ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ವೇಗ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಗುರುವಾರದವರೆಗೆ ವರದಿಯಾಗಿರುವ 51,422 ಪ್ರಕರಣಗಳ ಪೈಕಿ ಶೇ.67.82 ಮಂದಿಗೆ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಇದು ರಾಜ್ಯದಲ್ಲಿ ಕೊರೋನಾ ಸಮುದಾಯದ ಮಟ್ಟಕ್ಕೆ ಮುಟ್ಟಿದೆಯೇ ಎಂಬ ಅಪಾಯಕಾರಿ ಪ್ರಶ್ನೆಯನ್ನು ಹುಟ್ಟುಹಾಕಿದೆ. ಏಕೆಂದರೆ, ‘ರಾಜ್ಯದಲ್ಲಿ ಸೋಂಕು ಹಬ್ಬುತ್ತಿರುವ ಪ್ರಮಾಣದಿಂದಾಗಿ ಸೋಂಕಿನ ಮೂಲ ಹಾಗೂ ಸಂಪರ್ಕಗಳ ಪತ್ತೆಯೇ ಸಾಧ್ಯವಾಗುತ್ತಿಲ್ಲ’ ಎಂದು ಸ್ವತಃ ಆರೋಗ್ಯ ಇಲಾಖೆ ಅಧಿಕಾರಿಗಳೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಹೀಗಿದ್ದರೂ ರಾಜ್ಯ ಸರ್ಕಾರ …
Read More »ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಂಕು ತಗುಲಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಅಭಿಷೇಕ್ ಪತ್ನಿ ಐಶ್ವರ್ಯಾ ರೈ ಮತ್ತು ಆರಾಧ್ಯ ಅವರಿಗೆ ಜ್ವರ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಅವರನ್ನು ಕೂಡ ಶುಕ್ರವಾರ ರಾತ್ರಿ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಚ್ಚನ್ ಕುಟುಂಬದ ನಾಲ್ವರು ಸದಸ್ಯರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ …
Read More »ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಭಾರತೀಯ ಸೇನೆ ಎನ್ಕೌಂಟರ್ ನಡೆಸಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಶನಿವಾರ ತಿಳಿದುಬಂದಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಭಾರತೀಯ ಸೇನೆ ಎನ್ಕೌಂಟರ್ ನಡೆಸಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಶನಿವಾರ ತಿಳಿದುಬಂದಿದೆ. ಶೋಪಿಯಾನ್ ಜಿಲ್ಲೆಯ ಅಮ್ಶಿಪೋರಾ ಪ್ರದೇಶದಲ್ಲಿ ಉಗ್ರರು ಅಡಗಿಕುಳಿತಿರುವ ಖಚಿತ ಮಾಹಿತಿ ತಿಳಿದುಬರುತ್ತಿದ್ದಂತೆಯೇ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಲು ಆರಂಭಿಸಿದ್ದವು. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಕೂಡಲೇ ಎನ್’ಕೌಂಟರ್ ನಡೆಸಲು ಆರಂಭಿಸಿದ್ದು, ಇದೀಗ ಮೂವರು ಉಗ್ರರನ್ನು ಹತ್ಯೆ ಮಾಡಿದೆ ಎಂದು …
Read More »ತಿರುಪತಿ ತಿರುಮಲ ದೇವಸ್ಥಾನವನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ನವದೆಹಲಿ, ತಿರುಪತಿ ತಿರುಮಲ ದೇವಸ್ಥಾನವನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಭಕ್ತರು ಬಂದರೆ ಮತ್ತಷ್ಟು ಬೇಗ ಸೋಂಕು ತಗುಲುತ್ತದೆ ಎಂದು ಹೇಳಲಾಗಿತ್ತು. ಜೂನ್ ಮಧ್ಯವಾರದಲ್ಲೇ ದೇವಸ್ಥಾನವನ್ನು ತೆರೆಯಲಾಯಿತು. ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಮಾತನಾಡಿ, ಯಾವುದೇ ಕಾರಣಕ್ಕೂ ದೇವಸ್ಥಾನದ ಬಾಗಿಲು ಮುಚ್ಚುವುದಿಲ್ಲ ಭಕ್ತರಿಗೆ ವೆಂಕಟೇಶನ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದರು. …
Read More »ಲಾಕಡೌನ್ ಜಾರಿಯಲ್ಲಿದ್ದರೂ ಜನಜೀವನಕ್ಕೆ ಎಂದಿನಂತೆಯೇ ಇದೆ.
