Breaking News

ಜಿಲ್ಲೆ

ಬೆಂಗಳೂರು ಶುಚಿತ್ವ ರಾಯಭಾರಿಗಳಾಗಿ ಮಂಜಮ್ಮ ಜೋಗತಿ, ನಟ ಅನಿರುಧ್, ಸಾಮಾಜಿಕ ಕಾರ್ಯಕರ್ತ ಅರುಣ್ ಪೈ ನೇಮಕ

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಕಡಿಮೆ ಮೌಲ್ಯಯುತ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಪ್ರಮಾಣದಲ್ಲಿ ಗಣನೀಯ ವೃದ್ಧಿ ಕಂಡುಬಂದಿದ್ದು, ಈ ನಿಟ್ಟಿನಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯಿಂದ ಕಸ ವಿಲೇವಾರಿ, ವಿಂಗಡಣೆ ಹಾಗೂ ಸ್ವಚ್ಛತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮೂವರು ರಾಯಭಾರಿಗಳ ನೇಮಕ ಮಾಡಿದ್ದಾರೆ. ಬೆಂಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತಕ್ಕೆ ಸಂಬಂಧಿಸಿದಂತೆ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಬಿಎ ವ್ಯಾಪ್ತಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಅಂಗವಾಗಿ ನಾಗರಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು …

Read More »

1 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬಿಇಒ

ಶಿವಮೊಗ್ಗ : ತಮ್ಮ ಕಚೇರಿಯ ಸಿಬ್ಬಂದಿಯಿಂದಲೇ 1 ಲಕ್ಷ ರೂ. ಲಂಚ ಪಡೆದ ಭದ್ರಾವತಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಅವರು ಮಧ್ಯವರ್ತಿ ಜೊತೆಗೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಭದ್ರಾವತಿ ಬಿಇಒ ಕಚೇರಿಯ ಅಧೀಕ್ಷಕರಾದ ಲಿಂಗರಾಜು ಎಂಬುವವರಿಗೆ 2011 ರಿಂದ 2023 ರವರೆಗೆ ವೇತನ ಭಡ್ತಿ ಮತ್ತು ಇತರೇ ಭತ್ಯೆಗಳ ಹಣ ಬಾಕಿ ಇತ್ತು. ಇದನ್ನು ಮಂಜೂರು ಮಾಡಲು ಹಲವು ಬಾರಿ ಬಿಇಒ ನಾಗೇಂದ್ರಪ್ಪ ಅವರನ್ನು ಕೋರಿದ್ದರು. ಬಿಇಒ ಅವರು …

Read More »

ಮಾಹಿತಿ ನೀಡಲು ವಿಳಂಬ ಮಾಡಿದ ಪಿಡಿಒ ಸೇರಿ ಗ್ರಾಪಂ ಅಧಿಕಾರಿಗಳಿಗೆ ತಲಾ 10 ಸಾವಿರ ರೂ. ದಂಡ

ಕೊಪ್ಪಳ: ಸಕಾಲಕ್ಕೆ ಮಾಹಿತಿ ನೀಡಿದೆ ನಿರ್ಲಕ್ಷ್ಯ ವಹಿಸಿದ ಒಬ್ಬ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಮೂವರು ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್ ಅವರು ತಲಾ 10,000 ರೂ.ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಮೇಲ್ಮನವಿದಾರರು ಮಾಹಿತಿ ಕೋರಿ ಸಲ್ಲಿಸಿದ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದೆ ಇರುವುದರಿಂದ ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದಲ್ಲಿ ಸಲ್ಲಿಸಿದ …

Read More »

ರಾಜ್ಯದಲ್ಲಿ 56 ಸಾವಿರ ಹುದ್ದೆಗಳ ಭರ್ತಿ ಐತಿಹಾಸಿಕ ನಿರ್ಧಾರ: ಮಧು ಬಂಗಾರಪ್ಪ

ಶಿವಮೊಗ್ಗ: ರಾಜ್ಯದಲ್ಲಿ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತಿರುವುದು ಐತಿಹಾಸಿಕ ನಿರ್ಧಾರವಾಗಿದೆ. ದೇಶದ ಯಾವುದೇ ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನೇಮಕಾತಿ ನಡೆದಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಸೋಮವಾರ ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಸಾಗರದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಆಶೀರ್ವಾದ ಪಡೆದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮೀಸಲಾತಿ ನಿಗದಿ ಪಡಿಸದೆ ನೇಮಕಾತಿ ಮಾಡಿಕೊಂಡರೆ ಕೆಲವು ವರ್ಗಗಳಿಗೆ ಅನ್ಯಾಯವಾಗುತ್ತದೆ. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು …

