ಉಡುಪಿ: ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಬಂಡೆಗೆ ಬಡಿದು ನಾಲ್ವರು ಮೀನುಗಾರರು ಕಣ್ಮರೆಯಾಗಿದ್ದು, ಕ್ರೇನ್ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಬೈಂದೂರು ತಾಲೂಕು ಕಿರಿಮಂಜೇಶ್ವರದ ಕೊಡೇರಿಯಲ್ಲಿ ದುರ್ಘಟನೆ ನಡೆದಿದ್ದು, ಕೊಡೇರಿ ಅಳಿವೆಬಾಗಿಲಿನಲ್ಲಿ ಕಣ್ಮರೆಯಾದ ನಾಲ್ವರಿಗೆ ಶೋಧ ಕಾರ್ಯ ನಡೆಯುತ್ತಿದೆ. 11 ಮಂದಿ ಮೀನುಗಾರರಿದ್ದ ಬೋಟ್ ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಇದರಲ್ಲಿ 7 ಜನ ಈಜಿ ದಡ ಸೇರಿದ್ದಾರೆ. ನಾಲ್ವರು ಕಾಣೆಯಾಗಿದ್ದಾರೆ.
Read More »ಗೃಹ ಸಚಿವರ ಚಪ್ಪಲಿಯನ್ನು ಎತ್ತಿಕೊಂಡು ಹೋಗಿದ್ದ ಸಮುದ್ರದ ಚಪ್ಪಲಿಯನ್ನು ದಡಕ್ಕೆ ಎಸೆದಿದೆ
ಉಡುಪಿ: ರಾಜ್ಯ ಗೃಹ ಸಚಿವ ಉಡುಪಿ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಮೇಲೆ ಸಮುದ್ರ ರಾಜ ಎರಗಿದ್ದಾನೆ. ಉಡುಪಿಯ ನೆರೆಪೀಡಿತ ಪ್ರದೇಶಗಳ ಪ್ರವಾಸ ಕೈಗೊಂಡ ಸಂದರ್ಭ ಸಮುದ್ರದ ಅಲೆ ಸಚಿವ ಬೊಮ್ಮಾಯಿ ಅವರಿಗೆ ಬಡಿದಿದೆ. ಉಡುಪಿ ಜಿಲ್ಲೆ ಕಾಪು ತಾಲೂಕು ಪಡುಬಿದ್ರೆ ಕಡಲಕಿನಾರೆಗೆ ಬಸವರಾಜ್ ಬೊಮ್ಮಾಯಿ ಮೊದಲ ಭೇಟಿ ಕೊಟ್ಟರು. ಸಮುದ್ರ ಕೊರೆತ ವೀಕ್ಷಿಸಿದ ಬೊಮ್ಮಾಯಿ, ಅರಬ್ಬಿ ಸಮುದ್ರಕ್ಕೆ ಇಳಿದರು. ಈ ಸಂದರ್ಭ ಬೃಹತ್ ಗಾತ್ರದ ಅಲೆ ಗೃಹ ಸಚಿವ …
Read More »ಉಡುಪಿಯಲ್ಲಿ ನಾಳೆ ಕೃಷ್ಣಜನ್ಮಾಷ್ಟಮಿ ಆಚರಣೆ ಇಲ್ಲ
ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಾಳೆ ಅಷ್ಟಮಿ ಆಚರಣೆ ನಡೆಯುತ್ತಿಲ್ಲ. ಸೆಪ್ಟೆಂಬರ್ 11ಕ್ಕೆ ಶ್ರೀಕೃಷ್ಣಜನ್ಮಾಷ್ಟಮಿ ಆಚರಿಸಲು ಉಡುಪಿ ಕೃಷ್ಣಮಠ ತೀರ್ಮಾನಿಸಿದೆ. ಚಾಂದ್ರಮಾನ ಪದ್ಧತಿಯ ಪ್ರಕಾರ ನಾಳೆ ಅಷ್ಟಮಿ ನಾಡಿನಾದ್ಯಂತ ನಡೆಯುತ್ತಿದೆ. ಉಡುಪಿ ಶ್ರೀಕೃಷ್ಣಮಠ ಸೌರಮಾನ ಪದ್ಧತಿಯನ್ನು ಅನುಸರಿಸುವ ಧಾರ್ಮಿಕ ಕೇಂದ್ರ. ಅಗಸ್ಟ್ 11ಕ್ಕೆ ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯುತ್ತಿದ್ದು, ಕೃಷ್ಣನ ನಾಡು ಉಡುಪಿಯಲ್ಲಿ ಒಂದು ತಿಂಗಳು ನಂತರ ಆಚರಣೆ ನಡೆಯಲಿದೆ. ಶ್ರೀಕೃಷ್ಣ ಹುಟ್ಟಿದ್ದು, ಸಿಂಹಮಾಸ ಕೃಷ್ಣ ಪಕ್ಷ ರೋಹಿಣಿ ನಕ್ಷತ್ರ …
Read More »ಜೆಸಿಬಿ ಇಳಿಸಿ ರಸ್ತೆ ಕ್ಲೀನ್ ಮಾಡಿದ ಜನಪ್ರತಿನಿಧಿಗಳು….
