Breaking News

ಜಿಲ್ಲೆ

ಲಂಚ ಪಡೆಯುತ್ತಿದ್ದ ಫುಡ್​ ಇನ್ಸ್​ಪೆಕ್ಟರ್​ನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು

ಬೆಂಗಳೂರು : ಆಹಾರೋತ್ಪನ್ನಗಳ ವ್ಯಾಪಾರ ಪರವಾನಗಿ ಪರಿಶೀಲನೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆಹಾರ ನಿರೀಕ್ಷಕ (ಫುಡ್ ಇನ್ಸ್‌ಪೆಕ್ಟರ್)ನನ್ನು ವಶಕ್ಕೆ ಬಂಧಿಸಿದ್ದಾರೆ. ಒಂದು ಲಕ್ಷ ರೂಪಾಯಿಗೆ ಲಂಚಕ್ಕೆ ಬೇಡಿಕೆಯಿಟ್ಟು 43 ಸಾವಿರ ರೂಪಾಯಿ ಸ್ವೀಕರಿಸುತ್ತಿದ್ದಾಗ ಫುಡ್ ಇನ್ಸ್‌ಪೆಕ್ಟರ್ ಮಹಾಂತೇಗೌಡ ಬಿ ಕಡಬಾಳುನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಆಹಾರೋತ್ಪನ್ನಗಳ ಮಾರಾಟ ಪರವಾನಗಿ ನೀಡಲು ರಂಗಧಾಮಯ್ಯ ಎಂಬುವರಿಂದ ₹ 1 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಮಹಾಂತೇಗೌಡ, ಮುಂಗಡವಾಗಿ 10 ಸಾವಿರ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ

ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಶ್ರೀ ಹನುಮಾನ್ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ …

Read More »

ಬೆಳಗಾವಿ:ಮಹಾನಗರ ನೂತನ ಪೊಲೀಸ್ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಎಸ್. ಎನ್. ಸಿದ್ದರಾಮಪ್ಪಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಬೆಳಗಾವಿ:ಮಹಾನಗರ ನೂತನ ಪೊಲೀಸ್ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಎಸ್. ಎನ್. ಸಿದ್ದರಾಮಪ್ಪ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಡಿಸಿಪಿಗಳಾದ ಪಿ.ವಿ.ಸ್ನೇಹಾ, ಶೇಖರ ಟಕ್ಕೆಣ್ಣವರ  ಸ್ವಾಗತಿಸಿದರು

Read More »

ಚಂದ್ರಯಾನ – 3 ಮಿಷನ್​ನಲ್ಲಿ ಬೆಳಗಾವಿ ಯುವ ವಿಜ್ಞಾನಿ

ಬೆಳಗಾವಿ: ಇಸ್ರೋದಿಂದ ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಈ ಮಹತ್ಕಾರ್ಯದಲ್ಲಿ ಬೆಳಗಾವಿ ಜಿಲ್ಲೆ ಯುವಕನೊಬ್ಬ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಖಾನಾಪುರ ತಾಲೂಕಿನ ಅನಗಡಿ ಗ್ರಾಮದ ‘ಪ್ರಕಾಶ ಪೆಡ್ನೇಕರ್’ ಎಂಬ ಯುವ ವಿಜ್ಞಾನಿ ಚಂದ್ರಯಾನ- 3 ಮಿಷನ್​ನಲ್ಲಿ ಕೆಲಸ ಮಾಡುತ್ತಿರುವವರು. ಚಂದ್ರಯಾನ-2 ರಲ್ಲಿಯೂ ಇವರು ಕೆಲಸ ಮಾಡಿದ್ದರು. ಶುಭ ಹಾರೈಸಿದ ಸ್ವಾಮೀಜಿ: ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಚಂದ್ರಯಾನ – 3 ಉಡಾವಣೆ ಬಗ್ಗೆ ಮಾತನಾಡಿರುವ ಬೆಳಗಾವಿಯ ನಾಗನೂರು ರುದ್ರಾಕ್ಷಿ …

Read More »

ಜೈನ ಮುನಿ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳ ವಿಚಾರಣೆ ತೀವ್ರಗೊಂಡಿದೆ.

