ಕಲಬುರಗಿ: ಪರೀಕ್ಷೆಯಲ್ಲಿ ನಕಲು ಮಾಡ್ತಿರೋದನ್ನ ಪ್ರಶ್ನಿಸಿ ತಡೆದಿದಕ್ಕೆ ಶಿಕ್ಷಕರ ಮೇಲೆ ವಿದ್ಯಾರ್ಥಿ ಹಲ್ಲೆ ನಡೆಸಿರುವ ಘಟನೆ ಕಲಬುರಗಿಯ ಹೋಮಿಯೋಪಥಿ ಕಾಲೇಜೊಂದರಲ್ಲಿ ನಡೆದಿದೆ. ಶಹಬಾಜ್ ಎಂಬ ವಿದ್ಯಾರ್ಥಿ ಬ್ಲಾಕ್‌ನ ಮೇಲ್ವಿಚಾರಣೆ ಮಾಡುತ್ತಿದ್ದ ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ಕಾಲೇಜಿನಲ್ಲಿ ಹೋಮಿಯೋಪಥಿಕ್ ಮಟೇರಿಯಾ ಮೆಡಿಕಾ ವಿಷಯದ ಇಂಟರ್ನಲ್ ಎಕ್ಸಾಮ್ ನಡೆಯುತ್ತಿತ್ತು. ಈ ವೇಳೆ ಶಹಬಾಜ್ ಮೊಬೈಲ್ ಬಳಸಿ ನಕಲು ಮಾಡಲು ಮುಂದಾಗಿದ್ದ. ಇದನ್ನು ನೋಡಿದ ಪ್ರಾಧ್ಯಾಪಕರು ಶಹಬಾಜ್‌ಗೆ ಪ್ರಶ್ನಿಸಿ ಉತ್ತರ …
Read More »ಬಾಗಲಕೋಟೆಯ ಫಿಶ್, ತರಕಾರಿ ಮಾರ್ಕೆಟ್ ಮೇಲೆ ಕಲ್ಲು ತೂರಾಟ – ಪೊಲೀಸರಿಂದ ಲಾಠಿ ಚಾರ್ಜ್
ಬಾಗಲಕೋಟೆ: ನಿಷೇಧಾಜ್ಞೆಯ ನಡುವೆಯೂ ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿನ್ನು ಖಂಡಿಸಿ ಇಂದು ಕೊತ್ತಲೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಭೆ ನಡೆಸುತ್ತಿದ್ದರು. ಸಭೆಯಲ್ಲಿ ಕೇವಲ 8 ಮಂದಿಯಲ್ಲ ಬಹಳಷ್ಟು ಮಂದಿ ಕಲ್ಲು ಎಸೆದಿದ್ದಾರೆ. ಆ ಯುವಕರನ್ನು ಬಂಧಿಸಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು. ಸಭೆಯಲ್ಲಿ ನಿರ್ಧಾರ ಮಾಡಿದಂತೆ ಹಿಂದೂ ಮುಖಂಡರು …
Read More »ಮಸೀದಿಯಿಂದ ಕಲ್ಲು ಎಸೆಯಲಾಗಿದೆ, ನನ್ನ ಮೇಲೂ ಕಲ್ಲು ಬಿದ್ದಿತ್ತು: ಬಾಗಲಕೋಟೆ ಎಸ್‌ಪಿ
ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ. ತನ್ವೀರ್ (28) , ಮುಜ್ಜು (23), ಸದ್ದಾಂ(22), ಫಯಾಜ್(24), ಸರ್ಫರಾಜ್(33), ರಿಯಾನ್(21), ಅಯಾನ್(19), ವಸೀಮ್(22) ಬಂಧನಕ್ಕೆ ಒಳಗಾದ ಆರೋಪಿಗಳು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಾಗಲಕೋಟೆ ಎಸ್‌ಪಿ ಸಿದ್ದಾರ್ಥ ಗೋಯಲ್, ವಿಡಿಯೋ ದೃಶ್ಯಗಳನ್ನು ಆಧಾರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ನಾವು ಆರೋಪಿಗಳನ್ನು ಬಂಧಿಸಿದ್ದೇವೆ. ರಾತ್ರಿ 10:06ಕ್ಕೆ ಕಲ್ಲು ಎಸೆಯಲಾಗಿದೆ. ನಮ್ಮ ಕರ್ತವ್ಯಕ್ಕೆ …
Read More »ಬೆಳಗಾವಿ ಕೈಗಾರಿಕಾ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಬೇಡಿಕೆ ಮುಖ್ಯಮಂತ್ರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಿಂದ ಮನವಿ
