Breaking News

ಜಿಲ್ಲೆ

ರೈತ ಮೋರ್ಚಾ ವತಿಯಿಂದ ಆಯೋಜಿಸಿದ್ ಸಸಿ ನೆಡುವ ಕಾರ್ಯಕ್ರಮಕ್ಕೆ ರಮೇಶ್ ಜಾರಕಿಹೊಳಿ ಚಾಲನೆ

ಗೋಕಾಕ: ಸದ್ಯಕ್ಕೆ ಗೋಕಾಕ ನಗರದ ಎಲ್ಲಾ ರೀತಿಯ ಅಭಿವೃದ್ಧಿ ಹಾಗೂ, ಇನ್ನಿತರ ಕೆಲಸ ಕಾರ್ಯ ಗಳಲ್ಲಿ ರಮೇಶ್ ಜಾರಕಿಹೊಳಿ ಹೆಚ್ಚಿನ ಒತ್ತನ ಕೊಡುತ್ತಿದ್ದಾರೆ. ಇಂದು ಗೋಕಾಕ ನಗರದ ಗ್ರಾಮೀಣ ಮಂಡಲದ ರೈತ ಮೋರ್ಚಾ ವತಿಯಿಂದ ಗೋಕಾಕ ನಗರದ ಹೊರವಲಯದ ಯೋಗಿ ಕೊಳ್ಳ ರಸ್ತೆ ಮಾರ್ಗದಲ್ಲಿ 200 ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಒಂದು ಕಾರ್ಯ ಕ್ರಮದಲ್ಲಿ ಭಾಗಿಯಾದ ಸಾಹುಕಾರ ರಮೇಶ್ ಜಾರಕಿಹೊಳಿ ಈ ಒಂದು ಕಾರ್ಯ ಕ್ರಮಕ್ಕೆ ಸಸಿ …

Read More »

ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು.ಮಕ್ಕಳ ಮನೆಯ ಅಂಗಳದ ಆಟಕ್ಕೆ ಬ್ರೇಕ್

ಬೆಳಗಾವಿ- ಬೆಳಗಾವಿ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ವಿಪರೀತವಾಗಿದೆ.ಪ್ರತಿಯೊಂದು ಬಡವಾಣೆಗಳಲ್ಲಿ ಬೀದಿ ನಾಯಿಗಳ ಹಾವಳಿಯಿಂದಾಗಿ ನಗರದಲ್ಲಿ ಭೌ…ಬೌ..ಚಳುವಳಿ ಶುರುವಾಗಿದೆ. ಪ್ರಾಣಿ ದಯಾಮಯಿಗಳ ವಿಶೇಷ ಕಾಳಜಿಯಿಂದಾಗಿ ಬೆಳಗಾವಿಯಲ್ಲಿ ಬೀದಿ ನಾಯಿಗಳ ಸಂತತಿ ಹೆಚ್ಚಾಗಿದ್ದು.ಮಕ್ಕಳು ಮನೆಯ ಅಂಗಳದಲ್ಲಿ ಆಟ ಆಡುವದೇ ಕನಸಿನ ಮಾತಾಗಿದೆ.ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು.ಮಕ್ಕಳ ಮನೆಯ ಅಂಗಳದ ಆಟಕ್ಕೆ ಬ್ರೇಕ್ ಬಿದ್ದಿದೆ. ನಾಯಿಗಳ ಸಂತತಿ ಕಂಟ್ರೋಲ್ ಮಾಡಲು,ಬೆಳಗಾವಿ ಮಹಾನಗರ ಪಾಲಿಕೆ ಪ್ರತಿ ವರ್ಷ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ …

Read More »

ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ: ನದಿಯಂತಾದ ಮಸ್ಕಿ ರಸ್ತೆಗಳು. ಮನೆಗಳಿಗೆ ನುಗ್ಗಿದ ನೀರು

