* ಶ್ರೀ ಗ್ರಾಮ ದೇವತಾ ಜಾತ್ರಾ ಕಮೀಟಿ ಗೋಕಾಕ ಪ್ಲೇವನಾಮ ಸಂವತ್ಸರ, ಅಶ್ವಿಜ ಮಾಸ ಶ್ರವನ್ನರಾತ್ರಾ ಕಾರ್ಯಕ್ರಮಗಳು 06/10/2021 ಬುಧವಾರ : ಅಶ್ವಿಜ ಶುದ್ಧ ಪ್ರತಿಪದಾ ನವರಾತ್ರಿ ಪ್ರಾರಂಭ 07/10/2021 ಗುರುವಾರ : ಘಟಸ್ಥಾಪನೆ 10/10/2021 ಭಾನುವಾರ : ಲಲಿತಾ ಪಂಚಮಿ 13/10/2021 ಬುಧವಾರ ( ಉಪಾಂಗ ಲಲಿತಾ ವೃತ್ತಂ ) : ದುರ್ಗಾಷ್ಟಮಿ – ನವಚಂಡಿ ಹವನ ರಾತ್ರಿ ಪ್ರಾರಂಭ …
Read More »ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್
ರಾಯಚೂರು: ಮಾನ್ವಿ ಪಟ್ಟಣದ ಪಕ್ಷಿ ಪ್ರೇಮಿ ಪಬ್ಲಿಕ್ ಹೀರೋ ಸಲ್ಲಾವುದ್ದೀನ್ ಗಾಯಗೊಂಡಿದ್ದ ನವಿಲೊಂದನ್ನ ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡಿ ಪುನಃ ಕಾಡಿಗೆ ಬಿಡುವ ಮೂಲಕ ಪಕ್ಷಿ ಪ್ರೇಮ ಮೆರೆದಿದ್ದಾರೆ. ಪಕ್ಷಿಗಳ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಸಲ್ಲಾವುದ್ದೀನ್ ಈಗ ನವಿಲೊಂದಕ್ಕೆ ಪುನರ್ಜನ್ಮ ನೀಡಿದ್ದಾರೆ. ಸೆಪ್ಟೆಂಬರ್ 26 ರಂದು ಮಾನ್ವಿ ತಾಲೂಕಿನ ಬಾಪೂರಿನ ಜಮೀನೊಂದರಲ್ಲಿ ಅನಾರೋಗ್ಯದಿಂದ ಬಿದ್ದಿದ್ದ ನವಿಲನ್ನು ಸ್ಥಳೀಯರಾದ ಫಯಾಜ್ ರುಮಾಲ್ ವಾಲೆ ಹಾಗೂ ಅವರ ಸ್ನೇಹಿತರು ಸಲ್ಲಾವುದ್ದೀನ್ ಅವರಿಗೆ ತಂದು ಒಪ್ಪಿಸಿದ್ದಾರೆ. ಬಳಿಕ …
Read More »ಮಕ್ಕಳಿಂದ ಅನುಕಂಪ ಗಿಟ್ಟಿಸಿ ಮನೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳಿ ಅರೆಸ್ಟ್, 5 ಮಕ್ಕಳು ಬಾಲಮಂದಿರಕ್ಕೆ ಶಿಫ್ಟ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಖತರ್ನಾಕ್ ಕಳ್ಳಿಯ ಬಂಧನವಾಗಿದೆ. ಆರ್.ಟಿ.ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಲಕ್ಷ್ಮೀಯನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ಲಕ್ಷ್ಮೀ ವಿರುದ್ಧ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪೊಲೀಸರಿಗೆ ಸಿಕ್ಕಿಬಿದ್ದಾಗ ಮಕ್ಕಳಿದ್ದಾರೆ, ಗರ್ಭಿಣಿ ಎಂದು ಅನುಕಂಪದ ಅಸ್ತ್ರ ಪ್ರಯೋಗ ಮಾಡಿದ್ದಾಳೆ. ಆದ್ರೆ ಕಳ್ಳಿಯ ಚಲಾಕಿತನ ತಿಳಿದಿದ್ದ ಪೊಲೀಸರು ಅನುಕಂಪದ ಅಲೆಗೆ ಮೋಸ ಹೋಗಿಲ್ಲ. ಆರೋಪಿ ಲಕ್ಷ್ಮೀಗೆ ಬರೋಬ್ಬರಿ ಆರು ಮಕ್ಕಳಿದ್ದಾರೆ. ಕಳ್ಳಿ ಲಕ್ಷ್ಮೀಯಿಂದ ಪೊಲೀಸರು ಮಕ್ಕಳನ್ನು …
Read More »ತಿರುಪತಿಗೆಂದು ಕರೆದೊಯ್ದು ರೈಲಿನಲ್ಲಿ ಲೈಂಗಿಕ ದೌರ್ಜನ್ಯ – ಯುವಕನಿಗೆ 5 ವರ್ಷ ಜೈಲು!