Read More »

ಮಿದುಳು ಕ್ಯಾನ್ಸರ್‌ಗೆ ತುತ್ತಾದ ಬಾಲಕಿಗೆ ಜಿಲ್ಲಾಡಳಿತದ ನೆರವು

ಗುಬ್ಬಿ: ಆಧಾರ್ ಕಾರ್ಡ್‌ನಲ್ಲಿ ಕನ್ನಡದಲ್ಲಿ ಹೆಸರು ಇಲ್ಲದೆ ಸಮಸ್ಯೆ ಎದುರಿಸಿದ್ದ ಮಿದುಳು ಕ್ಯಾನ್ಸರ್‌ಗೆ ತುತ್ತಾದ ಬಾಲಕಿಗೆ ಜಿಲ್ಲಾಡಳಿತ ಕೊಟ್ಟ ಮಾತಿನಂತೆ ನಾಲ್ಕು ದಿನದಲ್ಲಿ ಆಧಾರ್ ತಿದ್ದುಪಡಿ ಹಾಗೂ ಬಿಪಿಎಲ್ ಕಾರ್ಡ್ ಸಿದ್ಧ ಮಾಡಿ ಕುಟುಂಬಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ಹಸ್ತಾಂತರ ಮಾಡಿದ್ದಾರೆ. ಪಟ್ಟಣದ ಸಮೀಪದ ಜಿ.ಹರಿವೇಸಂದ್ರ ಗ್ರಾಮದ ಮಂಜುನಾಥ್ ಹಾಗೂ ನೇತ್ರಾವತಿ ದಂಪತಿಯ ಹತ್ತು ವರ್ಷದ ಪುತ್ರಿ ಐದು ತಿಂಗಳ ಹಿಂದೆ ಜ್ವರದಿಂದ ಬಳಲಿ ನಂತರ ಕೈ ಕಾಲು …

Read More »

ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಕಾರ್ಯಾಗಾರ, ಶೈಕ್ಷಣಿಕ ಸಮಾವೇಶ

ಗದಗ: ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ರಾಜ್ಯ ಘಟಕ, ಗದಗ ಜಿಲ್ಲಾ ಘಟಕ ಹಾಗೂ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ, ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ. ಶೇ. 100% ರಷ್ಟು ಫಲಿತಾಂಶ ಪಡೆದ ಶಾಲಾ ಮುಖ್ಯಸ್ಥರಿಗೆ ಗೌರವ ಹಾಗೂ ಜಿಲ್ಲಾ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಕುರಿತು ಕಾರ್ಯಾಗಾರ ಹಾಗೂ ಶೈಕ್ಷಣಿಕ ಸಮಾವೇಶ – 2026 ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಮಾರ್ಚ್ 4 …

Read More »

ಅವಳಿ ಮಕ್ಕಳ ಜೊತೆ ಬಾವಿಗೆ ಹಾರಿದ ತಾಯಿ: ಮಹಿಳೆಯ ರಕ್ಷಣೆ, ಪುಣಾಣಿಗಳು ಸಾವು

ಗದಗ: ಕೌಟುಂಬಿಕ ಕಲಹ ಹಿನ್ನೆಲೆ ಇಬ್ಬರು ಮಕ್ಕಳ ಜೊತೆ ತಾಯಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ 3 ವರ್ಷದ ಹರ್ಷಿತ್​ ಮತ್ತು ಹಿತೇಶ್ ಮೃತಪಟ್ಟಿದ್ದು, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಉಷಾರನ್ನು ಪ್ರವಾಸಿ ಮಿತ್ರ ಸಿಬ್ಬಂದಿ ರಕ್ಷಿಸಿದ್ದಾರೆ. ಮೃತ ಪುಟಾಣಿಗಳಿಬ್ಬರೂ ಅವಳಿ-ಜವಳಿ ಎಂಬುದು ಗೊತ್ತಾಗಿದೆ. ಬೂದಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಯ್ಯ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. …

Read More »

