Breaking News

ಜಿಲ್ಲೆ

ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸೋಮವಾರ ಅಧಿಸೂಚನೆ ಪ್ರಕಟಿ

ಬೆಳಗಾವಿ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸೋಮವಾರ  ಅಧಿಸೂಚನೆ ಪ್ರಕಟಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಆಗಸ್ಟ್ 23 ಕಡೆಯ ದಿನ. ಆ.24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಆ.26 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ.   ಸೆಪ್ಟೆಂಬರ್ 3 ರಂದು ಮತದಾನ ಹಾಗೂ ಅಗತ್ಯಬಿದ್ದರೆ ಸೆ. 5 ರಂದು ನಡೆಸಲಾಗುತ್ತದೆ. ಸೆಪ್ಟೆಂಬರ್ 6 ರಂದು ಮಯ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

Read More »

ಸಿಎಂ ಭೇಟಿ ವೇಳೆ ಮೊಬೈಲ್ ನಿಷೇಧ..!

ಬೆಂಗಳೂರು,ಆ.16- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗುವ ಸಾರ್ವಜನಿಕರ ಮೊಬೈಲ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆರ್‍ಟಿನಗರದಲ್ಲಿರುವ ಅವರ ನಿವಾಸದ ಮುಂದೆ ಫಲಕವನ್ನು ಹಾಕಲಾಗಿದ್ದು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರುವ ಸಾರ್ವಜನಿಕರು ಮೊಬೈಲ್‍ಗಳನ್ನು ಬಳಸಬಾರದೆಂದು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಒಂದು ವೇಳೆ ಸಾರ್ವಜನಿಕರು ಮೊಬೈಲ್ ಬಳಕೆ ಮಾಡಿದರೆ ಅಂಥವರಿಗೆ ಭೇಟಿಗೆ ಅವಕಾಶವನ್ನೇ ಕೊಡುವುದಿಲ್ಲ ಎಂದು ಎಚ್ಚರಿಸಲಾಗಿದೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರುವವರು ತಮ್ಮ ಕೆಲಸ ಮುಗಿಸಿಕೊಂಡು ಹೋಗುವ ಬದಲು ಸೆಲ್ಫಿಗೆ ಮುಗಿಬೀಳುವುದು, …

Read More »

ಗೋಕಾಕ : ಕಲ್ಯಾಣಾ ಟೈಕ್ಸ್ ಟೈಲ್ಸ್ ಬಟ್ಟೆಗಳ ಮಾರಾಟ ಮಳಿಗೆಗೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ

    ಗೋಕಾಕ : ಲೋಳಸೂರು ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡ ಕಲ್ಯಾಣಾ ಟೈಕ್ಸ್ ಟೈಲ್ಸ್ ಬಟ್ಟೆಗಳ ಮಾರಾಟ ಮಳಿಗೆಗೆ ಜನರು ಒಮ್ಮೆ ಭೇಟಿ ನೀಡಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.   ತಾಲ್ಲೂಕಿನ ಲೋಳಸೂರು ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡ ಕಲ್ಯಾಣಾ ಟೆಕ್ಸ್ ಟೈಲ್ಸ್ ಬಟ್ಟೆ ಮಾರಾಟ ಮಳಿಗೆಗೆ ಸೋಮವಾರ ಭೇಟಿ ನೀಡಿ, ವೀಕ್ಷಿಸಿದರು. ಬಳಿಕ ಕಲ್ಯಾಣ ಟೆಕ್ಸ್ ಟೈಲ್ಸ್ ಮಳಿಗೆ ವತಿಯಿಂದ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸನ್ಮಾನಿಸಿ, …

Read More »

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ; ಬಿಜೆಪಿ ಮಹತ್ವದ ಸಭೆ

ಬೆಳಗಾವಿ, ಆಗಸ್ಟ್ 16; ಕರ್ನಾಟಕ ಬಿಜೆಪಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಸಿದ್ಧತೆಯನ್ನು ಬಿರುಸಿನಿಂದ ಮಾಡುತ್ತಿದೆ. ಸೋಮವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಿದ್ದು,3/9/2021ರಂದು ಮತದಾನ ನಡೆಯಲಿದೆ. ಮಂಗಳವಾರ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ವಿಶೇಷ ಸಭೆಯನ್ನು ನಡೆಸಿದರು. ಈ ಮೂಲಕ ಚುನಾವಣೆ ಪ್ರಚಾರವನ್ನು ಅಧಿಕೃತವಾಗಿ ಆರಂಭಿಸಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಚುನಾವಣೆ ಮೇಲೆ ಹೇಗೆ ಪ್ರಭಾವ ಬೀರಲಿದ್ದಾರೆ? ಎಂದು ಕಾದು …

Read More »

ಹಾರೋಗೆರಿ ಅಪ್ರಾಪ್ತ ಬಾಲಕಿ ಕೊಲೆ ಪ್ರಕರಣ: ರಾಹುಲ್ ಗಾಂಧಿ ಲಿಂಕ್ ಮಾಡಿ ಜೊಲ್ಲೆ ಖಂಡಿಸಿದ ರಕ್ಷಾ ರಾಮಯ್ಯ!

