Breaking News

ರಾಜ್ಯ

ಅಂಬೇಡ್ಕರ್ ಅಭಿವೃದ್ಧಿ ನಿಗಮ: ‘ಕುರ್ಚಿ’ಗಾಗಿ ಗುದ್ದಾಟ

ಬೆಂಗಳೂರು : ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಡಾ.ಬಿ. ಹೀಗಾಗಿ, ಆ ಹುದ್ದೆಗೆ ವರ್ಗಾವಣೆಗೊಂಡಿರುವ ಕೆ.ಎನ್‌. ಸುರೇಶ್‌ ನಾಯ್ಕ್‌ ಪರದಾಡುತ್ತಿದ್ದು, ಇಬ್ಬರ ಮಧ್ಯೆ ‘ಕುರ್ಚಿಗಾಗಿ ಗುದ್ದಾಟ’ ನಡೆದಿದೆ. ಸುರೇಶ್‌ ಕುಮಾರ್‌ ವಿರುದ್ಧ ಭ್ರಷ್ಟಚಾರದ ಆರೋಪ ಹೊರಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿತ್ತು. ಕೂಡಲೇ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ನಿರ್ದೇಶನ ನೀಡಿದರೆ, ತಕ್ಷಣವೇ ತನಿಖೆ ನಡೆಸುವಂತೆ ಸಮಾಜ ಕಲ್ಯಾಣ …

Read More »

40% ಕಮಿಷನ್‌ ಸರ್ಕಾರದ ಆಡಳಿತದಿಂದ ಜನತೆ ರೋಸಿ ಹೋಗಿದ್ದಾರೆ: ಸಿದ್ದರಾಮಯ್ಯ

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೂಗೆಯಲು ಜನರು ಈಗಾಗಲೇ ಸಂಕಲ್ಪ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದರು. ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಸರ್ವೋದಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಿಂದ ಮುಳುಗಿ ಹೋಗಿರುವ ಬಿಜೆಪಿ ಇದೀಗ ಜನಸಂಕಲ್ಪ ಯಾತ್ರೆ ನಡೆಸುತ್ತಿದೆ. ಆದರೆ ಶೇ.40% ಕಮಿಷನ್‌ ಸರ್ಕಾರದ ಆಡಳಿತ ವೈಖರಿಯಿಂದ ನಾಡಿನ ಜನತೆ ರೋಸಿ ಹೋಗಿದ್ದು ಬಿಜೆಪಿಯನ್ನು ಕಿತ್ತೂಗೆಯಲು ಜನರು …

Read More »

ತ್ರಿಚಕ್ರ ವಾಹನದ ಅಪಘಾತ; ದಿವ್ಯಾಂಗನ ದುರ್ಮರಣ

ತ್ರಿಚಕ್ರ ವಾಹನ ಅಪಘಾತಕ್ಕಿಡಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಗ್ರಾಮದ ಹಿರೇಬಾಗೇವಾಡಿ-ಮೋದಗಾ ರಸ್ತೆಯಲ್ಲಿ ನಡೆದಿದೆ. ಮೃತರನ್ನು ಬೈಲಹೊಂಗಲ ತಾಲೂಕಿನ ನಾವಲಗಟ್ಟಿಯ ೪೦ ವರ್ಷದ ಗಣಪತಿ ಮುರಗೋಡ ಎಂದು ಗುರುತಿಸಲಾಗಿದೆ. ಹುಟ್ಟು ದಿವ್ಯಾಂಗರಾಗಿದ್ದ ಗಣಪತಿ ನಾವಲಗಟ್ಟಿಯಿಂದ ಮೊದಗಾ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮರಥರು ಸಹೋದರರು, ಸಹೋದರು ಮತ್ತು ಪತ್ನಿಯನ್ನು ಅಗಲಿದ್ದಾರೆ. ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಹೈಕೋರ್ಟ್‌ ಸಿಬ್ಬಂದಿಗೆ ಹನಿಟ್ರ್ಯಾಪ್‌: ಮಹಿಳೆಯರು ಸೇರಿ 10 ಮಂದಿ ಬಂಧನ

ಬೆಂಗಳೂರು: ಹೈಕೋರ್ಟ್‌ ಸಿಬ್ಬಂದಿಯೊಬ್ಬರಿಗೆ ಹನಿಟ್ರ್ಯಾಪ್‌ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಇಬ್ಬರು ಮಹಿಳೆಯರು ಸೇರಿ 10 ಮಂದಿ ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದೊಡ್ಡಬಿದರಕಲ್ಲು ಶಿವಗಂಗಾ ಲೇಔಟ್‌ ನಿವಾಸಿ ಸಿದ್ದೇಶ್‌ ಅಲಿಯಾಸ್‌ ಸಿದ್ದು (26), ಗೊಲ್ಲರ ಹಟ್ಟಿಯ ಪೈಪ್‌ಲೈನ್‌ ರಸ್ತೆ ನಿವಾಸಿ ಅನು ಅಲಿಯಾಸ್‌ ಅನುರಾಧಾ (25), ಕಾಮಾಕ್ಷಿ ಪಾಳ್ಯದ ಗುಣ (23), ಇಂದಿರಾನಗರದ ಚೇತನ್‌ ಅಲಿಯಾಸ್‌ ಚೇತು (19), ಗಂಗೋನಹಳ್ಳಿಯ ರವಿಕುಮಾರ್‌ ಅಲಿ ಯಾಸ್‌ ಬಾಂಡ್‌ (25), ಶ್ರೀರಾಮಪುರದ ಪ್ರಶಾಂತ್‌ …

