Breaking News

ರಾಜ್ಯ

ಕರಸೇವಕ ಶ್ರೀಕಾಂತ ಪೂಜಾರಿ ಜೈಲಿನಿಂದ ಬಿಡುಗಡೆ

ಹುಬ್ಬಳ್ಳಿ: ಮೂವತ್ತು ವರ್ಷದ ಹಿಂದಿನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕರಸೇವಕ,ಆಟೋ ಚಾಲಕ ಶ್ರೀಕಾಂತ ಪೂಜಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಶುಕ್ರವಾರ ನ್ಯಾಯಾಲಯವು ಷರತ್ತುಬದ್ದ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಇಂದು ಬಿಡುಗಡೆಗೊಂಡಿದ್ದಾರೆ‌. ಇಲ್ಲಿನ ಉಪಕಾರಾಗೃಹದಿಂದ ಬಿಡುಗಡೆಗೊಳ್ಳುತ್ತಿದ್ದಂತೆ ಹಿಂದೂ ಕಾರ್ಯಕರ್ತರು ಶ್ರೀರಾಮ ಕೀ ಜೈ ಎಂದು ಘೋಷಣೆ ಕೂಗಿದರು. ಹಾರ ಹಾಕಿ ಸಹಿ ತಿನ್ನಿಸಿ ಬರಮಾಡಿಕೊಂಡರು‌. ಬಿಡುಗಡೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ದಶಕಗಳ ಹಿಂದಿನ ಪ್ರಕರವಣನ್ನು ಈ ಸಂದರ್ಭದಲ್ಲಿ ನನ್ನ ಬಂಧಿಸಿದ್ದಾರೆ‌. ನನಗೆ …

Read More »

ಕಲ್ಯಾಣ ಮಂಟಪದಲ್ಲಿ ಕಳ್ಳತನ! ಆರು ಗಂಟೆಯಲ್ಲೇ ಕಳ್ಳನನ್ನು ಹಿಡಿದ ಬೆಳಗಾವಿ ಪೊಲೀಸರು

ಅಂದಹಾಗೆ ಆ ವ್ಯಾನಿಟಿ ಬ್ಯಾಗಿನಲ್ಲಿ 3.5 ಲಕ್ಷದ ಚಿನ್ನಾಭರಣ, 3.5 ಸಾವಿರ ನಗದು ಇತ್ತು. ಇದನ್ನ ಪತ್ತೆಹಚ್ಚಲು ಟೀಮ್ ಮಾಡಿಕೊಂಡ ಮಾಳಮಾರುತಿ ಠಾಣೆ ಪೊಲೀಸರು ಘಟನೆ ನಡೆದ 6 ಗಂಟೆಯಲ್ಲಿ ಸಿಸಿಟಿವಿಯಲ್ಲಿನ ಗುರುತು ಆಧರಿಸಿ ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿ ಇಮ್ತಿಯಾಜ್ ಹುಬ್ಳಿವಾಲೆ ನನ್ನು ಅರೆಸ್ಟ್ ಮಾಡಿ ಹಿಂಡಲಗಾ ಜೈಲಿಗಟ್ಟಿದ್ದಾರೆ. ಆ ಕಲ್ಯಾಣ ಮಂಟಪದಲ್ಲಿ ಅದ್ದೂರಿ ಮದುವೆ ನಡೆದಿತ್ತು. ಮದುವೆಗೆ ಬಂದ ಬಂಧುಗಳು ವಧು ವರರಿಗೆ ಶುಭ ಹಾರೈಸಿ, ಊಟದ ಹಾಲ್ …

Read More »