ರಾಯಚೂರು: ರಾಯಚೂರು ಜಿಲ್ಲೆಯ ಹಲವೆಡೆ ಶನಿವಾರ ರಾತ್ರಿ ಭಾರಿ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಸ್ಕಿ ಪಟ್ಟಣದ ಗಾಂಧಿನಗರ ಬಡಾವಣೆಯಲ್ಲಿ ಭಾರಿ ಮಳೆಯ ಕಾರಣ ಭಾರಿ ಪ್ರಮಾಣದ ನೀರು ರಸ್ತೆ ಮೇಲೆ ಹರಿದು ಮನೆಗಳಿಗೆ ನುಗ್ಗಿದ್ದು ನಿವಾಸಿಗಳಿಗೆ ತೊಂದರೆಯಾಗಿದೆ. ಮಸ್ಕಿಯ ಅನೇಕ ರಸ್ತೆ, ಬಡಾವಣೆಗಳು ನದಿಗಳಾಂಗಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ, ಅವಾಂತರ ಸೃಷ್ಟಿಸಿದ್ದು, ಮನೆಯಿಂದ ನೀರು ಹೊರಹಾಕಲು ಜನ ಹರಸಾಹಸ ನಡೆಸಿದ್ದಾರೆ. ಮಸ್ಕಿ ಪಟ್ಟಣ ಅನೇಕ ಭಾಗದಲ್ಲಿ …

Read More »

ರಾಜ್ಯದ 14 ಸಾವಿರ ಅಂಗನವಾಡಿಗಳು ಕತ್ತಲಲ್ಲಿ, 13 ಸಾವಿರ ಅಂಗನವಾಡಿಗಳಲ್ಲಿ ಶೌಚಾಲಯವೇ ಇಲ್ಲ

ಬೆಂಗಳೂರು: ರಾಜ್ಯದ 14 ಸಾವಿರ ಅಂಗನವಾಡಿಗಳು ಕತ್ತಲಲ್ಲಿ ಇವೆ. 13 ಸಾವಿರ ಅಂಗನವಾಡಿಗಳಲ್ಲಿ ಶೌಚಾಲಯ ಇಲ್ಲ. 18 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಫ್ಯಾನ್‌ ಇಲ್ಲ. ಇದನ್ನು ಸರಿಪಡಿಸಲು ಪ್ರತ್ಯೇಕ ಹಣಕಾಸಿನ ಲಭ್ಯತೆ ಇಲ್ಲ ಎಂದು ಸ್ವತಃ ರಾಜ್ಯ ಸರ್ಕಾರ ಹೈಕೋರ್ಟ್‌ ಮುಂದೆ ಒಪ್ಪಿಕೊಂಡಿದೆ. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಸಂಬಂಧಿಸಿದಂತೆ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸಲ್ಲಿಸಲಾದ ಲಿಖೀತ …

Read More »

ಬೆಂಗಳೂರಿಗೆ ಸ್ಮಾರ್ಟ್‌ ಪುರಸ್ಕಾರ : ತುಮಕೂರು ಡಿಜಿಟಲ್‌ ಗ್ರಂಥಾಲಯಕ್ಕೂ ಪ್ರಶಸ್ತಿ

ಬೆಂಗಳೂರು: ಕೋವಿಡ್‌ ತುರ್ತು ಪರಿಸ್ಥಿತಿ ನಿರ್ವಹಣೆಯಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ)ವನ್ನು ಅತ್ಯುತ್ತಮವಾಗಿ ಬಳಕೆ ಮಾಡಿದ ರಾಜಧಾನಿ ಬೆಂಗಳೂರಿಗೆ ಸ್ಮಾರ್ಟ್‌ ಸಿಟಿ ವಿಶೇಷ ಪುರಸ್ಕಾರ ಲಭಿಸಿದೆ. ದೇಶದ ವಿವಿಧೆಡೆ ಸ್ಮಾರ್ಟ್‌ ಸಿಟಿ ಯೋಜನೆ ಗಳ 6ನೇ ವಾರ್ಷಿಕೋತ್ಸವದ ನಿಮಿತ್ತ ನಡೆದ ಸ್ಪರ್ಧೆಗಳಲ್ಲಿ ಕೇಂದ್ರ ಸರಕಾರದ ವತಿಯಿಂದ ಈ ಪುರಸ್ಕಾರ ನೀಡಲಾಗಿದೆ. ಕಾಮಗಾರಿಗಳಲ್ಲಿ ಪದವೀಧರರಿಗೆ ಇಂಟರ್ನ್ ಶಿಪ್‌ ನೀಡುವ ಯೋಜನೆಯ ವಿಭಾಗದಲ್ಲಿ ಬೆಂಗಳೂರು ಸ್ಮಾರ್ಟ್‌ ಸಿಟಿಯನ್ನು ರನ್ನರ್‌ ಅಪ್‌ ಎಂದು ಘೋಷಿಸಲಾಗಿದೆ. ಹವಾಮಾನ …

