Breaking News

ರಾಜ್ಯ

ಕುರಿ, ಮೇಕೆಗಳಿಗೆ ಜಂತುನಾಶಕ ಔಷಧ ವಿತರಣೆ

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಕುರಿಗಾರರು ನೆಲೆಸಿದ ಸ್ಥಳಗಳಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಹಾಗೂ ಮುಖ್ಯ ಪಶುವೈಧ್ಯಾಧಿಕಾರಿ ಡಾ.ಶ್ರೀಕಾಂತ ಗಾಂವಿ ಅವರು ಕುರಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಔಷಧಗಳನ್ನು ವಿತರಿಸಿದರು.   ಪಶು ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿತರಿಸುವ ಔಷಧೋಪಚಾರಗಳನ್ನು ಕಡ್ಡಾಯವಾಗಿ ಪಡೆದುಕೊಂಡು ಪ್ರಸ್ತುತ ದಿನಗಳಲ್ಲಿ ಕುರಿ ಮತ್ತು ಆಡುಗಳಿಗೆ ಹಲವಾರು ರೀತಿಯ ಕಾಯಿಲೆಗಳು, ಕಾಲುಬೆನಿ ಮತ್ತು ಸಾಂಕ್ರಮಿಕ ರೋಗಗಳು ಹರಡದಂತೆ ಎಚ್ಚರವಹಿಸಬೇಕು. ಹೆಚ್ಚಿನ …

Read More »

ಬೆಳಗಾವಿ | 2 ವರ್ಷದ ಮಗುವಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

ಬೆಳಗಾವಿ: ಬಡತನದಿಂದ ಬಳಲುತ್ತಿದ್ದ ಎರಡು ವರ್ಷದ ಹೆಣ್ಣು ಮಗುವಿನ ಹೃದಯ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ರೋಟರಿ ಕ್ಲಬ್ ಆಫ್ ಬೆಳಗಾವಿ ದಕ್ಷಿಣ ಪದಾಧಿಕಾರಿಗಳು ‘ಗಿಫ್ಟ್‌ ಆಫ್ ಲೈಫ್’ ಯೋಜನೆಯಡಿ ಆರ್ಥಿಕವಾಗಿ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ನೀಲೇಶ ಪಾಟೀಲ, ಭೂಷಣ ಮೋಹಿತೆ, ಚೈತನ್ಯ ಕುಲಕರ್ಣಿ, ಆರತಿ ಅಂಗಡಿ ಮತ್ತಿತರ ಪದಾಧಿಕಾರಿಗಳು ಶನಿವಾರ ಕೆಎಲ್‌ಇ ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಆರೋಗ್ಯ ವಿಚಾರಿಸಿದರು. ‘ಮುಂದೆಯೂ ನಾವು ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇವೆ’ …

Read More »

ಹೆಸ್ಕಾಂ ನೂತನ ಎಂ.ಡಿಯಾಗಿ ವೈಶಾಲಿ

ಹುಬ್ಬಳ್ಳಿ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ( ಹೆಸ್ಕಾಂ) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ವೈಶಾಲಿ ಎಂ.ಎಲ್ (ಐಎಎಸ್) ಗುರುವಾರ ಅಧಿಕಾರ ವಹಿಸಿಕೊಂಡರು. ಈ ಹಿಂದಿನ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮೊಹಮ್ಮದ್ ರೋ‍‍ಷನ್ ( ಐಎಎಸ್) ಅವರು ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಹೊಂದಿದ್ದರು.ಈ ಹಿನ್ನೆಲೆ ತೆರವಾಗಿದ್ದ ಎಂ.ಡಿ ಹುದ್ದೆಗೆ ವೈಶಾಲಿ ಎಂ.ಎಲ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಇವರು ಗದಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

Read More »

