ್ (25) ಕೊಲೆಯಾದ ಕಾರ್ಮಿಕ. ತಿಂಡ್ಲು ಸಮೀಪದ ಸಪ್ತಗಿರಿ ಲೇಔಟ್‍ನಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಪ್ರಕಾಶ್ ಗಾರೆ ಕೆಲಸ ಮಾಡಿಕೊಂಡು ಈ ಜಾಗದಲ್ಲೇ ನಿರ್ಮಿಸಲಾಗಿದ್ದ ಲೇಬರ್ ಶೆಡ್‍ನಲ್ಲಿ ನೆಲೆಸುತ್ತಿದ್ದನು. ರಾತ್ರಿ ಪ್ರಕಾಶ್ ಹೊರಗೆ ಹೋಗಿ ಮನೆಗೆ ವಾಪಸಾಗುತ್ತಿದ್ದಾಗ ಶೆಡ್‍ನಿಂದ …

Read More »

ರಾಜ್ಯದಲ್ಲಿ ‘ಸಾರಿಗೆ ಬಸ್ ಸಂಚಾರ’ ಯಥಾಸ್ಥಿತಿಗೆ : ಇಂದು 1ಗಂಟೆ ವೇಳೆಗೆ ‘10,084 ಸಾರಿಗೆ ಬಸ್ ಸಂಚಾರ’ ಆರಂಭ

ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ಬಸ್ ಸಂಚಾರ ಕೂಡಲೇ ಆರಂಭಿಸುವಂತೆ ಹೈಕೋರ್ಟ್ ಮುಷ್ಕರ ನಿರತ ಸಾರಿಗೆ ನೌಕರರ ಕೂಟಕ್ಕೆ ನಿನ್ನೆ ನೋಟಿಸ್ ನೀಡಿದ ಪರಿಣಾಮ, ಇಂದು ಮಧ್ಯಾಹ್ನದ ವೇಳೆಗೆ ಸಾರಿಗೆ ಬಸ್ ಸಂಚಾರ ರಾಜ್ಯಾಧ್ಯಂತ ಯಥಾಸ್ಥಿತಿಯತ್ತೆ ದಾಪುಗಾಲಿಟ್ಟಿದೆ. ಮಧ್ಯಾಹ್ನ 1 ಗಂಟೆಯ ವೇಳೆ 10,084 ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿವೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ರಾಜ್ಯಾಧ್ಯಂತ 1 …

Read More »

ನೀವು ವಿಶೇಷ ಆರ್ಥಿಕ ನೆರವು ಕೊಡುವುದು ಬೇಡ, ನಮ್ಮ ನ್ಯಾಯಬದ್ಧ ಪಾಲನ್ನಷ್ಟಾದರೂ ನೀಡಿ ಪುಣ್ಯ ಕಟ್ಟಿಕೊಳ್ಳಿ.

ಬೆಂಗಳೂರು: ಕೊರೊನಾ ಸೋಂಕು ಏರಿಕೆ ಹಿನ್ನೆಲೆ ಇಂದು ದೇಶವನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ ಭಾಷಣದ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ.. ಮೋದಿ ಭಾಷಣ ‘ನಿಮ್ಮ ತಲೆ ಮೇಲೆ ನಿಮ್ಮ ಕೈ’ ಎಂಬ ಸಂದೇಶ ನೀಡಿದೆ ಎಂದು ವ್ಯಂಗ್ಯವಾಡಿದ್ದಾರೆ. ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಇದಕ್ಕೆ ನ್ಯಾಯಬದ್ಧವಾಗಿ ತೆರಿಗೆ ಪಾಲನ್ನು ನೀಡದಿರುವ ಕೇಂದ್ರ ಬಿಜೆಪಿ ಸರ್ಕಾರವೂ ಕಾರಣ …

Read More »

ಕುಟುಂಬಸ್ಥರೇ ಕೈಬಿಟ್ಟ ಸೋಂಕಿತನ ಮೃತದೇಹಕ್ಕೆ ಮುಸ್ಲಿಂ ಸಹೋದರರಿಂದ ಅಂತಿಮ ವಿಧಿ ವಿಧಾನ..!

