Breaking News

ರಾಜ್ಯ

ಮಂಡ್ಯದಲ್ಲಿ ಮಹಾಮಳೆ; ಸಂಪೂರ್ಣ ಜಲಾವೃತವಾದ ಕೆ.ಆರ್.ಪೇಟೆ ಬಸ್​ಸ್ಟ್ಯಾಂಡ್

ಮಂಡ್ಯ: ಮಂಡ್ಯ ಜಿಲ್ಲೆಯ ಹಲವೆಡೆ ಭರ್ಜರಿ‌ ಮಳೆಯಾಗಿದ್ದು ಕೆ. ಆರ್. ಪೇಟೆಯ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಸಂಪೂರ್ಣ ಜಲಾವೃತವಾಗಿದೆ. ಇದರಿಂದ ಬಸ್ ಗಾಗಿ ಕಾದುಕುಳಿತಿದ್ದ ಪ್ರಾಮಾಣಿಕರು ಪರದಾಡಿದ್ದಾರೆ. ಬಸ್ ನಿಲ್ದಾಣದಲ್ಲಿದ್ದ ಮಕ್ಕಳು, ಗರ್ಭಿಣಿಯರು ಸೇರಿದಂತೆ ನೂರಾರು ಪ್ರಯಾಣಿಕರು ಸಿಲುಕಿದ್ದರು. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ. ಬಸ್ ನಿಲ್ದಾಣ ಇಳಿಜಾರಿನಲ್ಲಿದೆ. ಹೀಗಾಗಿ ಸತತ ಒಂದೂವರೆ ಗಂಟೆಯಿಂದ ಸುರಿದ ಭರ್ಜರಿ ಮಳೆಗೆ ಬಸ್ ನಿಲ್ದಾಣ ಜಲಾವೃತವಾಗಿದೆ. ಸ್ಥಳಕ್ಕೆ ತಹಶೀಲ್ದಾರ್ …

Read More »

ಉ. ಕರ್ನಾಟಕಕ್ಕೆ 5kg ಗೋಧಿ, ದ. ಕರ್ನಾಟಕಕ್ಕೆ 5kg ಅಕ್ಕಿ ವಿತರಣೆಗೆ ಚಿಂತನೆ- ಉಮೇಶ್ ಕತ್ತಿ

ಮೈಸೂರು: ಸಚಿವ ಉಮೇಶ್ ಕತ್ತಿ ಮಾತನಾಡಿ.. ಯಾವುದೇ ಕಾರಣಕ್ಕೂ ಪಡಿತರ ಅಕ್ಕಿ ಕಡಿತ ಮಾಡಲ್ಲ. ಆಹಾರ ಭದ್ರತಾ ಕಾಯ್ದೆ ಅಡಿ 5kg ಅಕ್ಕಿ ನೀಡಲಾಗುತ್ತೆ. ಉತ್ತರ ಕರ್ನಾಟಕಕ್ಕೆ 5kg ಗೋಧಿ, ದಕ್ಷಿಣ ಕರ್ನಾಟಕಕ್ಕೆ 5kg ಅಕ್ಕಿ ವಿತರಣೆಗೆ ಚಿಂತನೆ ನಡೆದಿದೆ ಎಂದಿದ್ದಾರೆ. ಮುಂದುವರೆದು ರಮೇಶ್ ಜಾರಕಿಹೊಳಿ ವಿಚಾರವಾಗಿ ಮಾತನಾಡಿ.. ರಮೇಶ್ ಜಾರಕಿಹೋಳಿ ಕೇಸ್ ಇತ್ಯರ್ಥ ಆಗ್ತಿದ್ದಂತೆ ಸಂಪುಟ ಸೇರ್ತಾರೆ. ನನಗೆ ವಿಶ್ವಾಸ ಇದೆ ಅವರು ನೂರಕ್ಕೆ ನೂರರಷ್ಟು ಸಚಿವರಾಗ್ತಾರೆ. ಈ …

Read More »

ನಗರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡುವ ರೌಡಿಗಳಿದ್ದಾರೆ : ಅರಗ ಜ್ಞಾನೇಂದ್ರ

ಬೆಂಗಳೂರು: ನಗರದಲ್ಲಿ ರೌಡಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಂಬಂಧಿಸಿದವರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಇಂಥ ಸಮಾಜಘಾತುಕರನ್ನು ಬಳಸಿಕೊಂಡು ಬೆದರಿಸುವ ಕಾರ್ಯಗಳು ನಡೆಯುತ್ತಿವೆ. ಇಂಥವುಗಳು ಕೂಡಲೇ ಬಂದ್ ಆಗಬೇಕು. ಬೆಂಗಳೂರನ್ನು ರೌಡಿಮುಕ್ತ ನಗರವನ್ನಾಗಿಸಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಂದು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ನಗರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂ …

Read More »

ಕೇಸ್ ಇತ್ಯರ್ಥ ಆಗುತ್ತಿದ್ದಂತೆಯೇ ಸಂಪುಟಕ್ಕೆ ಸೇರ್ಪಡೆ: ಜಾರಕಿಹೊಳಿ ಪರ ಬ್ಯಾಟ್ ಬೀಸಿದ ಉಮೇಶ್ ಕತ್ತಿ

ಮೈಸೂರು: ಕೇಸ್ ಇತ್ಯರ್ಥ ಆಗುತ್ತಿದ್ದಂತೆಯೇ ರಮೇಶ್ ಜಾರಕಿಹೊಳಿ ಸಂಪುಟ ಸೇರುವ ವಿಶ್ವಾಸ ನನಗೆ ಇದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಅಡಿದ ಅವರು, ರಮೇಶ್ ಅವರು ನೂರಕ್ಕೆ ನೂರರಷ್ಟು ಸಚಿವರಾಗುತ್ತಾರೆ. ಈ ಮಾತನ್ನು ನಾನೊಬ್ಬ ಸಚಿವನಾಗಿ ಹೇಳುತ್ತಿದ್ದೇನೆ. ಅವರು ಐದು ಬಾರಿ ಶಾಸಕರಾಗಿ ಕೆಲಸ ಮಾಡಿದ್ದು, ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ ಎಂದು ಹೇಳಿದರು. ಉಪಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಇದನ್ನು ಪಕ್ಷ …

Read More »

ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ,ಸಂಜಯ ಪಾಟೀಲ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ

ಬೆಳಗಾವಿ: ವಾಕ್ಸಮರದ ಬರದಲ್ಲಿ ಬಿಜೆಪಿ ಮುಖಂಡ, ಮಾಜಿ ಶಾಸಕ ಸಂಜಯ್ ಪಾಟೀಲ್ ನಾಲಿಗೆ ಹರಿಬಿಟ್ಟಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ . ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ನೈಟ್ ಪಾಲಿಟಿಕ್ಸ್ ಗೊತ್ತು. ರಾತ್ರಿ ರಾಜಕಾರಣದಿಂದಲೇ ಅವರು ಗೆದ್ದು ಬಂದಿದ್ದಾರೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಶಾಸಕಿಯಾಗುವ ಮೊದಲು ಲಕ್ಷ್ಮಿ ಹೆಬ್ಬಾಳ್ಕರ್ ನಾನು ನಿಮ್ಮ ಮಗಳು, ಚಾಂದ್ ತಾರೆ ತೋಡ್ ಕೇ ಲಾವೂಂಗಿ ಎಂದು ಹೇಳುತ್ತಿದ್ದರು.  ಶಾಸಕರಾದ ಮೇಲೆ …

Read More »

ರಾಜ್ಯದ 31ನೇ ಜಿಲ್ಲೆ ವಿಜಯನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಲಿದ್ದಾರೆ.

