ಬೆಂಗಳೂರು,ಫೆ.2- ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನವಾಗುವ ಸಾಧ್ಯತೆಗಳಿಲ್ಲ. ನಮ್ಮ ಮತ ನಮಗೆ, ಅವರ ಮತ ಅವರಿಗೆ ಬೀಳಲಿವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್‍ಗೆ 3, ಬಿಜೆಪಿ-ಜೆಡಿಎಸ್‍ಗೆ 1 ಸ್ಥಾನದ ಹಂಚಿಕೆಯಾಗಬಹುದು. ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರಿಂದ ಅಡ್ಡ ಮತದಾನವಾಗುವ ಆತಂಕ ಇಲ್ಲ. ಅಗತ್ಯವಾಗಿ ಲಕ್ಷ್ಮಣ ಸವದಿ ಹಾಗೂ ಇತರರ ಹೆಸರುಗಳನ್ನು ತೇಲಿಬಿಡಲಾಗುತ್ತಿದೆ ಎಂದರು. ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಕರ್ನಾಟಕ …
Read More »ಚರ್ಚೆಗೆ ಗ್ರಾಸವಾದ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿಕೆ
ಬೆಂಗಳೂರು,ಫೆ.3- ಮುಜರಾಯಿ ದೇವಸ್ಥಾನದಲ್ಲಿ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ನೀಡದೆ ಅಸ್ಪೃಶ್ಯತೆ ಹಾಗೂ ತಾರತಮ್ಯ ಮಾಡಲಾಯಿತು ಎಂದು ಚಿತ್ರದುರ್ಗದ ಕನಕಪೀಠದ ಈಶ್ವರಾನಂದ ಪುರಿ ಸ್ವಾಮೀಜಿ ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಶ್ರೀಗಳು ನಿನ್ನೆ ನೀಡಿದ ಹೇಳಿಕೆಗೆ ದೇವಸ್ಥಾನದ ಅರ್ಚಕರು ಸ್ಪಷ್ಟನೆ ನೀಡಿ ನಮ್ಮಲ್ಲಿ ಆ ರೀತಿ ಯಾವುದೇ ತಾರತಮ್ಯವಿಲ್ಲ. ಪ್ರತಿ ವರ್ಷ ವೈಕುಂಠ ಏಕಾದಶಿ ದರ್ಶನಕ್ಕೆ ನಾವೇ ಶ್ರೀಗಳನ್ನು ಆಹ್ವಾನ ಮಾಡುತ್ತೇವೆ. ದೇವಸ್ಥಾನದಿಂದ ಸಕಲ ಗೌರವ, ಸನ್ಮಾನಗಳನ್ನು ಮಾಡಿ ವಿನಯಪೂರಕವಾಗಿ …
Read More »ಸದಾನಂದ ಕಾರ್ಕಳ ರವರಿಗೆ “ಕಾಯಕ ರತ್ನ ” ಪ್ರಶಸ್ತಿ…!!
ಬೆಳಗಾವಿ : ನಡೆದಾಡುವ ದೇವರ ಸೇವಾ ಟ್ರಸ್ಟ್ ಬೆಂಗಳೂರು ಇವರು ಹಮ್ಮಿಕೊಂಡಿರುವ ಸಿದ್ಧಗಂಗಾ ಶ್ರೀ ಗಳ 5ನೇ ಪುಣ್ಯಸ್ಮರಣೋತ್ಸವ ಹಾಗೂ ದಾಸೋಹ ದಿನದ ಪ್ರಯುಕ್ತ ಬೆಂಗಳೂರಿನ ಕನ್ನಡ ಪರಿಷತ್ ಭವನ ಚಾಮರಾಜಪೇಟೆಯಲ್ಲಿ “ಕಾಯಕ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಸಿದ್ಧಗಂಗಾ ಶ್ರೀ ಗಳ ಆಶೀರ್ವಾದದಿಂದ ಪ್ರಾರಂಭವಾಗಿರುವ ಶ್ರೀ ಸೇವಾಲಯ ಸೇವಾ ಸಮಿತಿ ಟ್ರಸ್ಟ್ ಬೆಂಗಳೂರು, ಈ ಟ್ರಸ್ಟ್ ನ ನಿರಂತರ ಸಮಾಜ ಸೇವೆಯ ಕಾರ್ಯ ಸಾಧನೆಯ …
Read More »ಅಡ್ವಾಣಿಯವರಿಗೆ ಭಾರತರತ್ನ ನೀಡಿರುವುದು ಸ್ವಾಗತಾರ್ಹ : ಸಿಎಂ
