ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ರಾಜ್ಯಕ್ಕೆ ಬರಲಿದ್ದು, ‘ಭಾರತ್ ಜೋಡೋ’ ಪಾದಯಾತ್ರೆಯಲ್ಲಿ ಗುರುವಾರ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ‘ಸೋಮವಾರ ರಾಜ್ಯಕ್ಕೆ ಬರಲಿರುವ ಸೋನಿಯಾ, ಎರಡು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ತಂಗುವರು. ಗುರುವಾರ ಒಂದು ದಿನ ಮಾತ್ರ ಮಂಡ್ಯ ಜಿಲ್ಲೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು’ ಎಂದು ಕೆಪಿಸಿಸಿ ಮೂಲಗಳು ಮಾಹಿತಿ ನೀಡಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಗುರುವಾರವೇ ಪಾದಯಾತ್ರೆಯನ್ನು ಸೇರಿಕೊಳ್ಳಲಿದ್ದಾರೆ ಎಂದು …
Read More »ದುರ್ಗಾಮಾತಾ ದೌಡ್ ಸ್ವಾಗತಿಸಿ, ಭಾವೈಕ್ಯ ಮೆರೆದ ಮುಸ್ಲಿಮರು
ಬೆಳಗಾವಿ: ನವರಾತ್ರಿ ಅಂಗವಾಗಿ ಶಿವ ಪ್ರತಿಷ್ಠಾನ ಹಿಂದೂಸ್ಥಾನ ವತಿಯಿಂದ 8ನೇ ದಿನವಾದ ಸೋಮವಾರ ದುರ್ಗಾಮಾತಾ ದೌಡ್ ನಡೆಯಿತು. ಇಲ್ಲಿನ ಕ್ಯಾಂಪ್ ಪ್ರದೇಶದಲ್ಲಿ ಮುಸ್ಲಿಮರು ಇದಕ್ಕೆ ಸ್ವಾಗತ ಕೋರಿ, ಭಾವೈಕ್ಯ ಸಂದೇಶ ಸಾರಿದರು. ದುರ್ಗಾಮಾತಾ ದೌಡ್ ಅಂಗವಾಗಿ ಕ್ಯಾಂಪ್‍ನ ಮಾರ್ಗಗಳಲ್ಲಿ ರಂಗೋಲಿ ಚಿತ್ತಾರ ಅರಳಿತ್ತು. ಯುವಕ-ಯುವತಿಯರು, ಮಕ್ಕಳು ಸಾಂಪ್ರದಾಯಿಕ ದಿರಿಸಿನಲ್ಲಿ ಗಮನ ಸೆಳೆದರು. ಬಾಲಕಿಯೊಬ್ಬಳು ಜೀಜಾಮಾತಾ ವೇಷ ಧರಿಸಿ, ಶಿವಾಜಿ ಮಹಾರಾಜರನ್ನು ಸ್ತುತಿಸಿದಳು. ದಂಡು ಮಂಡಳಿ ಮಾಜಿ ಉಪಾಧ್ಯಕ್ಷ ಸಾಜೀದ್ ಶೇಖ್ …
Read More »ಬಳ್ಳಾರಿ ಕೊಲೆ ಪ್ರಕರಣ : 7 ಜನರ ಬಂಧನ, ಮೂವರಿಗಾಗಿ ಶೋಧ
ಬಳ್ಳಾರಿ : ಸೆ.28ರಂದು ಮಧ್ಯರಾತ್ರಿ ರೇಡಿಯೋ ಪಾರ್ಕ್ ಬಳಿ ಹತ್ಯೆಗೀಡಾಗಿದ್ದ ಕುಂಟ ಮಂಜು ಕೊಲೆ ಪ್ರಕರಣದ ಆರೋಪಿಗಳನ್ನು ಕೌಲ್‍ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಏಳು ಆರೋಪಿಗಳ ಬಂಧನವಾಗಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇಲಿಯಾಸ್, ಹುಸೇನ್ ಅಲಿಯಾಸ್ ಲಕ್ಷ್ಮಣ, ಭಾಸ್ಕರ್, ಸಂತೋಷ ಸರ್ವರ್, ಪ್ರಭಾಕರ್, ರಘು ಎಂಬುವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. …
Read More »ಗಾಂಧಿ ಜಯಂತಿಯಂದು 2 ಟನ್ ಗೋಮಾಂಸ ಸಾಗಣೆ: ಐವರು ಆರೋಪಿಗಳ ಬಂಧನ
ಕಾರವಾರ(ಉತ್ತರ ಕನ್ನಡ): ಹುಬ್ಬಳ್ಳಿಯಿಂದ ಗೋವಾಕ್ಕೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಮೂರು ವಾಹನಗಳ ಸಮೇತ ಬಂಧಿಸಿರುವ ಘಟನೆ ಜೊಯಿಡಾದ ಅನಮೋಡ ಅಬಕಾರಿ ಚೆಕ್ಪೋಸ್ಟ್ನಲ್ಲಿ ಭಾನುವಾರ ನಡೆದಿದೆ. ಹುಬ್ಬಳ್ಳಿಯಿಂದ ಗೋವಾ ಕಡೆಗೆ ಹಸುಗಳನ್ನು ವಧೆ ಮಾಡಿ ಮಾಂಸವನ್ನು ಎರಡು ಮಹೀಂದ್ರ ಬುಲೆರೋ ಪಿಕಪ್ ಹಾಗೂ ಒಂದು ಟಾಟಾ 407 ವಾಹನದಲ್ಲಿ ಗೋವಾಕ್ಕೆ ಸಾಗಿಸುತ್ತಿದ್ದ ಬಗ್ಗೆ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನಾ ಪನ್ನೇಕರ್ ಅವರಿಗೆ ಖಚಿತ ಮಾಹಿತಿ ಸಿಕ್ಕಿತ್ತು. …
