ಬೆಂಗಳೂರು, ಮೇ 26- ಬ್ಲಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಎಂಫೋಟೆರಿಸಿನ್-ಬಿ ಔಷಧಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಇಂದು ಹೆಚ್ಚುವರಿಯಾಗಿ 1221 ವೈಲ್ಸ್ ಗಳನ್ನು ಹಂಚಿಕೆ ಮಾಡಿದೆ.ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರು, ದೇಶಾದ್ಯಂತ ವಿವಿಧ ರಾಜ್ಯಗಳಗೆ ಹಂಚಿಕೆ ಮಾಡಿರುವ ಔಷಧಿಗಳ ಬಗ್ಗೆ ಮಾಹಿತಿ ನೀಡಿದ್ದು, 481 ಕಪ್ಪು ಶಿಲೀಂದ್ರ ಪ್ರಕರಣಗಳಿರುವ ಕರ್ನಾಟಕಕ್ಕೆ 1221 ವೈಲ್ಸ್ ಗಳನ್ನು ಹಂಚಿಕೆ …
Read More »ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ದೆಹಲಿ ದಂಡಯಾತ್ರೆ ಕೈಗೊಂಡಿದ್ದ ಬಂಡಾಯಗಾರರಿಗೆ ಹಿನ್ನಡೆ
ಬೆಂಗಳೂರು : ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ದೆಹಲಿ ದಂಡಯಾತ್ರೆ ಕೈಗೊಂಡಿದ್ದ ಬಂಡಾಯಗಾರರಿಗೆ ಹಿನ್ನಡೆಯಾಗಿದೆ. ಹೈಕಮಾಂಡ್ ಭೇಟಿಗೆ ಬಂದಿದ್ದ ಸಚಿವ ಸಿ.ಪಿ ಯೋಗೇಶ್ವರ್, ಶಾಸಕ ಅರವಿಂದ ಬೆಲ್ಲದ್ ಸೇರಿದಂತೆ ಮತ್ತಿತರರ ಭೇಟಿಗೆ ಹೈಕಮಾಂಡ್ ನಾಯಕರು ಸಮಯ ನೀಡಿಲ್ಲ.ಇದರಿಂದಾಗಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸೇರಿ ಹಲವು ನಾಯಕರ ಭೇಟಿಗೆ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ದೇಶದಾದ್ಯಂತ …
Read More »ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಹೃದಯಾಘಾತದಿಂದ ನಿಧನ
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 104 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ ದೊರೆಸ್ವಾಮಿ ಇದೀಗ ಜಯದೇವ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. 1918 ಏಪ್ರಿಲ್ 10ರಂದು ಹಾರೋಹಳ್ಳಿಯಲ್ಲಿ ಜನಿಸಿದ್ದ ದೊರೆಸ್ವಾಮಿ ಪ್ರಾಥಮಿಕ ಶಿಕ್ಷಣದ ಬಳಿಕ ಬೆಂಗಳೂರಿಗೆ ಹೆಚ್ಚಿನ ಶಿಕ್ಷಣಕ್ಕಾಗಿ ಬಂದಿದ್ದರು. 1942ರ ಹೊತ್ತಿಗೆ, ಅವರು ತಮ್ಮ ಬಿ.ಎಸ್.ಸಿ ಯನ್ನು ಪೂರ್ಣಗೊಳಿಸಿದರು ಮತ್ತು ಉಪನ್ಯಾಸಕರಾಗಿ ಕಾಲೇಜಿನಲ್ಲಿ ಸೇರಿಕೊಂಡರು. ಆಗಸ್ಟ್ನಲ್ಲಿ, ಕ್ವಿಟ್ ಇಂಡಿಯಾ ಸ್ವಾತಂತ್ರ್ಯ …
Read More »ರೆಮ್‌ಡಿಸಿವಿರ್ ಅಕ್ರಮ ಮಾರಾಟ: ಮೂವರು ದಂಧೆಕೋರರ ಬಂಧನ
ಬೆಂಗಳೂರು, ಮೇ. 26: ನೆರೆ ರಾಜ್ಯ ಕೇರಳದಿಂದ ರೆಮ್‌ಡಿಸಿವಿರ್ ಚುಚ್ಚು ಮದ್ದು ತಂದು ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂವರು ದಂಧೆಕೋರರನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ದೊಡ್ಡ ತೋಗೂರು ನಿವಾಸಿಗಳಾದ ಸಂಜೀವ್ ಕುಮಾರ್, ಪ್ರತೀಕ್ ಹಾಗೂ ಅಭಿಜಿತ್ ಬಂಧಿತರು. ಕೊರೊನಾ ಸೋಂಕಿತರಿಗೆ ಬಳಸುವ ರೆಮ್‌ಡಿಸಿವಿರ್‌ಗೆ ರಾಜ್ಯದಲ್ಲಿ ಇರುವ ಬಹು ಬೇಡಿಕೆಯನ್ನು ಅರಿತಿದ್ದ ಮೂವರು ಕೇರಳದಲ್ಲಿ ನೂರಾರು ರೆಮ್‌ಡಿಸಿವಿರ್ ಚುಚ್ಚು ಮದ್ದು ವಯಲ್‌ಗಳನ್ನು ತಂದಿದ್ದರು. …
Read More »ಬೆಳಗಾವಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಸಮಾವೇಶ: ಆಯೋಜಕರ ವಿರುದ್ಧ ಎಫ್‌ಐಆರ್ ಯಾಕಿಲ್ಲ; ಹೈಕೋರ್ಟ್ ಪ್ರಶ್ನೆ
ಬೆಂಗಳೂರು, : ಬೆಳಗಾವಿಯಲ್ಲಿ ಜ.17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಕೋವಿಡ್-19 ಮಾರ್ಗಸೂಚಿಗಳ ಉಲ್ಲಂಘನೆ ಕುರಿತು ಸಲ್ಲಿಸಿರುವ ಅರ್ಜಿ ಸಂಬಂಧ ಅಲ್ಲಿನ ನಗರ ಪೊಲೀಸ್ ಆಯುಕ್ತರು ಸಲ್ಲಿಸಿರುವ ಪ್ರಮಾಣ ಪತ್ರಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಅನುಸಾರ ಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥರಿಗೆ ಕೇವಲ ದಂಡ ವಿಧಿಸಲಾಗಿದೆ. ಪೊಲೀಸ್ ಆಯುಕ್ತರಿಗೆ ಕಾಯ್ದೆಯ ಬಗ್ಗೆ ಅರಿವಿದ್ದಂತೆ ಕಾಣುತ್ತಿಲ್ಲ …
Read More »ಜೂನ್ 7 ರ ನಂತರವೂ ಮುಗಿಯಲ್ಲ ಲಾಕ್ ಡೌನ್: ಇನ್ನೂ ಹಲವು ದಿನ ರಾಜ್ಯದ ಜನ ಮನೆಯೊಳಗೆ ಬಂಧಿ.?
ಬೆಂಗಳೂರು: ಜೂನ್ 7 ರ ವರೆಗೂ ಇರುವ ಲಾಕ್ಡೌನ್ ಮುಗಿಯಲ್ಲ. ಸದ್ಯಕ್ಕೆ ಲಾಕ್ಡೌನ್ ನಿಂದ ಮುಕ್ತಿ ಇಲ್ಲ. ಎರಡು ವಾರಗಳ ನಂತರ ರಾಜ್ಯದ ಜನರ ಮನೆ ವಾಸ ಮುಂದುವರೆಯಲಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಕೊರೋನಾ ತಡೆಗೆ ಲಾಕ್ಡೌನ್ ಜಾರಿ ಮಾಡಿದ ನಂತರ ಕೊರೋನಾ ಸಂಕು ಇಳಿಕೆಯಾಗುತ್ತಿದೆ. ರಾಜ್ಯ ಸರ್ಕಾರ ಮೇ 24 ರಿಂದ ಜೂನ್ 7 ರವರೆಗೆ ಎರಡನೇ ಹಂತದ ಲಾಕ್ಡೌನ್ ಜಾರಿ ಮಾಡಲಾಗಿದೆ. ರಾಜ್ಯಾದ್ಯಂತ ಕಠಿಣ ನಿರ್ಬಂಧ ಜಾರಿಗೊಳಿಸಿದೆ. …
Read More »ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿ, ಮೋದಿಗೆ ಎಚ್ ಡಿ ದೇವೇಗೌಡರ ಪತ್ರ
ಬೆಂಗಳೂರು: ರೈತರ ತೋಟಗಾರಿಕೆ ಬೆಳೆಗಳಿಗೆ ಸರಿಯಾದ ಬೆಳೆ ಸಿಗ್ತಿಲ್ಲ ಹೀಗಾಗಿ ಸೂಕ್ತ ಮಾರುಕಟ್ಟೆ ಕಲ್ಪಿಸಿ ಎಂದು ಮಾಜಿ ಪ್ರಧಾನಿ ದೇವೇಗೌಡ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲ. ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸುವುದು ಕಷ್ಟವಾಗಿದೆ. ಕೋಲಾರದಲ್ಲಿ ಅತಿ ಹೆಚ್ಚು ಟೊಮೊಟೋ ಬೆಳೆಯಲಾಗುತ್ತೆ. ಕೊಳ್ಳುವವರಿಲ್ಲದೆ ತಿಪ್ಪೆಗೆ ಎಸೆಯುತ್ತಿದ್ದಾರೆ. ಬೇರೆ ರಾಜ್ಯಗಳಲ್ಲೂ ಇದೇ ಪರಿಸ್ಥಿತಿಯಿದೆ. ಕಲ್ಲಂಗಡಿ ಬೆಳೆದ ರೈತರಿಗೂ ನಷ್ಟವಾಗಿದೆ. ಇನ್ನಿತರ ಬೆಳೆಗಳಿಗೂ …