ಉಡುಪಿ: ರಸ್ತೆಯಲ್ಲಿದ್ದ ಮರಳನ್ನು ಕಾಪುವಿನ ಜನಪ್ರತಿನಿಧಿಗಳು ಮುಂದೆ ನಿಂತು ಸ್ವಚ್ಛಗೊಳಿಸಿದ್ದಾರೆ. ಭಾರೀ ಮಳೆಯಾಗುತ್ತಿರುವುದರಿಂದ ಅರಬ್ಬಿ ಸಮುದ್ರದ ಅಬ್ಬರ ಕೂಡ ಜಾಸ್ತಿಯಾಗಿದೆ. ಕಾಪು ತಾಲೂಕಿನ ಉದ್ಯಾವರ ತೀರದಲ್ಲಿ ಕಡಲು ಕೊರೆತದಿಂದ ರಸ್ತೆ ಸಂಪರ್ಕ ಸಮಸ್ಯೆ ಉಂಟಾಗಿದೆ.ಭಾರಿ ಮಳೆ ಹಿನ್ನೆಲೆ ಕನಕೋಡ ಉದ್ಯಾವರ ಪಡುಕರೆಯಲ್ಲಿ ಕಡಲಬ್ಬರ ಜಾಸ್ತಿಯಾಗಿದ್ದು, ಕಡಲಿನ ಆರ್ಭಟಕ್ಕೆ ರಾಶಿ ರಾಶಿ ಮರಳು ದಡಕ್ಕೆ ಉಕ್ಕಿ ಬರುತ್ತಿದೆ. ಅಲೆಗಳ ಜೊತೆ ಭಾರಿ ಪ್ರಮಾಣದ ಮರಳು ಕೂಡ ಮೀನುಗಾರಿಕಾ ರಸ್ತೆಯನ್ನು ಸೇರುತ್ತಿದೆ. ಕಡಲು …
Read More »ದುರ್ಗಾಪರಮೇಶ್ವರಿಗೆ ನದಿ ನೀರ ಅಭಿಷೇಕ- ಕಮಲಶಿಲೆ ದೇಗುಲದೊಳಕ್ಕೆ ಹರಿದ ಕುಬ್ಜಾ ನದಿ
ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕು ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಬ್ಜಾ ನದಿಯ ನೀರು ಹರಿದಿದೆ. ಕುಬ್ಜಾ ನದಿ ತೀರದಲ್ಲಿರುವ ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಕುಬ್ಜೆ ದುರ್ಗಾ ದೇವಿಯ ಪಾದ ತೊಳೆಯಲು ಗರ್ಭಗುಡಿಗೆ ಬರುತ್ತಾಳೆ ಎಂಬ ನಂಬಿಕೆ ಇದೆ. ಈ ಬಾರಿಯೂ ಸಂಪ್ರದಾಯ ಮುಂದುವರಿದಿದೆ. ಈ ರೀತಿ ಪ್ರವಾಹದ ನೀರು ಉಕ್ಕಿ ಗರ್ಭಗುಡಿಗೆ ಪ್ರವೇಶ ಮಾಡಿದಾಗ ದೇವರಿಗೆ ವಿಶೇಷ ಮಂಗಳಾರತಿ ನಡೆಯುತ್ತದೆ. ಪ್ರತಿವರ್ಷ ಈ ರೀತಿ ನದಿಯ ನೀರು ಗರ್ಭಗುಡಿ …
Read More »ರಾಮಮಂದಿರಕ್ಕೆ ಅಂಜನಾದ್ರಿ ಶಿಲೆ – ಪೇಜಾವರಶ್ರೀ ಮೂಲಕ ಅಯೋಧ್ಯೆಗೆ ರವಾನೆ
ಉಡುಪಿ: ಭಗವಾನ್ ಶ್ರೀ ರಾಮಚಂದ್ರನ ಮಂದಿರಕ್ಕೆ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆಯಲಿದೆ. ರಾಮಮಂದಿರ ಶಿಲಾನ್ಯಾಸದ ಹಿನ್ನೆಲೆಯಲ್ಲಿ ದೇಶವ್ಯಾಪಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದೆ. ಇಡೀ ದೇಶದ ಪವಿತ್ರ ಕ್ಷೇತ್ರಗಳ ಮಣ್ಣು ಮತ್ತು ನೀರಿನ ಸಂಗ್ರಹ ಒಂದೆಡೆ ನಡೆಯುತ್ತಿದ್ದರೆ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಶಿಲೆಯನ್ನು ಮೆರವಣಿಗೆ ಮೂಲಕ ತಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಒಪ್ಪಿಸಲಾಗಿದೆ. ಶ್ರೀರಾಮ ಸೇನೆಯ ರಾಜ್ಯ ಮುಖಂಡ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮೆರವಣಿಗೆಯ …
Read More »ತೆಂಗಿನ ಗರಿಯಲ್ಲಿ ಸರಳವಾಗಿ ಹಾವು ಹಿಡಿಯುವ ವಿಧಾನ ತಿಳಿಸಿದ ಪೇಜಾವರಶ್ರೀ
ಉಡುಪಿ: ಸ್ವಾಮೀಜಿ ಅಂದರೆ ಪೂಜೆ ಪುನಸ್ಕಾರ ಮಾಡುತ್ತಾರೆ. ಪಾಠ ಪ್ರವಚನ ಮಾಡಿ ಮಠದಲ್ಲಿ ಇರುತ್ತಾರೆ. ಲೋಕ ಸಂಚಾರ ಮಾಡಿ ಧರ್ಮ ಜಾಗೃತಿ ಮೂಡಿಸುತ್ತಾರೆ. ಆದರೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಇದೆಲ್ಲ ಮಾಡುವ ಜೊತೆಗೆ ಕೃಷಿ, ಹೈನುಗಾರಿಕೆಯಲ್ಲೂ ಪಾಲ್ಗೊಳ್ಳುತ್ತಾರೆ. ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿಭಿನ್ನ ಅಭಿರುಚಿಯ ಸ್ವಾಮೀಜಿ. ಸನ್ಯಾಸದ ಜೊತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ನೀಲಾವರ …
Read More »ಕೆಎಂಸಿಯಲ್ಲಿ ಕೊರೊನಾ ಚಿಕಿತ್ಸೆ ನಡುವೆ ಪುತ್ತಿಗೆ ಶ್ರೀಗಳಿಂದ ಪ್ರತಿದಿನ ಪೂಜೆ
ಉಡುಪಿ: ಪುತ್ತಿಗೆ ಸ್ವಾಮೀಜಿಗೆ ಕೊರೊನಾ ಸೋಂಕು ಹರಡಿದ್ದು, ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಸ್ವಾಮೀಜಿ ವಿಶ್ರಾಂತಿಯ ಜೊತೆಗೆ ನಿರಂತರ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದಾರೆ. ಅನುಷ್ಠಾನಗಳನ್ನು ಮಾಡುತ್ತಿದ್ದಾರೆ. ಆaಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೂ ನಿತ್ಯ ಜಪ ಅನುಷ್ಠಾನಗಳಲ್ಲಿ ಪುತ್ತಿಗೆ ಶ್ರೀಗಳು ತೊಡಗಿಸಿಕೊಂಡಿರುವುದು ಗಮನಸೆಳೆದಿದೆ. ಉಡುಪಿ ಮಾತ್ರವಲ್ಲ ಅಮೆರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ತಮ್ಮ ಶಾಖಾಮಠಗಳನ್ನು ಹೊಂದಿರುವ ಸ್ವಾಮೀಜಿ ಈ ಬಾರಿ ಉಡುಪಿಯಲ್ಲೇ ಚಾತುರ್ಮಾಸ್ಯ ವೃತ ಕೈಗೊಂಡಿದ್ದರು.ಚಾತುರ್ಮಾಸ್ಯಕ್ಕೆ ಸಂಕಲ್ಪ ಮಾಡಿದ್ದ ಸಮಯದಲ್ಲಿ …