ಶಿರಸಿ‌- ಮೈಸೂರಿಗೆ ನೂತನ ಸ್ಲೀಪರ್ ಬಸ್

ಶಿರಸಿ: ಶಿರಸಿ ಭಾಗದ ಪ್ರಯಾಣಿಕರ ಬಹುಕಾಲದ ಬೇಡಿಕೆಯಾದ ಶಿರಸಿ ಸೊರಬ ಮೈಸೂರು ರಾಜ ಹಂಸ ಸಾರಿಗೆ ಬದಲಿಗೆ ಸ್ಲೀಪರ್ ಕೋಚ್ ಬಸ್ ಗೆ ಶನಿವಾರ ಚಾಲನೆ ನೀಡಲಾಯಿತು. ಶಾಸಕ ಭೀಮಣ್ಣ‌ ನಾಯ್ಕ ಅವರು ಶಿರಸಿ‌ ಸೊರಬ ಮೈಸೂರು ಹಾಗೂ ಶಿರಸಿ ಸೊರಬ ಬೆಂಗಳೂರು ಸ್ಲೀಪರ್ ಬಸ್ಸಿಗೆ ಚಾಲನೆ ನೀಡಿ, ಶಿರಸಿಗೆ ಇನ್ನಷ್ಟು ಹೊಸ ಬಸ್ಸುಗಳು ಬರಲಿವೆ ಎಂದರು.   ಹುಬ್ಬಳ್ಳಿ, ಮಣಿಪಾಲ,‌ ಮಡಗಾಂವ್ ಗೆ ರಾಜಹಂಸ ಸಾರಿಗೆ‌ ಕೂಡ ಬಿಡಲಿದ್ದೇವೆ. ಜಿಲ್ಲೆಗೆ …

Read More »

ಮಹಾರಾಷ್ಟ್ರ: ಪಾಲ್ಘರ್‌ನಲ್ಲಿ 4.1 ತೀವ್ರತೆಯ ಭೂಕಂಪನ

ಮಹಾರಾಷ್ಟ್ರದ ಕರಾವಳಿ ಪಾಲ್ಘರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 4.1 ತೀವ್ರತೆಯ ಪ್ರಬಲ ಭೂಕಂಪನ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಲ್ಘರ್: ಮಹಾರಾಷ್ಟ್ರದ ಕರಾವಳಿ ಪಾಲ್ಘರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 4.1 ತೀವ್ರತೆಯ ಪ್ರಬಲ ಭೂಕಂಪನ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾತ್ರಿ 9.52ಕ್ಕೆ ಕರಾವಳಿಯಿಂದ 10 ಕಿ.ಮೀ ಆಳದಲ್ಲಿ ಕಂಪನ ಕೇಂದ್ರಿಕೃತವಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ವಿವೇಕಾನಂದ ಕದಂ ಮಾಹಿತಿ ನೀಡಿದ್ದಾರೆ. ಭೂಕಂಪನದಿಂದ ಯಾವುದೇ ಪ್ರಾಣಹಾನಿ ಅಥವಾ …

Read More »

ಸ್ಟಾರ್ ನಟ ಸೇರಿ ಚಿತ್ರತಂಡ ಅವಧಿ ಮೀರಿ ಪಬ್ ನಲ್ಲಿ ಪಾರ್ಟಿ?: ಕೊನೆಗೂ ಪೊಲೀಸರಿಂದ ಎಫ್‌ಐಆರ್ ದಾಖಲು!

ಅವಧಿ ಮೀರಿ ಬೆಳಗಿನ ಜಾವದವರೆಗೆ ಸ್ಟಾರ್ ನಟ ಮತ್ತು ಅವರ ಸ್ನೇಹಿತರ ಬಳಗ, ಚಿತ್ರತಂಡ ಬೆಂಗಳೂರಿನ ಪಬ್ ವೊಂದರಲ್ಲಿ ಪಾರ್ಟಿ ಮಾಡಿರುವ ಪ್ರಕರಣದಲ್ಲಿ ಪಬ್​ (Pub) ಮಾಲೀಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ಅವಧಿ ಮೀರಿ ಬೆಳಗಿನ ಜಾವದವರೆಗೆ ಸ್ಟಾರ್ ನಟ ಮತ್ತು ಅವರ ಸ್ನೇಹಿತರ ಬಳಗ, ಚಿತ್ರತಂಡ ಬೆಂಗಳೂರಿನ ಪಬ್ ವೊಂದರಲ್ಲಿ ಪಾರ್ಟಿ ಮಾಡಿರುವ ಪ್ರಕರಣದಲ್ಲಿ ಪಬ್​ (Pub) ಮಾಲೀಕರ ವಿರುದ್ಧ ಎಫ್​ಐಆರ್ ದಾಖಲಾಗಿದೆ ಎಂದು …

Read More »

