ಧಾರವಾಡ: ಅವಳಿನಗರಗಳ ಬಹುತೇಕ ರಂಗಮಂದಿರಗಳು ದುಃಸ್ಥಿತಿಯಲ್ಲಿವೆ. ಇದು ನಾಟಕ ಪ್ರದರ್ಶನ, ರಂಗ ತಾಲೀಮು ಮೊದಲಾದ ಚಟುವಟಿಕೆಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಸಾಂಸ್ಕೃತಿಕ ನಗರವೆಂದು ಕರೆಯುವ ಧಾರವಾಡದಲ್ಲಿ ಈಗ ಕೆಲವೇ ರಂಗಮಂದಿರಗಳಲ್ಲಿ ರಂಗಭೂಮಿ ಚಟುವಟಿಕೆಗಳು ನಡೆಯುತ್ತವೆ. ಮೂಲಸೌಕರ್ಯಗಳ ಕೊರತೆ ಮತ್ತು ಅವ್ಯವಸ್ಥೆಗಳಿಂದ ನಲುಗಿರುವ ರಂಗತಾಣಗಳಿಗೆ ಕಾಯಕಲ್ಪಿಸಲು ಸಂಬಂಧಪಟ್ಟವರು ಕ್ರಮವಹಿಸಿಲ್ಲ. ಧಾರವಾಡದಲ್ಲಿ ರಂಗಾಯಣ ಇದ್ದರೂ ಅನುದಾನ ಕೊರತೆ, ಸವಲತ್ತುಗಳ ಕೊರತೆಯಿಂದಾಗಿ ರಂಗಚಟುವಟಿಕೆಗಳು ಸೊರಗಿವೆ. ಬಹುತೇಕ ರಂಗಮಂದಿರಗಳಲ್ಲಿ ಬೆಳಕು, ಧ್ವನಿ ವ್ಯವಸ್ಥೆ ಸಹಿತ ಸುಸಜ್ಜಿತ ಸಕಲ …
Read More »ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ಸಂಜೆ 4 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಸಮಂಜರಿ ನಡೆಸಿಕೊಡಲಿದ್ದಾರೆ.
ಬೆಳಗಾವಿ: ‘ಕಿತ್ತೂರು ಉತ್ಸವ ಹಾಗೂ ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಬೆಳಗಾವಿ ನಗರದಲ್ಲೂ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ಖ್ಯಾತ ಗಾಯಕರಾದ ಕುನಾಲ್ ಗಾಂಜಾವಾಲಾ ಅವರು ಸಂಜೆ 4 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಸಮಂಜರಿ ನಡೆಸಿಕೊಡಲಿದ್ದಾರೆ. ಅದೇ ವೇದಿಕೆಯಲ್ಲಿ ಕನ್ನಡದ ಖ್ಯಾತ ಹಾಸ್ಯ ಕಲಾವಿದ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು ಮತ್ತು ಜೀ ಕನ್ನಡ …
Read More »ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಬಾಯ್ಲರ್ ಪ್ರದೀಪನಕ್ಕೆ ಚಾಲನೆ
ಹುಕ್ಕೇರಿ: ತಾಲ್ಲೂಕಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ ಸಾಲಿನ 64ನೇ ಕಬ್ಬು ಅರೆಯುವ ಹಂಗಾಮಿನ ನಿಮಿತ್ತ ಬಾಯ್ಲರ್ ಪ್ರದೀಪನ ಸಮಾರಂಭ ಸೋಮವಾರ ಜರುಗಿತು. ನಿಡಸೋಸಿಯ ಸಿದ್ದ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹುನ್ನೂರ ವಿಠ್ಠರಾಯ ದೇವರ ಪೂಜಾರಿ ಬಾಗಪ್ಪ ಬಿಜ್ಜು ಪೂಜೇರಿ ದಂಪತಿ ಪೂಜೆ ಸಲ್ಲಿಸಿದರು. ಕಾರ್ಖಾನೆಯ ಚೇರಮನ್, ಶಾಸಕ ನಿಖಿಲ್ ಉಮೇಶ ಕತ್ತಿ, ನಿರ್ದೇಶಕರಾದ ಶಿವನಾಯಿಕ ನಾಯಿಕ, ಶಿವಪುತ್ರ ಶಿರಕೋಳಿ, ಪ್ರಭುದೇವ್ ಪಾಟೀಲ್, …
Read More »ಕಡೆಗೂ MLC ಸ್ಥಾನಕ್ಕೆ ಸಿ.ಪಿ. ಯೋಗೇಶ್ವರ್ ರಾಜೀನಾಮೆ! ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ
ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ ಚುನಾವಣಾ ಅಖಾಡ ರಂಗೇರಿದೆ. ಇದರ ಬೆನ್ನಲ್ಲೇ ಬಿಜೆಪಿ ವಿಧಾನಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಅವರು ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ಇಂದು (ಅ.21) ರಾಜೀನಾಮೆ ಸಲ್ಲಿಸಿದ್ದಾರೆ. ಹುಬ್ಬಳ್ಳಿಯಲ್ಲಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಗೃಹ ಕಚೇರಿಗೆ ಸೋಮವಾರ ಸಂಜೆ ಆಗಮಿಸಿದ ರಾಜೀನಾಮೆ ಪತ್ರ ನೀಡಿದರು. ಇನ್ನು ರಾಜೀನಾಮೆ ಘೋಷಿಸಿದ ಬಳಿಕ ಮಾತನಾಡಿದ ಅವರು, ಪಕ್ಷೇತರರಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದಿದ್ದಾರೆ. …
Read More »ಮಹಾರಾಷ್ಟ್ರದ ರೈತರಿಗೆ ಬಿಜೆಪಿ ದೊಡ್ಡ ಶತ್ರುವಾಗಿದೆ: ಖರ್ಗೆ
ನವದೆಹಲಿ: ‘ಮಹಾರಾಷ್ಟ್ರದ ರೈತರ ದೊಡ್ಡ ಶತ್ರು ಬಿಜೆಪಿ. ಡಬಲ್ ಎಂಜಿನ್ ಸರ್ಕಾರವನ್ನು ಅಧಿಕಾರದಿಂದ ಕಿತ್ತುಹಾಕುವುದರಿಂದ ಮಾತ್ರ ರೈತರಿಗೆ ಲಾಭವಾಗಲಿದೆ. ಮಹಾಪರಿವರ್ತನೆಯೇ ರಾಜ್ಯದ ಬೇಡಿಕೆಯಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಸೋಮವಾರ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆಗೆ ಬಿಜೆಪಿ ಕಾರಣವೆಂದು ಕಿಡಿಕಾರಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯವನ್ನು ಬರದಿಂದ ಮುಕ್ತಗೊಳಿಸುವುದಾಗಿ ಬಿಜೆಪಿ ಸುಳ್ಳು ಭರವಸೆ ನೀಡಿದೆ ಎಂದು ಟೀಕಿಸಿದ್ದಾರೆ. ಬಿಜೆಪಿಯು ಮಹಾರಾಷ್ಟ್ರದ ರೈತರ ಅತ್ಯಂತ ದೊಡ್ಡ …
Read More »ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ 20 ಕ್ಕೂ ಹೆಚ್ಚು ಶಾಲಾ ಬಸ್ ಗಳು ಜಲಾವೃತ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀಮಳೆಯಾಗುತ್ತಿದ್ದು, ಸಾಲು ಸಾಲು ಅವಾಂತರ ಸೃಷ್ಟಿಯಾಗಿದೆ. ಹಲವಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಹೆಚ್ ಎಸ್ ಆರ್ ಲೇಔಟ್ ನಲ್ಲಿ 20 ಕ್ಕೂ ಹೆಚ್ಚು ಶಾಲಾ ಬಸ್ ಗಳು ಜಲಾವೃತವಾಗಿದೆ. ಬೆಂಗಳೂರಿನ ಹಲವು ಕಡೆ ಧಾರಾಕಾರ ಮಳೆಯಾಗಿದ್ದು, ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ರಸ್ತೆಯಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಟ ನಡೆಸಿದ್ದಾರೆ. ರಸ್ತೆಯ ಗುಂಡಿಯಲ್ಲಿ ಎರಡು ಆಟೋ ಸಿಲುಕಿಕೊಂಡಿದ್ದು, …
Read More »ಪ್ರತೀ ಕ್ಷೇತ್ರದಲ್ಲೂ 10 ಸಾವಿರ ಬೋಗಸ್ ಮತದಾರರು: MVA ಆರೋಪ
ಮುಂಬಯಿ: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಕಾವೇರಿದ್ದು, ಆರೋಪ ಪ್ರತ್ಯಾರೋಪಗಳು ತೀವ್ರವಾಗಿದೆ. ವಿಪಕ್ಷ ಮೈತ್ರಿಕೂಟವಾದ ಮಹಾ ವಿಕಾಸ್ ಆಘಾಡಿ ಆಡಳಿತಾರೂಢ ಮಾಹಾಯುತಿ ಮೈತ್ರಿಕೂಟದ ವಿರುದ್ಧ ಗಂಭೀರ ಆರೋಪ ಮಾಡಿದೆ. ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ 10 ಸಾವಿರ ಬೋಗಸ್ ಮತದಾರನ್ನು ನೋಂದಣಿ ಮಾಡಲಾಗಿದೆ ಎಂದು ಚುನಾವಣ ಆಯೋಗಕ್ಕೆ ದೂರು ನೀಡಿದೆ. ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಮಾತನಾಡಿ “ಲಫಂಗಿ ಎಂದು ನಾವು ಕರೆಯುವ ಮಹಾಯುವತಿ(NDA) ಸಂವಿಧಾನವು ನೀಡಿರುವ ವಿಶೇಷ ಹಕ್ಕುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. …