Read More »

ಡಬಲ್ ಎಂಜಿನ್ ನ ವಂಚನೆಯಿಂದ ಗುಜರಾತ್ ಅನ್ನು ರಕ್ಷಿಸುತ್ತೇವೆ : ರಾಹುಲ್ ಗಾಂಧಿ

ನವದೆಹಲಿ : ಕಾಂಗ್ರೆಸ್ ಪಕ್ಷವು ಗುಜರಾತ್ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತದೆ ಮತ್ತು ಬಿಜೆಪಿಯ ಡಬಲ್ ಎಂಜಿನ್ ನ ವಂಚನೆಯಿಂದ ಅವರನ್ನು ರಕ್ಷಿಸುತ್ತದೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಭಾನುವಾರ ಹೇಳಿದ್ದಾರೆ. 500 ರೂ.ಗಳಲ್ಲಿ ಎಲ್‌ಪಿಜಿ ಸಿಲಿಂಡರ್, ಯುವಕರಿಗೆ 10 ಲಕ್ಷ ಉದ್ಯೋಗ, 3 ಲಕ್ಷದವರೆಗಿನ ರೈತರ ಸಾಲ ಮನ್ನಾ, ನಾವು ಗುಜರಾತ್‌ನ ಜನರಿಗೆ ನೀಡಿದ 8 ವಚನ’ವನ್ನು ಈಡೇರಿಸುತ್ತೇವೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.   …

Read More »

ನಾಯಿಗೆ ಊಟ ತಡವಾಗಿ ಹಾಕಿದ್ದಕ್ಕೆ 21 ವರ್ಷದ ಯುವಕನನ್ನು ಬೆಲ್ಟ್‌ನಿಂದ ಹೊಡೆದು ಕೊಂದ

 ಕ್ಷುಲಕ ಕಾರಣಕ್ಕೆ ಯುವಕನೋರ್ವ ಜೊತೆಯಲ್ಲಿದ್ದ ಸಹೋದರ ಸಂಬಂಧಿ ಯುವಕನನ್ನು ಭೀಕರವಾಗಿ ಹಿಂಸಿಸಿ ಕೊಲೆಗೈದ ಘಟನೆ ಪಾಲಕ್ಕಾಡ್‌ನ ಮನ್ನೆಂಗೋಡ್‌ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಹರ್ಷದ್‌ (27) ಸಾವಿಗೀಡಾದ ಯುವಕ. ಹಕೀಂ (27) ಕೃತ್ಯವೆಸಗಿದ ಆರೋಪಿ. ಘಟನೆ ಹಿನ್ನೆಲೆ: ಹರ್ಷದ್ ಹಾಗೂ ಹಕೀಂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಖಾಸಗಿ ಮೊಬೈಲ್‌ ಟೆಲಿಕಾಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಕೀಂ ಹರ್ಷದ್‌ ರನ್ನು ಯಾವಾಗಲೂ ಸೇವಕನಂತೆ ನೋಡಿಕೊಳ್ಳುತ್ತಿದ್ದ. ಸಂಬಂಧಿಯಾದ ಕಾರಣ ಹರ್ಷದ್‌ ಸುಮ್ಮನಿದ್ದು ಮಾತು …

Read More »

ಸಿಎಂ ಬೊಮ್ಮಾಯಿ ಜನರ ಸಮಾಧಿಯ ಮೇಲೆ ರಾಜಕಾರಣ ಮಾಡುತ್ತಿದ್ದಾರೆಂದ ಚೂನಪ್ಪ ಪೂಜಾರಿ

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ಧಿ ಕೊಡದ ಸಿಎಂ ಬೊಮ್ಮಾಯಿ ಜನಸಂಕಲ್ಪ ಯಾತ್ರೆಯಲ್ಲ, ಜನರ ಸಮಾಧಿಯ ಮೇಲೆ ರಾಜಕಾರಣ ಮಾಡುತ್ತಿದ್ದಾರೆಂದು ರೈತ ಮುಖಂಡ ಚೂನಪ್ಪ ಪೂಜಾರಿ ವಾಗ್ದಾಳಿ ನಡೆಸಿದರು. ಬೆಳಗಾವಿಯಲ್ಲಿ ಕರೆಯಲಾಗಿದ್ದು ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿ ಕಬ್ಬಿನ ಬೆಲೆ ನಿಗದಿ ಮಾಡಿಲ್ಲ ಸಿಹಿ ಸುದ್ದಿ ಕೊಡ್ತೇವಿ ಅಂತಾ ಹೇಳಿದ್ರು. ಶುಗರ್ ಲಾಭಿಗೆ ಮಣಿದಿದ್ದಾರೆ ೮ ವರ್ಷದಿಂದ ೨೫೦೦ ತೆಗೆದುಕೊಳ್ಳುತ್ತಿದ್ದೇವೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. …