ಕೊರೊನಾ ವೈರಸ್​​ನಿಂದ ಸಾವನ್ನಪ್ಪಿದರೆ ಮುಗೀತು. ಯಾವುದೇ ಧಾರ್ಮಿಕ ವಿಧಿ ವಿಧಾನ ಮಾಡೋದು ಹಾಗಿರಲಿ. ಮೃತ ವ್ಯಕ್ತಿಯ ಮುಖ ನೋಡೋಕೂ ಕೆಲವೊಮ್ಮೆ ಕುಟುಂಬಸ್ಥರಿಗೆ ಅವಕಾಶ ಸಿಗೋದಿಲ್ಲ. ಆದರೆ ತೆಲಂಗಾಣದಲ್ಲಿ ಇಬ್ಬರು ಮುಸ್ಲಿಂ ಸಹೋದರರು ಹಿಂದೂ ವ್ಯಕ್ತಿಯ ಮೃತದೇಹಕ್ಕೆ ಅಂತ್ಯಕ್ರಿಯೆ ನಡೆಸಿದ ಮಾನವೀಯ ಘಟನೆ ವರದಿಯಾಗಿದೆ. ಕಟಪಲ್ಲಿ ಎಂಬ ಗ್ರಾಮದಲ್ಲಿ ಕೊರೊನಾ ವೈರಸ್​ನಿಂದ ಬಲಿಯಾದ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯನ್ನ ಮುಸ್ಲಿಂ ಸಹೋದರರು ಮಾಡಿ ಮುಗಿಸಿದ್ದಾರೆ. ಮೃತ ವ್ಯಕ್ತಿಯ ಕುಟುಂಬಸ್ಥರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗದೇ ಇರೋದ್ರಿಂದ …

Read More »

ಇಂದು/ನಾಳೆಯಿಂದ ರಾಜ್ಯದ ಚಿತ್ರಮಂದಿರಗಳು ಬಂದ್ -ಚಲನಚಿತ್ರ ಪ್ರದರ್ಶಕರ ಸಂಘ

ಬೆಂಗಳೂರು: ಇಂದು ಅಥವಾ ನಾಳೆಯಿಂದ‌ ರಾಜ್ಯದ ಎಲ್ಲಾ ಚಿತ್ರಮಂದಿರಗಳನ್ನ ಬಂದ್ ಮಾಡ್ತೇವೆ ಅಂತಾ ಕರ್ನಾಟಕ ಚಲನಚಿತ್ರ ಪ್ರದರ್ಶಕ ಸಂಘದ ಅಧ್ಯಕ್ಷ ಕೆ.ವಿ ಚಂದ್ರಶೇಖರ್ ತಿಳಿಸಿದ್ದಾರೆ. ಸರ್ಕಾರದ ಹೊಸ ನಿಯಮದ ಅದೇಶಕ್ಕೂ ಮೊದಲೇ ಚಿತ್ರಮಂದಿರಗಳು ಬಂದ್ ಮಾಡಲು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ನಿರ್ಧರಿಸಿದೆ. ಈ ಬಗ್ಗೆ ನ್ಯೂಸ್​ಫಸ್ಟ್​ ಜೊತೆ ಮಾತನಾಡಿರುವ ಕೆ.ವಿ ಚಂದ್ರಶೇಖರ್.. ಇಂದು ಅಥವಾ ನಾಳೆಯಿಂದ‌ ರಾಜ್ಯದ ಎಲ್ಲಾ ಚಿತ್ರಮಂದಿರಗಳನ್ನ ಬಂದ್ ಮಾಡ್ತೇವೆ. ಮೇ ಅಂತ್ಯದವರೆಗೂ ಚಿತ್ರಮಂದಿರಗಳನ್ನು ಮುಚ್ಚಲು …

Read More »

ಐಪಿಎಲ್ 2021 : ಲೆಕ್ಕ ಸರಿ ಮಾಡುತ್ತಾ ಯಂಗ್ ಡೆಲ್ಲಿ..?

  ಬೆಂಗಳೂರು : ಐಪಿಎಲ್ ನ ಇಂದಿನ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಕಳೆದ ಬಾರಿಯ ಫೈನಲ್ ನಲ್ಲಿ ಡೆಲ್ಲಿಗೆ ಮುಂಬೈ ಸೋಲುಣಿಸಿತ್ತು. ಇವತ್ತಿನ ಪಂದ್ಯದಲ್ಲಿ ಗೆದ್ದು ಡೆಲ್ಲಿ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಾಗಿದೆ. ಹೆಡ್ ಟು ಹೆಡ್ ಐಪಿಎಲ್ ಇತಿಹಾಸದಲ್ಲಿ 28 ಬಾರಿ ಎರಡು ತಂಡಗಳು ಮುಖಾಮುಖಿಯಾಗಿದ್ದು, ಮುಂಬೈ 16 ಬಾರಿ ಗೆದ್ದಿದ್ದೇ ಡೆಲ್ಲಿ 12 ಬಾರಿ ಜಯ ಸಾಧಿಸಿದೆ. ಕಳೆದ ನಾಲ್ಕು …