ಗೋಕಾಕದಲ್ಲಿ ಲಾಕಡೌನ್ ಜಾರಿಯಲ್ಲಿದ್ದರೂ ಜನಜೀವನಕ್ಕೆ ಎಂದಿನಂತೆಯೇ ಇದೆ. ಲಾಕಡೌನ್ ಲೆಕ್ಕಕ್ಕಿಲ್ಲದಂತೆ ಜನ ಓಡಾಡುತ್ತಿದ್ದಾರೆ. ಲಾಕಡೌನ್ ಆದ ಪ್ರದೇಶದಲ್ಲಿ ಹೇಳೊರಿಲ್ಲ,ಕೇಳೊರಿಲ್ಲ ಅನ್ನೋ ಸ್ಥಿತಿ ಇದ ಕೊರೋನಾ ಸೋಂಕು ತಡೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ ಗೋಕಾಕ ಜನತೆ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಹೇಗೆ ಬೇಕೋ ಹಾಗೆ ವರ್ತಿಸುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಗೋಕಾಕ ತಹಸೀಲ್ದಾರ್ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ.ವಸ್ತುಸ್ಥಿತಿಯನ್ನು ಪರಿಶೀಲಿಸುತ್ತಿಲ್ಲ. ಕೊರಾನಾ ಕೇಸ್‍ಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಲಾಕ್‍ಡೌನ್ ಘೋಷಿಸಲಾಗಿತ್ತು. …
Read More »ನಿಷೇದಾಜ್ಞೆ ಇದ್ದರುಚಾಮುಂಡಿ ಬೆಟ್ಟ ಏರಿದ ಶೋಭಾ ಕರಂದಾ ಜ್ಲೆ
ಮೈಸೂರು: ಆಷಾಢ ಮಾಸದ ಕೊನೆ ಶುಕ್ರವಾರ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಬರಿಗಾಲಲ್ಲಿ ಮೈಸೂರಿನ ಚಾಮುಂಡಿ ಬೆಟ್ಟ ಹತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರು ಪ್ರತಿ ಆಷಾಢ ಮಾಸದಲ್ಲೂ ಮೈಸೂರಿಗೆ ಬಂದು ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತುತ್ತಾರೆ. ಬಳಿಕ ತಾಯಿ ಚಾಮುಂಡಿಯ ದರ್ಶನ ಪಡೆದುಕೊಳ್ಳುತ್ತಾರೆ. ಅದರಂತೆಯೇ ಇಂದು ನಾಲ್ಕನೇ ಆಷಾಢ ಶುಕ್ರವಾರವಾದ ಹಿನ್ನೆಲೆಯಲ್ಲಿ ಈ ಬಾರಿಯೂ ಶೋಭಾ ಕರಂದ್ಲಾಜೆ ಮುಂಜಾನೆಯೇ ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತಿ, ತಾಯಿಯ ದರ್ಶನ ಪಡೆದುಕೊಂಡಿದ್ದಾರೆ. ಆಷಾಢ …
Read More »8 ವರ್ಷ, 264 ಕೋಟಿ ವೆಚ್ಚ- ಉದ್ಘಾಟನೆಗೊಂಡ 29 ದಿನಕ್ಕೆ ಕೊಚ್ಚಿ ಹೋದ ಬ್ರಿಡ್ಜ್
ಪಾಟ್ನಾ: ಬಿಹಾರದ ಗೋಪಾಲ್‍ಗಂಜ್ ನಲ್ಲಿ ಸೇತುವೆ ಉದ್ಘಾಟನೆಯಾದ 29 ದಿನದಲ್ಲಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಸೇತುವೆ ಕೊಚ್ಚಿಕೊಂಡ ಹೋದ ಪರಿಣಾಮ ಚಂಪಾರಣ ತಿರಹುತ್ ಮತ್ತು ಸಾರಣ್ ಜಿಲ್ಲೆಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಜೂನ್ 16ರಂದು ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಈ ಸೇತುವೆಯನ್ನು ಉದ್ಘಾಟಿಸಿದ್ದರು. 263.47 ಕೋಟಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಸೇತುವೆ ನಿರ್ಮಾಣಕ್ಕೆ ಎಂಟು ವರ್ಷ ಸಮಯ ತೆಗೆದುಕೊಂಡಿತ್ತು. ಗಂಢಕ್ ನದಿಗೆ ಅಡ್ಡಲಾಗಿ ಗೋಪಾಲಗಂಜ್ ಜಿಲ್ಲೆಯ …