Read More »

ಸಾರಿಗೆ ಮುಷ್ಕರ: ಡಿ.31ರ ವರೆಗೆ ನಿಷೇಧ

ಬೆಂಗಳೂರು: ಅಗತ್ಯ ಸೇವೆಗಳ ಅಡಿಯಲ್ಲಿ ಸಾರಿಗೆ ನೌಕರರ ಮುಷ್ಕರವನ್ನು ಇದೇ 30ರವರೆಗೆ ನಿಷೇಧಿಸಿದ್ದ ರಾಜ್ಯ ಸರ್ಕಾರ, ಇದೀಗ ಡಿ. 31ರವರೆಗೆ ಆ ಆದೇಶವನ್ನು ವಿಸ್ತರಿಸಿದೆ. ‘ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ- 2013ರಡಿ ಅಗತ್ಯ ಸೇವೆಗಳಲ್ಲಿ ಮುಷ್ಕರ ನಿಷೇಧಿಸಿ, ಫೆ. 2ರಂದು ಆದೇಶ ಹೊರಡಿಸಲಾಗಿತ್ತು. ಪ್ರತಿ ಆರು ತಿಂಗಳಿಗೊಮ್ಮೆ ಇಂಥ ಆದೇಶ ಹೊರಡಿಸಲಾಗುತ್ತದೆ’ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ ‘ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂದು ಮತ್ತೆ ಮುಷ್ಕರಕ್ಕೆ …

Read More »

ಲಾಕ್ ಡೌನ್, ನೌಕರರ ಮುಷ್ಕರದಿಂದ ಕೆಎಸ್ ಆರ್ ಟಿಸಿಗೆ 4,000ಕೋಟಿ ರೂ ನಷ್ಟ- ಲಕ್ಷ್ಮಣ ಸವದಿ

ಬೆಳಗಾವಿ: ಲಾಕ್ ಡೌನ್ ಮತ್ತು ನೌಕರರ ಮಷ್ಕರದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ ಆರ್ ಟಿಸಿ) ಕಳೆದ 15 ತಿಂಗಳಲ್ಲಿ 4,000 ಕೋಟಿ ರೂ ನಷ್ಟ ಅನುಭವಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಶನಿವಾರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೊದಲನೇ ಅಲೆ ನಂತರ ಕೆಎಸ್ ಆರ್ ಟಿಸಿ ನೌಕರರು ಮುಷ್ಕರಕ್ಕೆ ಇಳಿದರು. ಮುಷ್ಕರ ಕೊನೆಗೊಳಿಸುತ್ತಿದ್ದಂತೆ ಸಾಂಕ್ರಾಮಿಕದ ಎರಡನೇ ಅಲೆ ಆರಂಭವಾಯಿತು. ಇಲಾಖೆ …

Read More »

