ಗದಗ: ಜಮೀನಿನಲ್ಲಿ ಬಿತ್ತನೆ ಕಾರ್ಯ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ನಡೆದಿದೆ. 34 ವರ್ಷದ ಕೃಷ್ಣಪ್ಪ ಭಜಮ್ಮನವರ್ ಮೃತ ದುರ್ದೈವಿ ರೈತ. ನಾಲ್ಕು ಜನ ಸೇರಿಕೊಂಡು ಜಮೀನಿನಲ್ಲಿ ಮೆಣಸಿನ ಬೀಜ ಬಿತ್ತನೆ ಮಾಡ್ತಿದ್ದರು. ಮಳೆ ಬಂದ ಹಿನ್ನೆಲೆಯಲ್ಲಿ ಇತರೆ 3 ಬೇರೆ ಮರದಡಿ ನಿಂತುಕೊಂಡಿದ್ದಾರೆ. ಆದರೆ ಕೃಷ್ಣಪ್ಪ ಒಬ್ಬನೇ ಒಂದು ಮರದಡಿ ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತಿದ್ದರು. ಈ …
Read More »ಅರಣ್ಯ ಸಚಿವ ಆನಂದ್ ಸಿಂಗ್ ಕಾರು ಚಾಲಕನಿಗೆ ಕೊರೊನಾ ಸೋಂಕು
ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ ಕಾರು ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಚಾಲಕನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಹೊಸಪೇಟೆ ನಗರದ ರಾಣಿಪೇಟೆಯ ಕಚೇರಿಯನ್ನು ಇಂದು ಸೀಲ್‍ಡೌನ್ ಮಾಡಲಾಗಿದೆ. ಸಚಿವ ಆನಂದ್ ಸಿಂಗ್ ಅವರ ಕಾರು ಚಾಲಕರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಸ್ವಯಂ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಲಾಗಿದೆ. ಸೋಂಕು ತಗುಲಿದ ವಾಹನ ಚಾಲಕನನ್ನು ಹೊಸಪೇಟೆ ನಗರದ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾರು ಚಾಲಕನ ಕುಟುಂಬ ಸದಸ್ಯರನ್ನು ಸಹ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಸಚಿವ …
Read More »ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಸರ್ಕಾರ ಇದಕ್ಕೆ ಉತ್ತರ ಕೊಡಬೇಕು:ಪ್ರಮೋದ ಮುತಾಲಿಕ್
ಧಾರವಾಡ: ಕೊರೊನಾ ನಿಯಂತ್ರಣ ವಿಚಾರದಲ್ಲಿ ಸರ್ಕಾರ ಸರಿಯಾಗಿ ಕೆಲಸವಾಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ನೋಟದಲ್ಲಿ ಕೊರೊನಾ ಪ್ರಕ್ರಿಯೆಯಲ್ಲಿ ಗೊಂದಲ ಕಾಣುತ್ತಿದೆ. ರಾಜ್ಯ ಸರ್ಕಾರ ಡಾ.ಕಜೆಯವರ 70 ಲಕ್ಷ ಆಯುರ್ವೇದಿಕ್ ಮಾತ್ರೆ ಖರೀದಿಸಿದೆ ಅದನ್ನು ಎಲ್ಲಿಯೂ ವಿತರಿಸುತ್ತಿಲ್ಲ. ಇದರಿಂದ ಸರ್ಕಾರದ ಮೇಲೆ ಸಂಶಯ ಬರುತ್ತದೆ. ವಿರೋಧ ಪಕ್ಷದವರ …
Read More »ರಾಮಮಂದಿರ ನಿರ್ಮಾಣವಾದರೆ ನಾವು ಕೋವಿಡ್ 19 ನಿಂದ ಮುಕ್ತರಾಗುತ್ತೇವೆ:ಶರದ್ ಪವಾರ್ ವ್ಯಂಗ್
ಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ನಾವು ಕೋವಿಡ್ 19 ನಿಂದ ಮುಕ್ತರಾಗುತ್ತೇವೆ ಎಂದು ಕೆಲವರು ಅಂದುಕೊಂಡಿದ್ದಾರೆ ಅಂತ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ವ್ಯಂಗ್ಯವಾಡಿದ್ದಾರೆ.ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಲಿದ್ದಾರೆ. ಈ ಸಂಬಂಧ ಮಾಧ್ಯಮಗಳು ಶರದ್ ಪವಾರ್ ಅವರ ಅಭಿಪ್ರಾಯ ಕೇಳಿದಾಗ, ಕೊರೊನಾ ವೈರಸ್ ಅನ್ನು ನಿರ್ಮೂಲನೆ ಮಾಡುವುದು ಮಹಾರಾಷ್ಟ್ರ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಈ ಮಧ್ಯೆ ಕೆಲವರು ಅಯೋಧ್ಯೆಯಲ್ಲಿ …
Read More »ಲಾಕ್‍ಡೌನ್ ನಿಯಮ ಉಲ್ಲಂಘನೆ- ಬೇಕಾಬಿಟ್ಟಿ ತಿರುಗಾಡುತ್ತಿದ್ದವರಿಗೆ ಲಾಠಿ ರುಚಿ, ದಂಡ
ಯಾದಗಿರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆ ಜಿಲ್ಲಾದ್ಯಂತ ಕಠಿಣ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಕಳೆದ 15ರಂದು ಲಾಕ್‍ಡೌನ್ ಆರಂಭವಾಗಿದ್ದು, ಆಗಲೇ 5 ದಿನ ಕಳೆದಿದೆ. ಆದರೂ ಜನತೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು, ಅಂತಹವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಲಾಕ್‍ಡೌನ್ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಫುಲ್ ಅಲರ್ಟ್ ಆಗಿದ್ದಾರೆ. ಮಾಸ್ಕ್ ಇಲ್ಲದೆ ಬೇಕಾಬಿಟ್ಟಿಯಾಗಿ ನಗರದಲ್ಲಿ ತಿರುಗಾಟ ನಡೆಸಿದವರಿಗೆ ದಂಡ ಜೊತೆಗೆ …
Read More »ಕೊರೊನಾ ತಡೆಗಟ್ಟಲು ಲಾಕ್ ಡೌನ್ ವೊಂದೆ ಮಾರ್ಗವಲ್ಲ:ರಮೇಶ ಜಾರಕಿಹೊಳಿ
ಬೆಳಗಾವಿ: ಕೊರೊನಾ ತಡೆಗಟ್ಟಲು ಲಾಕ್ ಡೌನ್ ವೊಂದೆ ಮಾರ್ಗವಲ್ಲ. ಜನರು ಸ್ವ ಪ್ರೇರಣೆಯಿಂದ ಸಹಕರಿಸಿದೆ ಮಾತ್ರ ಸೋಂಕು ತಡೆಗಟ್ಟಬಹುದು. ಮುಂದಿನ ದಿನ ಸಾಧಕ, ಬಾಧಕಗಳ ಕುರಿತು ಚರ್ಚಿಸಿ ಲಾಕ್ ಡೌನ್ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾಡಳಿತ ಹಾಗೂ ಸರ್ಕಾರ ಕೋವಿಡ್ ನಿರ್ವಹಣೆಗೆ ನಿರಂತರ ಶ್ರಮಿಸುತ್ತಿದೆ. ಬಿಮ್ಸ್ ಆಸ್ಪತ್ರೆಯಲ್ಲಿ …
Read More »ಬಾಳೆಹಣ್ಣಿಗೆ ವಿಷಹಾಕಿ 20ಕ್ಕೂ ಹೆಚ್ಚು ಹಸುಗಳನ್ನು ಕೊಂದಿರುವ ಆಘಾತಕಾರಿ ಘಟನೆ…?
ತೋಟದೊಳಗೆ ಬರುತ್ತಿವೆ ಎಂದು ಪಾಪಿಗಳು ಬಾಳೆಹಣ್ಣಿಗೆ ವಿಷಹಾಕಿ 20ಕ್ಕೂ ಹೆಚ್ಚು ಹಸುಗಳನ್ನು ಕೊಂದಿರುವ ಆಘಾತಕಾರಿ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ. ಐಗೂರಿನ ಡಿಬಿಡಿ ಟಾಟಾ ಎಸ್ಟೇಟ್‍ನಲ್ಲಿ ಈ ಘಟನೆ ನಡೆದಿದ್ದು, ಎಸ್ಟೇಟ್ ಒಳಗೆ ಸ್ಥಳೀಯ ದನಗಳು ಹೋಗುತ್ತಿದ್ದರಿಂದ ಎಸ್ಟೇಟ್‍ನ ಮ್ಯಾನೇಜರ್ ಮತ್ತು ಸಿಬ್ಬಂದಿ ಸೇರಿ ಬಾಳೆಹಣ್ಣಿಗೆ ವಿಷ ಹಾಕಿ ಹಸುಗಳಿಗೆ ತಿನಿಸಿ ಕೊಂದಿದ್ದಾರೆ. ಈ ರೀತಿ ಕಳೆದ ಹಲವು ದಿನಗಳಿಂದ 20ಕ್ಕೂ ಹೆಚ್ಚು ಹಸುಗಳಿಗೆ ಹತ್ಯೆ ಮಾಡಿದ್ದಾರೆ ಎಂದು …
