ಬೆಂಗಳೂರು: ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಸರ್ಕಾರ ಸೆಮಿ ಲಾಕ್‌ಡೌನ್ ಜಾರಿಗೊಳಿಸಿ ಇಷ್ಟು ದಿನಗಳಾದರೂ ರಸ್ತೆಗಳಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಗಿತ್ತು. ಆದರೆ ತೌಕ್ಟೆ ಚಂಡಮಾರುತ ಶನಿವಾರ ಚಿತ್ರಣವನ್ನೇ ಬದಲಿಸಿದ್ದರಿಂದ ರಾಜ್ಯದ ಏಳೆಂಟು ಜಿಲ್ಲೆಗಳಲ್ಲಿ ಜನ ರಸ್ತೆಗಿಳಿಯಲು ಮನಸ್ಸನ್ನೇ ಮಾಡಲಿಲ್ಲ. ಇನ್ನುಳಿದಂತೆ ಬಹುತೇಕ ಜಿಲ್ಲೆಗಳಲ್ಲೂ ಅಗತ್ಯ ವಸ್ತುಗಳನ್ನು ಖರೀದಿಸಿ 10 ಗಂಟೆ ವೇಳೆ ಮನೆ ಸೇರಿಕೊಂಡಿದ್ದರಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಜನ ಸಂಚಾರ, ವಾಹನ ಸಂಚಾರ ಬಹುತೇಕ ವಿರಳವಾಗಿತ್ತು. ದಕ್ಷಿಣ ಕನ್ನಡದಲ್ಲಿ …
Read More »ಶಾಕಿಂಗ್ ನ್ಯೂಸ್: ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಮನೆಯಲ್ಲೇ 600 ಮಂದಿ ಸಾವು..!
ಬೆಂಗಳೂರು, ಮೇ 15- ಸಮಯಕ್ಕೆ ಸರಿಯಾಗಿ ಸಿಗದ ಬೆಡ್, ಚಿಕಿತ್ಸೆ ವಿಳಂಬದಿಂದಾಗಿ ಕಳೆದ 1 ತಿಂಗಳಿಂದ ರಾಜ್ಯದಲ್ಲಿ ಸುಮಾರು 600 ರೋಗಿಗಳು ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಸುದ್ದಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಬಿದ್ದಿದೆ. ಏಪ್ರಿಲ್ 13 ರಿಂದ 30ರವರೆಗೆ ಸುಮಾರು 120 ಇದ್ದ ಸಾವಿನ ಸಂಖ್ಯೆ ಮೇ 1 ರಿಂದ ಮೇ 13ರವರೆಗೆ ಇದ್ದಕ್ಕಿದ್ದಂತೆ 479ಕ್ಕೇರಿದೆ, ಮೇ 12 ರಂದು ಅತಿ ಹೆಚ್ಚು ಸಾವು ದಾಖಲಾಗಿದ್ದು, …
Read More »ಆರ್ಡರ್ ಮಾಡಿದ್ದ ಮೌಥ್ವಾಶ್ ಬಂದಿದ್ದು ರೆಡ್ಮಿ ನೋಟ್ 10 ಫೋನ್
ಮುಂಬೈ: ಆನ್ಲೈನ್ ಶಾಪಿಂಗ್ ಅಮೇಜಾನ್.ಕಮ್ನಲ್ಲಿ ಕೊಲ್ಗೇಟ್ ಮೌಥ್ವಾಶ್ ಆರ್ಡರ್ ಮಾಡಿದ್ದ ಮುಂಬೈ ನಿವಾಸಿ, ಡೆಲಿವರಿ ಬಾಯ್ ತಂದುಕೊಂಡ ಆರ್ಡರ್ ಪ್ಯಾಕೇಜ್ ತೆರೆದಾಗ ಅಚ್ಚರಿಯೇ ಕಾದಿತ್ತು. ಲೋಕೇಶ್ ದಗಾ ಅವರು ತಾವು ಮೌಥ್ವಾಶ್ ಬುಕ್ ಮಾಡಿದ್ದಾಗಿ ಅದಕ್ಕೆ ಸಂಬಂಧಿಸಿ ಫೋಟೋವನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ನನ್ನ ಆರ್ಡರ್ ಬದಲಾವಣೆ ಆಗಿರುವುದಾಗಿ ಸೆಕ್ಯುರಿಟಿ ಗಾರ್ಡ್ ತಿಳಿಸಿದರು. ಪ್ಯಾಕೇಜ್ ಚಿಕ್ಕದಾಗಿದ್ದರಿಂದ ನನಗೂ ಆಶ್ಚರ್ಯವಾಯಿತು. ತೆಗೆದು ನೋಡಿದಾಗ ಮೌಥ್ವಾಶ್ ಬದಲು ರೆಡ್ಮಿ ನೋಟ್ 10 …