ಚಾಮರಾಜನಗರ: ದೇಗುಲ ದರ್ಶನಕ್ಕೆಂದು ಅಪ್ರಾಪ್ತೆಯನ್ನು ತಿರುಪತಿಗೆ ಕರೆದೊಯ್ದು ರೈಲಿನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಯುವಕನಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸದಾಶಿವ ಎಸ್ ಸುಲ್ತಾನಪುರಿ 5 ವರ್ಷ ಸಜೆ ವಿಧಿಸಲು ಆದೇಶಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣ ನಿವಾಸಿ ಕುಮಾರ್ ಅಲಿಯಾಸ್ ಧ್ರುವ(19) ಎಂಬ ಯುವಕ ಶಿಕ್ಷೆಗೊಳಗಾದವ. ಕುಮಾರನು ಕೂಲಿ ಕಾರ್ಮಿಕನಾಗಿದ್ದು, 17 ವರ್ಷದ ಅಪ್ರಾಪ್ತೆಯನ್ನು ಪುಸಲಾಯಿಸಿ ಪ್ರೀತಿಸುವುದಾಗಿ ಪೀಡಿಸಿ ಕೊನೆಗೇ ದೇಗುಲಕ್ಕೆ ಹೋಗೋಣವೆಂದು 2019 ಫೆ.24 ರಂದು ತಿರುಮಲ …
Read More »ಕಾಂಗ್ರೆಸ್ ಗೆ ಜನತಾದಳದ ಅಡುಗೆ ಮನೆ, ಇನ್ನೊಬ್ಬರು ಮಲಗುವ ಕೋಣೆ ಇಣುಕಿ ನೋಡುವ ಚಟ ಅಂಟಿಕೊಂಡಿದೆ’
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹರಿಹಾಯ್ದಿದ್ದಾರೆ. ಬಿಜೆಪಿ- ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ’ ಎಂಬ ಸಿದ್ದರಾಮಯ್ಯ ಆರೋಪಕ್ಕೆ ರವಿ ತಿರುಗೇಟು ನೀಡಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜನತಾದಳದ ಅಡುಗೆ ಮನೆ, ಇನ್ನೊಬ್ಬರು ಮಲಗುವ ಕೋಣೆ ಇಣುಕಿ ನೋಡುವ ಚಟ ಅಂಟಿಕೊಂಡಿದೆ’ ಎಂದು ಲೇವಡಿ ಮಾಡಿದ್ದಾರೆ. ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಭಾನುವಾರ ನಡೆದ ಪಕ್ಷದ ಪ್ರಮುಖರ …
Read More »ಮಕ್ಕಳ ಮಾರಾಟ ಪ್ರಕರಣ : ಆಶಾಕಾರ್ಯಕರ್ತೆ ಬಂಧನ
ಕೋಲಾರ: ರಾಜ್ಯದಲ್ಲಿ ದಿನದಿಂದದಿನಕ್ಕೆ ಮಕ್ಕಳ ಮಾರಾಟ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಸ್ವತ: ಆಶಾ ಕಾರ್ಯಕರ್ತೆಯರೇ ಮಕ್ಕಳ ಮಾರಾಟ ಜಾಲದ ಹಿಂದೆ ಇದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಕ್ಕಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೋಲಾರದಲ್ಲಿ ಇಬ್ಬರು ಆಶಾ ಕಾರ್ಯಕರ್ತೆಯರು ಹಾಗೂ ಮಗು ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರದ ಕೆಜಿಎಫ್ ತಾಲೂಕಿನ ಪಂತನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನೀಲಮ್ಮ ಹಾಗೂ ಬಾಬು ದಂಪತಿ ಮಗುವನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. …
Read More »ರಾಜ್ಯಮಟ್ಟದ ಗಾಲಿ ಕುರ್ಚಿ ರಗ್ಬಿ ಟೂರ್ನಿಯಲ್ಲಿ ಪ್ರಥಮ ಸ್ಥಾನ ಬೆಳಗಾವಿಗೆ