ಬೆಂಗಳೂರು – ರಾಜ್ಯದ 31ನೇ ಜಿಲ್ಲೆ ವಿಜಯನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಲಿದ್ದಾರೆ. ಶನಿವಾರ ಸಂಜೆ 6 ಗಂಟೆಗೆ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಭವ್ಯ ಸಮಾರಂಭದಲ್ಲಿ ವಿಜಯ ನಗರ ಜಿಲ್ಲೆ ಅಧಿಕೃತವಾಗಿ ಅಸ್ಥಿತ್ವಕ್ಕೆ ಬರಲಿದೆ. ಸಚಿವ ಆನಂದ ಸಿಂಗ್ ಅವರ ಒತ್ತಾಸೆಯಂತೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಜಯನಗರ ಜಿಲ್ಲೆಯನ್ನು ಘೋಷಣೆ ಮಾಡಿದ್ದರು. ರಡ್ಡಿ ಸಹೋದರರ ವಿರೋಧದ ಮಧ್ಯೆಯೂ ವಿಜಯನಗರ ಜಿಲ್ಲೆ ಘೋಷಣೆಯಾಗಿದೆ. ಆನಂದ ಸಿಂಗ್ ಕಾಂಗ್ರೆಸೇ್ ತೊರೆದು …

Read More »

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಿಯಮ ಬಾಹಿರ ನೇಮಕಾತಿ: ಶುರುವಾಯ್ತು ಆತಂಕ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇದೀಗ ಸಹಾಯಕ ಪ್ರಾಧ್ಯಾಪಕರ ವಜಾಗೊಳಿಸುವ ಪರ್ವ ಆರಂಭವಾಗಿದೆ. ನೇಮಕಾತಿ ಸಂದರ್ಭದಲ್ಲಿ ನಿಯಮ ಬಾಹಿರವಾಗಿ ನೇಮಕಾತಿ ನಡೆದಿದೆ ಅಂತಾ ಅನೇಕರು ಹೈಕೋರ್ಟ್ ಮೊರೆ ಹೋಗಿದ್ದರಿಂದ ಇದೀಗ ಕೋರ್ಟ್ ಈ ಬಗ್ಗೆ ಆದೇಶಗಳನ್ನು ನೀಡುತ್ತಿದೆ. ಇದರಿಂದ ಕೆಲವರಿಗೆ ಕೆಲಸ ಕಳೆದುಕೊಳ್ಳುವ ಆತಂಕ ಶುರುವಾಗಿದೆ. ಈ ಮಧ್ಯೆ ಕೋರ್ಟ್ ಆದೇಶದಿಂದ ವಜಾಗೊಳ್ಳುವ ಆತಂಕದಲ್ಲಿರುವ ಸಹಾಯಕ ಪ್ರಾಧ್ಯಾಪಕರು ವಿಭಾಗೀಯ ಪೀಠದಿಂದ ತಡೆ ತರುತ್ತಿದ್ದಾರೆ. ಕಠಿಣ ಶಬ್ದಗಳಲ್ಲಿ ನಿಯಮ ಬಾಹಿರ ನೇಮಕಾತಿ ಬಗ್ಗೆ …

Read More »

ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಜನಪ್ರತಿನಿಧಿಯಾಗುವ ಅವಕಾಶ

ಬೆಳಗಾವಿ: ಯುಪಿಎ ಅಧಿಕಾರ ಅವಧಿಯಲ್ಲಿ ಮಾಧ್ಯಮಗಳಲ್ಲಿ ಭೂಮಿಯ ತಳಭಾಗದಿಂದ ಆಗಸದವರೆಗೆ ಹಗರಣಗಳನ್ನು ನೋಡುವುದೇ ಆಗಿತ್ತು. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ ಏಳು ವರ್ಷ ಭ್ರಷ್ಟಾಚಾರ ರಹಿತ ಅಭಿವೃದ್ಧಿಪರ ಯೋಜನೆಗಳ ಕಾಲವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಹೇಳಿದ್ದಾರೆ. ಮೋದಗಾ ಗ್ರಾಮದ ರಾಧಾಕೃಷ್ಣ ಸಭಾಭವನದಲ್ಲಿ ಜರುಗಿದ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶವನ್ನು ಲೂಟಿ ಮಾಡಿದ ಯುಪಿಎ ಸರ್ಕಾರ ಕೇವಲ …

Read More »

ಗೌತಮ್ ಅದಾನಿಯ ಒಂದು ದಿನದ ಗಳಿಕೆಯೇ 1,002 ಕೋಟಿ ರೂಪಾಯಿ!