ಶ್ರೀಮಂತರು ಗ್ಯಾರಂಟಿ ಯೋಜನೆ ತೆಗೆದುಕೊಳ್ಳುತ್ತಿದ್ದರೆ ಬಿಡಬೇಕು: ಎಂ.ಬಿ ಪಾಟೀಲ್‌ ಒತ್ತಾಯ

ಬೆಂಗಳೂರು: ಶ್ರೀಮಂತರು ಸ್ವಯಂ ಪ್ರೇರಿತರಾಗಿ ಗ್ಯಾರಂಟಿ ಯೋಜನೆ ಲಾಭ ಪಡೆಯೋದು ಬಿಡಬೇಕು ಎಂದು ಸಚಿವ ಎಂ.ಬಿ ಪಾಟೀಲ್‌  ಒತ್ತಾಯಿಸಿದರು. ವಿಜಯಪುರದ  ಆಲಮಟ್ಟಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಮಂತರು ಗ್ಯಾರಂಟಿ  ತೆಗೆದುಕೊಳ್ಳುತ್ತಿದ್ದರೆ ಅದು ತಪ್ಪು ಎನ್ನುವ ಡಿಕೆ ಸುರೇಶ್‌ ಹೇಳಿಕೆಯನ್ನ ಸಮರ್ಥಿಸಿಕೊಂಡರು. ಸ್ವಯಂ ಪ್ರೇರಿತರಾಗಿ ಶ್ರೀಮಂತರು ಗ್ಯಾರಂಟಿ ಯೋಜನೆ ಲಾಭ ಪಡೆಯೋದು ಬಿಡಬೇಕು ಅಂತ ನಾನೂ ಒತ್ತಾಯಿಸುತ್ತೇನೆ ಎಂದರು. ಶ್ರೀಮಂತರು ಗ್ಯಾರಂಟಿ ಯೋಜನೆ ತೆಗೆದುಕೊಳ್ಳುತ್ತಿದ್ದರೆ ಬಿಡಬೇಕು. ಅರ್ಹ ಬಿಪಿಎಲ್ ಕುಟುಂಬದವರು ಗ್ಯಾರಂಟಿ …

Read More »

ಪರೀಕ್ಷೆ ಬರೆಯಬಾರದು ಅಂತ ಪಿಯುಸಿ ವಿದ್ಯಾರ್ಥಿನಿ ಮೇಲೆ ಸೋದರ ಮಾವನಿಂದ ಹಲ್ಲೆ

ಮೈಸೂರು: ಹಳೇ ದ್ವೇಷದ ಹಿನ್ನೆಲೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಪಾಳ್ಯಾ ಗ್ರಾಮದಲ್ಲಿ ನಡೆದಿದೆ. ಪೂರ್ಣಿಮಾ ಹಲ್ಲೆಗೆ ಒಳಗಾದ ವಿದ್ಯಾರ್ಥಿನಿ. ಆಕೆ ಪರೀಕ್ಷೆ  ಮುಗಿಸಿ ಮನೆಗೆ ಬಂದಾಗ ವಿದ್ಯಾರ್ಥಿನಿಯ ಸೋದರ ಮಾವ ಸೋಮಣ್ಣ ಎಂಬಾತ ಏಕಾಏಕಿ ಮನೆಗೆ ನುಗ್ಗಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಹಳೇ ದ್ವೇಷದ ಹಿನ್ನಲೆ ನೀನು ಓದಬಾರದು ಅಂತ ಹಲ್ಲೆ ಮಾಡಿದ್ದಾನೆ. ಯುವತಿಯ ನೆರವಿಗೆ ಬಂದ ಕುಟುಂಬಸ್ಥರ …

Read More »

ಮಧ್ಯಪ್ರಾಚ್ಯದಲ್ಲಿ ಸಿಲುಕಿರೋ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ: ಕೃಷ್ಣ ಭೈರೇಗೌಡ

ಬೆಂಗಳೂರು: ಇರಾನ್- ಇಸ್ರೇಲ್ ಯುದ್ಧದಿಂದಾಗಿಮಧ್ಯ ಪ್ರಾಚ್ಯದಲ್ಲಿ ಸಿಲುಕಿರೋ ಕರ್ನಾಟಕದವರ ರಕ್ಷಣೆಗೆ ಕರ್ನಾಟಕ ಸರ್ಕಾರ ಕ್ರಮವಹಿಸಿದೆ ಅಂತ ಕಂದಾಯ ಸಚಿವ ಕೃಷ್ಣ ಭೈರೇಗೌಡ  ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರು ಆತಂಕವಾಗೋದು ಬೇಡ. ರಾಜ್ಯ ಸರ್ಕಾರ ಕೇಂದ್ರ ವಿದೇಶಾಂಗ ಇಲಾಖೆ ಜೊತೆ ಸಂಪರ್ಕದಲ್ಲಿದೆ. ಎಲ್ಲರ ರಕ್ಷಣೆಗೂ ಕ್ರಮ ತೆಗೆದುಕೊಳ್ಳಲಿದೆ ಎಂದು ಅಭಯ ನೀಡಿದರು. ಶನಿವಾರದಿಂದಲೇ ಸಹಾಯವಾಣಿ ಪ್ರಾರಂಭ ಮಾಡಲಾಗಿದೆ. ಈವರೆಗೂ 109 ಜನ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಈಗಾಗಲೇ …

Read More »