ಬೆಂಗಳೂರು: ಕಲಾವಿದರ ಸಂಘದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಹೆಸರನ್ನು ಹಾಕದೆ ಅಗೌರವ ನೀಡಲಾಗಿದೆ ಎಂದು ವಿಡಿಯೋ ಮೂಲಕ ನಟ ಅನಿರುಧ್ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಡಾ.ರಾಜ್ಕುಮಾರ್ ಭವನ, ಅಂಬರೀಷ್ ಆಡಿಟೋರಿಯಂ ಇದೆ. ಈ ಎರಡೂ ಹೆಸರನ್ನು ನೋಡಿದಾಗ ನನಗೆ ತುಂಬಾ ಸಂತೋಷ ಆಯ್ತು. ಈ ಬಗ್ಗೆ ನನಗೆ ಗೌರವ ಇದೆ. ಆದರೆ ವಿಷ್ಣು ಅಪ್ಪಾಜಿಗೂ ಅಲ್ಲಿ ಸ್ಥಾನ ನೀಡಿದ್ದರೆ ಚೆನ್ನಾಗಿರುತ್ತಿತ್ತು. ನಾನು …
Read More »ಅಂಬರ್‌ಗ್ರೀಸ್ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?
ಬೆಂಗಳೂರು: ಎಂಟು ಕೋಟಿ ರೂ. ಮೌಲ್ಯದ ತಿಮಿಂಗಲದ ಅಂಬರ್‌ಗ್ರೀಸ್ ವೀರ್ಯ ಅನ್ನು ಮಾರಾಟಕ್ಕೆ ಯತ್ನಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳಿಗೆ ಅಂಬರ್ ಗ್ರೀಸ್ ಅನ್ನು ಕೊಟ್ಟ ಕೋಲಾರ ಮೂಲದ ಆರೋಪಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಪ್ರಕರಕಣದಲ್ಲಿ ಈಗಾಗಲೇ ಮಾಗಡಿ ಮುಖ್ಯರಸ್ತೆಯ ಸೈಯದ್ ತಜ್ಮುಲ್ ಪಷಾ(54), ಪ್ಯಾಲೇಸ್ ಗುಟ್ಟಹಳ್ಳಿಯ ಸಲೀಂ ಪಾಷಾ (48), ನಾಸೀ ಪಾಷಾ(34) ಮತ್ತು ಜೆ.ಪಿ.ನಗರದ ರಫೀ ಉಲ್ಲಾ ಶರೀಫ್ (45) ಅವರನ್ನು ಬಂಧಿಸಲಾಗಿತ್ತು. ಆರೋಪಿಗಳ ವಿಚಾರಣೆಯಲ್ಲಿ ಕೋಲಾರದ ಸಲ್ಮಾನ್ ಎಂಬಾತ …
Read More »ಗೊಂದಲ ದಿಲ್ಲಿಗೆ ವರ್ಗ : ವರಿಷ್ಠರಿಗೆ ವಾಸ್ತವ ವರದಿ ಸಲ್ಲಿಸಲಿರುವ ಅರುಣ್ ಸಿಂಗ್
ಬೆಂಗಳೂರು: ರಾಜ್ಯ ಬಿಜೆಪಿಯ ನಾಯ ಕತ್ವ ಗೊಂದಲಗಳು ಮತ್ತೆ ದಿಲ್ಲಿಗೆ ವರ್ಗಾವಣೆಗೊಂಡಿವೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ತಮ್ಮ ಮೂರು ದಿನಗಳ ರಾಜ್ಯ ಪ್ರವಾಸ ಸಂದರ್ಭದಲ್ಲಿ ಸಚಿವ ರೊಂದಿಗಿನ ಸಂವಾದ, ಶಾಸಕರ ಅಭಿ ಪ್ರಾಯ, ಶಾಸಕರ ಭಿನ್ನಾಭಿ ಪ್ರಾಯದ ಹೇಳಿಕೆಗಳು, ನಾಯ ಕತ್ವದ ಬಗ್ಗೆ ಇರುವ ಆರೋಪ- ಪ್ರತ್ಯಾ ರೋಪಗಳ ಸಂಪೂರ್ಣ ವಿವರ ಸಂಗ್ರಹಿ ಸಿದ್ದು, ಪಕ್ಷದ ವರಿಷ್ಠರಿಗೆ ವಾಸ್ತವ ವರದಿ ನೀಡಲಿದ್ದಾರೆ. ಅರುಣ್ ಸಿಂಗ್ ಭೇಟಿ ಸಂದರ್ಭ ದಲ್ಲಿ ಪ್ರಮುಖವಾಗಿ ನಾಯಕತ್ವದ ಬದಲಾವಣೆಯ ಕುರಿತು ಅಧಿಕೃತ ಚರ್ಚೆ ಆಗದಿದ್ದರೂ …
Read More »ರಾಜಕಾರಣಿಗಳಿಂದ ಕೊರೊನಾ ರೂಲ್ಸ್ ಬ್ರೇಕ್; ಬೆಳಗಾವಿ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ತರಾಟೆ
