ಸಂತೋಷ್ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಗೋಕಾಕ್ ತಾಲ್ಲೂಕಿನ ರಡ್ಡೇರಟ್ಟಿ ಗ್ರಾಮದ ಕರಿಸಿದ್ದೆಶ್ವರ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ! ರಡ್ಡೇರಟ್ಟಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಡ್ಡೇರಟ್ಟಿ ಗ್ರಾಮದ ಕರಿಸಿದ್ದೇಶ್ವರ …
Read More »ಟಿಕ್‌ಟಾಕ್ ನಲ್ಲಿ ಅರಳಿದ ಪ್ರೇಮ : ಪ್ರಿಯತಮೆಜೊತೆ ಪತಿಯ ಮದುವೆ ಮಾಡಿಸಿದ ಪತ್ನಿ
ತಿರುಪತಿ: ಕಟ್ಟಿಕೊಂಡ ಗಂಡನನ್ನು ಹಂಚಿಕೊಳ್ಳಲು ಯಾವ ಹೆಂಡತಿಯೂ ಸಿದ್ಧಳಿರುವುದಿಲ್ಲ. ತನ್ನ ಗಂಡ ತನ್ನನ್ನು ಮಾತ್ರ ಪ್ರೀತಿಸಬೇಕು. ತನ್ನ ಕಷ್ಟಸುಖಕ್ಕೆ ಸದಾ ಜೊತೆಯಾಗಿರಬೇಕು ಎಂದು ಹೆಂಡತಿ ಬಯಸುತ್ತಾಳೆ. ಕೆಲವರಂತು ಎಷ್ಟು ಪೊಸೆಸಿವ್ ಎಂದರೆ ಗಂಡ ಬೇರೆ ಮಹಿಳೆಯರ ಜೊತೆ ಸಹಜವಾಗಿ ಮಾತನಾಡಿದರೂ ಸಿಡಿಮಿಡಿಗೊಳ್ಳುತ್ತಾರೆ. ಪೂರ್ತಿ ಚಡಪಡಿಸುತ್ತಾರೆ. ಆದರೆ ಇಲ್ಲೊಂದು ಕಡೆ ಪತ್ನಿ ಹೃದಯ ಶ್ರೀಮಂತಿಕೆ ತೋರಿದ್ದಾಳೆ. ಮದುವೆಗೆ ಮೊದಲು ತನ್ನ ಗಂಡ ಪ್ರೀತಿಸಿದ್ದ ಯುವತಿಯ ಜೊತೆ ಗಂಡನ ಮದುವೆ ಮಾಡಿದ್ದಾಳೆ. ಆಂಧ್ರಪ್ರದೇಶದ ತಿರುಪತಿಯಲ್ಲಿ …
Read More »ಕೋಟ್ಯಾಂತರ ಜನರಿಗೆ ಸಿಹಿ ಸುದ್ದಿ: ಮುಂದಿನ 6 ತಿಂಗಳವರೆಗೆ ಉಚಿತ ಪಡಿತರ ಲಭ್ಯ!
ಕೇಂದ್ರ ಸರ್ಕಾರ ಸದ್ಯದಲ್ಲೇ ಜನ ಸಾಮಾನ್ಯರಿಗೆ ಭರ್ಜರಿ ಗಿಫ್ಟ್ ನೀಡಲು ಹೊರಟಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ (PMGKAY) ಫಲಾನುಭವಿಗಳಿಗೆ ಮುಂದಿನ 6 ತಿಂಗಳವರೆಗೆ ಉಚಿತ ಪಡಿತರ ಪ್ರಯೋಜನವನ್ನು ಸರ್ಕಾರ ನೀಡಬಹುದು, ಅಂದರೆ, ಉಚಿತ ಪಡಿತರ ಸೌಲಭ್ಯವನ್ನು ಮುಂಬರುವ 6 ತಿಂಗಳವರೆಗೆ ವಿಸ್ತರಿಸಬಹುದು. ಉಚಿತ ಪಡಿತರವನ್ನು ನೀಡುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಸೆಪ್ಟೆಂಬರ್ 30 ರಿಂದ ವಿಸ್ತರಿಸಲು ಸರ್ಕಾರ ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ. …
Read More »ದುಡ್ಡು ಕೊಟ್ಟರೆ ನಮ್ಮ ಸಾಹೇಬರು ಗಾಡಿ ಹಿಡಿಯೋದಿಲ್ಲ! ಲೋಕಾ ದಾಳಿ ಬಳಿಕ ಪೇದೆಗಳಿಬ್ಬರ ಆಡಿಯೋ ವೈರಲ್