ಬೆಂಗಳೂರು, ಆ, 16: ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ನಡೆಯನ್ನು ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿ ನಡೆಸಿದ್ದ ಸ್ಟಿಂಗ್ ಆಪರೇಶನ್‌ನಲ್ಲಿ ಸಚಿವ ಶಶಿಕಲಾ ಜೊಲ್ಲೆ ಹೆಸರು ಕೇಳಿ ಬಂದಿತ್ತು. ಅದಾದ ಬಳಿಕ ಅವರನ್ನು ನೂತನ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎನ್ನಲಾಗಿತ್ತು. ಆದರೆ ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ಅವರಿಗೆ ಮಂತ್ರಿಯಾಗುವ ಅವಕಾಶವನ್ನು ಮಾಡಿಕೊಟ್ಟಿದೆ. ಇದೇ ಸಂದರ್ಭದಲ್ಲಿ ಅವರ ನಡೆಯನ್ನು ಯುವ ಕಾಂಗ್ರೆಸ್ ತೀವ್ರವಾಗಿ …

Read More »

ಸಿಂಬಾಲ್… ಕೆಪಿಸಿಸಿ ಅಂಗಳದಲ್ಲಿ ಬೆಳಗಾವಿ ಬಾಲ್….!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ನೇಮಿಸಲಾದ ಕಾಂಗ್ರೆಸ್ ಮೇಲುಸ್ತುವಾರಿ ಸಮೀತಿ ಇಂದು ಬೆಳಗಾವಿಯಲ್ಲಿ ಸ್ಥಳೀಯ ನಾಯಕರ ಜೊತೆ,ಮಾಜಿ ನಗರಸೇವಕರ ಜೊತೆ,ಸಭೆ ಮಾಡಿದ್ರೂ ಪಾಲಿಕೆ ಚುನಾವಣೆ ಯನ್ನು ಪಕ್ಷದ ಚಿಹ್ನೆಯ ಮೇಲೆ ಮಾಡಬೇಕೋ..ಬಿಡಬೇಕೋ ಎನ್ನುವ ನಿರ್ಧಾರ ಕೈಗೊಳ್ಳುವಲ್ಲಿ ಸಫಲವಾಗಿಲ್ಲ. ಸುಮಾರು ಎರಡು ಘಂಟೆಗಳ ಕಾಲ ಬೆಳಗಾವಿಯ ನಾಯಕರ ಜೊತೆ ಮಾಜಿ ಸಚಿವ ಎಂ.ಬಿ ಪಾಟೀಲ,ಬಿ.ಕೆ ಹರಿಪ್ರಸಾದ ಸೇರಿದಂತೆ ಮೇಲುಸ್ತುವಾರಿ ಸಮೀತಿಯ ಸದಸ್ಯರು ಸಭೆ ಮಾಡಿದ್ರು,ಆದ್ರೆ ಸಭೆಯಲ್ಲಿ ಸ್ಥಳೀಯ ನಾಯಕರು,ಮಾಜಿ ನಗರ …

Read More »

ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಕಾರ್ಯಲಯದ ಆವರಣದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಅಜಾದಿ ಕಾ ಅಮೃತ ಮಹೋತ್ಸವ ನಿಮಿತ್ಯ ಜಂತು ನಾಶಕ ಹಾಗೂ ಆರೋಗ್ಯ ವರ್ಧಕ ಔಷಧಿಗಳ ವಿತರಿಸುತ್ತಿರುವುದು. 

ಗೋಕಾಕ: ದೇಶದ ಬೆನ್ನೆಲುಭಾಗಿರುವ ರೈತರ ಆರ್ಥಿಕ ಪ್ರಗತಿಯಲ್ಲಿ ಜಾನುವಾರಗಳ ಪಾತ್ರ ಪ್ರಮುಖವಾಗಿದ್ದು ಅವುಗಳ ಆರೋಗ್ಯ ರಕ್ಷಣೆಗೆ ರೈತರು ಹೆಚ್ಚಿನ ಮಹತ್ವ ನೀಡಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದರು. ಸೋಮವಾರದಂದು ನಗರದ ಶಾಸಕರ ಕಾರ್ಯಲಯದ ಆವರಣದಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಅಜಾದಿ ಕಾ ಅಮೃತ ಮಹೋತ್ಸವ ನಿಮಿತ್ಯ ಜಂತು ನಾಶಕ ಹಾಗೂ ಆರೋಗ್ಯ ವರ್ಧಕ ಔಷಧಿಗಳ ವಿತರಿಸಿ ಮಾತನಾಡುತ್ತಿದ್ದರು. ಸರ್ಕಾರ ರೈತರಿಗೆ ಹಲವಾರು ಯೋಜನೆಗಳ …