ಬಸವನಗುಡಿಯಲ್ಲಿ ಅವರೆಬೇಳೆ ಮೇಳ ಆರಂಭ

ಬೆಂಗಳೂರು: ಶ್ರೀ ವಾಸವಿ ಕಾಂಡಿಮೆಂಟ್ಸ್ ಆಯೋಜಿಸಿರುವ ವಾರ್ಷಿಕ ಅವರೆಬೇಳೆ ಮೇಳ ಶುಕ್ರವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿದ್ದು, ವಿವಿಧ ಖಾದ್ಯಗಳು ಜನ ಮನಸೆಳೆದವು. 24ನೇ ಆವೃತಿಯ ಅವರೆಬೇಳೆ ಮೇಳ ಇದಾಗಿದ್ದು, ಮೇಳದಲ್ಲಿ ವಿವಿಧ ಖಾದ್ಯಗಳನ್ನು ಸವಿಯುವ ಅವಕಾಶ ನಾಗರಿಕರಿಗೆ ಲಭಿಸುತ್ತಿದೆ. ಅವರೆ ದೋಸೆ, ಪಾಯಸ, ಮಂಚೂರಿಯನ್, ವಡೆ, ಕೋಡುಬಳೆ, ಐಸ್ಕ್ರೀಂ, ಹಲ್ವಾ ಸೇರಿದಂತೆ ನೂರಕ್ಕೂ ಹೆಚ್ಚು ತಿನಿಸುಗಳು ಈ ಮೇಳದಲ್ಲಿ ಲಭ್ಯವಿದೆ. ಬೆಂಗಳೂರು: ನಾಳೆಯಿಂದ 4 ದಿನಗಳ ಕೃಷಿ …

Read More »

ಲೋಕಸಭೆ ಚುನಾವಣೆ ಟಾರ್ಗೆಟ್‌: ಅಖಾಡಕ್ಕಿಳಿದ ರಾಜಾಹುಲಿ

ಬೆಂಗಳೂರು, ಜನವರಿ 06: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮಣಿಸಲು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಅಖಾಡಕ್ಕೆ ಧುಮುಕಲು ಸಿದ್ದತೆ ನಡೆಸಿದ್ದಾರೆ. ರಾಜ್ಯ ಪ್ರವಾಸ ಮೂಲಕ ಜನಾಭಿಪ್ರಾಯ ಸೃಷ್ಟಿಗೆ ಮುಂದಾಗಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ನಾಯಕರು ರಾಜ್ಯ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೀನಾಯವಾಗಿ ಸೋಲನ್ನು ಕಂಡಿತ್ತು. ಪಕ್ಷದೊಳಗಿನ ಭಿನ್ನಾಭಿಪ್ರಾಯ, ಕಾಂಗ್ರೆಸ್ ತಂತ್ರಗಾರಿಕೆ, ಗ್ಯಾರಂಟಿ ಯೋಜನೆಗಳು ಚುನಾವಣೆಯ ಮೇಲೆ …

Read More »

ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು ಜನವರಿ 6: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದ್ದು ವೈದ್ಯರ ತಂಡ ಅವರ ನಿವಾಸಕ್ಕೆ ಆಗಮಿಸಿರುವುದು ತಿಳಿದು ಬಂದಿದೆ. ಡಿಕೆ ಶಿವಕುಮಾರ್‌ ಅವರಿಗೆ ವೈರಲ್ ಫಿವರ್ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಅವರು ರಾತ್ರಿಯಿಂದ ಬಳಲುತ್ತಿದ್ದು ಬೆಳಿಗ್ಗೆ ಅವರ ನಿವಾಸಕ್ಕೆ ವೈದ್ಯರ ತಂಡ ಬಂದು ಅವರ ಆರೋಗ್ಯ ತಪಾಸಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಶಾಸಕ ಹಾಗೂ ವೈದ್ಯರೂ ಆಗಿರುವ ಕುಣಿಗಲ್ ರಂಗನಾಥ್ ಜೊತೆಗೆ ಆಗಮಿಸಿದ ವೈದ್ಯರು …

Read More »

ನಂಜುಂಡನಿಗೆ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ ಬಿ.ವೈ.ವಿಜಯೇಂದ್ರ

ನಂಜನಗೂಡು: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಇಂದು ನಂಜನಗೂಡಿನ ನಂಜುಂಡೇಶ್ವರನ ದೇವಾಲಯದಲ್ಲಿ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ್ದಾರೆ. ತಮ್ಮ ತೂಕದಷ್ಟು ಬೆಲ್ಲ ದೇವಾಲಯಕ್ಕೆ ನೀಡಿ ಹರಕೆ ತೀರಿಸಿದ್ದಾರೆ. ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಬಿ.ವೈ.ವಿಜಯೇಂದ್ರ ನಂಜನಗೂಡು ನಂಜುಂಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ್ದಾರೆ.

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಎಂ ಚಂದರಗಿ ಗ್ರಾಮದಲ್ಲಿ ಶ್ರೀ ಕೆಂಪಯ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ …

Read More »