ಬೆಂಗಳೂರು: ರಾಜಕಾರಣಿಗಳಿಂದ ಕೋವಿಡ್ ರೂಲ್ಸ್ ಬ್ರೇಕ್ ಮಾಡುವ ವಿಚಾರ ಸಂಬಂಧ ರಾಘವೇಂದ್ರ ಎಂಬುವರು ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆಯನ್ನ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ ನಡೆಸಿತು. ರೂಲ್ಸ್ ಬ್ರೇಕ್ ಮಾಡಿ ಬೆಳಗಾವಿಯಲ್ಲಿ ಬಿಜೆಪಿ ನಡೆಸಿದ್ದ ಸಮಾವೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸ್ ಆಯುಕ್ತರ ಪ್ರಮಾಣಪತ್ರಕ್ಕೆ ಹೈಕೋರ್ಟ್ ಗರಂ ಆಯ್ತು. ಆಯುಕ್ತರ ಪ್ರಮಾಣಪತ್ರಗಳು ಹಾಸ್ಯಸ್ಪದವಾಗಿದೆ. ಸಾವಿರಾರು ಜನರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಮಾಸ್ಕ್ ಧರಿಸದವರ ವಿರುದ್ಧ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಪ್ರಶ್ನೆ …
Read More »ಕಾರವಾರದಲ್ಲಿ ಸ್ಯಾಟಲೈಟ್ ಫೋನ್ ಆಯಕ್ಟೀವ್; ಹೆಚ್ಚಿದ ಆತಂಕ
ಬೆಂಗಳೂರು: ಕಾರವಾರದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ ಆಗಿದ್ದು, ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಕಾರವಾರದ ಶಿರವಾಡ ಸಮೀಪದ ಜಾಂಬಾ ಗ್ರಾಮದ ಐದು ಕಿಲೋಮಿಟರ್ ವ್ಯಾಪ್ತಿಯಲ್ಲಿ ಈ ಸ್ಯಾಟಲೈಟ್ ಫೋನ್ ಬಳಕೆಯಾಗಿದೆ ಎನ್ನಲಾಗಿದೆ. ಈ ಸಂಬಂಧ ಕೇಂದ್ರ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ)ದಿಂದ ತನಿಖೆ ಪ್ರಾರಂಭವಾಗಿದೆ. ಕಳೆದ ಸೋಮವಾರದಿಂದ ಸ್ಯಾಟಲೈಟ್ ಫೋನ್ ಸತತವಾಗಿ ಟ್ರಾಕ್ ಆಗುತ್ತಿದೆ ಅಂತಾ ಹೇಳಲಾಗಿದೆ. ತನಿಖಾಧಿಕಾರಿಗಳು ಅರಣ್ಯ ಇಲಾಖೆ ಮತ್ತು ಸ್ಥಳೀಯ ಪೊಲೀಸರ ಸಹಾಯದಿಂದ ಕಾರ್ಯಾಚರಣೆ ಶುರುಮಾಡಿದ್ದಾರೆ. ಈವರೆಗೆ …
Read More »ಅಮಿತ್ ಶಾ ಬೆಳಗಾವಿ ಱಲಿ ಬಗ್ಗೆ ಕ್ರಮಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು: ಬೆಳಗಾವಿಯಲ್ಲಿ ಅಮಿತ್ ಷಾ ಪಾಲ್ಗೊಂಡಿದ್ದ ಱಲಿಯಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಮಾಡಲಾಗಿದೆ ಅಂತ ರಾಘವೇಂದ್ರ ಎಂಬುವವರು ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿದೆ. ಸಾವಿರಾರು ಜನರು ಸಮಾವೇಶದಲ್ಲಿ ಭಾಗಿಯಾಗಿದ್ದು, ಮಾಸ್ಕ್ ಧರಿಸದವರ ವಿರುದ್ಧ ಪೊಲೀಸರು ಕ್ರಮ ಯಾಕೆ ತೆಗೆದುಕೊಂಡಿಲ್ಲ ಅಂತ ಸಿಜೆ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಪ್ರಶ್ನಿಸಿದೆ. ಕೂಡಲೇ ಎಪಿಎಂಸಿ ಯಾರ್ಡ್ ಪೊಲೀಸರಿಗೆ ಕ್ರಮ ತೆಗೆದುಕೊಳ್ಳುವಂತೆ ಕೋರ್ಟ್ ಸೂಚನೆ …
Read More »‘ಅವರ’ ವಿರುದ್ಧ ಬಿಜೆಪಿ ಕ್ರಮಕೈಗೊಳ್ಳಲಿದೆ: ರಾಜ್ಯ ಉಸ್ತುವಾರಿ ಅರುಣ್ ಸಿಂಗ್!