Read More »ಉಡುಪಿಯಲ್ಲಿ ಮುಂಗಾರು ಅಬ್ಬರ- 24 ಗಂಟೆಯಲ್ಲಿ 81 ಮಿಲಿಮೀಟರ್ ಮಳೆ ದಾಖಲು
ಉಡುಪಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 81 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 83 ಮಿ.ಮೀ., ಕುಂದಾಪುರದಲ್ಲಿ 85.5 ಮಿ.ಮೀ. ಹಾಗೂ ಕಾರ್ಕಳ ತಾಲೂಕಿನಲ್ಲಿ 73 ಮಿ.ಮೀ. ಮಳೆ ಸುರಿದಿದೆ. ಇದೇ ಅವಧಿಯಲ್ಲಿ ಬಳ್ಕೂರು ಗ್ರಾಮದಲ್ಲಿ ಅತೀ ಹೆಚ್ಚು 145 ಮಿ.ಮೀ. ಮಳೆಯಾಗಿದೆ. ಶಂಕರನಾರಾಯಣ, ಇನ್ನಾಘಿ, ನೀರೆ, ಕಾಲ್ತೋಡು ಮತ್ತಿತರ ಗ್ರಾಮಗಳಲ್ಲಿ 100 ಮಿ.ಮೀ ಗಳಿಗಿಂತಲೂ ಅಧಿಕ ಮಳೆ ಬಿದ್ದಿದೆ. ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. …
Read More »ದ್ರೋಣ್ ಮೂಲಕ ರಾಸಾಯನಿಕ ಸಿಂಪಡಣೆ ಮಾಡುವ ಕಾರ್ಯಾಚರಣೆಗೆ ಇಂದು ಚಾಲನೆ
ಬೆಂಗಳೂರು,ಜು.16- ನಗರದಲ್ಲಿ ಕೊರೊನಾ ಸೋಂಕು ಹಾಗೂ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ದ್ರೋಣ್ ಮೂಲಕ ರಾಸಾಯನಿಕ ಸಿಂಪಡಣೆ ಮಾಡುವ ಕಾರ್ಯಾಚರಣೆಗೆ ಇಂದು ಚಾಲನೆ ನೀಡಲಾಯಿತು. ಕಂದಾಯ ಸಚಿವ ಆರ್.ಅಶೋಕ್ ಹಾಗೂ ಬಿಬಿಎಂಪಿ ಅಧಿಕಾರಿಗಲು ಇಂದು ದ್ರೋಣ್ ಮೂಲಕ ಸ್ಯಾನಿಟೈಸರ್ ಮಾಡುವ ಕಾರ್ಯಾಚರಣೆಗೆ ವಿದ್ಯುಕ್ತವಾಗಿ ಚಾಲನೆ ಕೊಟ್ಟರು. ಮೊದಲ ಹಂತದಲ್ಲಿ ಬೆಂಗಳೂರಿನ ಯಾವ ಯಾವ ಭಾಗದಲ್ಲಿ ಹೆಚ್ಚಿನ ಸೋಂಕಿನ ಪ್ರಕರಣಗಳಿವೆಯೋ ಅಂತಹ ಕಡೆ ದ್ರೋಣ್ …
Read More »ನಟ ಧ್ರುವ ಸರ್ಜಾ, ಪ್ರೇರಣಾ ಆಸ್ಪತ್ರೆಯಿಂದ ಡಿಸ್ಚಾರ್ಜ್…………
ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ನಿನ್ನೆ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಬ್ಬರಿಗೂ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಇಬ್ಬರಿಗೂ ನಿನ್ನೆ ಕೊರೊನಾ ಸೋಂಕು ಇರುವುದು ದೃಢ ಪಟ್ಟಿತ್ತು. ಕೊರೊನಾ ಸೋಂಕು ದೃಢ ಪಟ್ಟಿರುವ ಬಗ್ಗೆ ಟ್ವೀಟ್ ಮಾಡಿ ಧ್ರುವ ಸರ್ಜಾ ಮಾಹಿತಿ ನೀಡಿದ್ದರು. ಆದರೆ ಕೊರೊನಾ ಸೋಂಕಿನ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿದ್ದ ಅವರಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯಲು ವೈದ್ಯರು ಸೂಚಿಸಿ ಆಸ್ಪತ್ರೆಯಿಂದ …
Read More »
Laxmi News 24×7