Breaking News

ಕೋಲಾರ

ಲಾಕ್‍ಡೌನ್ ಸಡಿಲಿಕೆಯಾಗುತ್ತಿದ್ದಂತೆ ತರಕಾರಿಗೆ ಹೆಚ್ಚಾದ ಡಿಮ್ಯಾಂಡ್………….

ಕೋಲಾರ: ಎರಡುವರೆ ತಿಂಗಳ ಕಾಲ ಕೊರೊನಾ ಲಾಕ್‍ಡೌನ್‍ನಿಂದಾಗಿ ಮಾರುಕಟ್ಟೆ ಇಲ್ಲದೆ ಟೊಮ್ಯಾಟೋ ಸೇರಿದಂತೆ ತರಕಾರಿಗಳಿಗೆ ಬೆಲೆ ಇಲ್ಲದೆ ಬೀದಿಗೆ ಸುರಿಯಲಾಗುತಿತ್ತು. ಆದರೆ ಲಾಕ್‍ಡೌನ್ ಸಡಿಲಿಕೆ ಅದೃಷ್ಟವನ್ನೇ ತಂದಿದ್ದು, ಕಂಗಾಲಾಗಿದ್ದ ರೈತ ಸಮುದಾಯ ಚೇತರಿಕೆಯತ್ತ ಹೆಜ್ಜೆ ಹಾಕುತ್ತಿದ್ದಾನೆ. ಬಯಲು ಸೀಮೆ ಕೋಲಾರ ಜಿಲ್ಲೆಯಲ್ಲಿ ಬಹುತೇಕ ರೈತರು ಟೊಮ್ಯಾಟೊ ಸೇರಿದಂತೆ ತರಕಾರಿಗಳನ್ನ ಬೆಳೆಯುತ್ತಾರೆ. ಆದರೆ ಅವರ ಶ್ರಮಕ್ಕೆ ತಕ್ಕಂತೆ ಬೆಲೆ ಸಿಗೋದು ಅಪರೂಪ. ಬೆಲೆ ಸಿಗದೇ ಬೆಳೆದ ಬೆಳೆಯನ್ನು ಬೀದಿಗೆ ಸುರಿದು ಕಣ್ಣೀರಾಕೋದು …

Read More »

ರಾಜ್ಯದ ಗಡಿಯಲ್ಲಿ ಕಾಯುವ ಕೊರೊನಾ ವಾರಿಯರ್ಸ್‍ಗೆ ಭಯ, ಆತಂಕ ಎದುರಾಗಿದೆ.

ಕೋಲಾರ: ಕೊರೊನಾ ಸೋಂಕು ಹರಡದಂತೆ ಹಗಲಿರುಳು ರಾಜ್ಯದ ಗಡಿಯಲ್ಲಿ ಕಾಯುವ ಕೊರೊನಾ ವಾರಿಯರ್ಸ್‍ಗೆ ಭಯ, ಆತಂಕ ಎದುರಾಗಿದೆ. ಗಡಿ ಜಿಲ್ಲೆ ಕೋಲಾರಕ್ಕೆ ನೆರೆ ಯ ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಕಂಟಕವಾಗಿದ್ದು, ಕೊರೊನಾ ವಾರಿಯರ್ಸ್‍ಗೆ ಯಾವುದೇ ಸುರಕ್ಷತೆ ಇಲ್ಲದಂತಾಗಿದೆ. ಆಂಧ್ರ ಹಾಗೂ ತಮಿಳುನಾಡು ಗಡಿಯಲ್ಲಿ ಹಗಲಿರುಳು ಕೆಲಸ ಮಾಡುವ ಸಿಬ್ಬಂದಿಗೆ ಸುರಕ್ಷತೆ ಇಲ್ಲದಂತಾಗಿದೆ. ಸಿಬ್ಬಂದಿ ಮಾಸ್ಕ್ ಮಾತ್ರ ಧರಿಸಿ ಕೆಲಸ ಮಾಡುತ್ತಿದ್ದು, ಹ್ಯಾಂಡ್ ಗ್ಲೌಸ್, ಪಿಪಿಇ ಕಿಟ್ ಇಲ್ಲದೆ ಭಯದಲ್ಲೇ …

Read More »

ಗುಣ ಲಕ್ಷಣಗಳೇ ಇಲ್ಲದಿರೋ ಸೋಂಕಿತರಿಂದ ಕೊರೊನಾಘಾತ……….

