Breaking News

ರಾಜ್ಯ

ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಅಪರಾಧವಲ್ಲ:ಮಾಧುಸ್ವಾಮಿ

ಉಡುಪಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಕಸ್ಮಿಕ ಘಟನೆಗೆ ಬಲಿಯಾಗಿದ್ದಾರೆ. ನಾವೆಲ್ಲ ಶಾಸಕರು ಜಾರಕಿಹೊಳಿ ಬಗ್ಗೆ ಅನುಕಂಪವಿಟ್ಟುಕೊಂಡಿದ್ದೇವೆ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಸಚಿವರು, ಸಿಡಿ ಬಹಿರಂಗ ಪ್ರಕರಣ ಇದೊಂದು ಕಾನೂನಾತ್ಮಕ ಹಾಗೂ ನೈತಿಕ ವಿಚಾರ. ನೈತಿಕವಾಗಿ ಹೊಣೆಹೊತ್ತು ಅವರು ರಾಜೀನಾಮೆ ನೀಡಿದ್ದಾರೆ. ಕಾನೂನಾತ್ಮಕವಾಗಿಯೂ ಸಮಸ್ಯೆ ಇದೆ ಎನಿಸಲ್ಲ ಎಂದರು. ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. …

Read More »

ಧಾರವಾಡ: ಮನೆ ಮಗನಂತೆ ಸಾಕಿರುವ ಎತ್ತಿಗೆ ಹುಟ್ಟುಹಬ್ಬ; 8 ಕೆಜಿ ಕೆಕ್ ಕತ್ತರಿಸಿ ಸಂಭ್ರಮಿಸಿದ ರೈತ ಕುಟುಂಬ

ಧಾರವಾಡ: ರೈತರ ಜೀವಾಳವೆಂದರೆ ಜಾನುವಾರುಗಳು. ಆಧುನಿಕತೆ ಎಷ್ಟೇ ಮುಂದುವರಿದರೂ ರೈತರು ಕೃಷಿಗೆ ಅವಲಂಬಿಸುವುದು ಜಾನುವಾರುಗಳನ್ನೆ. ಕೃಷಿ ಚಟುವಟಿಕೆಯಲ್ಲಿ ಎತ್ತುಗಳು ಪ್ರಮುಖವಾಗಿ ಸಹಾಯಕ್ಕೆ ಬರುತ್ತವೆ. ಇದೇ ಕಾರಣಕ್ಕೆ ಎತ್ತುಗಳನ್ನು ಅನೇಕರು ಸಾಕುತ್ತಾರೆ. ಹೀಗೆ ಸಲಹುವ ರೈತರು ಮನೆಯ ಸದಸ್ಯರಂತೆ ಅವುಗಳನ್ನು ಕಾಣುತ್ತಾರೆ. ಆದರೆ ಇಷ್ಟೆಲ್ಲ ಪ್ರೀತಿ ತೋರಿಸಿದರೂ ಕೆಲವು ಸಂದರ್ಭದಲ್ಲಿ ಉಂಟಾಗುವ ಆರ್ಥಿಕ ಸಂಕಷ್ಟದಿಂದಾಗಿ ಕೃಷಿಯ ಮೂಲ ಆಧಾರವಾಗಿರುವ ಎತ್ತುಗಳನ್ನೇ ಮಾರಾಟ ಮಾಡುವ ಅನಿವಾರ್ಯತೆಯೂ ಬರುತ್ತದೆ. ಇದೇ ರೀತಿ ಮನೆಯಲ್ಲಿಯೇ ಜನಿಸಿದ …

Read More »

ಎಂಎಸ್‌ಎಂಇಗಳಿಗೆ ಶೇ 30ರಷ್ಟು ಜಮೀನು: ಜಗದೀಶ ಶೆಟ್ಟರ್‌

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಿಂದ ಅಭಿವೃದ್ಧಿಪಡಿಸುತ್ತಿರುವ ಕೈಗಾರಿಕಾ ಪ್ರದೇಶಗಳಲ್ಲಿ ಶೇಕಡ 30ರಷ್ಟು ಜಮೀನನ್ನು ಮಧ್ಯಮ, ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಮೀಸಲಿಡಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು. ಕ್ರೆಡೈ ಕರ್ನಾಟಕ ವತಿಯಿಂದ ಶನಿವಾರ ಆಯೋಜಿಸಿದ್ದ ‘ಕ್ರೆಡೈ ಜ್ಞಾನ ಸರಣಿ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜ್ಯದ ಅಭಿವೃದ್ಧಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದು. ಮಧ್ಯಮ, ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ …

Read More »

