ಬೆಂಗಳೂರು: ಸಿ.ಡಿ ಕೇಸ್ಗೆ ಸಂಬಂಧಿಸಿದಂತೆ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ನಿನ್ನೆ ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ವಿಚಾರಣೆ ನಡೆದಿದೆ. ಅದರ ಬೆನ್ನಲ್ಲೇ ಆರೋಪಿಗಳಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಎಸ್ಐಟಿ ನೋಟಿಸ್ ನೀಡಿದೆ. ವಿಶೇಷ ಎಂದರೆ ನಿನ್ನೆ ಒಟ್ಟಿಗೆ ವಿಚಾರಣೆಗೆ ಹಾಜರಾಗಿದ್ದ ಇಬ್ಬರು ಆರೋಪಿಗಳಿಗೆ ನೋಟಿಸ್ ನೀಡಿರುವ ಪೊಲೀಸರು, ಪ್ರತ್ಯೇಕ ದಿನಗಳಲ್ಲಿ ವಿಚಾರಣೆಗೆ ಕರೆದಿದ್ದಾರೆ. ಜೂನ್ 14ರ ಸೋಮವಾರ 11 ಗಂಟೆಗೆ ಆರೋಪಿ ನರೇಶ್ಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಇನ್ನು …
Read More »ಶಿಕ್ಷಣ ಸಚಿವರ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು; ಎಸ್.ಎಸ್.ಎಲ್.ಸಿ. ಪರೀಕ್ಷೆ ರದ್ದುಗೊಳಿಸಿ; ಸರ್ಕಾರಕ್ಕೆ ಪೋಷಕರ ಡೆಡ್ ಲೈನ್
ಬೆಂಗಳೂರು: ಪರೀಕ್ಷೆ ಬಗ್ಗೆ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ ಖಾತೆ ಬದಲಾವಣೆ ಮಾಡಬೇಕು. ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಿಂದಾಗಿ ಸರಿಯಾಗಿ ತರಗತಿಗಳೇ ನಡೆದಿಲ್ಲ. ಪಾಠವನ್ನೂ ಮಾಡಲಾಗಿಲ್ಲ. ಹೀಗಿರುವಾಗ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸುವುದಾದರೂ ಹೇಗೆ? ಎಲ್ಲಿಯೂ ನಡೆಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಸಚಿವರು ತಮ್ಮ ಸ್ವಪ್ರತಿಷ್ಠೆಗಾಗಿ ನಮ್ಮಲ್ಲಿ ನಡೆಸುತ್ತಿರುವುದಾದರೂ ಯಾಕೆ ಎಂದು ಪೋಷಕರು …
Read More »ಆರೋಪಿಗಳಾದ ನರೇಶ್, ಶ್ರವಣ್ ವಿಚಾರಣೆಯಿಂದ ಮಹತ್ವದ ಸತ್ಯ ಬಯಲು!
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲವೆಬ್ಬಿಸಿ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವಂತೆ ಮಾಡಿದ ಸಿಟಿ ಪ್ರಕರಣ ಸಂಬಂಧ ಇಂದು ಮಹತ್ವದ ವಿಚಾರಣೆ ನಡೆಯಿತು. ತಿಂಗಳಾನುಗಟ್ಟಲೇ ತಲೆಮರೆಸಿಕೊಂಡು, ಕೋರ್ಟ್ನಿಂದ ಜಾಮೀನು ಪಡೆದಿರುವ ಆರೋಪಿಗಳಾದ ನರೇಶ್ಗೌಡ ಹಾಗೂ ಶ್ರವಣ್ ಇಂದು ವಿಚಾರಣೆಗೆ ಹಾಜರಾಗಿದ್ದರು. ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಇಬ್ಬರು ಆರೋಪಿಗಳನ್ನು ಪ್ರತ್ಯೇಕವಾಗಿ ಎಸಿಪಿ ಧರ್ಮೇಂದ್ರ ವಿಚಾರಣೆ ನಡೆಸಿದರು. ನ್ಯಾಯಾಲಯದ ಆದೇಶದ ಪ್ರತಿ ಹಾಗೂ ಷರತ್ತುಗಳನ್ನು ಪೂರೈಕೆ ಮಾಡಿರುವ ಬಗ್ಗೆ ಪರಿಶೀಲನೆ ಬಳಿಕ …
Read More »ಪಂಚಭೂತಗಳಲ್ಲಿ ಲೀನರಾದ ಸಾಹಿತಿ ಡಾ.ಸಿದ್ದಲಿಂಗಯ್ಯ