ಕೋಲಾರ: ವಿಶ್ವದಾದ್ಯಂತ ಕೊರೊನಾ ಮಹಾಮಾರಿ ಜನರನ್ನು ಕಾಡುತ್ತಾ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಆದರೆ ಜಿಲ್ಲೆಯ ಸೋಂಕಿತರಲ್ಲಿ ಕೊರೊನಾ ಲಕ್ಷಣಗಳೇ ಇಲ್ಲದಿರುವುದು ಆರೋಗ್ಯ ಇಲಾಖೆಗೆ ಹೊಸ ತಲೆ ನೋವಾಗಿ ಪರಿಣಮಿಸಿದೆ. ವಿಶ್ವದೆಲ್ಲೆಡೆ ಕೊರೊನಾ ಸೋಂಕಿತರು ಹಲವು ರೋಗ ಲಕ್ಷಣಗಳಿಂದ ನರಳುತ್ತಿದ್ದರೆ ಜಿಲ್ಲೆಯಲ್ಲಿ ಸದ್ಯ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರು ವಿಭಿನ್ನವಾಗಿ ಕಂಡು ಬಂದಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಒಟ್ಟು 18 ಮಂದಿ ಕೊರೊನಾ ಸೋಂಕಿತರಿದ್ದು, ಯಾರೊಬ್ಬರಲ್ಲೂ ಕೂಡಾ ಸಣ್ಣ ಪ್ರಮಾಣದಲ್ಲೂ ಕೊರೊನಾ ಸೋಂಕಿನ …

Read More »

ಕೋಲಾರದ ಚಿನ್ನದ ಕಳ್ಳನಿಗೂ ಕೊರೊನಾ- ಬಂಧಿಸಿದ ಪೊಲೀಸರಿಗೂ ಸೋಂಕಿನ ಭೀತಿ…..

ಕೋಲಾರ: ಚಿನ್ನದ ಕಳ್ಳರು ನೂರಾರು ಅಡಿ ಆಳದ ಗಣಿ ಪ್ರದೇಶದಲ್ಲಿ ಸಿಲುಕಿ ಭಾರೀ ಸುದ್ದಿಯಾಗಿದ್ದರು. ಗಣಿಗೆ ಇಳಿದಿದ್ದ ಐವರಲ್ಲಿ ಇಬ್ಬರು ಮಣ್ಣಾದರೆ, ಮತ್ತೋರ್ವನ ಶವ ಪಾತಾಳ ಸೇರಿದೆ. ಇದೀಗ ಗಣಿಯಿಂದ ಪಾರಾಗಿ ಬಂದ ಕಳ್ಳನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೆಜಿಎಫ್ ಚಿನ್ನದ ಗಣಿಯಲ್ಲಿ ಕಳ್ಳತನಕ್ಕೆ ಇಳಿದ 5 ಜನರಲ್ಲಿ 3 ಜನ ಮೃತಪಟ್ಟರೆ, ಮತ್ತೊಬ್ಬನಿಗೆ ಕೊರೊನಾ ವಕ್ಕರಿಸಿದೆ. ಕೋಲಾರದ ಕೆಜಿಎಫ್ ನಲ್ಲಿ ಮೇ-13 ರಂದು ರಾತ್ರಿ ಕೆಜಿಎಫ್ ನಗರದ …

Read More »

ರಾತ್ರಿ ಮನೆ ಮುಂದೆ ಮಲಗಿದ್ದ ವೇಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ……..