Read More »ಪೊಲೀಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಸೇರಿ 7 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹೋಮ್ ಕ್ವಾರಂಟೈನ್ ವಿಧಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಸ್ ಪಿ ಸೇರಿದಂತೆ 7 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕದ ಸಿಂಗಂ ಖ್ಯಾತಿಯ ಪೊಲೀಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್, ಎಸ್ ಪಿ ಸೀಮಂತ್ ಕುಮಾರ್ ಗೆ ಹೋಂ ಕ್ವಾರಂಟೈನ್ ವಿಧಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಕಚೇರಿಯನ್ನು ಒಂದು ವಾರ ಕಾಲ ಸೀಲ್ ಡೌನ್ ಮಾಡಲಾಗಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಸ್ ಪಿ ಪಿಎ …
Read More »ಆಯಂಬ್ಯುಲೆನ್ಸ್ ಸಿಗದೇ ಒಂದೂವರೆ ಗಂಟೆ ಕಾಲ ಬೀದಿಯಲ್ಲೇ ಜ್ವರದಿಂದ ತೀವ್ರವಾಗಿ ನರಳಿದ ಘಟನೆ
ವಿಜಯಪುರ: ಜಿಲ್ಲೆಯ ಆಲಮೇಲದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಆಯಂಬ್ಯುಲೆನ್ಸ್ ಸಿಗದೇ ಒಂದೂವರೆ ಗಂಟೆ ಕಾಲ ಬೀದಿಯಲ್ಲೇ ಜ್ವರದಿಂದ ತೀವ್ರವಾಗಿ ನರಳಿದ ಘಟನೆ ನಡೆದಿದೆ. ಶಂಕರ್ ಜಂಬಗಿ(50) ಜ್ವರದಿಂದ ನರಳಾಡಿದ ರೋಗಿ. ಸ್ಥಳೀಯವಾಗಿ ಚಿಕಿತ್ಸೆ ಸಿಗದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಲು ಆಯಂಬ್ಯುಲೆನ್ಸ್ಗಾಗಿ ಕಾದರೂ ಒಂದೂವರೆ ಗಂಟೆಗಳ ಕಾಲ ಆಯಂಬುಲೆನ್ಸ್ ಬಂದಿಲ್ಲ. ನಂತರ ಸ್ಥಳೀಯ ಯುವಕರು ಕರೆಮಾಡಿ ಆಯಂಬುಲೆನ್ಸ್ ಕರೆಸಿ ಪತ್ನಿ ಶೋಭಾ ಜೊತೆ ರೋಗಿಯನ್ನ ಸಿಂದಗಿ …
Read More »ಗೋಕಾಕದಲ್ಲಿ ಇರುವ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಟ್ರೀಟ್ಮೆಂಟ್ ನೀಡಲು ಸಿದ್ಧರಾಗುತ್ತಿದ್ದಾರೆ.
ಗೋಕಾಕ : ದೇಶ ಹಾಗೂ ರಾಜ್ಯಾದ್ಯಂತ ಉಲ್ಬಣಗೊಂಡಿರುವ ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಗೋಕಾಕ ತಾಲೂಕಿನ ಸ್ಥಳೀಯ ಕೆಲ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಐಸೋಲೇಶನ್ ವಾರ್ಡ್ಗಳನ್ನು ಸ್ಥಾಪಸಿ ಚಿಕಿತ್ಸೆ ನೀಡಬೇಕು ಎಂದು ಸರಕಾರದ ಆದೇಶವಿದೆ.1)ಆರೋಗ್ಯ ಆಧಾರ್ ಹಾಸ್ಪಿಟಲ ಗೋಕಾಕ 2)ಘೋಡಗೇರಿ ಆಸ್ಪತ್ರೆ ಗೋಕಾಕ 3)ಅಥರ್ವ ಅಥೋ ಹಾಸ್ಪಿಟಲ್ ಗೋಕಾಕ 4)ಕಪ್ಪಲಗುದ್ದಿ ಆಸ್ಪತ್ರೆ ಗೋಕಾಕ 5)ಗಂಗಾ ಹಾಸ್ಪಿಟಲ್ ಗೋಕಾಕ 6)ಜಯರತ್ನ ಹಾಸ್ಪಿಟಲ್ ಗೋಕಾಕ 7)ಕೆ ಎಲ್ ಇ ಹಾಸ್ಪಿಟಲ್ ಗೋಕಾಕ …
Read More »
Laxmi News 24×7