Breaking News

ಜಿಲ್ಲೆ

ಇನ್ನೂ 10 ವರ್ಷ ರಾಜಕೀಯದಲ್ಲಿ ಇರುತ್ತೇನೆ: ಸತೀಶ್ ಜಾರಕಿಹೊಳಿ

ಬೆಂಗಳೂರು: ಉದ್ದಿಮೆ ಜೊತೆಗೆ ರಾಜಕೀಯದಲ್ಲಿ ಇದ್ದುಕೊಂಡು 30 ವರ್ಷದಿಂದ ಸಮಾಜಸೇವೆ ಮಾಡುತ್ತಿದ್ದೇನೆ. ಈ ವೇಳೆ ಹಲವು ಏಳು-ಬೀಳು ಕಂಡಿದ್ದೇನೆ. ಕನಿಷ್ಠ 10 ವರ್ಷ ರಾಜಕೀಯದಲ್ಲಿದ್ದು ನಾಡಿನ ಅಭಿವೃದ್ಧಿಗೆ ಇನ್ನಷ್ಟು ಪೂರಕವಾಗಿ ಕೆಲಸ ಮಾಡುವುದಾಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಂಗಳೂರು ಪ್ರೆಸ್‌ಕ್ಲಬ್​​​ನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಜೊತೆ 25 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಈ ವೇಳೆ ಶೋಷಿತರಿಗೆ ಸಾಮಾಜಿಕ …

Read More »

ಗ್ರಾ.ಪಂ ತೆರಿಗೆ ಸಂಗ್ರಹದಲ್ಲಿ ಹಿಂದೆ ಬಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆ – ಈ ವರ್ಷ 71% ಮಾತ್ರ ಸಂಗ್ರಹ

ಬೆಂಗಳೂರು: ಸದಾ ಒಂದಿಲ್ಲೊಂದು ವಿಷಯಗಳ ಬಗ್ಗೆ ಮಾತಾಡಿ ವಿವಾದ ಸೃಷ್ಟಿ ಮಾಡೋ ಸಚಿವ ಪ್ರಿಯಾಂಕ್  ಇಲಾಖೆ ಅಭಿವೃದ್ದಿ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಂತೆ ಕಾಣ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ತಮ್ಮ ಇಲಾಖೆ ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ತೆರಿಗೆ ಸಂಗ್ರಹದಲ್ಲಿ ಇಲಾಖೆ ಹಿಂದೆ ಬಿದ್ದಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂಕಿ ಅಂಶಗಳ ಪ್ರಕಾರವೇ ಕಳೆದ 3 ವರ್ಷಗಳಿಂದ ತೆರಿಗೆ ಸಂಗ್ರಹದಲ್ಲಿ ಇಲಾಖೆ ಹಿಂದೆ ಬಿದ್ದಿದೆ. ಈ ಆರ್ಥಿಕ ವರ್ಷ ಅಂದರೆ 2025-26ನೇ ಸಾಲಿನ …

Read More »

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ತೂರಾಟ

ಬಾಗಲಕೋಟೆ: ಶಿವಾಜಿ ಜಯಂತಿ  ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಘಟನೆ ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ನಡೆದಿದೆ. ಶಾಂತವಾಗಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಕಲ್ಲು ತೂರಿದ್ದಾರೆ ಎಂದು ಹಿಂದೂ ಸಂಘಟನೆಗಳ ನಾಯಕರು ದೂರಿದ್ದಾರೆ. ಮಸೀದಿ‌ ಕಡೆಯಿಂದ ಕಲ್ಲು ಬಂದಿದೆ.ನಮ್ಮ ಕಾರ್ಯಕರ್ತರ ಜೊತೆಗೆ ಬೆಳಗಾವಿ ಎಸ್‌ಪಿ, ಪೊಲೀಸರ ಮೇಲೂ ಕಲ್ಲು ಬಿದ್ದಿದೆ ಎಂದು ಹಿಂದೂ ಮುಖಂಡರು ಪಬ್ಲಿಕ್‌ ಟಿವಿಗೆ ತಿಳಿಸಿದ್ದಾರೆ. ಕಲ್ಲು ತೂರಿದ ಬೆನ್ನಲ್ಲೇ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. …

Read More »