ದಾವಣಗೆರೆ,ಫೆ.3- ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರಿಗೆ ಭಾರತ ರತ್ನ ನೀಡುವುದು ಸ್ವಾಗತಾರ್ಹ. ಆದರೆ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡ್ವಾಣಿಯವರಿಗೆ ಪ್ರಶಸ್ತಿ ಕೊಡಲಿ ಪಾಪ, ಬೇಡ ಎಂದು ಹೇಳಿದವರ್ಯಾರು ಎಂದರು. ತುಮಕೂರಿನ ಸಿದ್ದಗಂಗಾ ಸ್ವಾಮೀಜಿಯವರಿಗೆ ಭಾರತ ರತ್ನ ಕೊಡುವಂತೆ ತಾವು ಪತ್ರ ಬರೆದಿದ್ದೆವು ಎಂದು ಸ್ಮರಿಸಿಕೊಂಡರು. ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳ ಬಿಲ್ ಪಾವತಿಸಲು ವಿಳಂಬ …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..
! ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲ್ಲೂಕಿನ ಚುಂಚನೂರ ಗ್ರಾಮದ ಶ್ರೀ ಹನುಮಾನ್ ಮಂದಿರ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ …
Read More »ಸಂಗೀತ ಸಾಮ್ರಾಟ್ ಸವಾಯಿ ಗಂಧರ್ವರ ಸ್ಮಾರಕಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ.
ಕುಂದಗೋಳ: ಇಲ್ಲಿನ ಸಂಗೀತ ಸಾಮ್ರಾಟ್ ಸವಾಯಿ ಗಂಧರ್ವರ ಸ್ಮಾರಕಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಕಿತ್ತುಹೋದ ಸ್ಮಾರಕದ ಚಾವಣಿ, ಆರಣದಲ್ಲಿ ಬೆಳೆದ ಕಳೆ ಕಸ, ಬಿದ್ದಿರುವ ಸಾರಾಯಿ ಪಾಕೀಟು, ಪ್ಲಾಸ್ಟಿಕ್, ದೂಳು ತುಂಬಿದ ಆವರಣ ಇದು ಪಟ್ಟಣದ ಹಿಂದೂಸ್ತಾನಿ ಸಂಗೀತಕ್ಕೆ ತನ್ನದೆ ಆದ ಕೊಡುಗೆ ನೀಡಿದ ಸಂಗೀತ ಸಾಮ್ರಾಟ್ ಸವಾಯಿ ಗಂಧರ್ವರ ಸ್ಮಾರಕ ಭವನದ ದುಃಸ್ಥಿತಿಯನ್ನು ಹೇಳುತ್ತಿವೆ. 2010ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಭವನದ ಶಂಕುಸ್ಥಾಪನೆಯಾಗಿ, ಜಗದೀಶ ಶೆಟ್ಟರ್ …
Read More »ಫೆಬ್ರುವರಿ 4ರಂದು ಬೆಸ್ತರ ಬೃಹತ್ ಸಮಾವೇಶ- ವಿಪ ಸದಸ್ಯ ಸಾಯಬಣ್ಣ ತಳವಾರ
ಬೆಳಗಾವಿ: ‘ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜ ಸಂಘ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಆಶ್ರಯದಲ್ಲಿ ನಗರದ ಸರ್ದಾರ್ ಮೈದಾನದಲ್ಲಿ ಫೆಬ್ರುವರಿ 4ರಂದು ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಹಾಗೂ ಸಮಾಜದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಾಯಬಣ್ಣ ತಳವಾರ ಹೇಳಿದರು. ‘ಕೋಲಿ, ಕಬ್ಬಲಿಗ, ಬೆಸ್ತ ಮುಂತಾಗಿ ಎಲ್ಲ ಉಪನಾಮಗಳನ್ನೂ ಒಳಗೊಂಡು ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಮೂರು …
Read More »‘ನಾನು ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ಹೈಕಮಾಂಡ್ ಹೇಳಿದಂತೆ ಕೇಳಲು ನಾನು ಫುಟ್‌ಬಾಲ್ ಅಲ್ಲ: ಪ್ರಕಾಶ ಹುಕ್ಕೇರಿ