ಗ್ರಾಮಸ್ಥರ ; ಕಣ್ಣೀರು ತರಿಸುವ ಘಟನೆ

ಬೆಳಗಾವಿ : ತೀವ್ರವಾಗಿ ಜ್ವರದಿಂದ ಬಳಲುತ್ತಿದ್ದ ಮಹಿಳೆಯನ್ನು ಗ್ರಾಮಸ್ಥರು ಕಟ್ಟಿಗೆಯ ಸ್ಟ್ರೇಚರ್ ನಲ್ಲಿ ಹಾಕಿ ಸುಮಾರು ಐದು ಕಿ.ಮೀಟರ್ ವರೆಗೆ ನಡೆದುಕೊಂಡು ಆಸ್ಪತ್ರೆಗೆ ಸೇರಿಸಿದ ಘಟನೆ ಖಾನಾಪುರ ತಾಲೂಕಿನ ಅಂಗಾವ್ ಗ್ರಾಮದಲ್ಲಿ ನಡೆದಿದೆ. 36 ವರ್ಷದ ಹರ್ಷದಾ ಘಾಡಿ ಎಂಬ ಮಹಿಳೆ ತೀವ್ರ ಜ್ವರದಿಂದ ಬಳಲುತ್ತಿದ್ದರು. ಆದರೆ ಖಾನಾಪುರ ಘಟ್ಟ ಪ್ರದೇಶದ ಕಾಡಂಚಿನಲ್ಲಿರುವ ಅಂಗಾವ್ ಗ್ರಾಮಕ್ಕೆ ರಸ್ತೆ ಸಂಪರ್ಕ ಸೇತುವೆ ಯಾವುದೂ ಇಲ್ಲ. ಮೋಬೈಲ್ ನೆಟ್ವರ್ಕ್ ಬೇಕಾದರೆ ಗ್ರಾಮದಿಂದ ಒಂದು‌ …

Read More »

ಮಹಾರಾಷ್ಟ್ರದಲ್ಲಿ ಹಲ್ಲೆ: ಬೆಳಗಾವಿಯ ಮೂವರು ಸಂತರಿಗೆ ಗಾಯ

ಬೆಳಗಾವಿ: ಪಂಢರಪುರದಿಂದ ಮರಳುತ್ತಿದ್ದ ಬೆಳಗಾವಿಯ ಸಂತರ ಗುಂಪಿನ ಮೇಲೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಾಲಗಾಂವ ಬಳಿ ಗುರುವಾರ ಹಲ್ಲೆ ನಡೆದಿದೆ. ಮೂವರಿಗೆ ಗಾಯಗಳಾಗಿವೆ. ಮೀರಜ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲ್ಲೂಕಿನ ತುರಮರಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ರಾಜೂಕರ (63), ಇಲ್ಲಿನ ಶಿವಾಜಿ ನಗರದ ಬಾಳು ಮನವಾಡಕರ (60), ಪರಶುರಾಮ ಜಾಧವ (42) ಅವರಿಗೆ ಗಾಯ ಆಗಿದೆ. ಇವರು ಮೀರಜ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರ ಬೆಳಗಾವಿಗೆ ಮರಳಿದ್ದಾರೆ. …

Read More »

ಹೊರೆಯಾದರೂ ಗ್ಯಾರಂಟಿ ನಿಲ್ಲದು: ಶಾಸಕ ವಿಶ್ವಾಸ್‌ ವೈದ್ಯ

ಸವದತ್ತಿ: ಸರ್ಕಾರಕ್ಕೆ ಹೊರೆಯಾದರೂ ಜನೋಪಯೋಗಿ ಗ್ಯಾರಂಟಿಗಳು ನಿಲ್ಲುವುದಿಲ್ಲ ಎಂದು ಶಾಸಕ ವಿಶ್ವಾಸ್‌ ವೈದ್ಯ ಹೇಳಿದರು. ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ತಾಲ್ಲೂಕಿನ 89 ಸಾವಿರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪೈಕಿ ಈಗಾಗಲೇ 84,174 ಅರ್ಜಿ ಸಲ್ಲಿಕೆಯಾಗಿವೆ. ಅದರಲ್ಲಿ ಶೇ 90 ಕುಟುಂಬದ ಯಜಮಾನಿ ಖಾತೆಗೆ ಹಣ ಜಮೆಯಾಗುತ್ತಿದೆ. ಕೆಲ ತಾಂತ್ರಿಕ ಸಮಸ್ಯೆಗಳಿಂದ ಇನ್ನು ಕೆಲವಷ್ಟು …

Read More »

ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಹೆಡ್‌ ಕಾನ್ಸ್‌ಟೇಬಲ್‌

ಗುಬ್ಬಿ: ಚಲಿಸುತಿದ್ದ ರೈಲಿಗೆ ತಲೆ ಕೊಟ್ಟು ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌ ಓರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ತುಮಕೂರು ಜಿಲ್ಲೆಯ ಗುಬ್ಬಿ ರೈಲ್ವೆ ನಿಲ್ದಾಣದ ಸಮೀಪ ಶನಿವಾರ ನಡೆದಿದೆ. ಮೃತರನ್ನು ಶಿವಪ್ರಕಾಶ್ ಆರಾಧ್ಯ ಎಂದು ಗುರುತಿಸಲಾಗಿದೆ. ಶಿವಪ್ರಕಾಶ್​ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಈ ಹಿಂದೆ ತುರುವೇಕೆರೆ ಪೊಲೀಸ್ ಠಾಣೆಯಲ್ಲೂ ಕೆಲಸ ಮಾಡಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಯಶವಂತಪುರ ರೈಲ್ವೆ …

Read More »

ರಾಜ್ಯದಲ್ಲಿ ವಾಡಿಕೆಗಿಂತ ಶೇ.50ರಷ್ಟು ಅಧಿಕ ಮಳೆ

 ಜು.20-ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕಾಗಿದ್ದು, ಜುಲೈ ಒಂದರಿಂದ ಇದುವರೆಗೆ ವಾಡಿಕೆಗಿಂತ ಶೇ.50ರಷ್ಟು ಹೆಚ್ಚು ಮಳೆಯಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಹವಾಮಾನ ಮುನ್ಸೂನೆಗಳಿವೆ. ಕರಾವಳಿ ಜಿಲ್ಲೆಗಳಿಗೆ ಇಂದೂ ಕೂಡ ರೆಡ್ ಅಲರ್ಟ್ ನೀಡಲಾಗಿದ್ದು, ನಾಳೆಯಿಂದ ಮೂರು ದಿನಗಳ ಆರೆಂಜ್ ಅಲರ್ಟ್‍ನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯ ನೈಸರ್ಗಿಕ …

Read More »

ದುಬಾರಿ ಆಗುತ್ತಾ ಸಿನಿಮಾ ಟಿಕೆಟ್?

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ (Sandalwood) ಗರಬಡಿದಂತೆ ಆಗಿದ್ದು ಜನರು ಥಿಯೇಟರ್​ಗೆ (Theater) ಬರದ ಕಾರಣ ಹಲವು ಸಿನಿಮಾಗಳು ಬಾಕ್ಸ್​ ಆಫೀಸ್ (Box Office) ಕಲೆಕ್ಷನ್ ಇಲ್ಲದೆ ಮಕಾಡೆ ಮಲಗುತ್ತಿವೆ. ದೊಡ್ಡ ದೊಡ್ಡ ನಟರು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿಲ್ಲ, ಇನ್ನು ದರ್ಶನ್ (Darshan) ಕೊಲೆ ಆರೋಪದಲ್ಲಿ ಜೈಲು ಸೇರಿದ್ದು ಇಂತಾ ಸಮಯದಲ್ಲಿ ಜನರನ್ನು ಥಿಯೇಟರ್​ಗೆ ಕರೆತರುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಈ ನಡುವೆ ರಾಜ್ಯ ಸರ್ಕಾರ ಸಿನಿಮಾ ಟಿಕೆಟ್ (Movie …

Read More »

ಮರಕ್ಕೆ ಡಿಕ್ಕಿ ಹೊಡೆದ ಸರ್ಕಾರಿ ಬಸ್: ಚಾಲಕನ ಎರಡೂ ಕಾಲು ಕಟ್

ಧಾರವಾಡ: ಸರ್ಕಾರಿ ಬಸ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಎರಡೂ ಕಾಲು ಕಟ್ ಆಗಿದ್ದು, ಅಪಘಾತದಲ್ಲಿ ನಾಲ್ವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿರುವ ಘಟನೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ಕಲಘಟಗಿಯ ರಾಮನಾಳ ಕ್ರಾಸ್ ಬಳಿ ಬಸ್ ಅಪಘಾತಕ್ಕೀಡಾಗಿದೆ. ದುರಂತದಲ್ಲಿ ಬಸ್ ಚಾಲಕನ ಎರಡೂ ಕಾಲುಗಳು ಕಟ್ ಆಗಿದ್ದು, ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯಿಂದ ಕುಮಟಾಗೆ …

Read More »