Breaking News

ರಾಜ್ಯ

ರೇಣುಕಾ ಯಲ್ಲಮ್ಮ ದೇವಸ್ಥಾನ, ರಾಯಬಾಗದ ಚಿಂಚಲಿ ಮಾಯಕ್ಕಾ ದೇವಸ್ಥಾನಗಳ‌ಲ್ಲಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ

ಬೆಳಗಾವಿ: ಒಮಿಕ್ರಾನ್ ಸೋಂಕಿತ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೇಣುಕಾ ಯಲ್ಲಮ್ಮ ದೇವಸ್ಥಾನ, ರಾಯಬಾಗದ ಚಿಂಚಲಿ ಮಾಯಕ್ಕಾ ದೇವಸ್ಥಾನಗಳ‌ಲ್ಲಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯ ಹಲವು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಮಹಾರಾಷ್ಟ್ರದಿಂದ ಗಣನೀಯ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಭಕ್ತಾಧಿಗಳು ಆಗಮಿಸುತ್ತಾರೆ. ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನದ ಬಣದ ಹುಣ್ಣಿಮೆ ಜಾತ್ರೆಗೆ ಸುಮಾರು 5ರಿಂದ 8 ಲಕ್ಷದವರೆಗೆ ಭಕ್ತಾದಿಗಳು ಸೇರುವ ನಿರೀಕ್ಷೆ …

Read More »

ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇಗುಲದ ಹುಂಡಿಯಲ್ಲಿ ₹1.18 ಕೋಟಿ ಕಾಣಿಕೆ ಸಂಗ್ರಹ

ಬೆಳಗಾವಿ: ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದ್ದು ಭಕ್ತರು ಹಾಕಿದ ಕಾಣಿಕೆಯಿಂದ 1.18 ಕೋಟಿ ರು. ಹಣ ಸಂಗ್ರಹವಾಗಿದೆ. ಅಲ್ಲದೇ, 17.39 ಲಕ್ಷ ರೂ. ಮೌಲ್ಯದ ಚಿನ್ನವನ್ನು ದೇವಿಗೆ ಸಮರ್ಪಿಸಿದ್ದಾರೆ. 2020ರ ಅ.26ರಿಂದ ಡಿ.10ರ ಅವಧಿಯಲ್ಲಿ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ದೇವಸ್ಥಾನ ಆಡಳಿತ ಮಂಡಳಿ, ಪೊಲೀಸ್​ ಅಧಿಕಾರಿಗಳ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು. ಹುಂಡಿಯಲ್ಲಿ 2.20 ಲಕ್ಷ ರೂ.ಗಳ ಮೌಲ್ಯದ ಬೆಳ್ಳಿ ಕೂಡ ಸಂಗ್ರಹವಾಗಿದೆ. 500 ಹಾಗೂ …

Read More »

ಜೋಡಿ ಹಳಿ ಕಾಮಗಾರಿಯಿಂದ ಸ್ಥಗಿತಗೊಂಡಿದ್ದ ರೈಲುಗಳ ಸಂಚಾರ ಇಂದಿನಿಂದ ಪುನಃ ಆರಂಭವಾಗಲಿದೆ.

ಬೆಂಗಳೂರು: ರಾಜಧಾನಿಯಿಂದ ಹುಬ್ಬಳ್ಳಿ ಮಾರ್ಗದಲ್ಲಿ ನಡೆಯುತ್ತಿದ್ದ ಜೋಡಿ ಹಳಿ ಕಾಮಗಾರಿಯಿಂದ ಸ್ಥಗಿತಗೊಂಡಿದ್ದ ರೈಲುಗಳ ಸಂಚಾರ ಇಂದಿನಿಂದ ಪುನಃ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ. ಕೆಎಸ್‌ಆರ್ ಬೆಂಗಳೂರು- ಧಾರವಾಡ ಸೂಪರ್ ಫಾಸ್ಟ್ ಇಂಟರ್ ಸಿಟಿ ರೈಲು, ಧಾರವಾಡ – ಕೆಎಸ್‌ಆರ್ ಬೆಂಗಳೂರು ಸೂಪರ್ ಫಾಸ್ಟ್ ಇಂಟರ್ ಸಿಟಿ ರೈಲು ಮತ್ತು ಹೊಸಪೇಟೆ-ಕೆಎಸ್‌ಆರ್ ಬೆಂಗಳೂರು ವಿಶೇಷ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದೆ. ವಾಸ್ಕೋಡಗಾಮ-ಯಶವಂತಪುರ ಎಕ್ಸ್‌ಪ್ರೆಸ್, ಮೈಸೂರು …

Read More »

ಶಾಲೆಗೆ ಮೊಬೈಲ್ ತಂದಿದ್ದಕ್ಕೆ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ ಅಮಾನವೀಯ ಘಟನೆ ಡೆದಿದೆ.