Read More »

ರಾಜ್ಯದ ಎಲ್ಲಾ ಅಂಗನವಾಡಿಗಳಿಗೆ ವಿದ್ಯುತ್‌, ಫ್ಯಾನ್ ಒದಗಿಸಿ: ಹೈಕೋರ್ಟ್‌

ಬೆಂಗಳೂರು: ರಾಜ್ಯದ ಎಲ್ಲಾ 65,911 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಮತ್ತು ಫ್ಯಾನ್‌ಗಳನ್ನು ಒದಗಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. 33,164 ಅಂಗನವಾಡಿಗಳಿಗೆ ಮಾತ್ರ ವಿದ್ಯುತ್ ಸಂಪರ್ಕ, 26,560 ಅಂಗನವಾಡಿಗಳಿಗೆ ಫ್ಯಾನ್‌ಗಳನ್ನು ಪೂರೈಸಲಾಗಿದೆ. 44,225 ಕೇಂದ್ರಗಳಲ್ಲಿ ಶೌಚಾಲಯ ಇದೆ ಎಂದು ಸರ್ಕಾರ ಮೆಮೊ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಈ ಅಂಕಿ-ಅಂಶಗಳು ಆಘಾತಕಾರಿ ಸ್ಥಿತಿಯನ್ನು ಚಿತ್ರಿಸುತ್ತವೆ’ ಎಂದು …

Read More »

ರಂಜಾನ್‌ವರೆಗೆ ತೊಂದರೆ ಕೊಡಬೇಡಿ: ಜಮೀರ್ ಅಹ್ಮದ್ ಮನವಿ

ಬೆಂಗಳೂರು, ಏಪ್ರಿಲ್ 19: “ಸರಕಾರದ ಏನು ಮಾರ್ಗಸೂಚಿಯಿದೆಯೋ ಅದನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಆದರೆ, ದಯವಿಟ್ಟು ರಂಜಾನ್ ಹಬ್ಬದವರೆಗೆ ನಮಗೆ ತೊಂದರೆ ಕೊಡಬೇಡಿ ಎಂದು ಸಭೆಯಲ್ಲಿ ಮನವಿ ಮಾಡಿದ್ದೇನೆ”ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು. “ಜಾಮಿಯಾ ಮೈದಾನದಲ್ಲಿ ಇಪ್ಪತ್ತು ಸಾವಿರ ಜನ ನಮಾಜ್ ಮಾಡಬಹುದು. ಆದರೆ, ಸಾಮಾಜಿಕ ಅಂತರ ಕಾಯ್ದುಕೊಂಡು ಬರೀ ಐದು ಸಾವಿರ ಜನ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನೈಟ್ ಕರ್ಫ್ಯೂನಿಂದಾಗಿ ರಾತ್ರಿ 10.30ಗೆ ಮಾಡಬೇಕಾಗಿರುವ ನಮಾಜ್ …

Read More »

ಸಾರಿಗೆ ನೌಕರರ ಮುಷ್ಕರದ ಎಫೆಕ್ಟ್ : ರಾಜ್ಯಾಧ್ಯಂತ 12 ಗಂಟೆಯ ವೇಳೆ ಸಂಚಾರ ಆರಂಭಿಸಿದ ಸಾರಿಗೆ ಬಸ್ ಎಷ್ಟು ಗೊತ್ತಾ.?

ಬೆಂಗಳೂರು : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ 14ನೇ ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ನೌಕರರ ಮುಷ್ಕರದ ನಡುವೆಯೂ, ನಿಧಾನ ಗತಿಯಲ್ಲಿ ಸಾರಿಗೆ ಬಸ್ ಸಂಚಾರ ಆರಂಭಗೊಳ್ಳುತ್ತಿದೆ. ಇಂದು ಮಧ್ಯಾಹ್ನ 12 ಗಂಟೆಯ ವೇಳೆ ರಾಜ್ಯಾಧ್ಯಂತ 5,629 ಸಾರಿಗೆ ಬಸ್ ಸಂಚಾರ ಆರಂಭಿಸಿವೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ನೀಡಿದ್ದು, ಇಂದು ಮಧ್ಯಾಹ್ನ 12 ಗಂಟೆಯವರೆಗೆ ರಾಜ್ಯಾಧ್ಯಂತ KSRTC 2340 ಬಸ್, BMTC 1159 ಬಸ್, …

Read More »

ರಾಜ್ಯದ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ರದ್ದು ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನದ ಆಧಾರದಲ್ಲಿ ಪಾಸ್ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು,1 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಿ ಶಿಕ್ಷಣ ಇಲಾಖೆ …

Read More »