Read More »ಗದಗ _ಬೆಟಗೇರಿ ಅವಳಿ ನಗರದಲ್ಲಿ ಹದಗೆಟ್ಟ ರಸ್ತೆ ರಿಪೇರಿ ಮಾಡಿಸಿ.. ಶಾಸಕ ಹೆಚ್ ಕೆ ಪಾಟೀಲ್
ಗದಗ: ಗದಗ ಬೆಟಗೇರಿ ಅವಳಿ ನಗರದಲ್ಲಿ ರಸ್ತೆಗಳು ಹದಗೆಟ್ಟಿದ್ದು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ಶೀಘ್ರವಾಗಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಗದಗ ಮತಕ್ಷೇತ್ರದ ಶಾಸಕ ಹೆಚ್ ಕೆ ಪಾಟೀಲ್ ಮನವಿ ಮಾಡಿದ್ದಾರೆ. ಈ ಕುರಿತು ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವ ಶಾಸಕರು, ಹದಗೆಟ್ಟಿರುವ ರಸ್ತೆಗಳಿಂದಾಗಿ ಸಾರ್ವಜನಿಕರು ಎಲ್ಲಿ, ಯಾವ ರೀತಿ ಅಪಘಾತಗಳಾಗುತ್ತವೆಯೋ ಎಂಬ ಭಯದಿಂದಲೇ ಸಂಚರಿಸುವಂತಾಗಿದೆ. ಕೆಲವೆಡೆ ಸಂಚಾರವೇ ದುಸ್ತರವಾಗಿದೆ. ಹೀಗಾಗಿ, ಯುದ್ಧೋಪಾದಿಯಲ್ಲಿ ಅವಳಿ ನಗರದ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸಿ …
Read More »ಬಿಸಿಯೂಟ ವೆಚ್ಚ ಶೇ.9.6 ಹೆಚ್ಚಳ; 2 ವರ್ಷಗಳ ಬಳಿಕ ಕೇಂದ್ರದ ಕ್ರಮ
ನವದೆಹಲಿ: ಎರಡು ವರ್ಷಗಳ ನಂತರ ಕೇಂದ್ರ ಸರ್ಕಾರ ಮಧ್ಯಾಹ್ನದ ಬಿಸಿಯೂಟ ವೆಚ್ಚವನ್ನು ಪ್ರತಿ ಮಗುವಿಗೆ ಶೇ. 9.6ರಷ್ಟು ಹೆಚ್ಚಳ ಮಾಡಿದೆ. ಬಿಸಿಯೂಟಕ್ಕೆ ಸಂಬಂಧಿಸಿದ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೇಂದ್ರ ಹಣಕಾಸು ಇಲಾಖೆ ಇದಕ್ಕೆ ಅನುಮೋದನೆ ನೀಡಿದೆ. ಈ ವೆಚ್ಚ ಹೆಚ್ಚಳವೂ ಹಾಲಿ ತಿಂಗಳಿನಿಂದಲೇ ಜಾರಿಗೆ ಬರಲಿದೆ. ತರಕಾರಿ, ಬೇಳೆಕಾಳುಗಳು ಸೇರಿದಂತೆ ಅಡುಗೆ ಅನಿಲ ದರ ಹೆಚ್ಚಳದ ಹಿನ್ನೆಲೆಯಲ್ಲಿ ಬಿಸಿಯೂಟದ ವೆಚ್ಚವನ್ನು ಹೆಚ್ಚಿಸಬೇಕೆಂದು ಶಾಲಾ ಅಭಿವೃದ್ಧಿ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರು ಮನವಿ …
Read More »7 ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಕ್ರಮ: C.M. ಬೊಮ್ಮಾಯಿ
ಬೆಂಗಳೂರು: ‘ಏಳು ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಬಾಕಿಯಿದ್ದು ಶೀಘ್ರವೇ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ನಗರದಲ್ಲಿ ಭಾನುವಾರ ಗಾಂಧಿ ಸ್ಮಾರಕ ನಿಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಡಾ.ಸಿ.ಆರ್.ಚಂದ್ರಶೇಖರ್ ಅವರಿಗೆ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು. ’23 ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಿಸಲಾಗಿದೆ. ಜಾಗದ ಸಮಸ್ಯೆಯ ಕಾರಣಕ್ಕೆ ಕೆಲವು ಜಿಲ್ಲೆಗಳಲ್ಲಿ …