ಬೆಳಗಾವಿ: ಬೆಳಗಾವಿ ತಂಡವು ಜಿಲ್ಲಾ ಅಂಗವಿಕಲರ ಸೇವಾ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಗಾಲಿ ಕುರ್ಚಿ ರಗ್ಬಿ ಟೂರ್ನಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಬಾಗಲಕೋಟೆ ತಂಡ ದ್ವಿತೀಯ ಮತ್ತು ಮೈಸೂರು ತಂಡದವರು ತೃತಿಯ ಸ್ಥಾನ ಪಡೆದರು. ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರಹುಸೇನ ಪಠಾಣ ಹಾಗೂ ಸುರೇಶ ಯಾದವ ಪ್ರತಿಷ್ಠಾನದ ಅಧ್ಯಕ್ಷ ಸುರೇಶ ಯಾದವ ವಿಜೇತ ತಂಡಗಳಿಗೆ …
Read More »ರೈತರಿಗೆ ಭದ್ರತೆ ನೀಡಲು ಆಗ್ರಹ
ಬೆಳಗಾವಿ: ಉತ್ತರಪ್ರದೇಶದ ಲಿಖಿಂಪುರ್‌ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಬೆಂಗಾವಲು ವಾಹನ ಹರಿಸಿ ನಾಲ್ವರು ರೈತರನ್ನು ಬಲಿ ಪಡೆದ ಆರೋಪಿಯನ್ನು ಗೂಂಡಾ ಕಾಯ್ದೆಯಲ್ಲಿ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸಂಘಟನೆಯವರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು ಈ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಸಿದಗೌಡ ಮೋದಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ …
Read More »ಡೆತ್ನೋಟ್ ಬರೆದಿಟ್ಟು ಡಿ ಫಾರ್ಮಸಿ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾರೆ
ಬೆಳಗಾವಿ :ಮರಾಠಿ ಭಾಷೆಯಲ್ಲಿ ಮೂರು ಸಾಲು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ, ಎಕ್ಸಾಂ ಟೆನ್ಷನ್ ಹಾಗೂ ಫ್ಯಾಮಿಲಿ ಪ್ರಾಬ್ಲಮ್ನಿಂದ ಈ ನಿರ್ಣಯ ಕೈಗೊಂಡಿದ್ದೇನೆ ಅಂತ ಉಲ್ಲೇಖಿಸಿದ್ದಾರೆ. ನನ್ನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ. ಗುಡ್ ಬಾಯ್ ಅಂತಾ ಬರೆದು, ಸ್ಮೈಲಿ ಸಿಂಬಾಲ್ ಚಿತ್ರ ಬಿಡಿಸಿ ಸಾವಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Read More »ಕೆಲಸದ ವೇಳೆ ಆತ್ಮ ಹತ್ಯೆಗೆ ಶರಣಾದ ಯುವ
ನೆಲಮಂಗಲ: ಖಾಸಗಿ ಆಸ್ಪತ್ರೆ ಸಿಬ್ಬಂದಿಯೊಬ್ಬರು ಎರಡು ಮಾದರಿಯ ಚುಚ್ಚುಮದ್ದುಗಳನ್ನು ಸಮೀಕರಿಸಿಕೊಂಡು ಸ್ವತಃ ಇಂಜೆಕ್ಷನ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದ ಕುಣಿಗಲ್ ವೃತ್ತದ ಬಳಿಯಲ್ಲಿರುವ ಆಸ್ಪತ್ರೆಯಲ್ಲಿ ನಡೆದಿದೆ. ಸಂಜಯ್ (19)ಮೃತ ಆಸ್ಪತ್ರೆ ಸಿಬ್ಬಂದಿ. ಮೂಲತಃ ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಾರ್ವತಿನಗರ ಮಂಜುನಾಥ್ ಎಂಬುವರ ಮಗನಾದ ಈತ ಕಳೆದ ಎರಡು ತಿಂಗಳಿನಿಂದ ಕುಣಿಗಲ್ ವೃತ್ತದ ಬಳಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸಮಾಡುತ್ತಿದ್ದ. ಎಂದಿನಂತೆ ಶನಿವಾರ …
Read More »
Laxmi News 24×7