Read More »ಬಿಗ್ ಬಾಸ್ ಮನೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಶುಭಾ ಪೂಂಜಾ
ಬಿಗ್‍ಬಾಸ್ ಮನೆಯಿಂದ ಹೊರಬರುವ ವೇಳೆ ನಟಿ ಶುಭಾ ಪೂಂಜಾ ಕೊರೊನಾ ವಾರಿಯರ್ಸ್ ಆಗಿ ಸೇವೆ ಮಾಡೋಣ, ಜನರಿಗೆ ನೆರವಾಗೋಣ ಎಂದು ಮಾತು ಕೊಟ್ಟಿದ್ದರು. ಅದರಂತೆ ನಡೆದುಕೊಂಡು ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ 72 ದಿನಗಳ ಕಾಲ ಇದ್ದ ಶುಭಾ ಪೂಂಜಾ ಸೇರಿದಂತೆ 11 ಸ್ಪರ್ಧಿಗಳಿಗೆ ಕೊರೊನಾದಿಂದ ರಾಜ್ಯ ಎದುರಿಸುತ್ತಿರುವ ಭೀಕರತೆಯ ಮಾಹಿತಿ ನೀಡಿ ಹೊರಗೆ ಕರೆಸಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಪರ್ಧಿಗಳು ಆತಂಕಕ್ಕೀಡಾಗಿ ಕಣ್ಣೀರು ಹಾಕಿದ್ದರು. ಇಷ್ಟು ದಿನ …
Read More »“ಕೊಟ್ಟ ಕುದುರೆ ಏರಲಾಗದವನು ಧೀರನೂ ಅಲ್ಲ- ಶೂರನೂ ಅಲ್ಲ, ಅಧಿಕಾರ ಬಿಟ್ಟು ತೊಲಗಿ”
ಬೆಂಗಳೂರು, -ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರ ಆಶಯಕ್ಕೆ ತಕ್ಕಂತೆ ಬಿಜೆಪಿ ನಡೆದುಕೊಳ್ಳಬೇಕು. ಕೈಲಾಗದಿದ್ದರೆ ಅಧಿಕಾರ ಬಿಟ್ಟು ತೊಲಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ನಾವೇನ್ ನೋಟ್ ಪ್ರಿಂಟ್ ಮಾಡ್ತೀವಾ?, ಜಡ್ಜ್‌ಗಳು ಸರ್ವಜ್ಞರಲ್ಲ, ಕೊರೊನಾ ವೈರಸ್‌ಗಾಗಿ ಚೀನಾವನ್ನು ದೂಷಿಸಬೇಕು, ನೇಣು ಹಾಕಿಕೊಳ್ಳಲು ಆಗುತ್ತಾ?, ಕೋವಿಡ್ ಪ್ಯಾಕೇಜ್ ಕೊಡಲು ಆಗಲ್ಲ, ದೇಶದ ದುಸ್ಥಿತಿಗೆ ವಿರೋಧ ಪಕ್ಷಗಳು ಕಾರಣ ಎಂದು ಹೇಳಿರುವುದು ಧರೆಗೆ ಸ್ವರ್ಗ ಇಳಿಸುವ …
Read More »ಜಿಂದಾಲ್ ಗೆ 3667 ಎಕರೆ ಪರಭಾರೆ : ಸುಪ್ರೀಂ ಕೋರ್ಟ್ ಮೊರೆ ಹೋದ ಸಾಮಾಜಿಕ ಕಾರ್ಯಕರ್ತ
ಬೆಂಗಳೂರು, ಮೇ. 14 : ಕೊರೊನಾ ಕಷ್ಟ ಕಾಲದಲ್ಲಿ ಸಮರ್ಪಕ ರೀತಿಯಲ್ಲಿ ಆಕ್ಸಿಜನ್ ಪೂರೈಕೆ ಮಾಡದೇ ವಿವಾದಕ್ಕೆ ಈಡಾಗಿದ್ದ ಜಿಂದಾಲ್ ಸಂಸ್ಥೆಗೆ ಭೂಮಿ ನೀಡಲು ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಬಳ್ಳಾರಿಯಲ್ಲಿರುವ ಜೆಎಸ್‌ಡಬ್ಲೂ ಸಂಸ್ಥೆಗೆ 3667 ಎಕರೆ ಜಮೀನು ಮಾರಾಟ ಮಾಡಲು ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಸಾಮಾಜಿಕ ಕಾರ್ಯಕರ್ತ ಪೌಲ್ ಎಂಬುವರು ಸುಪ್ರೀಂಕೋರ್ಟ್ ಮುಖ್ಯ …
Read More »ಸದ್ಯದ `ಡಿಸ್ಕೌಂಟ್ ಲಾಕ್‍ಡೌನ್’ ಪೂರ್ಣ ಪ್ರಮಾಣದಲ್ಲಿ ಯಶಸ್ವಿ ಆಗಿಲ್ಲ,ಮೇ 24ರ ನಂತರವೂ ಲಾಕ್‍ಡೌನ್ ಮುಂದುವರಿಕೆ?