ಇಂದು ಬೆಳಗಾವಿಯಲ್ಲಿ ಪುಲ್ವಾಮ ಹುತಾತ್ಮ ಯೋಧನ ಅಂತ್ಯಕ್ರಿಯೆ

ಬೆಳಗಾವಿ: ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ವೀರಯೋಧ ಕಾಶಿರಾಮ ಬೋಮನಹಳ್ಳಿ ಅವರ ಪಾರ್ಥಿವ ಶರೀರವನ್ನ ಬೆಳಗಾವಿಗೆ ತರಲಾಗಿದೆ.     ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶಿರಾಮ್, ಉಗ್ರರ ದಾಳಿಯಿಂದ ಹುತಾತ್ಮರಾಗಿದ್ರು. ನಿನ್ನೆ ರಾತ್ರಿ ಯೋಧನ ಪಾರ್ಥಿವ ಶರೀರವನ್ನ ವಿಶೇಷ‌ ವಾಹನದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಇಂದು ಯೋಧನ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.   ವಿಜಯಪುರ ಮೂಲದ ಯೋಧ ಜಮ್ಮು ಕಾಶ್ಮೀರದ …

Read More »

ವಿದ್ಯುತ್‌ ಪರಿವರ್ತಕಗಳ ಎತ್ತರಿಸಲು ಸೂಚನೆ

ಬೆಂಗಳೂರು: ಬೆಳಗಾವಿ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪದೇ ಪದೇ ಪ್ರವಾಹ ಸೃಷ್ಟಿಯಾಗುವ ಪ್ರದೇಶಗಳಲ್ಲಿರುವ ವಿದ್ಯುತ್‌ ಪರಿವರ್ತಕಗಳನ್ನು ಎತ್ತರದಲ್ಲಿಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಇಂಧನ ಇಲಾಖೆಯ ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಸೂಚಿಸಿದರು. ಶನಿವಾರ ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಬೆಳಗಾವಿಯ ಚಿಕ್ಕೋಡಿ ತಾಲ್ಲೂಕು, ಬಾಗಲಕೋಟೆಯ ಬೀಳಗಿ, ಮುಧೋಳ, ಬಾದಾಮಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಪ್ರವಾಹದಿಂದ ವಿದ್ಯುತ್‌ ಪರಿವರ್ತಕಗಳಿಗೆ …

Read More »

ಲಾಕ್‌ಡೌನ್‌ ಸಡಿಲಿಕೆ : ಜುಲೈ 5 ರಿಂದ ವಂಡರ್‌ಲಾ ಪ್ರಾರಂಭ

ಬೆಂಗಳೂರು: ಲಾಕ್‌ಡೌನ್‌ ಸಡಿಲಿಕೆ ಬಳಿಕ ಜುಲೈ 5 ರಿಂದ ವಂಡರ್‌ ಲಾ ಅಮ್ಯೂಸ್ಮೆಂಟ್‌ ಪಾರ್ಕ್‌ನನ್ನು ಶೇ.50 ರಷ್ಟು ತೆರೆಯುವುದಾಗಿ ವಂಡರ್‌ಲಾ ಹಾಲಿಡೇಸ್ ತಿಳಿಸಿದೆ. ಕಳೆದ ಎರಡು ತಿಂಗಳಿನಿಂದ ಲಾಕ್‌ಡೌನ್‌ನಿಂದಾಗಿ ವಂಡರ್‌ಲಾ ಪಾರ್ಕ್‌ನನ್ನು ಮುಚ್ಚಲಾಗಿತ್ತು. ಇದೀಗ ಸರ್ಕಾರ ರೆಸ್ಟೋರೆಂಟ್ ಹಾಗೂ ಅಮ್ಯೂಸ್ಮೆಂಟ್‌ ಪಾರ್ಕ್‌ಗಳಿಗೆ ಶೇ.50 ರಷ್ಟು ಸಾಮರ್ಥ್ಯದಲ್ಲಿ ತೆರೆಯಲು ಅವಕಾಶ ನೀಡಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಸುರಕ್ಷತೆಯವನ್ನು ಹಾಗೂ ಸರ್ಕಾರದ ಕೋವಿಡ್‌ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಲಿದೆ ಎಂದು ವಂಡೆರ್‌ಲಾ ವ್ಯವಸ್ಥಾಪಕ …

Read More »

ದುರಹಂಕಾರ ಇರುವವರಿಗೆ ಲಸಿಕೆ ಇಲ್ಲ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಮೈಸೂರು: ದುರಹಂಕಾರ ಮತ್ತು ಮಾಹಿತಿ ಇಲ್ಲದೆ ಇರುವವರಿಗೆ ನಮ್ಮ ಬಳಿಯಷ್ಟೇ ಅಲ್ಲ. ಜಗತ್ತಿನಲ್ಲೇ ಲಸಿಕೆ ಇದಕ್ಕೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ರಾಹುಲ್‌ಗಾಂಧಿ ವಿರುದ್ಧ ಕಿಡಿಕಾರಿದರು. ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. 135 ಕೋಟಿ ಜನಸಂಖ್ಯೆ ದೇಶದಲ್ಲಿ ಒಂದೇ ದಿನ ಎಲ್ಲರಿಗೂ ವಾಕ್ಸಿನ್‌ ಕೊಡಲು ಸಾಧ್ಯವಿಲ್ಲ. ಜೂನ್‌ನಲ್ಲಿ …