ಕಲಬುರಗಿ: ಲೋಕಾಯುಕ್ತ ಬಲೆಗೆ ಬಿದ್ದ ಕಾನ್ಸ್ಟೇಬಲ್ ಮತ್ತು ಸಿಪಿಐ ಜೀಪ್ ಚಾಲಕನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಳು ದಂಧೆಕೋರನಿಂದ ಹಣಕ್ಕೆ ಬೇಡಿಕೆ ಇಟ್ಟ ಆಡಿಯೋವೊಂದು ವೈರಲ್ ಆಗಿದೆ. ನಿನ್ನೆ (ಸೆ.23) ಮರಳು ಸಾಗಾಣಿಕೆ ಸಂಬಂಧ 30 ಸಾವಿರ ರೂಪಾಯಿ ಲಂಚ ಪಡೆಯುವಾಗ ಜೇವರ್ಗಿಯ ಕಾನ್ಸ್ಟೇಬಲ್ ಶಿವರಾಯ್ ಮತ್ತು ಸಿಪಿಐ ಜೀಪ್ ಚಾಲಕ ಅವ್ವಣ್ಣ ಲೋಕಾಯುಕ್ತ ಪೊಲೀಸ್ ಬಲೆ ಬಿದ್ದಿದ್ದರು. ಇದೀಗ ಮರಳು ದಂಧೆಕೋರನಿಂದ ಹಣಕ್ಕೆ ಬೇಡಿಕೆ ಇಟ್ಟ ಆಡಿಯೋ ವೈರಲ್ ಆಗಿದ್ದು, …
Read More »7 ಸಾಹಿತಿಗಳ ಪಠ್ಯಗಳನ್ನು ಕೈಬಿಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ
ಬೆಂಗಳೂರು: ರೋಹಿತ್ ಚಕ್ರತೀರ್ಥ (Rohit Chakratirtha) ಸಮಿತಿ ಮಾಡಿಕೊಟ್ಟಿದ್ದ ಪಠ್ಯ ಪರಿಷ್ಕರಣೆಯನ್ನು ಖಂಡಿಸಿ ನಾಡಿನ ಹಲವು ಪ್ರಗತಿಪರ ಚಿಂತಕರು ಪಠ್ಯವಾಪ್ಸಿ ಚಳುವಳಿ ನಡೆಸಿದ್ದರು. ಸರ್ಕಾರಕ್ಕೆ ಪತ್ರ ಬರೆದು ತಮ್ಮ ಪಠ್ಯ/ಪದ್ಯವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಇದಕ್ಕೆ ಸರ್ಕಾರ ಇದೀಗ ತಡವಾಗಿ ಸ್ಪಂದಿಸಿದೆ. ಶೈಕ್ಷಣಿಕ ವರ್ಷದಲ್ಲಿ (Academic Year) ಅರ್ಧ ಭಾಗ ಮುಗಿದ ಬಳಿಕ ಇದೀಗ 7 ಸಾಹಿತಿಗಳ ಪಠ್ಯಗಳನ್ನು ಹಿಂಪಡೆದಿರುವುದಾಗಿ ಪ್ರಕಟಿಸಿದೆ. 10ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿದ್ದ ದೇವನೂರು ಮಹಾದೇವ …
Read More »ಅಕ್ಟೋಬರ್‌ನಿಂದ ಕರೆಂಟ್ ಶಾಕ್ – ಅಕ್ಟೋಬರ್‌ನಿಂದ 43 ಪೈಸೆ ಏರಿಕೆ
ಬೆಂಗಳೂರು: ಕಲ್ಲಿದ್ದಲು ಖರೀದಿ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಅಕ್ಟೋಬರ್‌ನಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಆದೇಶ ಹೊರಡಿಸಿದೆ. ಕೆಇಆರ್‌ಸಿ, 2022ರ ಸೆಪ್ಟೆಂಬರ್ 19 ರಂದು ಹೊರಡಿಸಿದ ಆದೇಶದನ್ವಯ ಇಂಧನ ಹೊಂದಾಣಿಕೆ ಶುಲ್ಕ 43 ಪೈಸೆಯನ್ನು ಮುಂದಿನ 6 ತಿಂಗಳ ಅವಧಿಗೆ ಗ್ರಾಹಕರಿಂದ ಸಂಗ್ರಹಿಸಲು ಬೆಸ್ಕಾಂಗೆ ಅನುಮತಿ ನೀಡಿದೆ. ಕೆಇಆರ್‌ಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕಗಳು ನಿಯಮಗಳು, 2013 …
Read More »ಬೆಳಗಾವಿಯನ್ನೇ ಅವಲಂಬಿಸಿರುವ ಗೋವಾ ಇಲ್ಲಿಂದ ತರಕಾರಿ ಖರೀದಿ ಮಾಡುವದನ್ನು ನಿಲ್ಲಿಸಲಿದೆ ?