Read More »ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ; ಹಿರಿಯ ನಟ ಕೃಷ್ಣೇಗೌಡ ವಿಧಿವಶ
ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಕನ್ನಡ ಚಿತ್ರರಂಗ ಒಬ್ಬರ ಹಿಂದೊಬ್ಬರಂತೆ ಹಿರಿಯ ಕಲಾವಿದರನ್ನು ಕಳೆದುಕೊಳ್ಳುತ್ತಿದೆ. ಇದೀಗ ಹಿರಿಯ ನಟ, ರಂಗಭೂಮಿ ಕಲಾವಿದ ಕೃಷ್ಣೇಗೌಡ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. 80 ವರ್ಷದ ಕೃಷ್ಣೇಗೌಡ ಅವರಿಗೆ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಇತ್ತೀಚೆಗೆ ಮತ್ತೆ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಕೃಷ್ಣೇಗೌಡ …
Read More »ಸಬ್ ಇನ್ಸ್ ಪೆಕ್ಟರ್ ಅರ್ಜುನ್ ನ್ನು ಜೈಲಿಗೆ ಕಳಿಸಲು ಸಂಸದ ಹನುಮಂತಯ್ಯ ಒತ್ತಾಯ
ಬೆಂಗಳೂರು: ‘ವಿಚಾರಣೆ ನೆಪದಲ್ಲಿ ದಲಿತ ಯುವಕನನ್ನು ಠಾಣೆಗೆ ಕರೆದೊಯ್ದು ಮೂತ್ರ ನೆಕ್ಕಿಸಿರುವ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಅರ್ಜುನ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ಜೊತೆಗೆ ಸೇವೆಯಿಂದಲೇ ವಜಾಗೊಳಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಒತ್ತಾಯಿಸಿದ್ದಾರೆ. ‘ಕಿರುಗುಂದ ಗ್ರಾಮದ ಕೆ.ಎಲ್.ಪುನೀತ್ ಜೊತೆ ಅರ್ಜುನ್ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಯಾಗಿ ಅವರು ನಡೆದುಕೊಂಡಿರುವ ರೀತಿ ಖಂಡನೀಯ. ಅವರ ಕ್ರೂರ ವರ್ತನೆಯ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾದರೂ ಸರ್ಕಾರವು ಆರಂಭದಲ್ಲಿ ಯಾವುದೇ …
Read More »ಪ್ಯಾಕೇಜ್ ಪರಿಹಾರ ಸಿಗದವರಿಗೆ ಸಿಹಿ ಸುದ್ದಿ: 10 -12 ದಿನಗಳಲ್ಲಿ ಮತ್ತೊಂದು ವಿಶೇಷ ಪ್ಯಾಕೇಜ್; ಸಿಎಂ ಮಾಹಿತಿ
ಬೆಂಗಳೂರು: ರಾಜ್ಯದಲ್ಲಿ ಕೊರೋನಾದಿಂದ ಸಂಕಷ್ಟದಲ್ಲಿರುವ ಜನರಿಗೆ ಅನುಕೂಲವಾಗುವಂತೆ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುವುದು. ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ಯಾಕೇಜ್ ನಲ್ಲಿ ಪರಿಹಾರಧನ ಸಿಗದವರಿಗೆ ಮುಂದಿನ 10 -12 ದಿನಗಳಲ್ಲಿ ಇನ್ನೊಂದು ಪ್ಯಾಕೇಜ್ ಮೂಲಕ ಪರಿಹಾರ ನೀಡಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಹಣಕಾಸಿನ ಇತಿಮಿತಿಯಲ್ಲಿ ಆರ್ಥಿಕ ಪ್ಯಾಕೇಜ್ ವಿಚಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮುಂದಿನ ಹತ್ತರಿಂದ ಹನ್ನೆರಡು ದಿನಗಳಲ್ಲಿ ಪರಿಹಾರ ದಿನ ಸಿಗದವರಿಗೆ ಇನ್ನೊಂದು ಪ್ಯಾಕೇಜ್ ನೀಡಲು ಪ್ರಯತ್ನಿಸುತ್ತೇನೆ ಎಂದು …
Read More »