Read More »

ಮನೆಯಲ್ಲಿ ನಿಗೂಢ ಸ್ಫೋಟ; ಪತಿ-ಪತ್ನಿ ಗಂಭೀರ ಮಧ್ಯರಾತ್ರಿ ಮನೆಯಲ್ಲಿ ಏಕಾಏಕಿ ಸ್ಫೋಟ

ಬೆಂಗಳೂರು: ಮಧ್ಯರಾತ್ರಿ ಮನೆಯಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿದ್ದು, ವೃದ್ಧ ದಂಪತಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ವಿಜಯನಗರದ ಹಂಪಿನಗರದಲ್ಲಿ ನಡೆದಿದೆ.   ಎರಡು ಅಂತಸ್ತಿನ ಮೊದಲನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದ್ದು, ವೃದ್ಧ ದಂಪತಿಗಳಾದ ಸೂರ್ಯನಾರಾಯಣ ಶೆಟ್ಟಿ ಹಾಗೂ ಪತ್ನಿ ಪುಷ್ಪಾವತಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.   ಇನ್ನು ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಸುಮಾರು ಐದಕ್ಕೂ ಹೆಚ್ಚು ಮನೆಗಳಿಗೆ ಹಾನಿಯುಂಟಾಗಿದೆ. ಘಟನಾಸ್ಥಳಕ್ಕೆ ಪೊಲೀಸರು ಭೇಟಿ …

Read More »

ಎನ್.ಎಸ್.ಎಫ್ ಅತಿಥಿ ಗೃಹದಲ್ಲಿ ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ್ ಜಾರಕಿಹೊಳಿ ಟ್ರಸ್ಟಿನಿಂದ ಮೂಡಲಗಿ ವಲಯದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗಣ್ಯರು ಸತ್ಕರಿಸುತ್ತಿರುವುದು.

ಗೋಕಾಕ ;- ವಿದ್ಯಾರ್ಥಿಗಳು ನಿರ್ಧಿಷ್ಠ ಗುರಿಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮದಿಂದ ಪ್ರಯತ್ನಶೀಲರಾದರೆ ಯಶಸ್ಸು ನಿಶ್ಚಿತ ಎಂದು ಮೂಡಲಗಿ ತಾಲೂಕಿನ ತಹಶೀಲ್ದಾರ ಡಿ.ಜಿ. ಮಹಾಂತ ಅವರು ಹೇಳಿದರು. ರವಿವಾರದಂದು ನಗರದ ಎನ್.ಎಸ್.ಎಫ್ ಅತಿಥಿ ಗೃಹದಲ್ಲಿ ಶ್ರೀಮತಿ ಭೀಮವ್ವಾ ಲಕ್ಷ್ಮಣರಾವ್ ಜಾರಕಿಹೊಳಿ ಟ್ರಸ್ಟಿನಿಂದ ಶಾಸಕ ಹಾಗೂ ಟ್ರಸ್ಟಿನ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಆಯೋಜಿಸಿದ್ದ ಮೂಡಲಗಿ ವಲಯದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಸತ್ಕಾರ …

Read More »

ವಿರಕ್ತಮಠದ ಪೀಠಾಧಿಕಾರಿಗಳಾಗಿದ್ದ ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯ

ವಿಜಯಪುರ: ಸಿಂದಗಿ ಪಟ್ಟಣದ ವಿರಕ್ತಮಠದ ಪೀಠಾಧಿಕಾರಿಗಳಾಗಿದ್ದ ಸಿದ್ದಲಿಂಗ ಸ್ವಾಮೀಜಿ (58) ಭಾನುವಾರ ಬೆಳಿಗ್ಗೆ ಲಿಂಗ್ಯೆಕ್ಯರಾದರು. ಸುದೀರ್ಘ ಪರಂಪರೆ ಹೊಂದಿದ ವಿರಕ್ತಮಠದ 18 ನೇ ಪೀಠಾಧಿಕಾರಿಗಳಾಗಿದ್ದರು. 1985 ರಲ್ಲಿ ಶ್ರೀಗಳ ಪಟ್ಟಾಧಿಕಾರ ಅದ್ದೂರಿಯಾಗಿ ನಡೆದಿತ್ತು. ತಪಸ್ವಿಗಳು, ಮಾತೃಹೃದಯಿಗಳಾಗಿದ್ದರು. ಈ ಭಾಗದಲ್ಲಿ ಅಪಾರ ಭಕ್ತರು ಶ್ರೀಮಠದ ಶಿಷ್ಯರಾಗಿದ್ದಾರೆ. ಶ್ರೀಗಳ ಅಂತ್ಯಕ್ರಿಯೆ ಭಾನುವಾರ ಸಂಜೆ ಶ್ರೀಮಠದ ಆವರಣದಲ್ಲಿ ವಿರಕ್ತ ಸಂಪ್ರದಾಯದಂತೆ ನೆರವೇರಲಿದೆ.

Read More »