ಚಿಕ್ಕೋಡಿ: ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣದ ಇಬ್ಬರೂ ಆರೋಪಿಗಳನ್ನು ಪೊಲೀಸರು ಏಳು ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆರೋಪಿಗಳು ಜೈನಮುನಿಯ ಡೈರಿ ಸುಟ್ಟು ಹಾಕಿದ್ದರು. ಸದ್ಯ ಚಿಕ್ಕೋಡಿ ಪೊಲೀಸರು ಡೈರಿಯಲ್ಲಿದ್ದ ವಿಷಯದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜೈನಮುನಿ ಹತ್ಯೆ ಕೇಸ್‌ನಲ್ಲಿ ಬಂಧಿಸಿದ್ದ ಇಬ್ಬರು ಆರೋಪಿಗಳ ವಿಚಾರಣೆಯೂ ಚುರುಕು ಪಡೆದುಕೊಂಡಿದೆ. ಜೈನ ಮುನಿಯ ಹತ್ಯೆ ಬಳಿಕ ಆಶ್ರಮದಲ್ಲಿ ಕಾಮಕುಮಾರ ನಂದಿ ಮಹಾರಾಜರ ಡೈರಿಯನ್ನು ಸಹ ಅಲ್ಲಿಂದ ಆರೋಪಿಗಳು ಹೊತ್ಯೊಯ್ದಿದ್ದರು. ಅದಾದ …

Read More »

ಸದನದಲ್ಲಿ ವರ್ಗಾವಣೆ ಕಮಿಷನ್ ರೇಟ್ ಕಾರ್ಡ್ ಸದ್ದು

ಬೆಂಗಳೂರು: ಸದನದಲ್ಲಿ ವರ್ಗಾವಣೆ ಕಮಿಷನ್ ರೇಟ್ ಕಾರ್ಡ್ ಸದ್ದು ಮಾಡಿತು. ವಿಷಯ ಪ್ರಸ್ತಾಪ ಮಾಡಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪ ಮಾಡಿದ್ರು ಅಂತ ಸದನದಲ್ಲಿ ಪತ್ರ ತೋರಿಸಿದ್ರು. ಆದ್ರೆ, ಆ ಪತ್ರ ನಮಗೆ ಕೊಡದೇ ಅವರೇ ತಗೊಂಡು ಹೋದ್ರು ಎಂದು ಟಾಂಗ್ ನೀಡಿದರು. ನಮ್ಮ ಮೇಲೆ ಕುಮಾರಸ್ವಾಮಿ ವರ್ಗಾವಣೆ ದಂಧೆ ಆರೋಪ ಮಾಡಿದ್ದಾರೆ. ಆದರೆ, ಅದು ಸುಳ್ಳು, ಯಾವುದೇ ವರ್ಗಾವಣೆ ದಂಧೆ ನಡೆಯುತ್ತಿಲ್ಲ. ಪತ್ರಿಕೆಯಲ್ಲಿ ಹೆಚ್​ಡಿಕೆ ಪತ್ರ ಕೊಟ್ಟಿದ್ದಾರೆ …

Read More »

ರಾಜ್ಯದಲ್ಲಿ 2,000 ಕೋಟಿ ರೂಪಾಯಿ ಹೂಡಿಕೆಗೆ ಮುಂದಾದ ಟಾಟಾ ಟೆಕ್ನಾಲಜೀಸ್

ಬೆಂಗಳೂರು: ಪ್ರತಿಷ್ಠಿತ ಟಾಟಾ ಟೆಕ್ನಾಲಜೀಸ್ ಕಂಪನಿಯು 2,000 ಕೋಟಿ ರೂ. ಹೂಡಿಕೆ ಮಾಡಿ ರಾಜ್ಯದಲ್ಲಿ ಮೂರು ಸಾಮಾನ್ಯ ಎಂಜಿನಿಯರಿಂಗ್ ಸೌಲಭ್ಯಗಳ ಕೇಂದ್ರ (ಸಿಇಎಫ್‌ಸಿ- ಕಾಮನ್ ಎಂಜಿನಿಯರಿಂಗ್ ಫೆಸಿಲಿಟಿ ಸೆಂಟರ್)ಗಳನ್ನು ಸ್ಥಾಪಿಸಲು ಮುಂದೆ ಬಂದಿದೆ. ವಿಧಾನಸೌಧದಲ್ಲಿ ಬುಧವಾರ ಕಂಪನಿಯ ಉನ್ನತ ಅಧಿಕಾರಿಗಳು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿ ಮಾತುಕತೆ ನಡೆಸಿದ್ದಾರೆ. ವಿಶೇಷವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ …

Read More »

ಅಪರಿಚಿತ ವ್ಯಕ್ತಿಯೋರ್ವ ಬಾಲಕಿಯನ್ನು ಅಪಹರಿಸಲು ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪ್ರಕರಣ ದಾಖಲಾದ 12 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಖೆಡ್ಡಾಕ್ಕೆ ಬೀಳಿಸಿದ್ದಾರೆ.