Read More »

ರಮೇಶ ಜಾರಕಿಹೋಳಿ ಜೆಡಿಎಸ್‌ಗೆ ಬಂದ್ರೇ ಸ್ವಾಗತ

ಮಾಜಿ ಸಚಿವ ರಮೇಶ ಜಾರಕಿಹೋಳಿ ಅವರು ಜೆಡಿಎಸ್‌ಗೆ ಬಂದ್ರೇ ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು. ಇಂದು ಭಾನುವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಜೆಡಿಎಸ್ ಪಕ್ಷ ಜನರಿಗಾಗಿ ಇರುವ ಪಕ್ಷ. ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ರಮೇಶ ಜಾರಕಿಹೊಳಿ ಅಥವಾ ಯಾರು ಬರುತ್ತಾರೆಯೋ ಅಂಥವರಿಗೆ ಜಿಲ್ಲಾ ಮಟ್ಟದಲ್ಲಿನ ನಾಯಕರೊಂದಿಗೆ ರ‍್ಚೆ ಮಾಡಿ ತರ‍್ಮಾನ ಮಾಡಲಾಗುವುದು ಎಂದರು. …

Read More »

ಈ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಾರೆ.,ಮಕ್ಕಳನ್ನು ಹುಟ್ಟಿಸುವ ಶಕ್ತಿಬಿಜೆಪಿಯವರಿಗೆ ಯಿಲ್ಲ; ಸಿಎಂ ಇಬ್ರಾಹಿಂ

ಬಿಜೆಪಿಯವರಿಗೆ ಮಾತನಾಡುವ ಶಕ್ತಿಯಿದೆ ಆದರೇ ಮಕ್ಕಳನ್ನು ಹುಟ್ಟಿಸುವ ಶಕ್ತಿಯಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಟುವಾಗಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು. ಅವರು ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದರು. ಇಂದು ನಾಳೆ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡ್ತಿವಿ, ಜೆಡಿಎಸ ಪಕ್ಷ ರಾಷ್ಟ್ರೀಯ ಪಕ್ಷವಲ್ಲ. ನಾನು ಕರೆದುಕೊಂಡು ಬಂದ ಜನರಿಗೆ ಭಾಷಣ ಮಾಡಲ್ಲ. ಬಂದ ಜನರಿಗೆ ಭಾಷಣ ಮಾಡುವ ಉದ್ದೇಶ ಹೊಂದಿದ್ದೇವೆ. ೨೦೨೩ರಲ್ಲಿ ಕುಮಾರಸ್ವಾಮಿ ಅವರೇ …

Read More »

ಮನುಷ್ಯನ ಏಳ್ಗೆಗೆ ಧರ್ಮ ಅವಶ್ಯ: ಶ್ರೀಶೈಲ ಶ್ರೀ

ಅಥಣಿ: ಧರ್ಮ ರಕ್ಷಣೆ ಮಾಡುವವರನ್ನು ಧರ್ಮ ರಕ್ಷಿಸುತ್ತದೆ. ಧರ್ಮದೊಂದಿಗೆ ಎಲ್ಲರೂ ಕೈ ಜೋಡಿಸುವಂತೆ ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು. ಶ್ರೀಗಳು ಶ್ರೀಶೈಲವರೆಗಿನ ಜನಜಾಗೃತಿ ಪಾದಯಾತ್ರೆ ಮಾರ್ಗ ಮಧ್ಯೆ ಸತ್ತಿ ಗ್ರಾಮದಲ್ಲಿ ಜರುಗಿದ ಧರ್ಮಸಭೆಯ ಸಾನ್ನಿಧ್ಯವಹಿಸಿ ಮಾತನಾಡಿ, ಮನುಷ್ಯನ ಏಳ್ಗೆಗೆ ಧರ್ಮವು ಅತ್ಯವಶ್ಯವಾಗಿದೆ.   ಇತ್ತೀಚಿಗೆ ರಸಾಯನಿಕ ಗೊಬ್ಬರ ಅತಿಯಾಗಿ ಬಳಕೆಯಾಗುತ್ತಿದ್ದು, ಫಲವತ್ತಾದ ಭೂಮಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಕೃಷಿಕರು ಸಾವಯವ ಕೃಷಿ ಮಾಡುವ …

Read More »