ಶಾಲೆಗೆ ಮೊಬೈಲ್ ತಂದಿದ್ದಕ್ಕೆ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಾರದ ಹಿಂದೆ ಈ ಅಮಾನವೀಯ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.   ತರಗತಿಗೆ ಮೊಬೈಲ್ ತಂದಿದ್ದ 8ನೇ ತರಗತಿ ವಿದ್ಯಾರ್ಥಿನಿಯನ್ನು ಗಮನಿಸಿದ ಮುಖ್ಯ ಶಿಕ್ಷಕಿ ಸ್ನೇಹಲತಾ ಮತ್ತೊಂದು ಕೊಠಡಿಗೆ ಕರೆದೊಯ್ದು ಬಟ್ಟೆ ಬಿಚ್ಚಿಸಿ …

Read More »

ರಾಜ್ಯಾದ್ಯಂತ ಇಂದಿನಿಂದ `ವೀಕೆಂಡ್ ಕರ್ಪ್ಯೂ’ ಜಾರಿ : ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಇಂದು ರಾತ್ರಿ 10 ಗಂಟೆಯಿಂದೆ ಜನವರಿ 10 ರ ಬೆಳಗ್ಗೆ 5 ಗಂಟೆಯವರೆಗೆ ರಾಜ್ಯಾದ್ಯಂತ ನೈಟ್ ಕರ್ಪ್ಯೂ ಇರಲಿದೆ.   ನೈಟ್ ಕರ್ಪ್ಯೂ ಸಮಯದಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಖಾಸಗಿ ಕಂಪನಿಗಳು, ಕೈಗಾರಿಕೆ, ಇ-ಕಾಮರ್ಸ್, ಫುಡ್ ಹೋಂ ಡೆಲಿವರಿ ಉದ್ಯೋಗಿಗಳು, ಟೆಲಿಕಾಂ ಸೇವಾ ಕಂಪನಿ, ಸಾರಿಗೆ ಇಲಾಖೆ ಉದ್ಯೋಗಿಗಳಿಗೆ ಮಾತ್ರ ಓಡಾಟಕ್ಕೆ ಅವಕಾಶ ನೀಡಲಾಗಿದೆ.     ರಾಜ್ಯಾಧ್ಯಂತ ವಾರಾಂದ್ಯ ಕರ್ಪ್ಯೂ ಮಾರ್ಗಸೂಚಿ ಕ್ರಮಗಳು ಕೇಂದ್ರ …

Read More »

ರೇಷನ್ ಕಾರ್ಡ್’ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: 2.76 ಲಕ್ಷ ಬಿಪಿಎಲ್ ಕಾರ್ಡ್ ವಿತರಣೆ

ಬೆಂಗಳೂರು: ಪಡಿತರ ಚೀಟಿ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಲೇವಾರಿಯಾಗದೆ ಉಳಿದುಕೊಂಡಿದ್ದ ಪಡಿತರ ಚೀಟಿಗಳನ್ನು ಮಂಜೂರು ಮಾಡಲಾಗಿದೆ.   2017 ರಿಂದ ಪಡಿತರ ಚೀಟಿ ಪೋರ್ಟಲ್ ಸ್ಥಗಿತವಾಗಿದ್ದು, ಮತ್ತೆ ಕಾರ್ಯಾರಂಭ ಮಾಡಿದೆ. ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ, ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಮರು ಚಾಲನೆಯ ನಂತರ ಹೊಸದಾಗಿ 2.76 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ಮಂಜೂರು ಮಾಡಲಾಗಿದೆ. …

Read More »