Read More »ಮಣಿಪಾಲ ಕೆಎಂಸಿಯ ಹದಿನೆಂಟು ವೈದ್ಯರಿಗೆ ಕೊರೊನಾ ಸೋಂಕು ದೃಢ:ಒಂದು ವಾರ ಒಪಿಡಿ ಬಂದ್
ಉಡುಪಿ: ಮಣಿಪಾಲ ಕೆಎಂಸಿಯ ಹದಿನೆಂಟು ವೈದ್ಯರಿಗೆ ಕೊರೊನಾ ಸೋಂಕು ದೃಢವಾಗಿದೆ. ಅಲ್ಲದೇ 20ಕ್ಕಿಂತಲೂ ಹೆಚ್ಚು ನರ್ಸ್, ಆಸ್ಪತ್ರೆಯ ಸಿಬ್ಬಂದಿಯಲ್ಲಿ ಕೋವಿಡ್ 19 ಕಾಣಿಸಿಕೊಂಡಿದೆ. ಹೀಗಾಗಿ ಒಂದು ವಾರ ಒಪಿಡಿ ಬಂದ್ ಮಾಡಲಾಗಿದೆ. ಕೊರೊನಾ ವಾರಿಯರ್‌ಗಳಿಗೆ ಒಂದು ವಾರ ಒಪಿಡಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಒಂದು ವಾರಗಳ ಕಾಲ ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ ಎಲ್ಲಾ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಲಿದೆ. ಹೊರ ರಾಜ್ಯ ಮತ್ತು ಜಿಲ್ಲೆಯಿಂದ ಕೆಎಂಸಿಗೆ ಆಗಮಿಸುವ ಎಲ್ಲ …
Read More »ನ್ಯಾಯಾಧೀಶರಿಗೆ ಕೊರೊನಾ- ಉಡುಪಿ ಕೋರ್ಟ್ 2 ದಿನ ಸೀಲ್‍ಡೌನ್
ಉಡುಪಿ: ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಒಂದನೇ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ವೈದ್ಯಕೀಯ ಮೂಲಗಳು ಮಾಹಿತಿ ನೀಡಿದೆ. ಉಡುಪಿ ನಗರದ ಒಳಗಿರುವ ನ್ಯಾಯಾಲಯದ ಒಂದು ವಿಭಾಗವನ್ನು ಸದ್ಯ ಸೀಲ್‍ಡೌನ್ ಮಾಡಲಾಗಿದೆ ಎಂದು ಮಾಹಿತಿ ಇದೆ. ಮುಂದಿನ ಎರಡು ದಿನ ಉಡುಪಿ ಜಿಲ್ಲಾ ನ್ಯಾಯಾಲಯದ ಒಳಗೆ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ ಸಂಪೂರ್ಣ ಸ್ಯಾನಿಟೈಸ್ ಪ್ರಕ್ರಿಯೆಯನ್ನು ಮಾಡಲಾಗುವುದು. ನ್ಯಾಯಾಧೀಶರ ಸಂಪರ್ಕಕ್ಕೆ ಬಂದ ಎಲ್ಲಾ ಸಿಬ್ಬಂದಿಗಳಿಗೆ …
Read More »
Laxmi News 24×7