ಕೋಲಾರ: ರಾತ್ರಿ ಮನೆ ಮುಂದೆ ಮಲಗಿದ್ದ ವೇಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಆಲಗಾನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹರೀಶ್(32) ಕೊಲೆಯಾದ ವ್ಯಕ್ತಿ, ಹೊಡೆತದ ರಭಸಕ್ಕೆ ತಲೆ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಆರೋಪಿಗಳು ಬೃಹತ್ ಕಲ್ಲನ್ನು ಎತ್ತಿ ಹಾಕಿದ್ದಾರೆ. ಅಲ್ಲದೆ ಘಟನೆ ನಂತರ ಕಲ್ಲನ್ನು ಸ್ಥಳದಲ್ಲಿ ಬಿಡದೆ ಅದನ್ನೂ ಎತ್ತಿಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿದ್ದು, …

Read More »

ಮದ್ಯಕ್ಕೆ ಮೊದಲಿದ್ದ ಬೇಡಿಕೆ ಈಗಿಲ್ಲ : ಸಚಿವ ನಾಗೇಶ್

ಕೋಲಾರ, ಮೇ 19- ರಾಜ್ಯದಲ್ಲಿ ಮದ್ಯಕ್ಕೆ ಮೊದಲು ಇದ್ದ ಬೇಡಿಕೆ ಸದ್ಯಕ್ಕಿಲ್ಲ ಹಾಗಾಗಿ ಆದಾಯ ಕಡಿಮೆಯಾಗಿದೆ ಎಂದು ಅಬಕಾರಿ ಸಚಿವ ನಾಗೇಶ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ನಂತರ ಮದ್ಯ ಪೂರೈಕೆಗೆ ಅವಕಾಶ ನೀಡಿದ ಮೊದಲ ವಾರದಲ್ಲಿ ಕಲೆಕ್ಷನ್ ಚೆನ್ನಾಗಿ ಆಗಿತ್ತು. ಆದರೆ, ಈಗಿಲ್ಲ. ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಲಾಡ್ಜ್‍ಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಆದಾಯ ಕಡಿತವಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು

Read More »

ಕೊರೊನಾ ಸೋಂಕಿತ ಕೋಲಾರದಿಂದ ಎಸ್ಕೇಪ್, ಬೆಂಗಳೂರಲ್ಲಿ ಪ್ರತ್ಯಕ್ಷ………..

ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಸೋಂಕಿತರ ಸಂಖ್ಯೆ 6ಕ್ಕೇರಿದೆ. ಸೋಂಕಿತ ಕೋರ್ಟ್ ಉದ್ಯೋಗಿಯ ಟ್ರಾವಲ್ ಹಿಸ್ಟರಿ ಮೂರು ನಗರಗಳ ನಿದ್ದೆಗೆಡಿಸಿದೆ. ಯಾಕೆಂದರೆ ಸೋಂಕಿತನೊಬ್ಬ ಎಸ್ಕೇಪ್ ಆಗಿದ್ದು, ಎಲ್ಲರ ಕಣ್ಣುತಪ್ಪಿಸಿ ಬೆಂಗಳೂರಿಗೆ ಬಂದುಬಿಟ್ಟಿದ್ದ. ಕೊನೆಗೆ ಆರೋಗ್ಯಾಧಿಕಾರಿಗಳು ಹುಡುಕಾಟ ನಡೆಸಿ ಎಸ್ಕೇಪ್ ಆಗಿದ್ದ ಸೋಂಕಿತನ್ನು ಲಾಕ್ ಮಾಡಿ, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಐಸೋಲೇಶನ್ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ. ಕೋಲಾರದ ಗಾಂಧಿನಗರದಲ್ಲಿ ವಾಸವಿದ್ದ ಮಂಡ್ಯ ಮೂಲದ ಕೋರ್ಟ್ ಉದ್ಯೋಗಿಯಲ್ಲಿ ಕೊರೊನಾ ಸೋಂಕು ಲಕ್ಷಣ ಕಂಡುಬಂದಿತ್ತು. ಗಂಟಲು …

Read More »

ರಮೇಶ್ ಕುಮಾರ್ ಲಾಕ್‍ಡೌನ್ ಉಲ್ಲಂಘನೆ- ನೂರಾರು ಜನ ಸೇರಿಸಿ ಕೆರೆ ಪೂಜೆ….

ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೂರಾರು ಜನರನ್ನು ಸೇರಿಸಿ ಕರೆಯಲ್ಲಿ ಪೂಜೆ ಮಾಡುವ ಮೂಲಕ ಲಾಕ್‍ಡೌನ್ ನಿಯಮ ಉಲ್ಲಂಘಿಸಿದ್ದಾರೆ. ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆಲವಾಟ್ಟ ಗ್ರಾಮದ ಕೆರೆಗೆ ಕೆ.ಸಿ.ವ್ಯಾಲಿ ನೀರು ಹರಿದ ಹಿನ್ನೆಲೆ ತಮ್ಮದೆ ಮುಖಂಡರು, ಸ್ಥಳೀಯರನ್ನು ಸೇರಿಸಿಕೊಂಡು ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಪೂಜೆ ವೇಳೆ ನೂರಾರು ಜನರ ಜಮಾವಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಮಾಜಿ ಸ್ಪೀಕರ್ ವಿರುದ್ಧ ಹಲವರು …

Read More »

ಚಿನ್ನದ ಗಣಿಯಲ್ಲಿ ಕಳ್ಳತನಕ್ಕೆ ಯತ್ನ- ಮೂವರ ಸಾವು, ಇಬ್ಬರು ಅರೆಸ್ಟ್………..

ಕೋಲಾರ: ಚಿನ್ನದ ಗಣಿಯಲ್ಲಿ ಚಿನ್ನ ಕಳ್ಳತನಕ್ಕೆಂದು ತೆರಳಿದ್ದ ಐವರಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರನ್ನ ಬಂಧಿಸಿರುವ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ಜಿಲ್ಲೆ ಕೆಜಿಎಫ್ ನಗರದ ಮಾರಿಕುಪ್ಪಂನ ಮೈಸೂರು ಮೈನಿಂಗ್ ನಲ್ಲಿ ಈ ಘಟನೆ ಜರುಗಿದ್ದು, ಮೂವರು ಕಳ್ಳರು ಮೃತಪಟ್ಟಿದ್ದಾರೆ. ಕಳೆದ ರಾತ್ರಿ ಕೆಜಿಎಫ್ ನ ಐವರು ನಿವಾಸಿಗಳು ಚಿನ್ನದ ಗಣಿಯಲ್ಲಿ ಚಿನ್ನ ಕಳ್ಳತನಕ್ಕೆಂದು ತೆರಳಿದ್ದರು. ಚಿನ್ನದ ಗಣಿಯ ಗುಂಡಿಯಲ್ಲಿ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಕೆಜಿಎಫ್ ನಗರದ ಬಿ-ಶಾಪ್ ನ …

Read More »

ಕೋಲಾರಕ್ಕೆ ಕೊರೊನಾ ಭಯ!- ಕೆಜಿಎಫ್‍ಗೆ ಹೊಂದಿಕೊಂಡಿರುವ ವಿ.ಕೋಟಾದಲ್ಲಿ 5 ಪ್ರಕರಣ

ಕೋಲಾರ: ಲಾಕ್‍ಡೌನ್ ಸಡಿಲಿಕೆ ಹಾಗೂ ಗಡಿ ರಾಜ್ಯಗಳಲ್ಲಿ ಪತ್ತೆಯಾಗಿರುವ ಕೊರೊನಾ ಪ್ರರಕಣಗಳ ಸಂಖ್ಯೆಯಿಂದ ಜಿಲ್ಲೆಯ ಜನರದಲ್ಲಿ ಆತಂಕ ಮೂಡಿದ್ದು, ಗ್ರೀನ್ ಝೋನ್‍ನಲ್ಲಿರುವ ಜಿಲ್ಲೆ ತನ್ನ ಬಣ್ಣ ಬದಲಿಸುವ ಭಯ ಶುರುವಾಗಿದೆ. ರಾಜ್ಯದಲ್ಲಿ ಗ್ರೀನ್ ಝೋನ್‍ನಲ್ಲಿರುವ ಜಿಲ್ಲೆಗಳ ಪೈಕಿ ಕೋಲಾರವೂ ಒಂದು. ಆದರೆ ಕೋಲಾರ ಗ್ರೀನ್ ಝೋನ್‍ನಲ್ಲಿದ್ದರು ಡೇಂಜರ್ ಝೋನ್‍ನಲ್ಲಿರುವ ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿದೆ. ಜಿಲ್ಲೆಯ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಸುತ್ತಲೂ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆಂಧ್ರದ …

Read More »