ಚಿಕ್ಕೋಡಿ: ‘ನಾನು ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ವಿಧಾನ ಪರಿಷತ್ ಸದಸ್ಯನಾಗಿ ಇರುತ್ತೇನೆ. ಹೈಕಮಾಂಡ್ ಹೇಳಿದಂತೆ ಕೇಳಲು ನಾನು ಫುಟ್‌ಬಾಲ್ ಅಲ್ಲ’ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ ಪ್ರಶ್ನಿಸಿದರು. ತಾಲ್ಲೂಕಿನ ಕೇರೂರು ಗ್ರಾಮದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘2014ರಲ್ಲಿ ರಾಜ್ಯದಲ್ಲಿ ಸಚಿವನಾಗಿದ್ದ ವೇಳೆ ಒಮ್ಮೆ ಒದ್ದರು, ದೆಹಲಿಗೆ ಹೋಗಿ ಬಿದ್ದೆ. ಅಲ್ಲಿಂದ ಒದ್ದರು, ವಿಧಾನ ಪರಿಷತ್‌ಗೆ ಬಂದೆ. ಈಗ ಮತ್ತೆ …
Read More »ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿಫೆ.3 ರಂದು ರಾಯಬಾಗ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ
ಫೆ.3 ರಂದು ರಾಯಬಾಗ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಬೆಳಗಾವಿ, ಫೆ.2(ಕರ್ನಾಟಕ ವಾರ್ತೆ): ರಾಯಬಾಗ ತಾಲೂಕಿನ ವಿವಿಧ ಇಲಾಖೆಯ ತಾಲೂಕಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಶನಿವಾರ (ಫೆ.03) ನಂದಿಕುರಳಿ ರಸ್ತೆಯಲ್ಲಿ ಬರುವ ಹೆಸ್ಕಾಂ ವಿಭಾಗೀಯ ಕಚೇರಿಯ ಸಭಾ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆದಕಾರಣ ತಾಲೂಕಿನ ಸಾರ್ವಜನಿಕರು ತಮಗೆ ಸಂಬಂಧಿಸಿದ ಕುಂದುಕೊರತೆಗಳ …
Read More »ಜಿಲ್ಲಾಸ್ಪತ್ರೆಯಲ್ಲಿ ‘ಅಮೃತಧಾರೆ’ ಎದೆಹಾಲು ಸಂಗ್ರಹ ಬ್ಯಾಂಕ್ ಉದ್ಘಾಟನೆಯಾಗಿ ಎರಡು ತಿಂಗಳಾದರೂ ಕಾರ್ಯಾರಂಭ ಮಾಡಿಲ್ಲ.
ಬೆಳಗಾವಿ: ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬಿಮ್ಸ್) ಜಿಲ್ಲಾಸ್ಪತ್ರೆಯಲ್ಲಿ ‘ಅಮೃತಧಾರೆ’ ಎದೆಹಾಲು ಸಂಗ್ರಹ ಬ್ಯಾಂಕ್ ಉದ್ಘಾಟನೆಯಾಗಿ ಎರಡು ತಿಂಗಳಾದರೂ ಕಾರ್ಯಾರಂಭ ಮಾಡಿಲ್ಲ. ಎದೆಹಾಲಿನ ಕೊರತೆಯಿಂದ ಬಳಲುತ್ತಿರುವ ಶಿಶುಗಳಿಗೆ ನೆರವಾಗಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಳಗಾವಿ, ಕಲಬುರಗಿ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಎದೆಹಾಲು ಸಂಗ್ರಹ ಬ್ಯಾಂಕ್ ಆರಂಭಿಸಲು ಮುಂದಾಗಿತ್ತು. ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಗೆ ಬಂದಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 2023ರ ಡಿಸೆಂಬರ್ 13ರಂದು ಉದ್ಘಾಟಿಸಿದ್ದರು. ‘ಬೆಳಗಾವಿಯೊಂದಿಗೆ …
Read More »