Read More »194 ಕೋಟಿ ರೂ. ವೆಚ್ಚದ ಕೌಜಲಗಿ ಭಾಗದ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿ ರೈತರಿಗೆ ವರದಾನ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಕೌಜಲಗಿ ಭಾಗದ ರೈತರ ಬಹು ವರ್ಷಗಳ ಬೇಡಿಕೆಯಾಗಿರುವ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದ್ದು, ರೈತರ ಎಫ್.ಐ.ಸಿ ಕಾಮಗಾರಿಗೆ 32 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಚಿಕ್ಕ ನೀರಾವರಿ ಇಲಾಖೆಯಿಂದ 162 ಕೋಟಿ ರೂ. ಮೊತ್ತದ ಕಲ್ಮಡ್ಡಿ ಏತ ನೀರಾವರಿ ಯೋಜನೆಯ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದೆ. ರೈತರ ಜಮೀನುಗಳಿಗೆ ಹೊಲಗಾಲುವೆ ಮೂಲಕ ನೀರು …
Read More »ಆಯುಧ ಪೂಜೆಗೆ ಕೇವಲ 50 ರೂ. ಕೊಟ್ಟ ರಾಜ್ಯ ಸರ್ಕಾರ..!
ಮಂಡ್ಯ : ದಸರಾ ಆಯುಧ ಪೂಜೆಗೆ ಕೇವಲ 50 ರೂ ಕೊಟ್ಟ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಕೋಟಿ ಕೋಟಿ ಬೊಕ್ಕಸಕ್ಕೆ ತುಂಬಿಕೊಳ್ಳುವ ಸರ್ಕಾರ ಚಿಲ್ಲರೆ ಕಾಸು ನೀಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮಂಡ್ಯ ಘಟಕಗಳಲ್ಲಿನ ಪ್ರತಿ ವಾಹನಕ್ಕೆ ತಲಾ 50 ರೂಪಾಯಿ. ವಿಭಾಗೀಯ ಕಾರ್ಯಗಾರಕ್ಕೆ 1000 ರೂಪಾಯಿ. ಪ್ರಾದೇಶಿಕ ಕಾರ್ಯಾಗಾರಕ್ಕೆ 2000 ರೂಪಾಯಿ ಹೀಗೆ ಆಯುಧ ಪೂಜೆಗಾಗಿ ಕೆಎಸ್‌ಆರ್‌ಟಿಸಿಗೆ ಸರ್ಕಾರ ಚಿಲ್ಲರೆ ಕಾಸು ಕೊಟ್ಟಿದೆ …
Read More »ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್ನೋಟ್ನಲ್ಲಿತ್ತು ಈ ಕೊನೇ ಆಸೆ
ರಾಯಚೂರು: ಯುವತಿಯೊಬ್ಬಳು ಗಣೇಶ ವಿಸರ್ಜನೆಗಾಗಿ ನಿರ್ಮಿಸಿದ್ದ ಕೆರೆಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮೊದಲು 4 ಪುಟಗಳ ಸುದೀರ್ಘ ಡೆತ್ನೋಟ್ ಕೂಡ ಬರೆದಿಟ್ಟಿದ್ದಳು. ಇದೀಗ ಆ ಡೆತ್ನೋಟ್ ಮಾಹಿತಿ ಬಹಿರಂಗಗೊಂಡಿದ್ದು, ಯುವತಿ ಅದರಲ್ಲಿ ತನ್ನ ಕೊನೆಯ ಆಸೆಯನ್ನೂ ಹೇಳಿಕೊಂಡಿದ್ದಾಳೆ. ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಈ ಘಟನೆ ನಡೆದಿದೆ. ಹತ್ತನೇ ತರಗತಿ ವಿದ್ಯಾರ್ಥಿನಿ ಸಾರಿಕಾ (16) ಆತ್ಮಹತ್ಯೆ ಮಾಡಿಕೊಂಡವಳು. ನಾಲ್ಕು ಪುಟಗಳ ಡೆತ್ನೋಟ್ ಸಿಕ್ಕಿದ್ದರೂ ಆತ್ಮಹತ್ಯೆಗೆ ಕಾರಣ ಏನು ಎಂಬ ಬಗ್ಗೆ …
Read More »
Laxmi News 24×7