Read More »ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಹನುಮಂತ
ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ಮನೆಗೆ ಹೊಸ ಸದಸ್ಯ ಆಗಮನವಾಗಿದ್ದಾರೆ. ಈ ಸೀಸನ್ ನಲ್ಲಿ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಜಗದೀಶ್ ಹಾಗೂ ರಂಜಿತ್ ಅವರನ್ನು ಬಿಗ್ ಬಾಸ್ ನಿಯಮದ ಉಲ್ಲಂಘನೆ ಮಾಡಿದ್ದಕ್ಕಾಗಿ ದೊಡ್ಮನೆಯಿಂದ ಆಚೆ ಕಳುಹಿಸಿದ್ದಾರೆ. ಈ ಶಾಕ್ ನಲ್ಲಿದ್ದ ಮನೆಮಂದಿಗೆ ಹೊಸ ಸದಸ್ಯರ ಆಗಮನದಿಂದ ಸರ್ಪ್ರೈಸ್ ನೀಡಿದ್ದಾರೆ. ಸರಿಗಮಪ ರಿಯಾಲಿಟಿ ಶೋ ಮೂಲಕ ಜನಮನ್ನಣೆ ಗಳಿಸಿದ ಕುರಿಗಾಹಿ ಹನುಮಂತ ಬಿಗ್ ಬಾಸ್ ಮನೆಗೆ …
Read More »ಶೀಘ್ರ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮ: ಎಚ್ ಕೆ ಪಾಟೀಲ್
ಹಾವೇರಿ: ಉಪ ಚುನಾವಣೆಗೆ ಶೀಘ್ರದಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮವಾಗುತ್ತದೆ. ಶಿಗ್ಗಾವಿಯಲ್ಲಿ ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಹೈಕಮಾಂಡ್ ಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಸೋಮವಾರ (ಅ.21) ಸಂಜೆಯೊಳಗೆ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ಸಚಿವ ಎಚ್. ಕೆ.ಪಾಟೀಲ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ತತ್ವ ಸಿದ್ಧಾಂತಗಳನ್ನ ಬಿಡುವುದಿಲ್ಲ. ಮುಸ್ಲಿಂ ಸಮುದಾಯದ ಇಬ್ಬರು ಆಕಾಂಕ್ಷಿಗಳ ಬಳಿ ಮಾತಾಡಿ ಅಂತಿಮ ಮಾಡುತ್ತೇವೆ. ಕಾರ್ಯಕರ್ತರ ಅಭಿಪ್ರಾಯ, ನಾಯಕರ …
Read More »ಬಿಜೆಪಿ ಮೊದಲ ಪಟ್ಟಿ ಬಿಡುಗಡೆ; ಫಡ್ನವೀಸ್, ರಾಣೆ ಸೇರಿ ಹಲವರಿಗೆ ಟಿಕೆಟ್
ಮುಂಬೈ: ಈಗಾಗಲೇ ಘೋಷಣೆಯಾಗಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ (Maharashtra Assembly Election) ಭಾರತೀಯ ಜನತಾ ಪಕ್ಷವು (BJP) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ರವಿವಾರ (ಅ.20) ಮಧ್ಯಾಹ್ನ ಪ್ರಕಟಿಸಲಾದ ಪಟ್ಟಿಯಲ್ಲಿ 99 ಹೆಸರುಗಳಿವೆ. ಮಹಾರಾಷ್ಟ್ರ ವಿಧಾನಸಭೆ 288 ಸ್ಥಾನಗಳನ್ನು ಹೊಂದಿದ್ದು, ಬಿಜೆಪಿ 151 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಮೊದಲ ಪಟ್ಟಿಯಲ್ಲಿ ಡಿಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಫಡ್ನವೀಸ್ ಅವರಿಗೆ ನಾಗ್ಪುರ ನೈಋತ್ಯ ಕ್ಷೇತ್ರದಲ್ಲಿ ಟಿಕೆಟ್ ದೊರೆತರೆ, …
Read More »
Laxmi News 24×7