ಬೆಳಗಾವಿ: ಅಪರಿಚಿತ ವ್ಯಕ್ತಿಯೋರ್ವ 12 ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿ ಸಿಕ್ಕಿ ಬಿದ್ದಿರುವ ಘಟನೆ ನಗರದ ಹಿಂದವಾಡಿಯ ಮಹಾವೀರ ಗಾರ್ಡನ್ ಬಳಿ ಮಂಗಳವಾರ ಸಂಜೆ ನಡೆದಿದೆ. ಆರೋಪಿ ಬಾಲಕಿಯನ್ನು ಹೊತ್ತೊಯ್ಯುವ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ಬಗ್ಗೆ ದೂರು ದಾಖಲಾದ 12 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ. ಮಾರುತಿ ನಗರದ ಗಜಾನನ ಪಾಟೀಲ (40) ಖೆಡ್ಡಾಕ್ಕೆ ಬಿದ್ದ ಆರೋಪಿ. ಆರೋಪಿ ಗಜಾನನ ಟ್ಯೂಶನ್​​ಗೆ ಹೊರಟಿದ್ದ ಬಾಲಕಿಗೆ ಚಾಕಲೇಟ್ ಆಮಿಷವೊಡ್ಡಿ …

Read More »

ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.:C.M.

ಕನ್ನಡ ಚಿತ್ರರಂಗದ ಖ್ಯಾತ ಹಾಗೂ ಪ್ರತಿಭಾವಂತ ನಟ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಟನಾ ಕೌಶಲದಿಂದ ಮಾತ್ರವಲ್ಲ ತಮ್ಮ ವಿನಯಶೀಲ ನಡೆ-ನುಡಿಗಳಿಂದಲೂ ಕೋಟ್ಯಂತರ ಜನರ ಪ್ರೀತಿ-ಅಭಿಮಾನಗಳಿಗೆ ಪಾತ್ರರಾಗಿರುವ ಶಿವರಾಜ್ ಕುಮಾರ್ ಅವರಿಗೆ ಆಯುಷ್ಯ ಮತ್ತು ಆರೋಗ್ಯದ ಭಾಗ್ಯ ಕೂಡಿಬರಲಿ ಎಂದು ಹಾರೈಸುತ್ತೇನೆ.

Read More »

ಳ್ಳರಿಂದ ತರಕಾರಿ ರಕ್ಷಿಸಲು ಪಾಳಿಯಲ್ಲಿ ಕಾವಲು ಕಾಯುತ್ತಿರುವ ರೈತ‌!

ದಾವಣಗೆರೆ: ಇದೀಗ ಟೊಮೆಟೊ ತರಕಾರಿಗಳಲ್ಲೇ ರಾಜ ಎನ್ನಿಸಿಕೊಳ್ಳುವ ಪರಿಸ್ಥಿತಿ ಇದೆ. ಏಕೆಂದರೆ ಬೆಲೆ ಗಗನಕ್ಕೇರಿದೆ. ಇನ್ನೊಂದೆಡೆ, ರೈತರು ಬೆಳೆ ಬೆಳೆಯುತ್ತಿರುವ ಜಮೀನುಗಳಲ್ಲೇ ಮೊಕ್ಕಾಂ ಹೂಡುವಂತಾಗಿದೆ. ಕಳ್ಳರ ಕಾಟದಿಂದ ಬೇಸತ್ತಿರುವ ಅವರಿಗೆ ಟೊಮೆಟೊ ರಕ್ಷಣೆ ಮಾಡುವುದು ತಲೆನೋವಾಗಿ ಪರಿಣಮಿಸಿದೆ. ದಾವಣಗೆರೆಯ ರೈತರು ಎರಡು ನಾಯಿಗಳೊಂದಿಗೆ ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾರೆ. ಮಾಯಕೊಂಡ ಹೋಬಳಿಯಲ್ಲಿ ಟೊಮೆಟೊ ಹೆಚ್ಚಾಗಿ ಬೆಳೆಯುತ್ತಾರೆ. ಸುತ್ತಮುತ್ತಲ ಗ್ರಾಮದ‌ ಜಮೀನುಗಳಲ್ಲಿ ಬೆಳೆಯುವ ತರಕಾರಿ ವಿದೇಶಗಳಿಗೂ ರಫ್ತಾಗುತ್ತದೆ. ಈಗಂತೂ ಟೊಮೆಟೊಗೆ ಬೆಲೆ ಕೇಳುವಂತಿಲ್ಲ. ಪ್ರತಿ …

Read More »