ಭಾರತದ 119 ನಗರಗಳ 1,007 ವ್ಯಕ್ತಿಗಳ ಸಂಪತ್ತು ಒಂದು ಸಾವಿರ ಕೋಟಿ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಾಗಿದೆ. ಭಾರತದಲ್ಲಿರುವ ಶ್ರೀಮಂತ ವ್ಯಕ್ತಿಗಳು, ಕುಟುಂಬಗಳ ಸಂಪತ್ತಿನಲ್ಲಿ ಬಾರಿ ಏರಿಕೆಯಾಗಿದೆ. ಕೊರೊನಾದ ಮಧ್ಯೆಯೂ ಶ್ರೀಮಂತರ ಸಂಪತ್ತಿನಲ್ಲಿ ಏರಿಕೆಯಾಗಿರುವುದು ವಿಶೇಷ. ಯಾವ್ಯಾವ ಕಂಪನಿಗಳು ಪ್ರತಿ ನಿತ್ಯ ಎಷ್ಟೆಷ್ಟು ಕೋಟಿ ರೂಪಾಯಿ ಹಣ ಗಳಿಸುತ್ತಿವೆ ಎಂದು ಕೇಳಿದರೇ ನಿಮಗೆ ಶಾಕ್ ಆಗಬಹುದು. ಗೌತಮ್ ಅದಾನಿಯ ಪ್ರತಿ ನಿತ್ಯದ ಆದಾಯ ಬರೋಬ್ಬರಿ 1,002 ಕೋಟಿ ರೂಪಾಯಿ. ಇದೇ …

Read More »

ಕೆಲಸದಿಂದ ತೆಗೆದಿದ್ದಕ್ಕೆ ಗ್ರಾ.ಪಂ ಅಧ್ಯಕ್ಷರ ಟೇಬಲ್​ ಎದುರೇ ನೇಣಿಗೆ ಶರಣಾದ ನೌಕರ

ಗದಗ: ಕೆಲಸದಿಂದ ತೆಗೆದಿದ್ದಕ್ಕೆ ಮನನೊಂದು ನೌಕರನೋರ್ವ ಗ್ರಾಮ ಪಂಚಾಯತ್​ ಕಚೇರಿಯಲ್ಲಿಯೇ ನೇಣಿಗೆ ಶರಣಾದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಹೊಳಗುಂದಿ (28) ಆತ್ಮಹತ್ಯೆ ಶರಣಾದ ಸಿಬ್ಬಂದಿ. ಮೃತ ಮಲ್ಲಪ್ಪ ಸ್ಥಳೀಯ ಗ್ರಾಮ ಪಂಚಾಯತ್​ನಲ್ಲಿ ವಾಟರ್​ ಮ್ಯಾನ್​ ಆಗಿ ಕೆಲಸ ನಿರ್ವಹಿಸುತ್ತಿದ್ದು ಇತ್ತೀಚಿಗೆ ಆತನನ್ನು ಕೆಲಸದಿಂದ ಬಿಡಿಸಲಾಗಿತ್ತು ಎನ್ನಲಾಗಿದೆ.     ಇದರಿಂದ ಮನನೊಂದ ಮಲ್ಲಪ್ಪ ಕಚೇರಿಯಲ್ಲಿ ಅಧ್ಯಕ್ಷರು ಕೂರುವ ಟೇಬಲ್​ ಮುಂದೆಯೇ ನೇಣಿಗೆ ಶರಣಾಗಿದ್ದಾನೆ. …

Read More »