ಅಗತ್ಯ ಸೇವೆಗಳ ಮುಷ್ಕರ ನಿಷೇಧಿಸಿ ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು, ಜೂನ್ 26: ಅಗತ್ಯ ಸೇವೆಗಳ ಮುಷ್ಕರ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮತ್ತೆ ಸಾರಿಗೆ ನೌಕರರು ಮುಷ್ಕರ ನಡೆಸುವ ಸುಳಿವು ಸಿಕ್ಕ ಕಾರಣ, ಪ್ರತಿಭಟನೆ ತಡೆಯಲು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ಈಗಾಗಲೇ ಸಾರಿಗೆ ನಿಗಮ ನಷ್ಟದಲ್ಲಿದೆ ಈ ಸಂದರ್ಭದಲ್ಲಿ ಮತ್ತೆ ಮುಷ್ಕರ ನಡೆಸದರೆ ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಲಿದೆ ಎಂಬುದು ಸರ್ಕಾರ ವಾದವಾಗಿದೆ.   ಜುಲೈ 1ರಿಂದ ಡಿಸೆಂಬರ್​​ 31ರವರೆಗೆ …

Read More »

ಮನೆಗೆ ಬಂದ ಸೊಸೆಯ ಹಾಗೆ ಸಿದ್ದರಾಮಯ್ಯ ಕೈಗೆ ಕೀಲಿ ಕೈ ಸಿಕ್ಕಿದೆ ,ಯಡಿಯೂರಪ್ಪ ಬಿಜೆಪಿ ಬಿಟ್ಟರೆ ಬರೋದು 40 ಸೀಟು ಮಾತ್ರ : ಸಿಎಂ.ಇಬ್ರಾಹಿಂ

ಬೆಂಗಳೂರು: ಮನೆಗೆ ಬರುವಾಗ ಸೊಸೆ ಹೊಸದಾಗಿಯೇ ಬರುವುದು. ಸೊಸೆಗೆ ನೀನು ವಲಸೆ ಬಂದವಳೆಂದು ಹೇಳಲು ಆಗುತ್ತದೆಯೇ? ಸ್ವಲ್ಪ ದಿನವಾದರೆ ಅವಳ ಕೈಗೆ ಕೀಲಿ ಕೈ ಹೋಗುತ್ತದೆ. ಹಾಗೆಯೇ ಈಗ ಸಿದ್ದರಾಮಯ್ಯ ಕೈಗೆ ಕೀಲಿ ಕೈ ಸಿಕ್ಕಿದೆ. ಹಾಗಾಗಿ ವಲಸಿಗ, ಹೊಸಬ ಎನ್ನುವ ಭೇದಭಾವ ಇಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದರು. ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಅವರು,ಸಿದ್ದರಾಮಯ್ಯನ್ನು ಮುಖ್ಯಮಂತ್ರಿ ಮಾಡಿದ್ದು ಯಾರು? ಬಳ್ಳಾರಿ ಪಾದಯಾತ್ರೆಯಲ್ಲಿ ಮುಂದೆ ತಂದವರು ಯಾರು? ಇಂತವನೊಬ್ಬ …

Read More »

ಕೊರೋನಾದಿಂದ ಸಂಕಷ್ಟದಲ್ಲಿರುವವರಿಗೆ ಕಾಂಗ್ರೆಸ್ ನೆರವು

ಬೆಂಗಳೂರು, ಜೂ.26- ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಆಳುವ ಸರ್ಕಾರಕ್ಕಿಂತಲೂ ಹೆಚ್ಚಿನದಾಗಿ ಸಂಕಷ್ಟದಲ್ಲಿ ಇರುವ ಜನರಿಗೆ ನೆರವಾಗಿದೆ ಎಂದು ರಾಜ್ಯ ಸಭಾಸದಸ್ಯ ಎಲ್.ಹನುಮಂತಯ್ಯ ಅವರ ನೇತೃತ್ವದ ಸಮಿತಿ ವರದಿ ನೀಡಿದೆ. ಕೋವಿಡ್ ಸಂದರ್ಭದಲ್ಲಿನ ಕಾರ್ಯಚಟುವಟಿಕೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮಧ್ಯಂತರ ವರದಿ ನೀಡಿದೆ. ಬೂತ್ ಮಟ್ಟದಿಂದಲೂ ಮಾಹಿತಿ ಕಲೆ ಹಾಕಿರುವ ಸಮಿತಿ ಕಾಂಗ್ರೆಸ್ ಕಾರ್ಯಕರ್ತರು ನಾಯಕರು ಎಷ್ಟು …

Read More »