ಬೆಳಗಾವಿ: ತರಕಾರಿ ಖರೀದಿ ವಿಷಯದಲ್ಲಿ ಬಹುತೇಕ ನೆರೆಯ ಬೆಳಗಾವಿಯನ್ನೇ ಅವಲಂಬಿಸಿರುವ ಗೋವಾ ಇಲ್ಲಿಂದ ತರಕಾರಿ ಖರೀದಿ ಮಾಡುವದನ್ನು ನಿಲ್ಲಿಸಲಿದೆ ಎಂಬ ವಿಚಾರ ರೈತ ಸಮುದಾಯ ಮತ್ತು ವ್ಯಾಪಾರಸ್ಥರಲ್ಲಿ ಸ್ವಲ್ಪಮಟ್ಟಿಗೆ ಚಿಂತೆ ಹುಟ್ಟಿಸಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಈ ಸುಳಿವು ನೀಡಿದ ಬೆನ್ನಲ್ಲೇ ಖಾಸಗಿ ಸಗಟು ತರಕಾರಿ ವ್ಯಾಪಾರಸ್ಥರು ಮುಂದಿನ ಪರಿಣಾಮದ ಬಗ್ಗೆ ಆಲೋಚನೆ ಆರಂಭಿಸಿದ್ದಾರೆ. ತಕ್ಷಣಕ್ಕೆ ಗೋವಾದ ಮುಖ್ಯಮಂತ್ರಿಗಳ ಈ ವಿಚಾರ ಕಾರ್ಯರೂಪಕ್ಕೆ ಬರುವುದು ಕಷ್ಟ. ಆದರೆ ಇದು …
Read More »ಮುರುಘಾ ಶರಣರಿಗೆ ಆಂಜಿಯೋಗ್ರಾಂ ಪರೀಕ್ಷೆ: ಆರೋಗ್ಯ ಸ್ಥಿರ
ಶಿವಮೊಗ್ಗ: ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರಿಗೆ ಕೊರೋನರಿ ಆಂಜಿಯೋಗ್ರಾಂ ಪರೀಕ್ಷೆ ನಡೆಸಲಾಗಿದೆ. ವಿರೂಪಾಕ್ಷಪ್ಪ ತಿಳಿಸಿದರು. ಪ್ರೌಢಶಾಲೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಮುರುಘಾ ಶರಣರನ್ನು ನ್ಯಾಯಾಲಯದ ಆದೇಶದಂತೆ ಹೃದಯ ತಪಾಸಣೆಗಾಗಿ ಬುಧವಾರ ರಾತ್ರಿ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಕರೆತಂದು ಇಲ್ಲಿನ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಶಿವಮೂರ್ತಿ ಶರಣರಿಗೆ ಆಸ್ಪತ್ರೆಯಲ್ಲಿ ನೀಡಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದ ಡಾ.ವಿರೂಪಾಕ್ಷಪ್ಪ, ‘ಶರಣರ ಆರೋಗ್ಯದ …
Read More »ಫಿಸಿಕಲ್ ಟ್ರೈನರ್‌ಗೆ ಉಂಗುರ ತೊಡಿಸಿ ಎಂಗೇಜ್ಡ್ ಆದ ಆಮೀರ್ ಖಾನ್ ಪುತ್ರಿ
ಬಾಲಿವುಡ್ (Bollywood) ಖ್ಯಾತ ನಟ ಆಮೀರ್ ಖಾನ್ (Aamir Khan) ಪುತ್ರಿ ಇರಾ ಖಾನ್ (Ira Khan) ಕೊನೆಗೂ ನಿಶ್ಚಿತಾರ್ಥ (Engaged) ಮಾಡಿಕೊಂಡಿದ್ದಾರೆ. ತನ್ನ ಪ್ರಿಯಕರಿಗೆ ಉಂಗುರ ತೊಡಿಸಿ, ಮುತ್ತಿಡುವ ಮೂಲಕ ಎಂಗೇಜ್ಡ್ ಆಗಿರುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಇರಾ ಖಾನ್ ಮತ್ತು ನೂಪುರ್ ಶಿಖಾರೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆ ಪ್ರೀತಿ ಇಂದು ಮತ್ತೊಂದು ಹಂತ ಪಡೆದುಕೊಂಡಿದೆ. ಪ್ರೀತಿಸುತ್ತಿರುವಾಗಲೇ ಒಟ್ಟಿಗೆ ವಾಸವಿದ್ದ ಈ ಜೋಡಿ ಇದೀಗ ಅಧಿಕೃತವಾಗಿ ಸತಿ …
Read More »ಬೊಮ್ಮಾಯಿಯವರ ಬಂಡಲ್‍ನಿಂದಾಗಿ ಕಲ್ಯಾಣ ಕರ್ನಾಟಕ ಹಿನ್ನೆಡೆ – ಪ್ರಿಯಾಂಕ್ ಖರ್ಗೆ ಟೀಕೆ
ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ 5,000 ಕೋಟಿ ರೂ. ನೀಡುವುದಾಗಿ ಹೇಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂಗಿಗೆ ತುಪ್ಪ ಸವರಿ ಹೋಗಿದ್ದಾರೆ. ಮುಂದೆ ಚುನಾವಣೆ ಬರುತ್ತಿದೆ ಈ ಅನುದಾನ ಬಿಡುಗಡೆ ಅಸಾಧ್ಯಾ ಎಂದು ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಕೆಆರ್‌ಡಿಬಿಗೆ ಘೋಷಿತ ಅನುದಾನ 3,000 ಕೋಟಿ ರೂಪಾಯಿಯಲ್ಲಿ ಕೇವಲ 1,500 ರೂಪಾಯಿ ಕೋಟಿ ಮಾತ್ರ ಬಿಡುಗಡೆ …
Read More »
Laxmi News 24×7