Breaking News

ರಾಜ್ಯ

ಗುರುತು ಕೂಡ ಸಿಗದಂತೆ ಪತ್ತೆಯಾಗ್ತಿವೆ ಮೃತದೇಹಗಳು,ಜನ ರಾತ್ರಿ ವೇಳೆ ಓಡಾಡೋಕೆ ಭಯಪಡುತ್ತಿದ್ದಾರೆ.

ಹಾಸನ: ಅಲ್ಲಿನ ಜನ ರಾತ್ರಿ ವೇಳೆ ಓಡಾಡೋಕೆ ಭಯಪಡುತ್ತಿದ್ದಾರೆ. ಒಂಟಿಯಾಗಿ ಹೊರಗೆ ಕಾಲಿಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಯಾವಾಗ ಏನ್ ಆಗುತ್ತೋ ಅನ್ನೋ ಆತಂಕದಲ್ಲಿದ್ದಾರೆ. ಯಾಕಂದ್ರೆ ಗುರುತೇ ಸಿಗದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಆಗುತ್ತಿದೆ. ಅಪರಿಚಿತ ಶವ ಪತ್ತೆ.. ಜನರಿಗೆ ಆತಂಕ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರು ಶವವಾಗಿ ಪತ್ತೆ ಆಗಿದ್ರು. ಮಹಿಳೆಯ ಬಲಗೈ …

Read More »

ಮುಂಬೈ ಮೇಲೆ ಖಲಿಸ್ತಾನಿ ಉಗ್ರರ ಕೆಂಗಣ್ಣು: ವಾಣಿಜ್ಯ ನಗರಿಯಲ್ಲಿ ತೀವ್ರ ಕಟ್ಟೆಚ್ಚರ

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈ ಮೇಲೆ ಖಲಿಸ್ತಾನಿ ಉಗ್ರರು ಕೆಂಗಣ್ಣು ಬೀರಿದ್ದು, ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಮುಂಬೈ ಮೇಲೆ ಖಲಿಸ್ತಾನಿ ಉಗ್ರರು ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.   ಹೊಸ ವರ್ಸದ ಸಂಭ್ರಮದಲ್ಲಿರುವ ವೇಳೆ ಖಲಿಸ್ತಾನಿ ಭಯೋತ್ಪಾದಕರು ದಾಳಿ ನಡೆಸುವ ಯೋಜನೆ ರೂಪಿಸಿದ್ದಾರೆ ಎಂದು ಸ್ವತಃ …

Read More »

ಡಿಸೆಂಬರ್‌ 31, 2021 ರಿಂದ 15 ದಿನಗಳ ಕಾಲ ಚಳಿಗಾಲದ ರಜಾ ನೀಡಲಾಗುತ್ತಿದೆ.

ಓಮಿಕ್ರಾನ್ ಒಳಗೊಂಡದಂತೆ ಕೋರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೆ ಚಳಿಗಾಲದಲ್ಲಿ ಶೀಲ ಹೆಚ್ಚಾಗುವ ದೃಷ್ಠಿಯಿಂದ ಶಾಲಾ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯು.ಪಿ ಶಾಲೆಗಳು ಜನವರಿ 14 ರವರೆಗೆ ಬಂದ್ ಮಾಡಲು ಮುಂದಾಗಿದೆ. ಡಿಸೆಂಬರ್‌ 31, 2021 ರಿಂದ 15 ದಿನಗಳ ಕಾಲ ಚಳಿಗಾಲದ ರಜಾ ನೀಡಲಾಗುತ್ತಿದೆ. ಹೀಗಾಗಿ ರಾಜ್ಯದಾದ್ಯಂತ ಡಿಸೆಂಬರ್ 31 ರಿಂದ ಜನವರಿ 14 ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ನಿರ್ಧಾರವು 1 ರಿಂದ 8 ನೇ …

Read More »

ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬೀಗಿದ ಪತಿ-ಪತ್ನಿ

ಬಾಗಲಕೋಟೆ: ಡಿ.27ರಂದು ನಡೆದ ಕಮತಗಿ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಇಂದು(ಡಿ.30) ಪ್ರಕಟವಾಗಿದ್ದು, ದಂಪತಿ ಇಬ್ಬರೂ ಆಯ್ಕೆಯಾಗುವ ಮೂಲಕ ಗಮನ ಸೆಳೆಸಿದ್ದಾರೆ. 7ನೇ ವಾರ್ಡ್​ನಿಂದ ದೇವಿಪ್ರಸಾದ ನಿಂಬಲಗುಂದಿ ಹಾಗೂ ಇವರ ಪತ್ನಿ ನೇತ್ರವಾತಿ 15ನೇ ವಾರ್ಡ್​ನಿಂದ ಚುನಾವಣೆಗೆ ಸ್ಪರ್ಧಿಸಿದ್ದರು.   ನೇತ್ರಾವತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗಿದ್ದರು. ದೇವಿಪ್ರಸಾದಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿರಲಿಲ್ಲ. ಹಾಗಾಗಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ಅಖಾಡಕ್ಕೆ ಇಳಿದಿದ್ದರು. ಪತಿ ಮತ್ತು ಪತ್ನಿ ಇಬ್ಬರಿಗೂ ಮತದಾರರು …

Read More »

ಶುಭ ಸುದ್ದಿ: 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ, ತಾತ್ಕಾಲಿಕವಾಗಿ 4000 ಅತಿಥಿ ಶಿಕ್ಷಕರ ನೇಮಕ

ಬೆಂಗಳೂರು: 4000 ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ತೀರ್ಮಾನಿಸಿದೆ. 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ವಿಳಂಬ ಕಾರಣದಿಂದ ಶಿಕ್ಷಕರ ಕೊರತೆ ನೀಗಿಸಲು 4 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು.   ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ 18000 ಅಧಿಕ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದ್ಯ 4000 ಹೆಚ್ಚುವರಿ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಅನುಮೋದನೆ …

Read More »

ATM ಬಳಕೆದಾರರಿಗೆ ಶಾಕ್: ನಾಳೆಯಿಂದ ಜೀವನದಲ್ಲಿ ಪರಿಣಾಮ ಬೀರಲಿವೆ ಈ ಹೊಸ ನಿಯಮ

ನವದೆಹಲಿ: ಹೊಸ ವರ್ಷದಲ್ಲಿ ಬದಲಾದ ನಿಯಮಗಳು ಜನ ಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಈ ನಿಯಮಗಳಲ್ಲಿ, ಠೇವಣಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದವು ಇವೆ, ನಗದು ಹಿಂಪಡೆಯುವಿಕೆಯಿಂದ ಠೇವಣಿಯವರೆಗೆ, ನಿಮ್ಮ ಮೇಲೆ ನಿಯಮಗಳು ನೇರ ಪರಿಣಾಮ ಬೀರುತ್ತದೆ.   ಎಟಿಎಂನಿಂದ ಹಣ ಡ್ರಾ ದುಬಾರಿ ಜನವರಿಯಿಂದ ಗ್ರಾಹಕರು ಉಚಿತ ಎಟಿಎಂ ವಹಿವಾಟಿನ ಮಿತಿಯನ್ನು ದಾಟಿದರೆ ಹೆಚ್ಚು(ಎಟಿಎಂ ಶುಲ್ಕ ಹೆಚ್ಚಳ) ಪಾವತಿಸಬೇಕಾಗುತ್ತದೆ. ಜೂನ್‌ನಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್(RBI) ಜನವರಿ 1, …

Read More »

ಯಾಕೋ ಸಿಎಂ ಬೊಮ್ಮಾಯಿ ಗ್ರಹಗತಿ ಸರಿಯಿಲ್ಲ: ಸತತ 3ನೇ ಚುನಾವಣಾ ಮುಖಭಂಗ

ಚುನಾವಣೆಯಲ್ಲಿ ಗೆದ್ದವರು ಈ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿ ಎನ್ನುವುದು ಸಹಜ. ಸೋತವರು, ಸ್ಥಳೀಯ ಮಟ್ಟದಲ್ಲಿ ನಡೆಯುವ ಚುನಾವಣೆ ಇದಾಗಿರುವುದರಿಂದ ಈ ಫಲಿತಾಂಶಕ್ಕೂ, ಮುಂದಿನ ಅಸೆಂಬ್ಲಿ ಚುನಾವಣೆಗೆ ಸಂಬಂಧವಿಲ್ಲ ಎನ್ನುವುದೂ ಸಹಜ. ಆದರೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪನವರು ಬಿಜೆಪಿಗೆ ಆಗಿರುವ ಹಿನ್ನಡೆಯನ್ನು ಒಪ್ಪಿಕೊಂಡಿದ್ದಾರೆ. ವಿವಾದಕಾರಿ ಹೇಳಿಕೆಗೆ ಹೆಸರಾಗಿರುವ ಇವರು ಸುಧಾರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.   ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದಿಂದ ಬೀಗುತ್ತಿದ್ದ ಕಾಂಗ್ರೆಸ್ಸಿಗೆ ಸ್ಥಳೀಯ ಸಂಸ್ಥೆ …