ಬೆಂಗಳೂರು, : ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ಕಳೆದ ಆರು ತಿಂಗಳುಗಳಿಂದ ನಡೆದಿದ್ದ ಚರ್ಚೆಗೆ ಬಿಜೆಪಿ ಹೈಕಮಾಂಡ್ ತಾತ್ಕಾಲಿಕವಾಗಿ ರೆಡ್ ಸಿಗ್ನಲ್ ಕೊಟ್ಟಿದೆ. ಹೈಕಮಾಂಡ್ ಬಯಸಿದಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಲು ಸಿದ್ಧ ಎಂದು ಬಿ.ಎಸ್. ಯಡಿಯೂರಪ್ಪ ಅವರು ಬಹಿರಂಗ ಹೇಳಿಕೆ ಕೊಟ್ಟ ಬಳಿಕ ರಾಜ್ಯ ಬಿಜೆಪಿಯಲ್ಲಿ ಸಂಚಲನ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಇನ್ನೇನೂ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಸಲಾಗುತ್ತದೆ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. ಮೂರು ದಿನಗಳ …
Read More »ಭ್ರಷ್ಟಾಚಾರ ಹಾಗೂ ಫೋನ್ ಕದ್ದಾಲಿಕೆ ,ರಾಜ್ಯ ಸರ್ಕಾರ ವಜಾ ಮಾಡಲಿ – ಸಿದ್ದರಾಮಯ್ಯ
ಬೆಂಗಳೂರು: ಭ್ರಷ್ಟಾಚಾರ ಹಾಗೂ ಫೋನ್ ಕದ್ದಾಲಿಕೆ ಬಗ್ಗೆ ಆಡಳಿತ ಪಕ್ಷದ ಸದಸ್ಯರೇ ಆರೋಪ ಮಾಡಿರುವುದರಿಂದ ರಾಜ್ಯಪಾಲರು ಕೂಡಲೇ ಕೇಂದ್ರಕ್ಕೆ ಪತ್ರ ಬರೆದು ರಾಜ್ಯ ಸರ್ಕಾರವನ್ನು ವಜಾ ಮಾಡಲು ಶಿಫಾರಸ್ಸು ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯನವರು, ಸ್ವಾಮೀಜಿಗಳ ಬಗ್ಗೆ ನಾನು ಮಾತಾಡಲ್ಲ. ಆದರೆ ಬಿಜೆಪಿಯಲ್ಲಿ ಕುರ್ಚಿಗೆ ಕಚ್ಚಾಟ ನಡೀತಿದೆ, ಆಡಳಿತ ಕುಸಿದಿದೆ, ಲೀಡರ್ ಇಲ್ಲ, ಸರ್ಕಾರ ಇಲ್ಲ, ರಾಜ್ಯ ದಿವಾಳಿ ಆಗಿದೆ. ಭ್ರಷ್ಟಾಚಾರ …
Read More »ರಾಜ್ಯ ರಾಜಕೀಯದಲ್ಲಿ ಸಂಚಲನಸೃಷ್ಟಿಸಿದ್ದ ನಾಯಕತ್ವ ಬದಲಾವಣೆ ಗೊಂದಲಕ್ಕೆ ಕೊನೆಗೂ ತೆರೆ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನಸೃಷ್ಟಿಸಿದ್ದ ನಾಯಕತ್ವ ಬದಲಾವಣೆ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಮತ್ತಷ್ಟು ಗಟ್ಟಿಯಾಗಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆ ಮುಕ್ತಾಯಗೊಂಡಿದ್ದು, ಸಭೆಯಲ್ಲಿ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲೇ ಸರ್ಕಾರ ಮುಂದುವರೆಯಲಿದೆ. ಯಡಿಯೂರಪ್ಪನವರೇ ನಮ್ಮ ನಾಯಕರು. ಈ ಬಗ್ಗೆ …
Read More »ಬಹಿರಂಗವಾಗಿ ಮಾತನಾಡಿದ ಬಿಜೆಪಿ ನಾಯಕರಿಗೆ ಶಿಸ್ತು ಕ್ರಮದ ಬಿಸಿ
ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರವಾಗಿ ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗುರ ಉಂಟು ಮಾಡುತ್ತಿರುವವರ ವಿರುದ್ಧ ಶಿಸ್ತು ಕ್ರಮಕ್ಕೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಕೇಂದ್ರ ಶಿಸ್ತು ಸಮಿತಿ ಶಿಫಾರಸ್ಸು ಮಾಡಿದೆ. ಲಿಂಗರಾಜ್ ಪಾಟೀಲ್ ನೇತೃತ್ವದ ಶಿಸ್ತು ಸಮಿತಿ ರಾಜ್ಯ ನಾಯಕರಿಗೆ ಈಗ ಬಿಸಿ ಮುಟ್ಟಿಸಿದೆ. ಕಳೆದ ಕೆಲವು ದಿನಗಳಿಂದ ಕೆಲವು ನಾಯಕರು ಮಾಧ್ಯಮಗಳ ಮೂಲಕ, ಬಹಿರಂಗವಾಗಿ ನಾಯಕತ್ವ ಬದಲಾವಣೆ ವಿಚಾರವಾಗಿ ಪಕ್ಷದ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ಇಂತಹವರ …
Read More »