ಅಕ್ರಮ-ಸಕ್ರಮ : ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

ತುಮಕೂರು : ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಸಿಕೊಂಡವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಶೀಘ್ರದಲ್ಲೇ ಅಕ್ರಮ-ಸಕ್ರಮ ಅಂತಿಮಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಸಕ್ರಮ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಪೌರಾಡಳಿತ, ಕಾನೂನು ಸಚಿವರು ಹಾಗೂ ಒಳಗೊಂಡಂತೆ ಉಪ ಸಮಿತಿ ರಚಿಸಲಾಗಿಇದ್ದು, ಈಗಾಗಲೇ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.   ಅಕ್ರಮ ಸಕ್ರಮದಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಜನರಿಗೆ …

Read More »

5 ರಾಜ್ಯಗಳ ವಿಧಾನಸಭೆ ಚುನಾವಣೆ; ಮಹತ್ವದ ಸಭೆ ನಡೆಸಿದ ಆಯೋಗ

ನವದೆಹಲಿ, ಜನವರಿ 07; ಕೇಂದ್ರ ಚುನಾವಣಾ ಆಯೋಗ 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲು ಸಿದ್ಧತೆ ಕೈಗೊಂಡಿದೆ. ಇಂತಹ ಸಂದರ್ಭದಲ್ಲಿಯೇ ದೇಶದಲ್ಲಿಕೋವಿಡ್ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.   ಚುನಾವಣಾ ಆಯೋಗದ ಅಧಿಕಾರಿಗಳು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಜೊತೆ ಗುರುವಾರ ಮಹತ್ವದ ಸಭೆ ನಡೆಸಿದರು. ರಾಜ್ಯಗಳಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಮಾಹಿತಿಯನ್ನು ಪಡೆದರು.   ಜನವರಿ 10 ರಿಂದ 13ರೊಳಗೆ 5 ರಾಜ್ಯಗಳ ಚುನಾವಣಾ ವೇಳಾಪಟ್ಟಿ ಘೋಷಣೆಯಾಗುವ ನಿರೀಕ್ಷೆ …

Read More »

ಮಠ ತೊರೆದ ಶ್ರೀಗಳ ಮನವೊಲಿಕೆಗೆ ಇಡೀ ಊರು ಆಗಮನ

ಹುಬ್ಬಳ್ಳಿ (hubballi) – ಮನೆಯಲ್ಲಿ (home) ಜಗಳ ಮಾಡಿದರೇ ಮಕ್ಕಳು (Children) ಮನೆ ಬಿಟ್ಟು ಬರುವುದು ಸಾಮಾನ್ಯ. ಆದರೆ ಜನರಿಗೆ ಆಶೀರ್ವಾದ ನೀಡಿ, ಊರಿಗೆ ಮಾರ್ಗದರ್ಶಕರಾಗಬೇಕಿದ್ದ ಸ್ವಾಮೀಜಿ(Swamiji)ಯೊಬ್ಬರು ಮಠ (Mutt) ತೊರೆದಿದ್ದಾರೆ. ವ್ಯಕ್ತಿಯೊಬ್ಬರ ಕಾರಣದಿಂದ ಮನಸ್ಸಿಗೆ ನೋವಾಗಿರುವ ಹಿನ್ನೆಲೆಯಲ್ಲಿ ಊರನ್ನೇ ಬಿಟ್ಟು ಬಂದಿದ್ದಾರೆ. ಆ ಮಹಾ ವ್ಯಕ್ತಿಯ ಮನವೊಲಿಸಲು ಊರಿಗೆ ಊರೇ ಅವರ ಬಳಿಗೆ ಬಂದಿದೆ. ಹಾಗಿದ್ದರೇ ಯಾರು ಆ ವ್ಯಕ್ತಿ, ಅಲ್ಲಿ ನಡೆದಿದ್ದಾರೂ ಏನು ಅಂತೀರಾ ಈ ಸ್ಟೋರಿ …

Read More »

BPL ಕಾರ್ಡ್ ಸೇರಿ ಅರ್ಹ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಗರೀಬ್ ಕಲ್ಯಾಣ್, ಅನ್ನಭಾಗ್ಯ ಯೋಜನೆಯಡಿ ಉಚಿತ ರೇಷನ್

ರಾಯಚೂರು: ಅಂತ್ಯೋದಯ ಮತ್ತು ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಜನವರಿ ಮಾಹೆಗೆ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಮತ್ತು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ ಹಾಗೂ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಹಾಗೂ ಪ್ರತಿ ಬಿಪಿಎಲ್ ಪಡಿತರ ಚೀಟಿಗೆ …

Read More »