Read More »

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಧಾರವಾಡ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಪೋಷಣ ಅಭಿಯಾನ ಯೋಜನೆಯಡಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಯೋಜನಾ ಕಾರ್ಯಕ್ರಮ ಸಂಯೋಜಕರು-01 ಮತ್ತು ತಾಲ್ಲೂಕು ಮಟ್ಟದಲ್ಲಿ, ಹುಬ್ಬಳ್ಳಿ-ಧಾರವಾಡ ಶಹರ ಯೋಜನಾ ಕಾರ್ಯಕ್ರಮ ಸಂಯೋಜಕರು-01 ಹುದ್ದೆಗಳನ್ನು ಮತ್ತು ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಯೋಜಕರು-01 ಹುದ್ದೆಯನ್ನು ನೇರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.   ಸ್ಥಳೀಯರಿಗೆ ಹಾಗೂ ಸೇವಾ ಅನುಭವ …

Read More »

ಸಂಕ್ರಾಂತಿ ಬಳಿಕ ಪ್ರಧಾನಿ ದೊಡ್ಡ ಬದಲಾವಣೆ ಮಾಡಲಿದ್ದಾರೆ ನನಗೆ ಪಕ್ಷದಿಂದ ಸಿಹಿ ಸುದ್ದಿ :ಯತ್ನಾಳ್

ವಿಜಯಪುರ: ಸಂಕ್ರಾಂತಿಯ ನಂತರ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದ್ದು, ನನಗೆ ಪಕ್ಷದಿಂದ ಸಿಹಿ ಸುದ್ದಿ ಸಿಗಲಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ವರಿಷ್ಠರು ಕ್ರಮ ಕೈಗೊಂಡಿದ್ದಾರೆ. ಸರ್ಕಾರ, ಪಕ್ಷ ಮತ್ತು ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿನ ಬೆಳವಣಿಗೆಗಳ ಕುರಿತಂತೆ ಪ್ರಧಾನಿ ಮತ್ತು ಗುಪ್ತಚರ ಇಲಾಖೆ ಗಮನಿಸುತ್ತಿದ್ದು, ಕೆಲವು ಸಚಿವರು ಕಚೇರಿಗೆ ಹೋಗುತ್ತಿಲ್ಲ ಎಂಬುದನ್ನು ಕೂಡ …

Read More »

ಶಿಕ್ಷಕಿ ಜತೆ 10ನೇ ಕ್ಲಾಸ್‌ ಹುಡುಗನ ಲವ್ವಿ-ಡವ್ವಿ! ಓಡಿಹೋಗಿ ಮದ್ವೆ

ಚೆನ್ನೈ: ಗುರು-ಶಿಷ್ಯರದ್ದು ಪವಿತ್ರ ಸಂಬಂಧ ಎನ್ನುತ್ತಾರೆ. ಅದಕ್ಕಾಗಿಯೇ ಗುರುವನ್ನು ಬಹಳ ಎತ್ತರದ ಸ್ಥಾನದಲ್ಲಿ ಇಟ್ಟಿರುವ ಸಮಾಜ ನಮ್ಮದು. ಆದರೆ ಈ ಸಂಬಂಧಕ್ಕೆ ಕಳಂಕ ತರುವ ಘಟನೆಯೊಂದು ತಮಿಳುನಾಡಿನ ಅರಿಯಾಲೂರು ಜಿಲ್ಲೆಯಲ್ಲಿ ನಡೆದಿದೆ. ಪ್ರೇಮ ಕುರುಡು ಎನ್ನುವಂತೆ 10ನೇ ವಿದ್ಯಾರ್ಥಿಯೊಂದಿಗೆ ಅದೇ ಕ್ಲಾಸ್‌ನ ಟೀಚರ್‌ಗೆ ಲವ್‌ ಆಗಿರುವ ಅಚ್ಚರಿಯ ಘಟನೆ ಇದು. ಇಬ್ಬರಿಗೂ ಪರಸ್ಪರ ಪ್ರೀತಿಯುಂಟಾಗಿ ಮದುವೆಯೂ ಆಗಿ ಪೇಚಿಗೆ ಸಿಲುಕಿದ್ದಾರೆ. ಇಲ್ಲಿಯ ವಿಕ್ರಮಂಗಲಂ ಪ್ರೌಢಶಾಲೆಯಲ್ಲಿ ಶಿಕ್ಷಕಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. …

Read More »