ಬೆಂಗಳೂರು: ಬಂಡಾಯ ಸಾಹಿತಿ ಡಾ.ಸಿದ್ದಲಿಂಗಯ್ಯನವರ ಅಂತ್ಯಸಂಸ್ಕಾರ ಜ್ಞಾನಭಾರತಿ ಕ್ಯಾಂಪಸ್ನ ಕಲಾಗ್ರಾಮದಲ್ಲಿ ನಡೆಯಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆದಿದ್ದು, 3 ಸುತ್ತು ಕುಶಾಲತೋಪು ಹಾರಿಸಿ ಗೌರವ ವಂದನೆಯನ್ನು ಸಲ್ಲಿಸಲಾಯಿತು. ಜೊತೆಗೆ ಪೊಲೀಸ್ ಬ್ಯಾಂಡ್ನಿಂದ ರಾಷ್ಟ್ರಗೀತೆ ನುಡಿಸಿ ಗೌರವ ನೀಡಲಾಯಿತು. ಬೌದ್ಧ ಧರ್ಮದ ಆಚರಣೆಯಂತೆ ಅಂತಿಮ ವಿಧಿವಿಧಾನ ನೆರವೇರಿದ್ದು, ಬೌದ್ಧ ಬಿಕ್ಕುಗಳು ಪಂಚಶೀಲ ತತ್ವಗಳನ್ನು ಬೋಧಿಸಿದರು. ಡಾ.ಸಿದ್ದಲಿಂಗಯ್ಯ ಚಿತೆಗೆ ಪುತ್ರ ಗೌತಮ್ ಅಗ್ನಿ ಸ್ಪರ್ಶ ಮಾಡಿದರು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ …
Read More »ಪ್ರಧಾನಿ ಮೋದಿ, ಸಿಎಂ ಬಿ.ಎಸ್.ವೈ. ವಿರುದ್ಧ ಸಿದ್ದರಾಮಯ್ಯ ಆಕ್ರೋಶ; ಜನರ ಜೀವ ಹಿಂಡುವ ಇಂಥ ಸರ್ಕಾರ ಹಿಂದೆಂದೂ ನೋಡಿಲ್ಲ ಎಂದು ವಾಗ್ದಾಳಿ
ಬೆಂಗಳೂರು: ಪ್ರಧಾನಿ ಮೋದಿ ತಿಗಣೆ ತರ ದೇಶದ ಜನರ ರಕ್ತ ಹೀರುತ್ತಿದ್ದಾರೆ. ಒಂದೆಡೆ ಜನರು ಕೋವಿಡ್ ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಇನ್ನೊಂದೆಡೆ ತೈಲ ಬೆಲೆಯಿಂದ ಹಿಡಿದು ಅಗತ್ಯ ವಸ್ತುಗಳವರೆಗೂ ಎಲ್ಲದರ ಬೆಲೆಯನ್ನೂ ಏರಿಕೆ ಮಾಡಲಾಗಿದೆ. ಜನಸಾಮಾನ್ಯರು ಬದುಕು ನಡೆಸುವುದಾದರೂ ಹೇಗೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೋದಿ, ಮೋದಿ ಎಂದು ಹುಡುಗರು ಘೋಷಣೆಗಳನ್ನು ಕೂಗುತ್ತಿದ್ದರು. ಕೊರೊನಾ ಓಡಿಸಲೆಂದು ಪ್ರಧಾನಿ ಮೋದಿ ಹೇಳಿದಂತೆ ಗಂಟೆ, …
Read More »ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿ A.S.I.
ಬೆಂಗಳೂರು: ಎಎಸ್ಐ ಒಬ್ಬರು 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಎಸ್ಐ ದಯಾನಂದ ತನ್ನಿಂದ 5 ಲಕ್ಷ ರೂಪಾಯಿ ಲಂಚ ಪಡೆದುಕೊಂಡಿರುವುದಾಗಿ ಆರೋಪಿಸಿ ಈ ಬಗ್ಗೆ ಸ್ವತ: ಭರತ್ ಶೆಟ್ಟಿ ಸಿಸಿಟಿವಿ ವಿಡಿಯೋ ಸಮೇತ ಎಎಸ್ಐ ವಿರುದ್ಧ ಕೋಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ. ಉದ್ಯಮಿ ಭರತ್ ಶೆಟ್ಟಿ ವಿರುದ್ಧ ಮಲ್ಲೇಶ್ವರಂ ವ್ಯಕ್ತಿಯೊಬ್ಬರು ನಿವೇಶನ ವಂಚನೆ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲು …
Read More »ಆರೋಪಿ ನರೇಶ್ ಹಾಗೂ ಶ್ರವಣ್ ಇದೀಗ ಎಸ್ ಐಟಿ ವಿಚಾರಣೆಗೆ ಹಾಜರ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಕೇಸ್ ಗೆ ಸಂಬಂಧಿಸಿದಂತೆ ಕಿಂಗ್ ಪಿನ್ ಗಳೆಂದೇ ಆರೋಪಿಸಲಾಗುತ್ತಿರುವ ನರೇಶ್ ಹಾಗೂ ಶ್ರವಣ್ ಇದೀಗ ಎಸ್ ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಸಿಡಿ ಪ್ರಕರಣ ಬಹಿರಂಗವಾದಾಗಿನಿಂದ ಕಳೆದ 100 ದಿನಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳು ಇದೀಗ ಬೆಂಗಳೂರಿನ ಆಡುಗೋಡಿ ಎಸ್ ಐಟಿ ಟೆಕ್ನಿಕಲ್ ಸೆಲ್ ಗೆ ವಿಚಾರಣೆಗೆ ಹಾಜರಾಗಿದ್ದಾರೆ. ನರೇಶ್ ಹಾಗೂ ಶ್ರವಣ್ ವಿರುದ್ಧ ರಮೇಶ್ ಜಾರಕಿಹೊಳಿ ಹನಿ ಟ್ರ್ಯಾಪ್, ಬ್ಲ್ಯಾಕ್ …
Read More »ಕೋವಿಡ್-19: ರಾಜ್ಯದಲ್ಲಿ 2 ತಿಂಗಳ ಬಳಿಕ ದೈನಂದಿನ ಸೋಂಕು ಪ್ರಮಾಣ ಅತಿಕಡಿಮೆ!