ಬೆಂಗಳೂರು: ರಾಜ್ಯದಲ್ಲಿ ಘೋಷಣೆ ಆಗಿರುವ ಲಾಕ್‍ಡೌನ್ ಮೇ 24ರ ನಂತರವೂ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ರಾಜ್ಯದಲ್ಲಿ ಇವತ್ತು 41 ಸಾವಿರ ಕೇಸ್, 373 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ, 5.98 ಲಕ್ಷ ಸಕ್ರಿಯ ಕೇಸ್‍ಗಳೊಂದಿಗೆ ದೇಶದಲ್ಲೇ ಕರ್ನಾಟಕ ನಂಬರ್ 1 ಆಗಿದೆ. ಶೇಕಡವಾರು ಪ್ರಮಾಣದಲ್ಲಿ ಭಾರತದ್ದು 20.80ರಷ್ಟಿದೆ. ಇದರ ಲೆಕ್ಕಾಚಾರದಂತೆ ದೇಶದ ಪ್ರತಿ ಐವರಲ್ಲಿ ಒಬ್ಬರಿಗೆ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ 32.86% ಪಾಸಿಟೀವ್ ರೇಟ್ ಇದೆ. 10 ಜನರ ಪೈಕಿ …
Read More »ಕೊರೋನಾ ನಿಯಮ ಉಲ್ಲಂಘನೆ; 448 ವಾಹನ ಜಪ್ತಿ, 3.26 ಕೋಟಿ ರೂ. ದಂಡ ಸಂಗ್ರಹ
ಬೆಂಗಳೂರು: ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಅನೇಕ ಮಂದಿ ನಿಯಮಗಳನ್ನು ಉಲ್ಲಂಘಿಸಿ ಎಲ್ಲೆಡೆ ಸಂಚರಿಸುತ್ತಿದ್ದಾರೆ. ನಿಯಮ ಮೀರಿ ರಸ್ತೆಗಳಿದಿದ್ದ ವಾಹನಗಳನ್ನು ನಗರ ಪೊಲೀಸರು ಗುರುವಾರ ಜಪ್ತಿ ಮಾಡಿದ್ದು, ಅಂತೆಯೇ 3.26 ಕೋಟಿ ರೂ. ದಂಡ ಸಂಗ್ರಹಣೆ ಮಾಡಿದ್ದಾರೆ. ಕಳೆದ 20 ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ 448 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ 429 ದ್ವಿಚಕ್ರ ವಾಹನ, 11 ತ್ರಿಚಕ್ರ ವಾಹನ, 8 ನಾಲ್ಕು ಚಕ್ರದ ವಾಹನ ಸೇರಿ …
Read More »ಲಾಕ್ ಡೌನ್ ಮಧ್ಯಯೇ ಹಸೆಮಣೆ ಏರಿದ ಚಂದನವನದ ಜೋಡಿ
ಬೆಂಗಳೂರು : ಲಾಕ್ ಡೌನ್ ಮಧ್ಯಯೇ ಸಿಂಪಲ್ ಆಗಿ ಹಸೆಮಣೆ ಏರಿದ ಚಂದನವನದ ಜೋಡಿ ಚಂದನ್ ಕುಮಾರ್ ಹಾಗೂ ಕವಿತಾ. ಚಂದನ್ ತಮ್ಮ ಇನ್ಮಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡು ಮನೆ ಮದುವೆ , ಮದುವೆ ಮನೆ . ಗೋರಿಯಸ್ ಆಗಿಲ್ಲ , ಆದರೆ , ಸಂತಸದಿಂದ ತುಂಬಿದೆ ಎಂದು ಬರೆದುಕೊಂಡಿದ್ದಾರೆ . ‘ ಲಕ್ಷ್ಮೀ ಬಾರಮ್ಮ ‘ ಧಾರಾವಾಹಿಯ ಮೂಲಕ ಪರಿಚಿತವಾದ ಈ ಜೋಡಿ ಏ .1 ರಂದು ಎಂಗೇಜೆಂಟ್ …
Read More »ಪ್ರಧಾನಿ ಮೋದಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದ್ದಾರೆ : ಸಿದ್ದರಾಮಯ್ಯ ಲೇವಡಿ
ಬೆಂಗಳೂರು : ಕೊರೊನಾ ಸೋಂಕಿನ ವಿರುದ್ಧ ಕೇಂದ್ರ ಸರ್ಕಾರದ ಹೋರಾಟ ವಿಫಲವಾಗಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಶುಕ್ರವಾರ ಕೆಪಿಸಿಸಿ ಕಛೇರಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಮತ್ತು ರಾಜ್ಯ ಸರ್ಕಾರ ವ್ಯಾಕ್ಸಿನ್ ಕೊಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಕೇಂದ್ರಕ್ಕೆ ಛೀಮಾರಿ ಹಾಕಿದರೂ ರಾಜ್ಯಕ್ಕೆ ವ್ಯಾಕ್ಸಿನ್ ನೀಡಿಲ್ಲ. ಇಂತಹ ಬೇಜವಬ್ದಾರಿ ಸರ್ಕಾರವನ್ನು ನಾನು …
Read More »