ಮುಷ್ಕರ ನಡುವೆಯೂ ಸಾರಿಗೆ ನಿಗಮಗಳ ಬಸ್‌‍ ಸೇವೆ ಯಥಾಸ್ಥಿತಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ಬೆಂಗಳೂರು ಚಲೋ ಮುಷ್ಕರ ನಡೆಸುವ ಕರೆಯ ನಡುವೆಯೂ ಬಸ್‌‍ ಸೇವೆ ಯಥಾಸ್ಥಿತಿಯಲ್ಲಿದೆ. ಇಂದು ಬೆಳಿಗ್ಗೆ ಕೆಎಸ್‌‍ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಬಸ್‌‍ ಸಂಚಾರ ಎಂದಿನಂತೆ ಮುಂದುವರೆದಿದ್ದು, ಯಾವುದೇ ವ್ಯತ್ಯಯವಾಗಿಲ್ಲ ಎಂದು ಕೆಎಸ್‌‍ಆರ್‌ಟಿಸಿ ಪ್ರಕಟಣೆ ತಿಳಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ನೇತೃತ್ವದಲ್ಲಿ ಬೆಂಗಳೂರು ಚಲೋ ಮುಷ್ಕರ ನಡೆಸುವುದಾಗಿ …

Read More »

“ಮಾರ್ಚ್ 11 ರಿಂದ 15 ವರೆಗೆ ನಿಪ್ಪಾಣಿಯಲ್ಲಿ ಅದ್ದೂರಿ ಕೃಷಿ ಉತ್ಸವ”

ನಿಪ್ಪಾಣಿ: ನಗರದ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅವರಣರದಲ್ಲಿ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೋಸಾಯಿಟಿ ಲಿ.,ಯಕ್ಸಂಬಾ (ಮಲ್ಟಿ – ಸ್ಟೇಟ್) ಹಾಗೂ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿಯಮಿತ.,(ಬಹು -ರಾಜ್ಯ) ಸಂಯುಕ್ತಾಶ್ರಯದಲ್ಲಿ ಮಾರ್ಚ 11 ರಿಂದ 15 ವರೆಗೆ 5 ದಿನಗಳ ಕಾಲ ನಡೆಯಲಿರುವ ಬೃಹತ್ “ಕೃಷಿ ಉತ್ಸವ” ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆಯನ್ನು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಸಭೆ ನಡೆಸಿ,ಸಲಹೆ ಸೂಚನೆಗಳನ್ನು ನೀಡಿದರು. …

Read More »

ಲೈಂಗಿಕ ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಾದರೂ ಅನುದಾನ ಕೊಡಬೇಕು

 ಬೆಳಗಾವಿ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ಲೈಂಗಿಕ ಅಲ್ಪಸಂಖ್ಯಾತರಿಗೆ 200 ಕೋಟಿ ರೂ. ಮೀಸಲಿಡುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ತನ್ನ ಮಾತು ಉಳಿಸಿಕೊಳ್ಳುತ್ತಿಲ್ಲ. ಈ ಸಲದ ಬಜೆಟ್‌ನಲ್ಲಾದರೂ ಅನುದಾನ ಕೊಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿಯ ರಾಜ್ಯ ಸಮಿತಿ ಸದಸ್ಯೆ ಐನಾ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಚಾರದಲ್ಲಿ …

Read More »

ಬೆಳಗಾವಿಯ ಬಿಮ್ಸ ಆಸ್ಪತ್ರೆಯ ಶುಶ್ರೂಷಕರ ಮೇಲಿನ ಹಲ್ಲೆ ಖಂಡಿಸಿ ಸ್ಪಾಫ್ ನರ್ಸ್‌ಗಳ ಪ್ರತಿಭಟಿಸಿದ

ಬೆಳಗಾವಿ : ಜಿಲ್ಲಾ ಆಸ್ಪತ್ರೆ ಶುಶ್ರೂಷಕರೊಬ್ಬರ ಮೇಲೆ ರೋಗಿಯ ಸಂಬಂಧಿಗಳು ಹಲ್ಲೆ ಮಾಡಿದ್ದಾರೆನ್ನಲಾದ ಘಟನೆ ಖಂಡಿಸಿ ಇಲ್ಲಿನ ಬಿಮ್ಸ್ ಆಸ್ಪತ್ರೆಯ ಶುಶ್ರೂಷಕರು ಬುಧವಾರ ಕೆಲಹೊತ್ತು ತಮ್ಮ ಸೇವೆ ಸ್ಥಗಿತಗೊಳಿಸಿ ತುರ್ತು ನಿಗಾ ಘಟಕದ ಎದುರು ಪ್ರತಿಭಿಟಿಸಿದರು. ಮಂಗಳವಾರ ಸಂಜೆ ತನ್ನ ವಾರ್ಡ್ ಬಿಟ್ಟು ಬೇರೊಂದು ವಾರ್ಡ್‌ಗೆ ಬಂದಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಪ್ರಶ್ನಿಸಿದ್ದ ಸ್ಪಾಫ್ ನರ್ಸ್ ಬಸವರಾಜ ಕಬಾಡಗಿ, ಮಹಿಳೆಯ ಕೈ ಹಿಡಿದು ವಾರ್ಡ್‌ಗೆ ಹೋಗುವಂತೆ ಹೇಳಿದ್ದರಂತೆ. ಇದೇ ವಿಷಯಕ್ಕೆ …