ಬೆಂಗಳೂರು: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಘೋಷಣೆ ಹೊರಬಿದ್ದ ಬೆನ್ನಲ್ಲೇ ಅಚ್ಚರಿ ರೀತಿಯಲ್ಲಿ ರಾಜ್ಯ ಸಹಜ ಸ್ಥಿತಿಗೆ ಬರಲಾರಂಭಿಸಿದೆ. ರಾಜ್ಯದಲ್ಲಿ ಶುಕ್ರವಾರ 8249 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 2 ತಿಂಗಳ ಬಳಿಕ ದೈನಂದಿನ ಸೋಂಕು ಕನಿಷ್ಟಕ್ಕೆ ಕುಸಿದಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಕೊರೋನಾ ಅಬ್ಬರ ಕಡಿಮೆಯಾಗಿದ್ದು, ನಿನ್ನೆ 1,154 ಹೊಸ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಏಪ್ರಿಲ್ 13 ರಂದು 8,778 ಪ್ರಕರಣಗಳು ಪತ್ತೆಯಾಗಿತ್ತು. ಮಾರ್ಚ್ ತಿಂಗಳಿನಲ್ಲಿ …
Read More »ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಲಕ್ಷಾಂತರ ಜನ ವಲಸಿಗರು ರಾಜ್ಯಕ್ಕೆ ವಾಪಸ್
ಬೆಂಗಳೂರು, ಜೂ.12- ಕೋವಿಡ್-19 ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೇ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಲಕ್ಷಾಂತರ ಜನ ವಲಸಿಗರು ರಾಜ್ಯಕ್ಕೆ ವಾಪಸ್ ಬರಲು ಆರಂಭಿಸಿದ್ದು, ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕು ಮತ್ತೊಮ್ಮೆ ಸ್ಫೋಟಗೊಳ್ಳುವ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇತರೆ ರಾಜ್ಯಗಳಿಂದ ಬರುವ ವಲಸಿಗರಿಗೆ ರೈಲ್ವೇ ಹಾಗೂ ಬಸ್ ನಿಲ್ದಾಣಗಳಲ್ಲೇ ಕೋವಿಡ್ ಪರೀಕ್ಷೆಗೊಳಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಲಾಕ್ಡೌನ್ ಸಡಿಲಿಕೆಯಾದ ಬಳಿಕ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಳ್ಳಲಿವೆ. ಬೆಂಗಳೂರು ನಗರಕ್ಕೆ ಹೆಚ್ಚಿನ …
Read More »ಸೋನು ಸೂದ್ ರನ್ನ ಭೇಟಿಯಾಗಲು 700 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿ ಬಂದ ಅಭಿಮಾನಿ..!
ಬಾಲಿವುಡ್ ನಟ ಸೋನು ಸೂದ್ ನಟನೆಗಿಂತ ಹೆಚ್ಚಾಗಿ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಬಡ ಜನರ ಪರವಾಗಿ ನಿಂತಿರುವ ಸೂನ್ ಸೂದ್ರನ್ನ ಭೇಟಿಯಾಗಬೇಕು ಅಂತಾ ವೆಂಕಟೇಶ್ ಎಂಬಾತ ಹೈದರಾಬಾದ್ನಿಂದ ಮುಂಬೈವರೆಗೆ ಕಾಲ್ನಡಿಗೆಯಲ್ಲೇ ಸಾಗಿ ಬಂದಿದ್ದಾನೆ. ಟ್ವಿಟರ್ನಲ್ಲಿ ಅಭಿಮಾನಿಯನ್ನ ಭೇಟಿಯಾದ ಫೋಟೋ ಶೇರ್ ಮಾಡಿರುವ ಸೋನು ಸೂದ್, ಅಭಿಮಾನಿಗಳ ಬಳಿ ನನ್ನ ಭೇಟಿಯಾಗಲು ಈ ರೀತಿಯ ಕಷ್ಟವನ್ನ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. …
Read More »