ಬೆಳಗಾವಿ: ಬೆಳಗಾವಿ ಪ್ರದೇಶದ ಕೈಗಾರಿಕೆ, ಎಂಎಸ್‌ಎಂಇಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಮುಂಬರುವ ರಾಜ್ಯ ಬಜೆಟ್‌ನಲ್ಲಿ ವಿಶೇಷ ನೆರವು ನೀಡುವಂತೆ ಬೆಳಗಾವಿ ವಾಣಿಜ್ಯೋದ್ಯಮ ಸಂಘದ (Belgaum Chamber of Commerce and Industries) ವತಿಯಿಂದ ಮುಖ್ಯಮಂತ್ರಿ ಸಿದ್ಧರಾಮದ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಬೆಳಗಾವಿ ಉತ್ತರ ಕರ್ನಾಟಕದ ಪ್ರಮುಖ ಕೈಗಾರಿಕಾ ಕೇಂದ್ರವಾಗಿದ್ದು, ಎಂಜಿನಿಯರಿಂಗ್, ಫೌಂಡ್ರಿ, ಹೈಡ್ರಾಲಿಕ್ಸ್, ಪ್ರಿಸಿಷನ್ ಘಟಕಗಳು ಹಾಗೂ ಏರೋಸ್ಪೇಸ್ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದು ಉಲ್ಲೇಖಿಸಲಾಗಿದೆ. ಸೂಕ್ತ ಬಜೆಟ್ …
Read More »ಜಿಲ್ಲಾಮಟ್ಟದ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವ ಸಿದ್ಧತೆ ಪರಿಶೀಲನೆ
ಬಾಗಲಕೋಟೆ: ನವನಗರದ ಜಿಲ್ಲಾ ಕಲಾ ಭವನದಲ್ಲಿ ಫೆ. 20ರಂದು ಜಿಲ್ಲಾಮಟ್ಟದ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವ ಜರುಗಲಿದ್ದು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಬುಧವಾರ ಸಿದ್ಧತಾ ಕಾರ್ಯ ಪರಿಶೀಲಿಸಿದರು. ಕಾರ್ಯಕ್ರಮದ ಮುಖ್ಯ ವೇದಿಕೆ, ಊಟದ ವ್ಯವಸ್ಥೆಯ ಸ್ಥಳ ಪರಿಶೀಲನೆ ಹಾಗೂ ಕಲಾ ಭವನದ ಮುಖ್ಯದ್ವಾರದ ಪಕ್ಕದಲ್ಲಿ ಹೆಚ್ಚುವರಿಯಾಗಿ ಬಂದ ಜನರಿಗೆ ಕಾರ್ಯಕ್ರಮ ವೀಕ್ಷಣೆಗೆ ಎಲ್‌ಇಡಿ ವ್ಯವಸ್ಥೆ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ …
Read More »ಬಿವಿವಿ ಸಂಘದ ಮೂರು ಮಹಾವಿದ್ಯಾಲಯಗಳಲ್ಲಿ ಐಟಿಇಪಿ ಕೋರ್ಸ್
ಬಾಗಲಕೋಟೆ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿವಿವಿ ಸಂಘದ ಮೂರು ಮಹಾವಿದ್ಯಾಲಯಗಳಲ್ಲಿ ನಾಲ್ಕು ವರ್ಷಗಳ ಸಂಯುಕ್ತ ಶಿಕ್ಷಕರ ಶಿಕ್ಷಣ ಪದವಿ(ಐಟಿಇಪಿ) ಕೋರ್ಸ್ ಆರಂಭಿಸಲಾಗುತ್ತದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು. ಸಂಘದ ಮಿನಿ ಸಭಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಾಲ್ಕು ವರ್ಷದ ಬಿಎ ಬಿಎಡ್, ಬಿಎಸ್ಸಿ ಬಿಎಡ್ ಪದವಿ ಪ್ರಾರಂಭಿಸಲು ಕೇಂದ್ರ ಸರ್ಕಾರದ ಎನ್‌ಸಿಟಿಇ ಅನುಮತಿ ನೀಡಿದೆ ಎಂದರು. ಬಾಗಲಕೋಟೆಯ ಬಸವೇಶ್ವರ ಕಲಾ …
Read More »ಬೆಳಗಾವಿ ವಿಭಾಗ ಮಟ್ಟದ ಮಹಿಳಾ ರಕ್ಷಣಾ ಪಡೆಗಳಿಗೆ ಕಾರ್ಯಾಗಾರ