Read More »

ಹೂವು ಮಾರುಕಟ್ಟೆ ವಿವಾದ ಅಂತ್ಯ

ಬೆಳಗಾವಿ : ಎಪಿಎಂಸಿ ಕಾಯ್ದೆಯಡಿ ಅನುಮತಿ ಇರುವಲ್ಲಿ ಮಾತ್ರವೇ ಹೂವಿನ ಹೊಲಸೇಲ್ ಮಾರುಕಟ್ಟೆ ಮಾಡಲು ಅವಕಾಶವಿದ್ದು, ಅನುಮತಿ ಇಲ್ಲದೆಡೆ ಎಲ್ಲೇ ಮಾರುಕಟ್ಟೆ ಮಾಡಿದರೂ ಅದು ಮಾನ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು. ನಗರದಲ್ಲಿ ದಂಡು ಮಂಡಳಿಯಿಂದಲೂ ಹೂವಿನ ಮಾರುಕಟ್ಟೆ ಆರಂಭಿಸಲು ಮುಂದಾಗಿದ್ದರಿಂದ ಎರಡು ಬಣಗಳ ಮಧ್ಯೆ ವಿವಾದ ಉಂಟಾಗಿರುವ ಹಿನ್ನೆಲೆ ಬುಧವಾರ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಂಡುಮಂಡಳಿ ವ್ಯಾಪ್ತಿಯಲ್ಲಿ ಕಳೆದ ವಾರ ಖಾಸಗಿ ಹೂವಿನ …

Read More »

ಬೆಳಗಾವಿ :ವೈಭವ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ

ಬೆಳಗಾವಿ :ಸದ್ಯ ಬೇಸಿಗೆ ಆರಂಭಗೊಳ್ಳುತ್ತಿದಂತೆಯೇ ನಗರದ ವಿವಿಧ ಬಡಾವಣೆಗಳಲ್ಲಿರುವ ಮನೆಯಂಗಳದ ಕೊಳವೆಬಾವಿಗಳ ಅಂತರಜಲ ಮಟ್ಟ ಕುಸಿದಿದ್ದು, ನಿವಾಸಿಗಳು ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆಯನ್ನೇ ಹೆಚ್ಚು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ನಗರಕ್ಕೆ ಹೊಂದಿಕೊಂಡಿರುವ ಅನೇಕ ಬಡಾವಣೆಗಳಲ್ಲಿ ಎರಡು ವಾರಕ್ಕೊಮ್ಮೆ ನೀರು ಬರುತ್ತಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಇಲ್ಲಿನ ನ್ಯೂ ವೈಭವ ನಗರ ಹಾಗೂ ಶ್ರೀರಾಮ ಕಾಲನಿ ಸುತ್ತಮುತ್ತಲಿನ 11 ಬಡಾವಣೆಗಳಿಗೆ 15 ದಿನಕ್ಕೊಮ್ಮೆ ನೀರು ಬರುತ್ತಿದೆ. ಅದರಲ್ಲೂ ಹದಿನೈದು …

Read More »

ಬೆಳಗಾವಿಯಲ್ಲಿ ‘ಅನಾರೋಗ್ಯಕರ’ ಗಾಳಿಮಟ್ಟ: ಕೆಮ್ಮು, ನೆಗಡಿ, ಉಸಿರಾಟದ ತೊಂದರೆಗಳು ಹೆಚ್ಚಾಗುವ ಸಾಧ್ಯತೆ

ಬೆಂಗಳೂರು: ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು  ಹದಗೆಟ್ಟಿದ್ದು, ಅದರಲ್ಲೂ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಆತಂಕಕಾರಿ ಮಟ್ಟಕ್ಕೆ ತಲುಪಿದೆ. ನಗರದ ಸರಾಸರಿ ಗಾಳಿಯ ಮಟ್ಟ 117 ರಿಂದ 157 ರ ನಡುವೆ ದಾಖಲಾಗಿದ್ದು, ಇದು ‘ಕಳಪೆ’ ಮತ್ತು ಕೆಲವು ಭಾಗಗಳಲ್ಲಿ ‘ಅನಾರೋಗ್ಯಕರ’ ಮಟ್ಟಕ್ಕೆ ತಲುಪಿದೆ. ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಮತ್ತು ಬಿಟಿಎಂ ಲೇಔಟ್‌ನಂತಹ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟ ಹೆಚ್ಚಿದೆ. ಇನ್ನು ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ವಾಯು ಗುಣಮಟ್ಟ ಕಳಪೆಯಾಗಿದ್ದು, …

Read More »