Read More »

ಹಾವನ್ನು ಕೊರಳಿಗೆ ಸುತ್ತಿಕೊಂಡು ಸೈಕಲ್ ಏರಿ ಹೊರಟ

ಬೆಳಗಾವಿ: ವ್ಯಕ್ತಿಯೊಬ್ಬ ಜೀವಂತ ಹಾವನ್ನು ಹಿಡಿದು ತನ್ನ ಕೊರಳಿಗೆ ಸುತ್ತಿಕೊಂಡು ಸೈಕಲ್ ಏರಿ ಹೋಗಿ ಅರಣ್ಯಕ್ಕೆ ಬಿಟ್ಟ ಘಟನೆ ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನಡೆದಿದೆ. ಹಾವು ವ್ಯಕ್ತಿಯ ಮನೆಗೆ ಬಂದಿತ್ತು. ಹಾವನ್ನು ಹಿಡಿದು ಅದನ್ನು ತನ್ನ ಕೊರಳಿಗೆ ಸುತ್ತಿಕೊಂಡು ಸೈಕಲ್ ಏರಿ ತನ್ನ ಹೊಲದತ್ತ ತೆಗೆದುಕೊಂಡು ಹೋಗಿ ಬಿಟ್ಟಿದ್ದಾನೆ. ಈ ದೃಶ್ಯವನ್ನು ಸೆರೆಹಿಡಿದ ಗ್ರಾಮದ ಯುವಕರು ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ.

Read More »

ಜೀವಂತ ಹಾವನ್ನು ಕೊರಳಿಗೆ ಸುತ್ತಿಕೊಂಡ ಅಜ್ಜಾ..

ಬೆಳಗಾವಿ: ವ್ಯಕ್ತಿಯೊಬ್ಬ ಜೀವಂತ ಹಾವನ್ನು ಹಿಡಿದು ತನ್ನ ಕೊರಳಿಗೆ ಸುತ್ತಿಕೊಂಡು ಸೈಕಲ್ ಏರಿ ಹೋಗಿ ಅರಣ್ಯಕ್ಕೆ ಬಿಟ್ಟ ಘಟನೆ ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನಡೆದಿದೆ.   ಹಾವು ವ್ಯಕ್ತಿಯ ಮನೆಗೆ ಬಂದಿತ್ತು. ಹಾವನ್ನು ಹಿಡಿದು ಅದನ್ನು ತನ್ನ ಕೊರಳಿಗೆ ಸುತ್ತಿಕೊಂಡು ಸೈಕಲ್ ಏರಿ ತನ್ನ ಹೊಲದತ್ತ ತೆಗೆದುಕೊಂಡು ಹೋಗಿ ಬಿಟ್ಟಿದ್ದಾನೆ. ಈ ದೃಶ್ಯವನ್ನು ಸೆರೆಹಿಡಿದ ಗ್ರಾಮದ ಯುವಕರು ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ.

Read More »

ಮನನೊಂದು ತಮ್ಮ ಹೊಲದಲ್ಲಿ ಬೆಂಕಿ ಹಚ್ಚಿಕೊಂಡು ವ್ಯಕ್ತಿಯೊರ್ವ ಆತ್ಮಹತ್ಯೆ.

ಬೆಳಗಾವಿ: : ಇತ್ತೀಚಿಗೆ ದ್ವಿಚಕ್ರ ವಾಹನದ ಅಪಘಾತದಲ್ಲಿ ಗಾಯಗೊಂಡು ತನ್ನ ಎರಡು ಕಾಲುಗಳಿಗೆ ಪೆಟ್ಟಾಗಿದ್ದಕ್ಕೆ ಮನನೊಂದು ತಮ್ಮ ಹೊಲದಲ್ಲಿ ಬೆಂಕಿ ಹಚ್ಚಿಕೊಂಡು ವ್ಯಕ್ತಿಯೊರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದಲ್ಲಿ ಶನಿವಾರ ನಡೆದಿದೆ. ಬಾಳಾರಾಮ ಯಲ್ಲಪ್ಪಾ ಆನಂದಾಚೆ (52) ಮೃತ ವ್ಯಕ್ತಿ. ಶನಿವಾರ ಮದ್ಯಾಹ್ನ ತಮ್ಮ ಹೊಲಕ್ಕೆ ಹೋಗಿದ್ದ ಬಾಳಾರಾಮ ಯ‍ರು ಇಲ್ಲದ ಸಮಯದಲ್ಲಿ ಮೈಮೇಲೆ ಸೀಮೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪತ್ನಿ ಕಾಕತಿ …

Read More »