ಬೆಳಗಾವಿ: ದೇಶ ಪ್ರಗತಿ ಸಾಧಿಸಲು ಮಹಿಳೆಯ ಪಾತ್ರ ದೊಡ್ಡದು. ಎರಡನೇ ಮಹಾಯುದ್ಧದ ನಂತರ ಜಪಾನ ಮಹಿಳೆಯರು ಕೈ ಕಟ್ಟಿ ಕುಳಿತಿದ್ದರೇ ಆ ದೇಶ ಇಂದು ಇಷ್ಟು ಪ್ರಗತಿ ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಮ್ಮ ದೇಶದಲ್ಲೂ ಮಹಿಳೆಯರು ಸ್ವಾವಲಂಬಿಗಳಾಗಿ ಹೆಚ್ಚು ಬೆಳೆಯಬೇಕಿದ್ದು, ಇದಕ್ಕಾಗಿಯೇ ಹೆಣ್ಣು ಮಕ್ಕಳ ಸಂರಕ್ಷಣೆ ಮತ್ತು ಸುರಕ್ಷತೆ ಮಹತ್ವ ನೀಡಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಹೇಳಿದರು. ಜಿಲ್ಲಾಡಳಿತ, ಜಿಪಂ, ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ …
Read More »ಫೆ.28ರಂದುಮಹಿಳೆಯರಿಗಾಗಿ ಡಿಜಿಟಲ್ ಮಾರ್ಕೆಟಿಂಗ್
ಬೆಳಗಾವಿ:ಪರಂಪರಾ ಮಹಿಳಾ ವೇದಿಕೆಯಿಂದ ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಫೆ.28ರಂದು ಬೆಳಗ್ಗೆ 10ಕ್ಕೆ ಮಹಿಳೆಯರಿಗಾಗಿ ಡಿಜಿಟಲ್ ಮಾರ್ಕೆಟಿಂಗ್ ಕುರಿತು ಕುರಿತು ಒಂದು ದಿನದ ಉಚಿತ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ಪ್ರಿಯಾ ಪುರಾಣಿಕ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ನಿರ್ವಹಣೆ ಕುರಿತ ವಿವಿಧ ವಿಷಯಗಳನ್ನು ಕಾರ್ಯಾಗಾರದಲ್ಲಿ ಪರಿಚಯಿಸಲಾಗುವುದು. ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಮತ್ತು ಡಿಜಿಟಲ್ …
Read More »ಸೇತುವೆ ಕಾಮಗಾರಿಗೆ ಮೃಣಾಲ್ ಹೆಬ್ಬಾಳಕರ್ ಚಾಲನೆ
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾವಗಾಂವ ಹಾಗೂ ಬೆನಕನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಗುರುವಾರ ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಸುಮಾರು 30 ಲಕ್ಷ ರೂ,ಗಳ ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಳ್ಳಲಿದೆ, ಜನರ ಬಹುದಿನದ ಬೇಡಿಕೆಯಾಗಿದ್ದ ಈ ಸೇತುವೆ ನಿರ್ಮಾಣದಿಂದ ಸಂಚಾರ ವ್ಯವಸ್ಥೆ ಸುಗಮವಾಗಲಿದ್ದು, ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. …
Read More »ಮಚ್ಚೆ ಗ್ರಾಮದ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಸಿ ಬಳಿದ ಕಿಡಿಗೇಡಿಗಳು
ಬೆಳಗಾವಿ: ಮಚ್ಚೆ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಗುರುವಾರ ರಾತ್ರಿ ಕಿಡಿಗೇಡಿಗಳು ಮಸಿ ಬಳಿದಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ರಾಯಣ್ಣ ಮೂರ್ತಿಗೆ ಮೊದಲು ಕಪ್ಪು ಬಣ್ಣವೇ ಇತ್ತು. ಅದರ ಮೇಲೆಯೇ ಮತ್ತೆ ಕರಿ ಮಸಿ ಸುರಿದಿದ್ದಾರೆಂದು ತಡರಾತ್ರಿ ತಿಳಿದು ಬಂದಿದ್ದು, ಕೆಲಕಾಲ ಯಾರೂ ಇದನ್ನು ಗಮನಿಸಿರಲಿಲ್ಲ. ರಾತ್ರಿ ಗ್ರಾಮದ ಕೆಲವು ಯುವಕರ ಗಮನಕ್ಕೆ ಬಂದಿದೆ. ಕೆಲವೇ ನಿಮಿಷಗಳಲ್ಲಿ ಹಲವರು ಸ್ಥಳದಲ್ಲಿ ಸೇರಿ …
Read More »
Laxmi News 24×7